ಆಕರ : ಮುಂಜಾನೆ ವಿಹಾರದ ಮಾತುಕತೆ ಲಾಸ್ ಏಂಜಲೀಸ್
ಒಮ್ಮೆ ಶ್ರೀಲ ಪ್ರಭುಪಾದರು ಪುಸ್ತಕಗಳಲ್ಲಿ ಪದಗಳ ಜಾಲ ಹೆಣೆಯುವುದನ್ನು ಕುರಿತು ಮಾತನಾಡುತ್ತಿದ್ದರು. ಆ ನಡುವೆ, ಒಬ್ಬವಿದ್ಯಾರ್ಥಿಯು ತನ್ನ ಪರೀಕ್ಷೆಯಲ್ಲಿ ಅನುಸರಿಸಿದ ತಂತ್ರವನ್ನು ಕುರಿತು ಹೇಳಿದರು:
ಬಹಳ ಹಿಂದಿನ ಮಾತು. ವಿದ್ಯಾರ್ಥಿಯೊಬ್ಬತನ್ನ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದ. ಪ್ರಶ್ನೆ ಪತ್ರಿಕೆಯಲ್ಲಿ ಒಂದು ಪ್ರಶ್ನೆ ‘ಹರ್ ದ್ವಾರ್ ಬಸ್ತಾʼ ನ ಸಾಮ್ರಾಜ್ಯದ ಕುರಿತಾಗಿತ್ತು.
ಆದರೆ ಆ ವಿದ್ಯಾರ್ಥಿಗೆ ಆ ಬಗ್ಗೆ ಏನೊಂದೂ ನೆನಪುಳಿದಿರಲಿಲ್ಲ. ಆದರೆ, ವೇಳೆ ಕಳೆಯುವ ಸಲುವಾಗಿ ಆತ ತಾನೇ ಪದಗಳ ತಯಾರಿಯಲ್ಲಿ ತೊಡಗಿದ.

‘ಹರ್ ದ್ವಾರ್ ಬಸ್ತಾʼ ಬಾ ಒಬ್ಬದೊಂಬೆಂಡಿಯಾಗಿದ್ದ. ಅವನು ಬಿಂಡಾದವರಿಂದ ಸಂಹರಿಸಲ್ಪಟ್ಟ ಎಂದೇನೇನೋ ಅಸಂಬದ್ಧ ಪದ – ವಾಕ್ಯಗಳಿಂದ ಪುಟ ತುಂಬಿಸಿದ.
ಮೌಲ್ಯಮಾಪಕ ಈ ಉತ್ತರ ಪತ್ರಿಕೆಯನ್ನು ನೋಡಿದ. ಅದು ಪೂರ್ತಿಯಾಗಿ ಅಸಂಬದ್ಧ ಪದ ಜೋಡಣೆಯಿಂದ ತುಂಬಿದ್ದರೂ, ಇದಕ್ಕೂ ಅಲ್ಪ- ಸ್ವಲ್ಪ ಬುದ್ಧಿವಂತಿಕೆ ಬೇಕೆಂದು ಯೋಚಿಸಿ, ಅವನಿಗೆ ಪಾಸ್ ಮಾರ್ಕುಗಳನ್ನು ನೀಡಿದ.
ನೀತಿ : ತಪ್ಪಾದರೂ ಸರಿ, ಕ್ರಿಯಾಶೀಲತೆಗೆ ಅಲ್ಪಸ್ವಲ್ಪ ಬುದ್ಧಿವಂತಿಕೆಯ ಅವಶ್ಯವಿರುತ್ತದೆ.






Leave a Reply