ಆಕರ :ಸೆಪ್ಟೆಂಬರ್ 3, 1973ರ ಮುಂಜಾನೆ ವಿಹಾರದ ಮಾತುಕತೆಗಳು
ಒಮ್ಮೆ ಶ್ರೀಲ ಪ್ರಭುಪಾದರು ಶಿಷ್ಯರೊಡನೆ ಮುಂಜಾನೆಯ ವಾಯುಸೇವನೆಗೆ ಹೊರಟಿದ್ದರು. ಆಗ ಹತ್ತಿರದಲ್ಲೆಲ್ಲೂ ಕುರಿಗಳು ಕೂಗುತ್ತಿರುವ ಸದ್ದಾಯಿತು. ಪ್ರಭುಪಾದರು, ““ ಕುರಿಗಳೇಕೆ ಕೂಗಿಕೊಳ್ಳುತ್ತಿವೆ? ಅವಕ್ಕೆ ತಿನ್ನಲು ಏನೂ ಕೊಡುವುದಿಲ್ಲವೇ?” ಎಂದು ಕೇಳಿದರು. ಆಗ ಭಕ್ತರಲ್ಲೊಬ್ಬ ಉತ್ತರಿಸುತ್ತಾ, ”ಇಲ್ಲ ಅವುಗಳನ್ನು ಕೊಲ್ಲಲೆಂದೇ ಕೂಡಿಡಲಾಗಿದೆ” ಎಂದ.
ಆಗ ಪ್ರಭುಪಾದರು, ಮನುಷ್ಯನಿಗೆ ಪ್ರಾಣಿಗಳ ಮೇಲೆ ಹೊಟ್ಟೆ ಕಿಚ್ಚು. ಅವು ತಮ್ಮ ಪಾಡಿಗೆ ತಾವು ನೈಸರ್ಗಿಕ ನಿಯಮಗಳನ್ನು ಮೀರದೆ ಭಗವಂತ ಇರಿಸಿದಂತೆ ಬಾಳುತ್ತಿರುವುದು ಅವನಿಂದ ಸಹಿಸಲಾಗದು. ಹೀಗಾಗಿ ಆತ ಅವನ್ನು ಕೊಲ್ಲುತ್ತಾನೆ ಎಂದರು. ಇದನ್ನು ಪುಷ್ಟೀಕರಿಸಲು ಅವರು ಹುಲಿ ಮತ್ತು ಕುರಿಯ ಕಥೆ ಹೇಳಿದರು:

ಒಮ್ಮೆ ಒಂದು ಕುರಿ ನದಿಯೊಂದರ ಕೆಳಭಾಗದಲ್ಲಿ ನಿಂತು ನೀರು ಕುಡಿಯುತ್ತಿತ್ತು. ಅದೇ ನದಿಯ ಮೇಲ್ಭಾಗದಲ್ಲಿದ್ದ ಹುಲಿ, ಕುರಿಗೆ ‘ನೀರನ್ನೇಕೆ ಕಲಕಿ ರಾಡಿ ಮಾಡುತ್ತಿದ್ದಿ” ಎಂದು ತಕರಾರು ತೆಗೆಯುತ್ತಾ ಜಗಳ ಶುರುವಿಟ್ಟಿತು. ಆದರೆ ಕುರಿ, ತಾನು ಸತ್ಯವಾಗಿಯೂ ನೀರನ್ನು ಕಲಕಿ ರಾಡಿಗೊಳಿಸುತ್ತಿಲ್ಲ ಎಂದು ವಾದಿಸಿತು. ಆದರೆ ಹುಲಿ, ತನ್ನ ಮಾತನ್ನೇ ಸಮರ್ಥಿಸಿಕೊಂಡು, ಕುರಿಯ ಮೇಲೆರಗಿ ಕೊಂದು ಹಾಕಿತು.
ನೀತಿ : ಅಸೂಯಾಪರರು ಬೇರೊಬ್ಬರ ಮೇಲೆ ವಿನಾಕಾರಣ ಮಿಥ್ಯಾಪವಾದವನ್ನು ಹೊರಸಿ ಅವರನ್ನು ನಿಂದಿಸುತ್ತಾರೆ.






Leave a Reply