ಆಕರ : ಸತ್‌ಸ್ವರೂಪದಾಸರ, ಗೋವಿಂದದಾಸಿ ಸಂದರ್ಶನ ಟಿಪ್ಪಣಿಗಳು
ಶ್ರೀಲ ಪ್ರಭುವಾದರು ಯಾವಾಗಲೂ ನಿಷ್ಠಭಕ್ತರು ಅವಕಾಶ ಮತ್ತು ಸಾಮಗ್ರಿಗಳ ಕೊರತೆಯನ್ನು ಲೆಕ್ಕಿಸದೆ ತಮ್ಮ ಕರ್ತವ್ಯವನ್ನು ಮಾಡುತ್ತಿರಬೇಕು ಎಂದು ಉಪದೇಶಿಸುತ್ತಿದ್ದರು. ನಿಗದಿಪಡಿಸಿದ ಕೆಲಸ ಮಾಡದೆ ನೆವ ಹೇಳುವವರನ್ನು ಗೇಲಿ ಮಾಡಲು ಅವರು ಹೇಳಿದ ಕಥೆ ಇದು;
ಒಬ್ಬ ವೃತ್ತಿಪರ ನರ್ತಕನಿದ್ದ. ಆತ ತನಗೆ ಅನುಕೂಲವೆನಿಸುವ ಸ್ಥಳಗಳಲ್ಲಿ ಪ್ರದರ್ಶನ ನೀಡುತ್ತಿದ್ದ. ಒಂದು ಸಂಜೆ ಊರ ಹೊರಗಿನ ಬೆಟ್ಟದ ಮೇಲೆ ಆತನ ನೃತ್ಯ ಪ್ರದರ್ಶನ ಏರ್ಪಾಡಾಗಿತ್ತು. ಆದರೆ ಆತ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಆ ಕಾರ್ಯಕ್ರಮ ರದ್ದು ಮಾಡಿಕೊಂಡಿದ್ದ.

ಮರುದಿನ ಬೇರೆಡೆಯಲ್ಲಿ ನೃತ್ಯ ಪ್ರದರ್ಶನ ಮುಗಿಸಿದ ಅನಂತರ, ಆತನ ಸ್ನೇಹಿತ ಅವನನ್ನು ಕುರಿತ ಹಿಂದಿನ ದಿನದ ಪ್ರದರ್ಶನದ ಬಗ್ಗೆ ವಿಚಾರಿಸಿದ. ಸ್ನೇಹಿತ ಕೇಳಿದ ”ಯಾಕೆ ನೀನು ಮೊದಲು ಒಪ್ಪಿಕೊಂಡು ಕೊನೆ ಘಳಿಗೆಯಲ್ಲಿ ರದ್ದು ಮಾಡಿದೆ?”
ಅವನ ಪ್ರಶ್ನೆಗೆ ನರ್ತಕ ಕೊಟ್ಟ ಉತ್ತರವೇನು ಗೊತ್ತೇ?
“ಓಹ್ ! ಅದೊಂದು ಬೆಟ್ಟ. ಅಲ್ಲಿನಾನು ಹೇಗೆ ನರ್ತಿಸಲಾಗುತ್ತಿತ್ತು!?”
ನೀತಿ : “ಕುಣಿಯಲಾಗದವಳು ನೆಲ ಡೊಂಕು ಎಂದಂತೆ” – ಇದೊಂದು ಗಾದೆ. ಕೆಲಸ ಮಾಡಲಾಗದಿದ್ದವರು ತಪ್ಪನ್ನೆಲ್ಲ ಮತ್ತೊಂದು ವಸ್ತುವಿನ ಮೇಲೆ ಹೊರಿಸುತ್ತಾರೆ !






Leave a Reply