ಅರ್ಜುನನ ವಿವಿಧ ಹೆಸರುಗಳು

ಪಾಂಡವರಲ್ಲಿ ಒಬ್ಬನಾದ ಅರ್ಜುನನು ಶ್ರೀಕೃಷ್ಣನ ಪರಮಭಕ್ತನೂ, ಆಪ್ತಸಖನೂ ಆಗಿದ್ದನು. ಕುರುಕ್ಷೇತ್ರ ಯುದ್ಧದಲ್ಲಿ ಸ್ವತಃ ಶ್ರೀಕೃಷ್ಣನು ಅರ್ಜುನನ ಸಾರಥಿಯಾಗಿ ವಿಜಯ ದೊರಕಿಸಿಕೊಟ್ಟನು. ರಣರಂಗದಲ್ಲಿ ಯುದ್ಧ ಒಲ್ಲೆನೆಂದ ಅರ್ಜುನನಿಗೆ ಗೀತಾಬೋಧನೆ ಮಾಡಿ ಜ್ಞಾನ ಚಕ್ಷುವನ್ನು ತೆರೆಸಿದನು. ಭಗವದ್ಗೀತೆಯಲ್ಲಿ ಕೃಷ್ಣನು ಅರ್ಜುನನನ್ನು ವಿವಿಧ ಹೆಸರುಗಳಿಂದ ಕರೆದಿರುವನು. ಈ ಹೆಸರುಗಳನ್ನು ಅವು ಸೂಚಿಸುವ ಅರ್ಥಗಳೊಂದಿಗೆ ಇಲ್ಲಿ ನೀಡಲಾಗಿದೆ.

1. ಅನಘ – ಪಾಪರಹಿತ

2. ಅರ್ಜುನ – ಬೆಳ್ಳಿಯ ಬಿಳುಪಿನವನು

3. ಭಾರತ – ಭರತ ಚಕ್ರವರ್ತಿಯ ವಂಶಜ

4. ಭರತರ್ಷಭ – ಭರತನ ವಂಶಸ್ಥರಲ್ಲಿ ಪ್ರಮುಖನಾದವನು

5. ಭರತಸತ್ತಮ – ಎಲ್ಲ ಭಾರತರಲ್ಲಿ (ಭರತನ ವಂಶಜರಲ್ಲಿ) ಉತ್ತಮನಾದವನು

6. ಭರತಶ್ರೇಷ್ಠ – ಭಾರತರಲ್ಲಿ ಶ್ರೇಷ್ಠನಾದವನು

7. ದೇಹಭೃತಾಮ್‌ ವರ – ಶರೀರಿಗಳಲ್ಲಿ ಉತ್ತಮನಾದವನು

8. ಧನಂಜಯ – ಸಂಪತ್ತನ್ನು ಗೆದ್ದವನು

9. ಧನುರ್ಧರ – ಬಿಲ್ಲನ್ನು ಹಿಡಿದಿರುವನು

10. ಗುಡಾಕೇಶ – ನಿದ್ದೆಯನ್ನು ಗೆದ್ದವನು

11. ಕಪಿಧ್ವಜ – ಧ್ವಜದಲ್ಲಿ ಹನುಮಂತನ ಚಿತ್ರ ಹೊಂದಿರುವವನು

12. ಕೌಂತೇಯ – ಕುಂತಿಯ ಮಗ

13. ಕಿರೀಟೀ – ಕಿರೀಟ ಧರಿಸಿರುವವನು

14. ಕುರುನಂದನ – ಕುರು ಕುಲದ ಪುತ್ರ (ರಾಜಕುಮಾರ)

15. ಕುರುಪ್ರವೀರ – ಕುರು ಕುಲದ ಯೋಧರಲ್ಲಿ ಉತ್ತಮನು

16. ಕುರುಸತ್ತಮ – ಕುರು ವಂಶಿಗಳಲ್ಲಿ ಉತ್ತಮನು

17. ಕುರುಶ್ರೇಷ್ಠ – ಕುರುವಂಶಿಗಳಲ್ಲಿ ಶ್ರೇಷ್ಠನು

18. ಮಹಾಬಾಹು – ಬಲಶಾಲಿಯಾದವನು

19. ಪಾಂಡವ – ಪಾಂಡುವಿನ ಮಗ

20. ಪರಂತಪ – ಶತ್ರುಗಳಿಗೆ ನೋವುಂಟುಮಾಡುವವನು

21. ಪಾರ್ಥ – ಪೃಥೆ (ಕುಂತಿ) ಯ ಮಗ

22. ಪುರುಷರ್ಷಭ – ಪುರುಷರಲ್ಲಿ ಉತ್ತಮನು

23. ಪುರುಷ ವ್ಯಾಘ್ರ – (ಹುಲಿಯಂತೆ) ಶಕ್ತಿಶಾಲಿಯಾದ ಪುರುಷ

24. ಸವ್ಯಸಾಚಿ – ಉತ್ತಮ ಜಿಲ್ಗಾರ, ಎರಡು ಕೈಗಳಿಂದಲೂ ಬಾಣವನ್ನ ಬಿಡಲು ಶಕ್ತನಾದವನು

25. ತಾತ – ನನ್ನ (ಕೃಷ್ಣನ) ಸ್ನೇಹಿತ

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi