ಶಾಂತಿ ಇರಲು ಹೇಗೆ ಸಾಧ್ಯ?

ಸ್ಥಳ: ಜಿನೇವ, ಸ್ವಿಡ್ಜರ್‌ಲ್ಯಾಂಡ್‌, ದಿನಾಂಕ 2ನೇ ಜೂನ್, 1974

ಶ್ರೀಲ ಪ್ರಭುಪಾದರು ಮತ್ತು ಅವರ ಕೆಲವು ಶಿಷ್ಯರುಗಳೊಂದಿಗೆ ನಡೆದ ಸಂವಾದ

– ಅನುವಾದ : ಡಾ.ಕೆ. ವೈ. ಬಾಲರಾಜ್

ಶಿಷ್ಯ: ಶ್ರೀಲ ಪ್ರಭುಪಾದರೇ, ಇತ್ತೀಚಿನ ಯು.ಎಸ್.ನ ವ್ಯವಸಾಯಿಕ ಆಫೀಸರ್‌ಗಳ ಅಧ್ಯಯನದ ಪ್ರಕಾರ ಮಾಂಸ ಭಕ್ಷಣೆಯು ಲಾಭದಾಯಕವೇ ಅಲ್ಲವಾಗಿದೆ. ಕಸಾಯಿಖಾನೆಯನ್ನು ಮೇಲಕ್ಕೆ ಎತ್ತಲು ಮತ್ತು ಹಸುಗಳ ಸಾಗಾಣಿಕೆಗೆ ಬಹಳಷ್ಟು ಶಕ್ತಿ ಮತ್ತು ಸಮಯದ ವ್ಯಯವಾಗುತ್ತಿದೆ. ಇದು ನಿರುಪಯೋಗವಾದದ್ದು.

ಶ್ರೀಲ ಪ್ರಭುಪಾದ: ಹೌದು ನಿರುಪಯೋಗವಾದದ್ದು. ಆದ್ದರಿಂದ ನಾನು ಹೇಳುತ್ತೇನೆ. ಅವರಿಗೆ ಬುದ್ಧಿಯಿಲ್ಲ. ಅವರು ಮೂಢರು, ಮೂಢನಾಯಕರು. ವ್ಯವಸಾಯದಲ್ಲಿ ಸ್ವಲ್ಪ ಪರಿಶ್ರಮ ಹಾಕಿದರೆ ಸಾಕು, ಇಡೀ ಕುಟುಂಬಕ್ಕೆ ಬೇಕಾಗುವಷ್ಟು ಆಹಾರವನ್ನು ಬೆಳೆಯಬಹುದು. ನೀವು ಕೇವಲ ಮೂರು ತಿಂಗಳು ಕೆಲಸ ಮಾಡಿದರೂ, ನಿಮ್ಮ ಇಡೀ ಕುಟುಂಬಕ್ಕೆ ಸಾಕಾಗುವಷ್ಟು ಆಹಾರ ಸಿಗುತ್ತದೆ. ಉಳಿದಿರುವ 9 ತಿಂಗಳು ನೀವು ಹರೇಕೃಷ್ಣ ಮಂತ್ರವನ್ನು ಜಪಿಸಿ.

ಆದರೆ ಈ ಮೂಢರು ಅದನ್ನು ಮಾಡುವುದಿಲ್ಲ. ಅವರು ತಿನ್ನುವುದಕ್ಕಾಗಿ ಕಷ್ಟಪಟ್ಟು ಕತ್ತೆಗಳಂತೆ ದುಡಿಯುತ್ತಾರೆ. ನೂನಮ್ ಪ್ರಮತ್ತಃ ಕುರುತೆ ವಿಕರ್ಮ ಯದ್ ಇಂದ್ರಿಯ ಪ್ರೀತಯ ಆಪ್ರನೋತಿ. ಅವರು ಸುಲಭವಾದ ಜೀವನವನ್ನು ಸ್ವೀಕರಿಸುವುದಿಲ್ಲ.

ಶಿಷ್ಯ : ಹಸುಗಳು ಮತ್ತು ಪ್ರಾಣಿಗಳಿಗೆ ಕೊಡುವ ಆ ಎಲ್ಲ ಧಾನ್ಯಗಳನ್ನು ಒಂದು ವೇಳೆ ಜನರು ತಿಂದರೆ ಅವರಿಗೆ ಮಾಂಸಭಕ್ಷಣೆಗಿಂತ 20 ಪಟ್ಟು ಹೆಚ್ಚು ಕ್ಯಾಲೋರಿ ಸಿಗುತ್ತದೆ ಎಂದು ಅಗ್ರಿಕಲ್ಚರ್ ರಿಪೋರ್ಟ್‌ನಲ್ಲಿ ತಿಳಿಸಲಾಗಿದೆ.

ಶ್ರೀಲ ಪ್ರಭುಪಾದ: ಹೌದು, ತಪ್ಪು ನಾಗರಿಕತೆ ಮತ್ತು ಮೂಢ ನಾಗರಿಕತೆ ಇಂತಹದಕ್ಕೆಲ್ಲ ರಾಷ್ಟ್ರೀಯವಾದ ಎಂಬ ಮೂಢತನದ ಹೇಳಿಕೆ. ಯಾವುದೇ ಕ್ಷಣದಲ್ಲಿ ವ್ಯಕ್ತಿ ಸಾಯಬಹುದು, ಆದರೂ ಅವನು “ಇದು ನನ್ನ ಭೂಮಿ” ಎಂದು ವಾದಿಸುತ್ತಾನೆ. ಜನಸ್ಯ ಮೋಹೋ ಯಾಂ ಅಹಂ ಮಮೇತಿ ಇದು ಭ್ರಮೆ. ಇಲ್ಲಿ ಅವನಿಗೆ ಏನೂ ಸೇರಿದ್ದಲ್ಲ.

ಆದರೂ ಅವನು ‘ನಾನು’ ಮತ್ತು ‘ನನ್ನದು’ ಎಂದು ತನ್ನ ದೇಹದೊಂದಿಗೆ ಗುರುತಿಸಿಕೊಂಡು ತಪ್ಪು ಕಲ್ಪನೆಯಲ್ಲಿ ಹೋರಾಡುತ್ತಿದ್ದಾನೆ. ಇದು ತಪ್ಪು ನಾಗರಿಕತೆಯ ಮೂಲ ಸಿದ್ಧಾಂತ. ಯಾವುದೂ ನಮಗೆ ಸೇರಿದ್ದಲ್ಲ. ನಾನು ಈಗ ಸ್ವಿಡ್ಜರ್ ಲ್ಯಾಂಡ್ ಗೆ ಬಂದಿದ್ದೇನೆ. ಒಂದು ತಿಂಗಳ ಅನಂತರ ಇದು ನನ್ನದು’ ಎಂದು ವಾದಿಸಲು ಸಾಧ್ಯವೇ?

ಅದೇ ರೀತಿಯಾಗಿ ನಾವು ಈ ಜಗತ್ತಿಗೆ ನೆಂಟರಾಗಿ ಬಂದಿದ್ದೇವೆ. ನಾವು ತಾಯಿಯ ಗರ್ಭದಿಂದ ಬಂದು ಇಲ್ಲಿ 70 ವರ್ಷಗಳು ಅಥವಾ ಜಾಸ್ತಿ ಇದ್ದು “ಇದು ನನ್ನ ಭೂಮಿ’ ಎಂದು ವಾದಿಸುತ್ತೇವೆ. ಆದರೆ ಅದು ಯಾವಾಗ ನಿಮ್ಮದಾಯಿತು? ಅದು ನಿಮ್ಮ ಜನನಕ್ಕೆ ಮೊದಲೇ ಬಹಳ ಹಿಂದೆಯೇ ಇತ್ತು. ಅದು ಹೇಗೆ ನಿಮ್ಮದಾಯಿತು? ಆದರೆ ಜನರಿಗೆ ಬುದ್ಧಿ ಇಲ್ಲ. ಅವರು ‘ಇದು ನನ್ನ ಭೂಮಿ, ನನ್ನ ರಾಷ್ಟ್ರ, ನನ್ನ ಕುಟುಂಬ, ನನ್ನ ಸಮಾಜ” ಎಂದುಕೊಳ್ಳುತ್ತ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ.

ಇದು ಪಾಶ್ಚಿಮಾತ್ಯ ನಾಗರಿಕತೆಯಿಂದ ಪರಿಚಯಿಸಲಾಗಿದೆ. ವೈದಿಕ ನಾಗರಿಕತೆಯಲ್ಲಿ ರಾಷ್ಟ್ರೀಯವಾದ ಎಂಬುವುದು ಇರಲಿಲ್ಲ. ಭಗವದ್ಗೀತೆಯಲ್ಲಿಯೂ “ರಾಷ್ಟ್ರೀಯವಾದ’ ಎಂಬ ಪದವನ್ನು ನೀವು ಕಾಣುತ್ತೀರಾ? ಇಲ್ಲ. ಅಂಥದ್ದೇನೂ ಇಲ್ಲ.

ರಾಷ್ಟ್ರೀಯವಾದ ಎನ್ನುವುದು ಬುಡಕಟ್ಟು ಜನಾಂಗದವರ ಕಲ್ಪನೆ. ಆಫ್ರಿಕಾದಲ್ಲಿ ಈಗಲೂ ಬುಡಕಟ್ಟು ಜನಾಂಗದವರ ಪಂಗಡಗಳಿವೆ. ರಾಷ್ಟ್ರೀಯವಾದ ಎನ್ನುವುದು ನಾಗರಿಕತೆಯ ಅತಿ ಅಸಂಸ್ಕೃತ ಕಲ್ಪನೆ. ಅದು ಏನಿಲ್ಲ, ಕೇವಲ ಅಭಿವೃದ್ಧಿ ಹೊಂದಿದ ಬುಡಕಟ್ಟು ಪದ್ಧತಿ. ಆಧುನಿಕ ಮನುಷ್ಯ ನಾಗರಿಕತೆಯಲ್ಲಿ ಪ್ರಗತಿಯನ್ನು ಹೊಂದಿಲ್ಲ. ಈ ರಾಷ್ಟ್ರೀಯವಾದ ಇನ್ನೊಂದು ರೀತಿಯ ಬುಡಕಟ್ಟು ಪದ್ಧತಿ ಅಷ್ಟೆ.

ಶಿಷ್ಯ: ಇಂದಿನ ನಾಗರಿಕ ಎನ್ನಿಸಿಕೊಂಡಿರುವ ಜನರು ನರಭಕ್ಷಕರಾಗಿದ್ದಾರೆ. ಏಕೆಂದರೆ ಅವರು ಹಸುಗಳನ್ನು ತಿನ್ನುತ್ತಾರೆ.

ಶ್ರೀಲ ಪ್ರಭುಪಾದ: ಹೌದು, ಅದಕ್ಕೋಸ್ಕರವೇ ಅವರು ದುಃಖಪಡುತ್ತಿದ್ದಾರೆ. ಆದ್ದರಿಂದ ಇತಿಹಾಸದಲ್ಲಿ ಪ್ರತಿ 25 ವರ್ಷಕ್ಕೆ ಭಾರೀ ಯುದ್ಧ ನಡೆದು ಬಹಳಷ್ಟು ಜನರ ಸಾವನ್ನು ನೋಡುತ್ತೇವೆ. ಈ ಪ್ರಕೃತಿಯು ಪ್ರಾಣಿವಧೆಯನ್ನು ಸ್ವೀಕರಿಸುವುದಿಲ್ಲ.

ಈಗ ಭಾರತವು ಕೂಡ ಪಾಶ್ಚಿಮಾತ್ಯರಿಂದ ಪ್ರಾಣಿವಧೆಯನ್ನು ಕಲಿತುಕೊಂಡಿದೆ. ಈಗ ಭಾರತ ಮತ್ತು ಪಾಕ್ ನಡುವೆ ಯುದ್ಧ ನಡೆಯುತ್ತಿದೆ. ಮತ್ತು ಈ ಯುದ್ಧದಿಂದ ಯಾವ ರೀತಿಯ ಲಾಭವೂ ಇಲ್ಲ. ಇದರೊಂದಿಗೆ ಅನಾವಶ್ಯಕವಾಗಿ ಲಕ್ಷಾಂತರ ಜನರು ಸತ್ತಿದ್ದಾರೆ.

ಶಿಷ್ಯ: ಇತ್ತೀಚೆಗೆ ಭಾರತವು ಅಣುಬಾಂಬ್ ಸ್ಫೋಟಿಸಿದೆ. ಈಗ ಪಾಕಿಸ್ತಾನವು ಅಣುಬಾಂಬ್ ಹೊಂದಲು ಪ್ರಯತ್ನಿಸುತ್ತಿದೆ.

ಶ್ರೀಲ ಪ್ರಭುಪಾದ: ಹೌದು, ಇದು ನಡೆಯುತ್ತಲೇ ಇದೆ.

ಶಿಷ್ಯ: ಭಾರತ ಸರ್ಕಾರವು ಅಣುಶಕ್ತಿ ಕೇವಲ ಶಾಂತಿ ಉದ್ದೇಶಕ್ಕಾಗಿಯೇ ಬಳಸಲಾಗುತ್ತದೆ ಎಂದು ಪ್ರಮಾಣ ಮಾಡಿದೆ.

ಶ್ರೀಲ ಪ್ರಭುಪಾದ: ಇಲ್ಲ, ಅವರಿಗೆ ಶಾಂತ ಪರಿಸ್ಥಿತಿಯ ಬಗ್ಗೆ ಗೊತ್ತಿಲ್ಲ. ಅವರೆಲ್ಲರೂ ಮೂಢರು. ನಿಜವಾದ ಶಾಂತ ಪರಿಸ್ಥಿತಿಯು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ.

ಭೋಕ್ತಾರಂ ಯಜ್ಞತಪಸಾಂ ಸರ್ವಲೋಕ ಮಹೇಶ್ವರಮ್ |

ಸುಹೃದಯಂ ಸರ್ವಭೂತಾನಾಂ ಜ್ಞಾತ್ವಾ ಮಾಂ ಶಾಂತಿಮೃಚ್ಛತಿ

”ನನ್ನ ವಿಷಯವಾಗಿ ಸಂಪೂರ್ಣ ಪ್ರಜ್ಞೆಯಿಟ್ಟುಕೊಂಡು ಎಲ್ಲ ಯಜ್ಞಗಳ ಮತ್ತು ತಪಸ್ಸುಗಳ ಕಟ್ಟಕಡೆಯ ಭೋಕ್ತೃ ನಾನೇ ಎಲ್ಲ ಲೋಕಗಳ ಮತ್ತು ದೇವತೆಗಳ ಪರಮ ಪ್ರಭು ನಾನೇ ಮತ್ತು ಎಲ್ಲ ಜೀವಿಗಳ ಉಪಕಾರಿಯೂ, ಹಿತೈಷಿಯು ನಾನೇ ಎಂದು ಅರಿತ ಮನುಷ್ಯನು ಐಹಿಕ ದುಃಖಗಳ ಯಾತನೆಯಿಂದ ಮುಕ್ತನಾಗಿ ಶಾಂತಿಯನ್ನು ಪಡೆಯುವನು.”

ಇದು ಶಾಂತಿ. ಕೃಷ್ಣ ಪ್ರಜ್ಞೆಯಿಲ್ಲದೆ ಹೇಗೆ ಶಾಂತಿ ಇರುತ್ತದೆ? ಅಲ್ಲಿ ಶಾಂತಿಯಿರಲು ಸಾಧ್ಯವಿಲ್ಲ. ಮಾಂ ದುಷ್ಕೃತಿನೋ ಮೂಢಃ ಪ್ರಪದ್ಯಂತೇ ನರಾಧಮಃ. ಈ ಮೂರ್ಖರು ಮತ್ತು ಮೂಢರು ಎಲ್ಲ ಜ್ಞಾನವನ್ನು ಕಳೆದುಕೊಂಡಿದ್ದಾರೆ. ಅಲ್ಲಿ ಶಾಂತಿ ಹೇಗೆ ಇರಲು ಸಾಧ್ಯ? ಶಾಂತಿಗಾಗಿ ಅವರ ಎಲ್ಲ ಪ್ರಯತ್ನಗಳು ವ್ಯರ್ಥ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi