ನಿರ್ಜಲ ಏಕಾದಶಿ

ವರ್ಷದಲ್ಲಿ ಸುಮಾರು ಇಪ್ಪತ್ನಾಲ್ಕು “ಏಕಾದಶಿ” ಗಳು ಬರುತ್ತವೆ. ಭಕ್ತ ವೈಷ್ಣವರೆಲ್ಲರೂ ತಪ್ಪದೆ ಏಕಾಶಿಯಂದು “ಉಪವಾಸ” ಆಚರಿಸುವುದು ರೂಢಿ.

ಕಾರಣಾಂತರಗಳಿಂದ ಯಾವುದಾದರೊಂದು ಏಕಾದಶಿ ಆಚರಣೆಗೆ ಅಡ್ಡಿಯಾದರೆ, ಅದಕ್ಕೆ ಪರಿಹಾರ “ನಿರ್ಜಲ ಏಕಾದಶಿ” ಎಂದು ಹೇಳಲಾಗಿದೆ.

ಎಲ್ಲ ಏಕಾದಶಿಗಳ ಆಚರಣೆಯ ಫಲ ನಿರ್ಜಲ ಏಕಾದಶಿಯೆಂದು ದೊರೆಯುತ್ತದೆ.

ಜ್ಯೇಷ್ಠ ಶುಕ್ಲ ಏಕಾದಶಿಯ ಈ ದಿನದಂದು ನೀರನ್ನು ಸಹ ಕುಡಿಯದೆ ಉಪವಾಸ ಆಚರಿಸುವುವವರು ವರ್ಷ ಪೂರ್ತಿ ಆಚರಣೆಯ ಫಲ ಪಡೆಯುತ್ತಾರೆ.

ನಿರ್ಜಲ ಏಕಾದಶಿಗೆ “ಪಾಂಡವ ಏಕಾದಶಿ” ಎಂದೂ ಹೆಸರಿದೆ. ಇದರ ಹಿನ್ನೆಲೆ ಸ್ವಾರಸ್ಯಕರವಾದುದು.

ಭಕ್ತ ವೈಷ್ಣವರಾದ ಪಾಂಡವರೆಲ್ಲರೂ – ಭೀಮಸೇನನ್ನುಳಿದು ಏಕಾದಶಿಯನ್ನು ತಪ್ಪದೆ ಆಚರಿಸುತ್ತಿರುತ್ತಾರೆ.

ವೃಕೋದರನಾದ ಭೀಮನಿಗೆ ಮಾತ್ರ ಉಪವಾಸ ಶಕ್ಯವೇ ಆಗುವುದಿಲ್ಲ. ಇದರಿಂದ ಬಹಳ ಕಸಿವಿಸಿಗೊಂಡ ಆತ ವೇದವ್ಯಾಸರ ಬಳಿ ಬಂದು ತನಗೂ ಏಕಾದಶಿಯ ಪುಣ್ಯ ಲಭಿಸುವಂತೆ ಏನು ಮಾಡಬಹುದು ಎಂಬುದಾಗಿ ಕೇಳಿಕೊಳ್ಳುತ್ತಾನೆ.

ಅದಕ್ಕೆ ವೇದವ್ಯಾಸರು ವರ್ಷದಲ್ಲೊಂದು ಏಕಾದಶಿ ದಿನ – ಜ್ಯೇಷ್ಠ ಶುಕ್ಲ ಏಕಾದಶಿಯ ದಿನ – ನೀರನ್ನು ಕುಡಿಯದೆ ಉಪವಾಸ ಮಾಡುವಂತೆ ತಿಳಿಸುತ್ತಾರೆ.

ಭೀಮಸೇನ ಅತಿ ಶ್ರದ್ಧೆಯಿಂದ, ನಿರಾಹಾರಿಯಾಗಿ ಉಪವಾಸ ಮಾಡಿ ಏಕಾದಶಿ ವ್ರತಾಚರಣೆಯ ಪುಣ್ಯಗಳಿಸುತ್ತಾನೆ.

ಹೀಗೆ ಏಕಾದಶಿಯ ಸೂರ್ಯೋದಯದಿಂದ ದ್ವಾದಶಿಯ ಸೂರ್ಯೋದಯ ಕಾಲದವರೆಗೂ ನೀರನ್ನು ಕೂಡ ಸೇವಿಸದೆ ಆಚರಿಸುವ ವ್ರತ ಇದಾದ್ದರಿಂದ “ನಿರ್ಜಲ ಏಕಾದಶಿ” ಎಂಬ ಹೆಸರು ಬಂದಿದೆ.

ಜ್ಯೇಷ್ಠ ಮಾಸದ ಬಿರುಬೇಸಿಗೆಯಲ್ಲಿ ಇಂತಹ ಕಠಿಣ ವ್ರತ ಕೈಗೊಂಡು ಭಗವನ್ನಾಮ ಸ್ಮರಣೆ ಮಾಡುವ ಭಕ್ತರು ಸಹಜವಾಗಿ ಭಗವಂತನ ಪ್ರೀತಿಗೆ ಪಾತ್ರರಾಗುತ್ತಾರೆ. ಕೆಲವೆಡೆ ಈ ದಿನದಂದು ಕುಂಭಗಳಲ್ಲಿ “ಜಲದಾನ” ನೀಡುವ ರೂಢಿಯಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi