ಕೃಷ್ಣ ನನಗೆ ಗೊತ್ತು!

– ಆಕರ: ಭಾರದ್ವಾಜ ದಾಸ, ಸ್ಥಿತಾದೇವಿ ದಾಸಿ ಮತ್ತು ಪ್ರಭಾವಿಷ್ಣು ಸ್ವಾಮಿ ಇವರ ಸಂದರ್ಶನ ಟಿಪ್ಪಣಿಗಳು

ಒಮ್ಮೆ ಶ್ರೀಲ ಪ್ರಭುಪಾದರು ತಮ್ಮ ಉಪನ್ಯಾಸದಲ್ಲಿ ಭಾರತೀಯರನ್ನು ಕುರಿತು, “ಇತರ ಕೆಲವು ಭಾರತೀಯರ ಹಾಗೆ “ಕೃಷ್ಣ ನನಗೆ ಗೊತ್ತು” ಎಂದು ಹೇಳಿಕೊಳ್ಳುವ ಆತುರ ತೋರಬೇಡಿ” ಎಂದು ಕಿವಿಮಾತು ಹೇಳಿದರು. ಇದಕ್ಕೆ ಪೂರಕವಾಗಿ ಅವರು ಹೇಳಿದ ಕಥೆ ಹೀಗಿದೆ:

ಜಗನ್ನಾಥ ಮಂದಿರಕ್ಕೆ ನೀರು ಪೂರೈಸುವ ಒಬ್ಬ ಭಿಷ್ಟಿ ಇದ್ದ. ಅವನು ಯಾವಾಗಲೂ “ನಾನು ಇಲ್ಲಿಗೆ ಪ್ರತಿದಿನವೂ ಬರುತ್ತೇನೆ. ಜಗನ್ನಾಥ ಸ್ವಾಮಿಯ ದರ್ಶನ ಯಾವಾಗ ಬೇಕಿದ್ದರೂ ಮಾಡಬಹುದು. ಇಂದು ಬೇರೆಯವರು ನೋಡಿ ಹೋಗಲಿ” ಎಂದು ಯೋಚಿಸುತ್ತಿದ್ದ.

ಪ್ರತಿದಿನ ನೀರು ತರುತ್ತಿದ್ದರೂ “ನಾಳೆ ನೋಡುವೆ” ಎನ್ನುತ್ತಲೆ ಕಾಲ ಕಳೆದ. ಹೀಗೆ ಅವನಿಗೆ ಎಂದಿಗೂ ಜಗನ್ನಾಥ ಸ್ವಾಮಿಯ ದರ್ಶನ ಪಡೆಯಲು ಸಾಧ್ಯವೇ ಆಗಲಿಲ್ಲ. ಕೊನೆಗೂ ಅವನು ಹಾಗೆಯೇ ಸತ್ತು ಹೋದ.

ನೀತಿ: ತಾನಾಗಿಯೇ ಒದಗಿಬಂದ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಬೇಕು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi