ಪ್ರಮಾಣಗಳು

ವೈದಿಕ ಶಾಸ್ತ್ರಗಳ ಪ್ರಕಾರ ಜ್ಞಾನವನ್ನು ಪಡೆಯಲು ಬಳಸುವ ಎಲ್ಲ ಪ್ರಕ್ರಿಯೆಗಳನ್ನೂ ಒಟ್ಟಾರೆಯಾಗಿ ಈ ಕೆಳಗಿನಂತೆ ಮೂರು ವಿಧವಾಗಿ ವಿಂಗಡಿಸಬಹುದು.

1) ಪ್ರತ್ಯಕ್ಷ ಪ್ರಮಾಣ

2) ಅನುಮಾನ ಪ್ರಮಾಣ ಮತ್ತು

3) ಶಬ್ದ ಪ್ರಮಾಣ

ಪ್ರತ್ಯಕ್ಷ ಪ್ರಮಾಣ

ನೇರವಾಗಿ ಇಂದ್ರಿಯದ ಮೂಲಕ ಜ್ಞಾನವನ್ನು ಗ್ರಹಿಸುವ ವಿಧಾನಕ್ಕೆ ಪ್ರತ್ಯಕ್ಷ ಪ್ರಮಾಣ ಎನ್ನುವರು. ಸಾಮಾನ್ಯವಾಗಿ ಇದನ್ನು ಸತ್ವದ ನೇರ ಗ್ರಹಿಕೆ ಎಂದು ಪರಿಗಣಿಸಬಹುದಾದರೂ, ದುರದೃಷ್ಟವಶಾತ್ ಕೆಲವು ಬಾರಿ ಈ ಬಗೆಯ ಗ್ರಹಿಕೆಗಳು ದೋಷದಿಂದ ಕೂಡಿರುವ ಸಾಧ್ಯತೆಗಳಿರುತ್ತವೆ. ಮತ್ತು ತಪ್ಪು ಗ್ರಹಿಕೆಯ ಕಾರಣದಿಂದ ಪ್ರಮಾದಗಳಾಗುತ್ತವೆ. ಆದ್ದರಿಂದ ಕೇವಲ ಪ್ರತ್ಯಕ್ಷ ಪ್ರಮಾಣ ಮಾತ್ರವೇ ಸತ್ಯವನ್ನು ಕಂಡುಕೊಳ್ಳುವ ಅತ್ಯುತ್ಕೃಷ್ಟ ಮಾರ್ಗವೆಂದು ಪರಿಗಣಿಸಲಾಗದು.

ಹೇಗೆ ಕೆಲವೊಮ್ಮೆ ನಮ್ಮ ಆ ಕ್ಷಣದ ಗ್ರಹಿಕೆಯಿಂದ ಪ್ರೇರಿತರಾಗಿ ನಾವು ನೀಡುವ ಹೇಳಿಕೆಗಳು ಮುಂದಿನ ದಿನಗಳಲ್ಲಿ ತಪ್ಪೆಂದು ಸಾಬೀತಾಗುತ್ತದೆ ಎನ್ನುವುದಕ್ಕೆ ಈ ಕೆಳಗಿನ ಕೆಲವು ಉದಾಹರಣೆಗಳನ್ನು ಗಮನಿಸೋಣ ಇಲ್ಲಿ ತಮ್ಮ ಸಂಕುಚಿತ ದೃಷ್ಟಿಗೆ ಕಂಡದ್ದನ್ನೇ ಸತ್ಯವೆಂದು ತಿಳಿದು ಹೇಳಿಕೆ ನೀಡಿ, ಮುಂದೆ ಅವರು ತಮ್ಮ ಮಾತನ್ನು ಹಿಂಪಡೆಯಲು ಬಯಸಿದಂತಹ ಕೆಲವು ಹೇಳಿಕೆಗಳಿವೆ ”ಭವಿಷ್ಯದಲ್ಲಿ ಕಂಪ್ಯೂಟರ್ ಗಳು 1.5 ಟನ್ ಗಳಿಗಿಂತ ಹೆಚ್ಚೇನೂ ತೂಗಲಾರವು”

ಜನಪ್ರಿಯ ಮೆಕ್ಯಾನಿಕ್‌ಗಳು ವಿಜ್ಞಾನದ ಆಕ್ರಮಣಕಾರಿ ಮುನ್ನಡೆಯನ್ನು ಊಹಿಸುತ್ತಾ (1949)

‘ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚೆಂದರೆ ಐದು ಕಂಪ್ಯೂಟರ್ ಗಳಿಗೆ ಬೇಡಿಕೆ ಬರಬಹುದೆಂದು ನನಗನಿಸುತ್ತಿದೆ.”

ಥಾಮಸ್ ವ್ಯಾಟ್ಸನ್

ಐಬಿಎಂ ಮುಖ್ಯಸ್ಥರು, 1943ನೇ ಇಸವಿ

”ತೈಲಕ್ಕಾಗಿ ಕೊರೆತವೇ? ಅಂದರೆ, ನೀವು ತೈಲಕ್ಕಾಗಿ ನೆಲವನ್ನು ಕೊರೆಯಬೇಕೆಂದು ಹೇಳುತ್ತಿರುವಿರೇನು!? ಇದೊಳ್ಳೆ ವಿಚಿತ್ರವಾಗಿದೆ’

ಎಡ್ವಿನ್‌ ಎಲ್‌ ಡ್ರೇಕ್‌ರು

ತಮ್ಮ ತೈಲಕ್ಕಾಗಿ ಉತ್ಖನನ ನಡೆಸುವ ಯೋಜನೆಗಾಗಿ ಭೂಮಿ ಕೊರೆಯುವವರನ್ನು ಕೇಳಿದಾಗ ಅವರು ನೀಡಿದ ಉತ್ತರ; 1859ನೇ ಇಸವಿ.

”ನಟರು ಮಾತನಾಡುವುದನ್ನು ಕೇಳಲು ಯಾವ ಮುಠ್ಠಾಳ ತಾನೇ ಬಯಸುತ್ತಿದ್ದಾನೆ?’

– ಎಚ್.ಎಮ್. ವಾರ್ನರ್‌, ವಾರ್ನರ್‌ ಬ್ರದರ್ಸ್‌ 1927 ಇಸವಿ.

ಅನುಮಾನ ಪ್ರಮಾಣ

ತರ್ಕ ಮತ್ತು ವಾದಗಳ ಮೂಲಕ ಜ್ಞಾನವನ್ನು ಹೊಂದುವ ಪ್ರಕ್ರಿಯೆಗೆ ‘ಅನುಮಾನ ಪ್ರಮಾಣ’ ವೆನ್ನುವರು. ಆದರೆ ಇದು ಕೂಡ ಜ್ಞಾನ ಗ್ರಹಿಕೆಗೆ ಪರಿಪೂರ್ಣ ಮಾರ್ಗವಲ್ಲ. ಇದರಿಂದಾಗಿ ವ್ಯಕ್ತಿಯು ಸಂಪೂರ್ಣ ವಿಭಿನ್ನವಾದ ಕೀಳಾದ ನಿರ್ಣಯಗಳಿಗೆ ಬರಬಹುದಾದ ಸಾಧ್ಯತೆಗಳೇ ಬಹಳವಿರುತ್ತದೆ.

ಸಂನ್ಯಾಸಿಯೊಬ್ಬ ತಡರಾತ್ರಿಯಲ್ಲಿ ಆಟೋ ಒಂದರಲ್ಲಿ ಪ್ರಯಾಣಿಸುತ್ತಿದ್ದ, ಆದರೆ ಅದರಲ್ಲಿ ಕುಳಿತ ಮೇಲೆ ಅವನಿಗೆ ತನ್ನ ಬಳಿ ಚಿಲ್ಲರೆ ಇಲ್ಲವೆಂದು ನೆನಪಾಯಿತು. ಆಟೋ ಚಾಲಕ ಸಂನ್ಯಾಸಿಯನ್ನು ಶರಾಬು ಅಂಗಡಿಯ ಬಳಿ ಕರೆದೊಯ್ಯುತ್ತಾ, ಅದರ ಮಾಲೀಕನ ಬಳಿ ಚಿಲ್ಲರೆ ಕೇಳುವಂತೆ ಸೂಚಿಸಿದ.

ಬೇರೆ ದಾರಿ ತೋರದೆ ಸಂನ್ಯಾಸಿ ಶರಾಬು ಅಂಗಡಿಯೊಳಗೆ ಹೋಗಿ ಚಿಲ್ಲರೆ ಮಾಡಿಸಿ ತಂದು ಚಾಲಕನಿಗೆ ನೀಡಿದ. ರಾತ್ರಿಯ ಊಟದ ಅನಂತರ ವಿಹಾರ ಮಾಡುವ ಅಭ್ಯಾಸವಿದ್ದ ಒಬ್ಬ ಧನಿಕ ಉದ್ಯಮಿ ಇದನ್ನು ಕಂಡುಬಿಟ್ಟ ಕೂಡಲೇ, ಸಂನ್ಯಾಸಿಗೆ ಮಾತನಾಡುವ ಅವಕಾಶವನ್ನು ನೀಡದೆ ಆತನನ್ನು ನಿಂದಿಸಲಾರಂಭಿಸಿದ. ಹೀನ ನುಡಿಗಳಿಂದ ದೂಷಿಸಿತೊಡಗಿದ!

ಅದು ಆಗುವುದು ಹಾಗೆ, ನಮ್ಮ ತರ್ಕ ಆಲೋಚನೆಗಳ ಮೂಲಕ ನಾವು ನಮ್ಮ ನಿರ್ಣಯವನ್ನು ಮಾತ್ರವೇ ಕೊಡಬಯಸುತ್ತೇವೆ ಹೊರತು, ಸತ್ಯ ಸಂಗತಿಯನ್ನಲ್ಲ.

ಶಬ್ದ ಪ್ರಮಾಣ

ಅರ್ಹ ಮೂಲಗಳಿಂದ ಕೇಳಲ್ಪಟ್ಟು ಜ್ಞಾನವನ್ನು ಗ್ರಹಿಸುವ (ಶ್ರವಣ ಮಾರ್ಗ) ವಿಧಾನವೇ ಶಬ್ದ ಪ್ರಮಾಣ. ಮೇಲಿನ ಮೂರು ವಿಧಾನಗಳಲ್ಲಿ ಶಬ್ದ ಪ್ರಮಾಣದ ಮೂಲಕ ಅಥವಾ ವೇದಗಳಿಂದ ಗ್ರಹಿಸಲ್ಪಟ್ಟ ಜ್ಞಾನವನ್ನು ಮಾತ್ರ ಪರಿಪೂರ್ಣವೆಂದು ಸ್ವೀಕರಿಸಬೇಕು. ‘ಶ್ರುತ’; ಜ್ಞಾನವು ಕೇಳುವುದರಿಂದ ಸ್ವೀಕೃತವಾಗುತ್ತದೆ.

ಇದು ಪ್ರಾಯೋಗಿಕವಲ್ಲ. ನಾವು ನಮ್ಮ ಇಂದ್ರಿಯಗಳ ಗ್ರಹಿಕೆಯ ಆಚೆ ಇರುವ ಸಂಗತಿಗಳನ್ನು ಪ್ರಯೋಗಗಳ ಮೂಲಕ ಕಂಡುಕೊಳ್ಳಲಾಗುವುದಿಲ್ಲ. ‘ನಮ್ಮ ತಂದೆ ಯಾರು?” ಎನ್ನುವುದನ್ನು ನಾವು ಪ್ರಾಯೋಗಿಕ ಜ್ಞಾನದಿಂದ ಅರಿಯಲಾಗುವುದಿಲ್ಲ. ವ್ಯಕ್ತಿಯೊಬ್ಬ, ”ನನ್ನ ತಂದೆ ಯಾರೆಂಬುದನ್ನು ನಾನು ಇಂತಹ ಪ್ರಯೋಗದ ಮೂಲಕ ಪತ್ತೆ ಹಚ್ಚುವೆ” ಎಂದು ಹೇಳಲು ಬರುವುದಿಲ್ಲ.

ನಮ್ಮ ತಂದೆಯು ನಮ್ಮ ಅಸ್ತಿತ್ವ ರೂಪಿತವಾಗುವ ಮುನ್ನವೂ ಇದ್ದನು. ಆದ್ದರಿಂದ ಇಂತಹ ವ್ಯಕ್ತಿಯೇ ನಮ್ಮ ತಂದೆ ಎಂಬುದನ್ನು ಪ್ರಯೋಗಗಳಿಂದ ಕಂಡುಕೊಳ್ಳಲಾಗುವುದಿಲ್ಲ. ಇದಕ್ಕೆ ಸತ್ಯ ಪ್ರಮಾಣ, ನಮ್ಮ ತಾಯಿ ಮಾತ್ರ ಆದ್ದರಿಂದ, ವೈದಿಕ ಜ್ಞಾನವು ತಾಯಿಯೊಂದಿಗೆ ಬೆಸೆದುಕೊಂಡಿದೆ. ಆದ್ದರಿಂದಲೇ ನಮ್ಮ ವೈದಿಕ ನಿರ್ದೇಶನಗಳು ಅತ್ಯುನ್ನತ ಪ್ರಮಾಣಗಳಾಗಿವೆ.

ಉದಾಹರಣೆಗೆ, ಭಾರತದಲ್ಲಿ ಸೆಗಣಿಯು ಪವಿತ್ರವೆಂದು ಭಾವಿಸಲ್ಪಡುತ್ತದೆ. ಹಾಗೆಯೇ ವೈದಿಕ ಕೃತಿಗಳಲ್ಲಿ ನಾವು “ಯಾವುದೇ ಪ್ರಾಣಿಯ ತ್ಯಾಜ್ಯವು ಅಪವಿತ್ರ’ ಎಂಬ ಹೇಳಿಕೆಯನ್ನು ನೋಡಬಹುದು. ಅದು ವಾಸ್ತವ. ಅದನ್ನು ಎಲ್ಲರೂ ಬಲ್ಲರು. ಆದರೆ ಮತ್ತೊಂದೆಡೆ ‘ಹಸುವಿನ ಸಗಣಿ ಮಾತ್ರ ಇದಕ್ಕೆ ಹೊರತಾಗಿದೆ, ಅದು ಪವಿತ್ರ” ಎಂದೂ ಹೇಳಿದೆ.

ಅದು ಎಷ್ಟರ ಮಟ್ಟಿಗೆ ಪವಿತ್ರವಾದುದೆಂದರೆ, ಸಗಣಿಯನ್ನು ಯಾವುದೇ ಅಪವಿತ್ರ ವಸ್ತುವಿಗೆ ಸೋಕಿಸಿದರೂ ಆ ವಸ್ತುವು ಪವಿತ್ರವೆಂದು ಪರಿಗಣಿತವಾಗುತ್ತದೆ. ಅದೂ ಕೂಡ ವಾಸ್ತವವೇ. ಭಾರತದಲ್ಲಿ ಇಂದಿಗೂ ವಿಶೇಷವಾಗಿ ಹಳ್ಳಿಗಳಲ್ಲಿನ ಜನರು ತಮ್ಮ ಮನೆಯ ನೆಲವನ್ನು ಸಗಣಿಯಿಂದ ಸಾರಿಸುತ್ತಾರೆ, ಮತ್ತು ಅದು ಬಹಳ ನುಣುಪಾಗಿಯೂ, ಉಲ್ಲಾಸದಾಯಕವಾಗಿಯೂ ಇರುತ್ತದೆ.

ಜ್ಞಾನದ ಜ್ಯೋತಿಯನ್ನು ಹೊತ್ತಿಸುವುದು ‘ಗುರು’ವಿನ ಕಾರ್ಯ, ಗುರುವಾದವನು ಜೀವನದಲ್ಲಿ ವೈದಿಕ ಜ್ಞಾನವನ್ನು ಅಳವಡಿಸಿಕೊಳ್ಳುವ ಬಗೆಯನ್ನು ಚೆನ್ನಾಗಿ ಅರಿತಿರುತ್ತಾನೆ. ಆದ್ದರಿಂದ, ಆಧ್ಯಾತ್ಮ ಪಥದಲ್ಲಿ ಮೇಲಿರುವುದಕ್ಕೆ ನಾವು ವೇದ ಪ್ರಮಾಣವನ್ನೇ ಆಶ್ರಯಿಸಬೇಕು. ಅಥವಾ ವೈದಿಕ ಸಾಹಿತ್ಯಗಳು ನೀಡುವ ಪ್ರಮಾಣವನ್ನು ಸ್ವೀಕರಿಸಬೇಕು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi