ಆಕರ : ವೃಂದಾವನ ಉಪನ್ಯಾಸ 10ನೇ ಡಿಸೆಂಬರ್ 1975
ಕಾಮತೃಷೆ ಎಲ್ಲಿಯವರೆಗೂ ಇರುತ್ತದೆ ಎನ್ನುವ ಬಗ್ಗೆ ಹೇಳುವಾಗ ಶ್ರೀಲ ಪ್ರಭುಪಾದರು ಅಕ್ಬರ್ ಬೀರಬಲ್ಲರ ನಡುವೆ ನಡೆದ ಈ ಕಥೆಯನ್ನು ಹೇಳಿದರು;
ಅಕ್ಬರ್, ತನ್ನ ಆಪ್ತಮಂತ್ರಿಯಾಗಿದ್ದ ಬೀರಬಲ್ನನ್ನು ಕುರಿತು, “ಒಬ್ಬಮನುಷ್ಯನಿಗೆ ಕಾಮತೃಷೆ ಜೀವನದ ಯಾವ ಹಂತದವರೆಗೂ ಇರುತ್ತದೆ?” ಎಂದು ಕೇಳಿದ. ಅದಕ್ಕುತ್ತರವಾಗಿ ಬೀರಬಲ್, “ಜೀವನದ ಕೊನೆ ಘಳಿಗೆವರೆಗೂ” ಎಂದು ಹೇಳಿದ.
ಆದರೆ, ಅಕ್ಬರನಿಗೆ ಈ ಉತ್ತರ ಸಮ್ಮತವಾಗಲಿಲ್ಲ. ಛೆ. ಛೆ. ಇಲ್ಲ. ನೀನು ಅದನ್ನು ಹೇಗೆ ಹೇಳುತ್ತೀ?” ಎಂದ.
ಅದಕ್ಕೆ ಬೀರಬಲ್, “ಇರಲಿ, ಸಮಯ ಬಂದಾಗ ಹೇಳುತ್ತೇನೆ.” ಎಂದು ಸಮ್ಮನಾದ.
ಮುಂದೊಂದು ದಿನ ಬೀರಬಲ್ ಇದ್ದಕ್ಕಿದ್ದ ಹಾಗೇ ಅಕ್ಬರನ ಬಳಿ ಬಂದು, “ನೀವು ಈಗಿಂದೀಗಲೇ ನಿಮ್ಮ ತರುಣಿ ಪುತ್ರಿಯನ್ನು ಕರೆದುಕೊಂಡು ನನ್ನ ಜೊತೆ ಬನ್ನಿ” ಎಂದು ಆವಸರಿಸಿದ.

ಈ ಚಾಣಾಕ್ಷಮಂತ್ರಿ ಏನಾದರೂ ಉದ್ದೇಶವಿಟ್ಟುಕೊಂಡೇ ಹೀಗೆ ಮಾಡುತ್ತಿರುವನೆಂದರಿತ ಅಕ್ಬರ್, ತನ್ನ ಮಗಳೊಡನೆ ಹೊರಟ. ಹಾಗೆ ಅವರು ಬಂದಿದ್ದು ಮರಣಶಯ್ಯೆಯಲ್ಲಿದ್ದ ಒಬ್ಬವೃದ್ದನ ಮನೆಗೆ.
ಅವರು ಒಳಗೆ ಕಾಲಿಡುವ ಮುನ್ನ ಬೀರಬಲ್, “ನೀವು ಆ ಮುದುಕನ ಮುಖಭಾವವನ್ನು ಗಮನಿಸುತ್ತಿರಿ” ಎಂದು ಪಿಸುಗುಟ್ಟಿದ.
ಅವರು ಒಳಗೆ ಬರುತ್ತಿದ್ದಂತೆಯೇ ಆ ಮುದುಕ ತರುಣಿಯ ಮುಖ ಕಂಡು ನಗುಮೊಗವಾದ. ಅವಳನ್ನೇ ದಿಟ್ಟಿಸತೊಡಗಿದ.
ಅದನ್ನು ಗಮನಿಸಿದ ಅಕ್ಬರ್ಗೆ, ಬೀರಬಲ್ಲಮ ಮಾತಿನ ಸತ್ಯಾಂಶ ಹೊಳೆಯಿತು.
ನೀತಿ : ಬಯಕೆಗಳು ಮಾನವ ಜೀವನದ ಕೊನೆಯವರೆಗೂ ಅವನಲ್ಲಿ ಇರುತ್ತವೆ.






Leave a Reply