ಸಂಕೀರ್ತನ ಯಶೋಗಾಥೆಗಳು
ಶ್ರೀಲ ಪ್ರಭುಪಾದರು, ಪುಸ್ತಕ ಸಂಕೀರ್ತನೆಯಲ್ಲ ಭಕ್ತರು ಜನರ ಚಳಿ ಹೋಗಬೇಕಾದ ಅಗತ್ಯವನ್ನು ಕುರಿತು ನೀಡಿದ ಉದಾಹರಣೆ ಇದು.

ಜನರು ತಾವಾಗಿಯೇ ಕೃಷ್ಣಪ್ರಜ್ಞಾಂದೋಲನಕ್ಕೆ ಬರುವುದಿಲ್ಲ. ಭಕ್ತರೇ ಮತ್ತೆ ಮತ್ತೆ ಅವರ ಬಳಿ ಹೋಗಬೇಕಾಗುತ್ತದೆ. ನಿಧಾನವಾಗಿ ಅವರ ಮನವೊಲಿಸಿ, ಶ್ರೀಚೈತನ್ಯ ಮಹಾಪ್ರಭುಗಳ ಕರುಣೆಯನ್ನು ಪಡೆಯುವ ಹಂತಕ್ಕೆ ಏರಿಸಬೇಕಾಗುತ್ತದೆ. ಭಕ್ತರು ನೇರವಾಗಿ ಜನರನ್ನು ಸಂಪರ್ಕಿಸಿ, ಶ್ರೀಲಪ್ರಭುಪಾದರ ಪುಸ್ತಕಗಳನ್ನು ನೀಡುವ ಮೂಲಕ ಈ ಕಾರ್ಯ ಸಾಧಿಸುತ್ತಾರೆ.
ಇದು ಆ ವ್ಯಕ್ತಿಯ ಆಸಕ್ತಿ ಅಥವಾ ಆಹ್ವಾನದ ಮೇಲೆ ನಡೆಯುವ ಭೇಟಿಯಲ್ಲ. ಇದೊಂದು ಅಜ್ಞಾತ ಸುಕೃತಿ. ಭಕ್ತನು ಭೇಟಿಯಾದ ಸಂದರ್ಭದಲ್ಲಿ ಆತ ಮೊದಲಬಾರಿಗೆ ಸಾಧು (ಭಕ್ತ), ಶಾಸ್ತ್ರ (ಗ್ರಂಥಗಳು) ಮತ್ತು ಗುರು (ಶ್ರೀಲ ಪ್ರಭುಪಾದ) ಗಳೊಂದಿಗೆ ಸಂಪರ್ಕ ಸಾಧಿಸುತ್ತಾನೆ. ಕೃಷ್ಣ ಪ್ರಜ್ಞೆಯ ಪುಸ್ತಕಗಳನ್ನು ಸ್ವೀಕರಿಸುವ ವ್ಯಕ್ತಿ ತನಗರಿವಿಲ್ಲದಂತೆ ಭಕ್ತಿಸೇವೆಯ ಮಾರ್ಗದಲ್ಲಿ ಸಾಗುವ ಸದವಕಾಶ ಪಡೆಯುತ್ತಾನೆ.
ಕೆಲವೊಮ್ಮೆ ಹೀಗೂ ಆಗುವುದುಂಟು ಅಜ್ಞಾತ ಸುಕೃತಿಯಿಂದ ಪ್ರೇರಣೆ ಪಡೆದ ವ್ಯಕ್ತಿ ತಾನಾಗಿಯೇ ಕೃಷ್ಣ ಸಾಹಿತ್ಯದ ಪುಸ್ತಕ ಕೊಳ್ಳಲು ಮುಂದಾಗುತ್ತಾನೆ. ಆದರೆ ಹೀಗೆ ಅವನ ಮನಸೆಳೆಯಲೂ ಭಕ್ತರ ಪ್ರಯತ್ನ ಅಗತ್ಯ.

ಅತಿ ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ಸಾರ್ವಜನಿಕ ಕಟ್ಟಡಗಳಲ್ಲಿ, ಬಸ್-ರೈಲು-ವಿಮಾನ ನಿಲ್ದಾಣಗಳಲ್ಲಿ ಭಕ್ತರು ಕೃಷ್ಣಪ್ರಜ್ಞಾಂದೋಲನದ ಪುಸ್ತಕಗಳನ್ನು ಇಟ್ಟುಕೊಂಡಿರುತ್ತಾರೆ. ಸಂಕೀರ್ತನೆಯು ಪ್ರತಿಯೊಬ್ಬರ ಸೊತ್ತಾಗಬೇಕೆನ್ನುವುದೇ ಶ್ರೀಲಪ್ರಭುಪಾದರ ಬಯಕೆ. ಭಕ್ತರು ಅದನ್ನು ನೆರವೇರಿಸುತ್ತಿದ್ದಾರೆ.
ಇದೊಂದು ಅಮೆರಿಕದಲ್ಲಿ ನಡೆದ ಘಟನೆ, ನಿರ್ಗುಣ ದಾಸರು ಪುಸ್ತಕ ಮಾರಾಟದಲ್ಲಿ ತಲ್ಲೀನರಾಗಿದ್ದರು. ಒಬ್ಬ ಬಡಗಿ ಅವರನ್ನು ಕತೂಹಲದಿಂದ ಗಮನಿಸುತ್ತಿದ್ದ. ಅವರೊಂದಿಗೆ ಮಾತನಾಡಿ, ಪುಸ್ತಕ ಕೊಂಡು ಹಿಂದಿರುಗುತ್ತಿದ್ದವರೆಲ್ಲರ ಮುಖದಲ್ಲೂ ಮಂದಹಾಸ ಮಿನುಗುತ್ತಿರುವುದನ್ನು ಗಮನಿಸಿದ. ಅಲ್ಲಿ ನಿರ್ಗುಣದಾಸರು ಮತ್ತಿತರ ಭಕ್ತರು ಸೇರಿ ಏನು ನಡೆಸುತ್ತಿದ್ದಾರೆ ಎಂದು ಅವನಿಗೆ ಅಚ್ಚರಿಯಾಯಿತು. ನೋಡುತ್ತ ನೋಡುತ್ತಲೇ ಅವರ ಬಗೆಗೊಂದು ಆಕರ್ಷಣೆ ಬೆಳೆಯಿತು.
ಭಕ್ತರೆಲ್ಲ ಮರಳುವ ಸಿದ್ಧತೆಯಲ್ಲಿದ್ದಾಗ ಬಡಗಿ ತಾನಾಗಿಯೇ ಅವರ ಬಳಿ ಸಾಗಿ ಮಾತಿಗೆ ತೊಡಗಿದ. ಇನ್ನೇನು? ಅವನ ಕುತೂಹಲ ಅವನನ್ನು ಗೆಲ್ಲಿಸಿತು. ಭಕ್ತರ ಸಂಗದಿಂದ ಪ್ರಭಾವಿತನಾದ ಬಡಗಿ ತಾನೂ ಭಕ್ತನಾಗಿ ಹೋದ! ಸಂಕೀರ್ತನೆಯಲ್ಲಿ ಪಾಲ್ಗೊಂಡ.
ನಿರ್ಗುಣದಾಸರು ಉಲ್ಲೇಖಿಸಿರುವ ಮತ್ತೊಂದು ಘಟನೆ ಹೀಗಿದೆ.

ಒಮ್ಮೆ ಒಬ್ಬ ವ್ಯಕ್ತಿ ವೇಗವಾಗಿ ಕಾರಿನಲ್ಲಿ ಹೋಗುತ್ತಿದ್ದ. ಕಾರಿನ ಚಕ್ರಕ್ಕೆ ಏನೋ ಸಿಲುಕಿದಂತಾಗಿ ಮರಳಿ ಬಂದು ನೋಡಿದ. ಆ ವಸ್ತು ‘ಕೃಷ್ಣ’ ಪುಸ್ತಕವಾಗಿತ್ತು.! (ಅದನ್ನು ಯಾರೋ ಬೀಳಿಸಿಕೊಂಡಿದ್ದರು) ಅದನ್ನು ಆತ ಎತ್ತಿಕೊಂಡ. ಪುಸ್ತಕ ಓದಿ ಮುಗಿಸುವ ಹೊತ್ತಿಗೆ ಆತ ಭಕ್ತರಲ್ಲೊಬ್ಬನಾಗಿಬಿಟ್ಟಿದ್ದ.
ಇದಲ್ಲವೇ ಅಜ್ಞಾತ ಸುಕೃತಿ !
“ನಾನು ನಿಮ್ಮ ದೇಶಕ್ಕೆ ಬರಲೇಬೇಕೆಂದು ಪಣತೊಟ್ಟಿದ್ದೆ. ಯಾರೂ ನನ್ನನ್ನು ಆಹ್ವಾನಿಸಿರಲಿಲ್ಲ. ನೀವೂ ಕೂಡ ನನ್ನನ್ನು ಕರೆದಿರಲಿಲ್ಲ. ಆದರೂ ನಾನಿಲ್ಲಿಗೆ ಬಂದೆ, ಮತ್ತು ಉತ್ಸಾಹದಿಂದ ಬೋಧಿಸಿದೆ. ಈ ಕಾರಣದಿಂದಲೇ ಇಂದು ನೀವೆಲ್ಲರು ನನ್ನ ಅನುಯಾಯಿಗಳಾಗಿದ್ದೀರಿ.”






Leave a Reply