ಧನಂಜಯ ಪಂಡಿತ

ಶ್ರೀ ನಿತ್ಯಾನಂದ ಪ್ರಭುಗಳ ಮತ್ತೋರ್ವ ಪ್ರಮುಖ ಶಿಷ್ಯ ಧನಂಜನ ಪಂಡಿತರು ಮಹಾನ್ ವ್ಯಕ್ತಿಯಾಗಿದ್ದರು. ಸೀತಲ ಗ್ರಾಮದಲ್ಲಿ ಜನಿಸಿದ ಇವರು, ಮುಂದೆ ಮಹಾಪ್ರಭುಗಳ ಆದೇಶದ ಮೇರೆಗೆ ವೃಂದಾವನಕ್ಕೆ ತೆರಳಿದ್ದರು. ಅನಂತರ ಬಂಗಾಳಕ್ಕೆ ಮರಳಿ, ಜಾಲಂದಿ ಗ್ರಾಮದಲ್ಲಿ ಶ್ರೀ ಶ್ರೀ ಗೋಪೀನಾಥ ವಿಗ್ರಹವನ್ನು ಪ್ರತಿಷ್ಠಾಪಿಸಿದರು.

ಧನಂಜಯ ಪಂಡಿತರು ಸಂಕೀರ್ತನ ತಂಡಗಳಲ್ಲಿ ಒಬ್ಬರಾಗಿ ಊರಿಂದೂರಿಗೆ ಕೃಷ್ಣಪ್ರಜ್ಞೆಯನ್ನು ವಿತರಿಸುತ್ತ ನಡೆಯುತ್ತಿದ್ದರು.

ಹೀಗೆ ಅವರು ವೃಂದಾವನವನ್ನು ತಲಪಿ, ಅಲ್ಲಿ ಕೆಲಕಾಲ ಸಾಧನೆ ಮಾಡಿದ ಅನಂತರ ತಮ್ಮ ಸ್ವಗ್ರಾಮಕ್ಕೆ ಹಿಂದಿರುಗಿದರು.

ಸೀತಲ ಗ್ರಾಮದಲ್ಲಿ ಧನಂಜಯ ಪಂಡಿತರು ಗೌರಸುಂದರನ ವಿಗ್ರಹ ಪ್ರತಿಷ್ಠಾಪಿಸಿ ತಮ್ಮ ಭಕ್ತಿಯ ಔನ್ನತ್ಯ ಪ್ರಕಟಗೊಳಿಸಿದರು.

ತಮ್ಮ ಜೀವನವನ್ನು ಕೃಷ್ಣಭಕ್ತಿ- ಪ್ರೇಮಗಳಿಗಾಗಿ ಮೀಸಲಿಟ್ಟಿದ್ದ ಧನಂಜಯ ಪಂಡಿತರು ಕಾರ್ತಿಕ ಮಾಸದ ಶುಕ್ಲಪಕ್ಷ ಅಷ್ಟಮಿ ತಿಥಿಯಂದು ಇಹಲೋಕ ಲೀಲೆ ಮುಗಿಸಿ ಭಗವಂತನ ಬಳಿ ಮರಳಿದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi