ಕಾಲಿಯ ಕೃಷ್ಣದಾಸ

ಕಾಲಿಯ ಕೃಷ್ಣದಾಸರು ಶ್ರೀ ನಿತ್ಯಾನಂದ ಪ್ರಭುಗಳ ಪ್ರಮುಖ ಶಿಷ್ಯರಲ್ಲೊಬ್ಬರು. “ಅವರು ಅದೆಷ್ಟು ಶ್ರೇಷ್ಠ ಭಕ್ತರಾಗಿದ್ದರೆಂದರೆ, ಅವರಿಗೆ ಶ್ರೀ ನಿತ್ಯಾನಂದರ ಪಾದಕಮಲಗಳ ಹೊರತಾಗಿ ಬೇರೆ ಯಾವುದರ ಅರಿವೂ ಇರುತ್ತಿರಲಿಲ್ಲ” ಎಂದು ಕವಿರಾಜ ಗೋಸ್ವಾಮಿಗಳು ಚೈತನ್ಯ ಚರಿತಾಮೃತ (ಆದಿ:11.37)ದಲ್ಲಿ ಉಲ್ಲೇಖಿಸಿದ್ದಾರೆ.

ಕವಿ ಕರ್ಣಾಪುರರು ಗೌರಗಣೋದ್ದೇಶ ದೀಪಿಕಾದಲ್ಲಿ ಹೇಳಿರುವಂತೆ, ಕಾಲಿಯ ಕೃಷ್ಣದಾಸರು ಶ್ರೀಕೃಷ್ಣ ಲೀಲೆಯಲ್ಲಿ ಪ್ರಮುಖ ಗೋಪಬಾಲರಲ್ಲೊಬ್ಬನಾದ ‘ಲಭಂಗ’ ಎಂಬ ಗೋಪಾಲಕನಾಗಿದ್ದರು.

ಶ್ರೀ ಕಾಲಿಯ ಕೃಷ್ಣದಾಸರು ಜನಿಸಿದ್ದು ಬರ್ಧಮಾನ್ (ಬರ್ದ್ವಾನ್) ಜಿಲ್ಲೆಯ ಅಕಾಯ್‌ಹಟ್ಟಿ ಎಂಬ ಚಿಕ್ಕ ಹಳ್ಳಿಯಲ್ಲಿ. ಅವರು ತಮ್ಮ ಸಂಪೂರ್ಣ ಜೀವನವನ್ನು ಶ್ರೀ ಶ್ರೀ ಗೌರಾಂಗ – ನಿತ್ಯಾನಂದರ ಪದತಲಗಳಲ್ಲಿ ಸಮರ್ಪಿಸಿದ್ದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi