ಹಿಂದೂ ಸಂಸ್ಕೃತಿಯ ಶೋಧನೆ

ಆಂಗ್ಲ ಮೂಲ : ನವೀನ ಕೃಷ್ಣದಾಸ  ಅನುವಾದ: ಉಷಾ ಪೋತಿ

ಈಗ ನಾವು 21ನೇ ಶತಮಾನದ ಪ್ರಾರಂಭದಲ್ಲಿದ್ದೇವೆ. ಶ್ರೀ ಕೃಷ್ಣನು ಕಂಗೊಳಿಸಿದ ಐತಿಹಾಸಿಕ ಕಾಲಾವಧಿಗೆ ಆಗಲೇ ಐದು ಸಾವಿರ ವರ್ಷಗಳು ಕಳೆದಿವೆ. ಅಂದಿನಿಂದ ಪುರುಷರ ಮತ್ತು ಮಹಿಳೆಯರ, ಜನಾಂಗಗಳ ಆಚಾರ ವಿಚಾರ ಹಾಗೂ ನಾಗರಿಕತೆಯ ಕುರಿತು ಅನೇಕ ವೃತ್ತಾಂತಗಳನ್ನು ಬರೆಯಲಾಗಿದೆ. ಭೂಮಾತೆಯು ನೂರಾರು ಅಧ್ಯಾಯಗಳ ಪ್ರಾರಂಭ ಹಾಗೂ ಮುಕ್ತಾಯದ ಅನುಭವವನ್ನು ಪಡೆದಿದ್ದಾಳೆ.

ಆ ಅಧ್ಯಾಯಗಳಲ್ಲಿ ಎಲ್ಲಿಯಾದರೂ ಒಂದು ಠಾವಿನಲ್ಲಿ ನೀವು ಮತ್ತು ನಾನು ಕಾಣಿಸಿಕೊಂಡಿದ್ದೇವೆ. ಮತ್ತು ಇನ್ನೂ ಹೆಚ್ಚಾಗಿ ಅಧ್ಯಾಯಗಳನ್ನು ಬರೆಯುತ್ತಲ್ಲಿದ್ದಲ್ಲಿ ನಾವು ಇತಿಹಾಸದ ಪಾಳೆಗಳಲ್ಲಿ ಅದೃಶ್ಯವಾಗುತ್ತೇವೆ ಮತ್ತು ಮರೆಯುವಂತಾಗುತ್ತೇವೆ.

ಇಂದು ನಮ್ಮಲ್ಲಿ ಕೆಲವರು ಹಿಂದುಗಳಾಗಿದ್ದೇವೆ. ನಾವು ಹಿಂದುಗಳಾಗಿರಲು ಹೆಮ್ಮೆ ಪಡುತ್ತೇವೆ. ನಮ್ಮ ಮಕ್ಕಳು ಒಳ್ಳೆಯ ವ್ಯಕ್ತಿತ್ವವುಳ್ಳ ಹಿಂದುಗಳಾಗಿರಬೇಕೆಂದು, ನಾವು ಅವರನ್ನು ಮನಗಾಣಿಸಲು ಬಹಳ ಪ್ರಯತ್ನಿಸುತ್ತೇವೆ. ಖಂಡಿತವಾಗಿಯೂ ಅವರು ಹಿಂದುಗಳಾಗಿರುವುದರಿಂದ ಏನು ಮಹತ್ವವಿದೆ ಮತ್ತು ಇದರ ಸಂಬಂಧಿತ ಎಲ್ಲ ವಿಷಯಗಳನ್ನು ಅನೇಕ ವೇಳೆ ಅವರಿಗೆ ವಿವರಿಸಲು ಸುಲಭವೆಂದು ನಮಗೆ ತೋರುವುದಿಲ್ಲ.

ಆದರೂ ನಮ್ಮ ಜನನ ಮತ್ತು ಪರಂಪರೆಯೊಂದಿಗೆ ಹೊಂದಾಣಿಕೆಯಾದ ಹಿಂದುತ್ವ, ಭಾರತದ ದೇವಾಲಯ, ಮತ್ತು ಬೇರೆ ಇನ್ನಿತರ ಯಾವುದೇ ರೀತಿಯ ವಿಷಯಗಳನ್ನು ಬೆಂಬಲಿಸಲು ನಾವು ಅಪೇಕ್ಷಿಸುತ್ತೇವೆ.

ಆದರೂ ಕೆಲ ನೂರಾರು ವರ್ಷಗಳ ಹಿಂದೆ, ಮುಂಚಿನ ಒಂದು ಬದುಕಿನಲ್ಲಿ ನಾವು ಅಭಿಮಾನಿತ ಮುಸಲ್ಮಾನರಾಗಿ ಜೀವಿಸಿರಬಹುದಾದ ಸಾಧ್ಯತೆಯಿದೆ. ಆ ಬದುಕಿನಲ್ಲಿ ನಾವು ಇಸ್ಲಾಂನ್ನು ಬೆಂಬಲಿಸಿದ್ದೇವೆ. ನಮ್ಮ ಮಕ್ಕಳನ್ನು ಒಳ್ಳೆಯ ವ್ಯಕ್ತಿತ್ವವುಳ್ಳ ಮುಸಲ್ಮಾನರಾಗಿ ಬೆಳೆಸಲು ಪ್ರಯತ್ನಿಸಿದ್ದೇವೆ, ಮಸೀದಿಗೆ ಹೋಗಿದ್ದೇವೆ, ಪ್ರಾಯಃ ನೂತನ ಮಸೀದಿಗಳನ್ನು ರಚಿಸಲು ಹಿಂದೂ ದೇವಾಲಯಗಳನ್ನು ಒಡೆದಿದ್ದೇವೆ.

ಅದಕ್ಕಿಂತಲೂ ಮುನ್ನ, ಬೇರೆ ಯಾವುದೋ ಬದುಕಿನಲ್ಲಿ ನಾವು ಯಾರಾಗಿದ್ದೆವು,  ಯಾವ ಧರ್ಮಕ್ಕೆ ನಾವು ಅನುಯಾಯಿಯಾಗಿದ್ದೆವು, ಮತ್ತು ಯಾವುದಕ್ಕೋಸ್ಕರ ಹೋರಾಡಿದೆವು?

ಈ ಬದುಕಿನಲ್ಲಿ ನಾವು ಭಾರತೀಯರು, ಅಮೆರಿಕದವರು, ಚೀನಿಗಳು, ರಷ್ಯಾದವರು ಆಗಿರಬಹುದು, ನಾವು ಹಿಂದುಗಳು, ಮುಸಲ್ಮಾನರು, ಕ್ರೈಸ್ತರು, ಯಹೂದಿಗಳಾಗಿರಬಹುದು ಅಥವಾ ಬೇರೆ ಯಾರಾದರೂ ಆಗಿರಬಹುದು.

ಅದರಂತೆ ನಾವು ಶಾಂತಿಯುತವಾಗಿ ಜೀವಿಸುತ್ತಿರಬಹುದು ಅಥವಾ ಹೋರಾಟ ಮಾಡುತ್ತಾ, ಮಿತ್ರರೂ ಯಾ ವೈರಿಗಳೂ ಆಗಿರಬಹುದು. ಆದರೆ ಇವೆಲ್ಲವೂ ಒಂದು ಭಾವನಾತ್ಮಕ ತಿಳುವಳಿಕೆಯಿಲ್ಲದೇ ಇದ್ದುದರಿಂದ ಸಂಭವಿಸುತ್ತದೆ.

ನಮ್ಮ ಬದುಕಿನ ಕೇವಲ ಒಂದು ಕ್ಷುಲ್ಲಕ ಅಧ್ಯಾಯವನ್ನು ಮಾತ್ರ ಓದಬಾರದು. ನಾವು ಆ ಎಲ್ಲ ಅಧ್ಯಾಯಗಳ ಕುರಿತು ವಿಚಾರಿಸೋಣ. ಯಾಕೆಂದರೆ ಈಗ ನಾವು ಬೇರೆ ಯಾರೂ ಅಲ್ಲ ನಾವು ಭಾರತೀಯರೇ ಎಂದೂ, ಇಪ್ಪತ್ತು, ಮೂವತ್ತು, ಐವತ್ತು ಅಥವಾ ಎಪ್ಪತ್ತು ವರ್ಷಗಳ ಹಿಂದೆ ಮಾನವರಾಗಿ ಭಾರತದಲ್ಲಿ ಅಥವಾ ಭಾರತೀಯ ತಂದೆ-ತಾಯಿಯರಿಂದ ಜನಿಸಿದವರೆಂದು ತಿಳಿದುಕೊಳ್ಳಬಹುದು.

ಆದರೆ ಆ ರೀತಿ ಹೆಚ್ಚು ಹೆಚ್ಚಾಗಿ ಭಾವಿಸುತ್ತಾ ಇದ್ದಲ್ಲಿ ನಾವು ಭಗವದ್ಗೀತೆಯ ಪ್ರಮುಖವಾದ ಸಂದೇಶವನ್ನು ಗಾಢವಾಗಿ ಅರಿಯಲು ವಿಫಲರಾಗುತ್ತೇವೆ.

ಅರ್ಜುನನು ಶ್ರೀ ಕೃಷ್ಣನ ಆಧ್ಯಾತ್ಮಿಕ ಸ್ವಭಾವವನ್ನು ಅರಿಯದೇ, ಲೌಕಿಕ ಶರೀರದೊಂದಿಗೆ ಸಮೀಕರಿಸಿದುದರಿಂದ ಶ್ರೀ ಕೃಷ್ಣನು ಅರ್ಜುನನನ್ನು ಮೂರ್ಖನೆಂದು ಹೇಳುತ್ತಾನೆ.

ಮತ್ತು ನಾವೂ ಸಹ, ಎಷ್ಟು ಮೂರ್ಖರು ಅಥವಾ ಬುದ್ಧಿವಂತರೆಂದು ನಮ್ಮ ಸ್ವಯಂ ಆಧ್ಯಾತ್ಮಿಕ ತಿಳುವಳಿಕೆಯ ಮೇಲೆ ನಿರ್ಧಾರವಾಗಿದೆ.

ನಾವು ಭಾರತೀಯರಾಗಿರುವುದಕ್ಕೆ ಬಹಳ ಮುಂಚೆ ನಮ್ಮ ಸಂಸ್ಕೃತಿಯ ಕುರುಹನ್ನು ನಾವು ಅರಿತಾಗ ನಾವೆಲ್ಲರೂ ಆಧ್ಯಾತ್ಮಿಕ ವ್ಯಕ್ತಿಗಳೆಂದೂ ಶ್ರೀ ಕೃಷ್ಣ ಪರಮ ಪ್ರಭುವಿನ ಅಂಶಗಳೆಂದೂ ತಿಳಿಯುತ್ತೇವೆ. ಕೆಲ ದೂರಸ್ಥ ಸಮಯದಲ್ಲಿ ನಮಗೆ ನೆನಪಿನಲ್ಲಿಡಲು ಆಶ್ವಾಸದವಿಲ್ಲದೆ ಬಹಳ ಕಾಲದ ಹಿಂದೆ, ನಾವು ಭಗವ೦ತನ ಒಲವಿನ ನಿಷ್ಠಾವ೦ತ ಸೇವಕರಾಗಿರುವುದನ್ನು ಬಿಟ್ಟಿದ್ದೇವೆ.

ನಾವು ತಪ್ಪಾಗಿ ಗ್ರಹಿಸಿ, ಭಗವಂತನ ನೆಲೆಯಿಂದ ದೂರ ಸರಿಯಲು ಅರಿಸಿಕೊಂಡಿದ್ದೇವೆ ಮತ್ತು ಪ್ರತಿಯಾಗಿ ಸುಖವನ್ನು ಅನುಭವಿಸಲು ಪ್ರಯತ್ನಿಸುತ್ತಾ ನಾವು ಈ ತಾತ್ಕಾಲಿಕವಾದ, ದುರದೃಷ್ಟದ ಭೌತಿಕ ಜಗತ್ತನ್ನು ಸಾಹಸದಿಂದ ಆಲಿಂಗಿಸಿದ್ದೇವೆ.

ನಾವು ಮಿಲಿಯಗಟ್ಟಲೆ ಬದುಕಿನಲ್ಲಿ ಭಿನ್ನ ಭಿನ್ನ ವ್ಯಕ್ತಿತ್ವವನ್ನು ಪಡೆದು, ಕೇವಲ ಪರಮ ಪುರುಷನ ನೆಲೆಯಲ್ಲಿ ದೊರಕುವಂತಹ ಆಧ್ಯಾತ್ಮಿಕ ಪರಮಸುಖವನ್ನು ಉಪೇಕ್ಷಿಸಿ, ಭೋಗಿಸಲಾಗದ ವಸ್ತುವನ್ನು ಆಸ್ವಾದಿಸಲು ನಾವು ನಿರುಪಯುಕ್ತವಾಗಿ ಪ್ರಯತ್ನಿಸಿದ್ದೇನೆ.

ಭಗವದ್ಗೀತೆಯಲ್ಲಿ (8.16) .ಶ್ರೀ ಕೃಷ್ಣನ ಅರ್ಜುನನೊಂದಿಗೆ ನುಡಿದಂತೆ :

ಬ್ರಹ್ಮಭುವನಾಲೋಕಾಃ

ಪುನರಾವರ್ತಿನೋಽರ್ಜುನ |

ಮಾಮುಪೇತ್ಯ ತು ಕೌನ್ತೇಯ

ಪ್ರನರ್ಜನ್ಮ ನ ವಿದ್ಯತೇ ||

”ಈ ಭೌತಿಕ ಜಗತ್ತಿನಲ್ಲಿ ಬ್ರಹ್ಮಲೋಕದಿಂದ ಭುವನದವರೆಗೆ ಎಲ್ಲವೂ ಜನನ ಮತ್ತು ಪುನರ್ಜನ್ಮಗಳಿಂದ ಕೂಡಿದ (ದುಃಖಕರವಾದ) ಸ್ಥಳವಾಗಿದೆ. ಆದರೆ ಹೇ ಕುಂತಿ-ಪುತ್ರನೇ – ನನ್ನ ನಿವಾಸಕ್ಕೆ ಬಂದು ತಲಪಿದವನು ಪುನರ್ಜನ್ಮವನ್ನು ಪಡೆಯುವುದಿಲ್ಲ”

ಶ್ರೀ ಕೃಷ್ಣನು ನಮ್ಮನ್ನು ವಿನಯದಿಂದ ಅವನ ನೆಲೆಗೆ ಕರೆಯುತ್ತಾನೆ, ಮತ್ತು ಕಾಲ್ಪನಿಕ ವಸ್ತುಗಳಿಂದ ಮುಕ್ತರಾಗಿ ಅಲ್ಲಿ ಸೇರಲು ಅವನು ನಮಗೆ ಸಾಧನಗಳನ್ನು ಬಳಸುತ್ತಾನೆ. ಪರಮ ಪುರುಷನು ನುಡಿದಂತೆ – ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ ‘ಸರ್ವಧರ್ಮವನ್ನೂ ಪರಿತ್ಯಾಗ ಮಾಡಿ ನನ್ನಲ್ಲಿ ಶರಣಾಗತನಾಗು.”

ನಾವು ನಮ್ಮ ಸಂಸಾರದಲ್ಲಿರುವ ಋಣಾನುಬಂಧ ನಡತೆ, ಸಮಾಜದ ಕರ್ತವ್ಯಗಳಲ್ಲಿ ಅಥವಾ ಇನ್ನಿತರ ವಿಚಾರಗಳಲ್ಲಿ ಚಿಂತೆಗೊಳಗಾಗಿದ್ದಲ್ಲಿ ಅತೀ ಜ್ಞಾನಿಯಾಧ ದೇವೋತ್ತಮ ಪುರುಷನ ಮಾರ್ಗದರ್ಶನ ಹಾಗೂ ಬೋಧನೆಯನ್ನು ಭಗವದ್ಗೀತೆಯಲ್ಲಿ ಪಡೆಯಬಹುದು. ವಾಸ್ತವವಾಗಿ ಶ್ರೀ ಕೃಷ್ಣನ ಯೋಜನೆಯಲ್ಲಿ ನಾವು ಸಹಕರಿಸುತ್ತಿದ್ದಲ್ಲಿ, ನಮ್ಮ ಜೀವನವನ್ನು ಎಲ್ಲ ವಿಧದಲ್ಲಿ ಶಾಂತಿಯುತ ಹಾಗೂ ಸಂತೋಷವಾಗಿ ಕಾಣಬಹುದು.

ಭಗವದ್ಗೀತೆಯ ಸಂದೇಶವು, ಭಾರತದ ಪ್ರಮುಖ ಸಾಧು ಸಂತರ ಪ್ರಾಮಾಣಿಕವಾದ ಸಂದೇಶವಾಗಿರುತ್ತದೆ. ಇದು ಭಾರತದ ವಾಸ್ತವಿಕವಾದ ಸಂಸ್ಕೃತಿಯಾಗಿದೆ.

ಈಗ ಎಲ್ಲ ಭಾರತೀಯರಿಗೆ ಮತ್ತು ವೈದಿಕ ಸಂಸ್ಕೃತಿಯನ್ನು ಅನುಸರಿಸುವವರಿಗೆ, ಈ ವಿಶಿಷ್ಟವಾದ ಪಾರಂಪರ್ಯವನ್ನು ಉಪಯುಕ್ತಗೊಳಿಸಲು ಇದು ಒಂದು ಒಳ್ಳೆ ಸಂದರ್ಭವಾಗಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi