ಭಕ್ತಿ ಯೋಗದ ಪ್ರಭಾವ

ಭಕ್ತಿಯೋಗದ ಆಚರಣೆಯಲ್ಲಿ ಅಥವಾ ಶ್ರೀಕೃಷ್ಣನ ತೃಪ್ತರ್ಥಕ್ಕಾಗಿ ಇಂದ್ರಿಯ ತೃಪ್ತಿಗೊಳಗಾಗದಿರುವುದೇ ಉತ್ಕೃಷ್ಟ ಅಲೌಕಿಕ ಕಾರ್ಯ. ಈ ಮಾರ್ಗದಲ್ಲಿ ಮುನ್ನಡೆದವನಿಗೆ ಅತಿ ಅಪಾಯಕಾರಿ ಭಯದಿಂದ ರಕ್ಷಣೆ ಸಿಗುತ್ತದೆ ಮತ್ತು ಈ ಪ್ರಯತ್ನದಲ್ಲಿ ಯಾವ ರೀತಿ ನಷ್ಟವೂ ಅಥವಾ ಕಷ್ಟವೂ ಇರುವುದಿಲ್ಲ. ಈ ಸಣ್ಣ ಆರಂಭದ ಹೆಜ್ಜೆ ಯಾವ ಹಂತದಲ್ಲಿಯೂ ಕಳೆದು ಹೋಗಲಾರದು.

ಮಹಾರಾಜ ಭರತನ ಇತಿಹಾಸ

ಯಾವ ಪ್ರಖ್ಯಾತ ಮತ್ತು ಪ್ರಸಿದ್ಧ ರಾಜ ಭರತನಿಂದ ಈ ಭೂಮಂಡಲ “ಭರತವರ್ಷ” ಎಂಬ ಹೆಸರು ಪಡೆಯಿತೋ ಅಂಥಾ ರಾಜ ಇಂದು ಕಾಡಿನಲ್ಲಿ ಮೃತನಾಗಿದ್ದಾನೆ. ತನ್ನದಾದ ದೇಶ, ಅರಮನೆ, ಸಂಸಾರ ಮತ್ತು ಮಕ್ಕಳನ್ನು ತ್ಯಜಿಸಿ ಗಂಡಕಿ ನದಿ ತೀರಕ್ಕೆ ಬಂದಿದ್ದನು. ಅಲ್ಲಿ ನದಿ ತಟದಲ್ಲಿ ಮನಃಪೂರ್ವಕವಾಗಿ “ಭಕ್ತಿಯೋಗ”ದಲ್ಲಿ ನಿರತನಾಗಿದ್ದನು. ಮಂತ್ರ ಪಠಿಸುವುದು, ಕೇಳುವುದು, ಧ್ಯಾನದಲ್ಲಿ ವಾಸುದೇವನನ್ನು ಪೂಜಿಸುವ ಕಾರ್ಯದಲ್ಲಿ ಮಗ್ನನಾಗಿದ್ದನು.

ನಿರಂತರವಾಗಿ ಈ ಕಾರ್ಯಾಚರಣೆ ಮಾಡುವುದರಿಂದ ಲೌಕಿಕ ಜೀವನದಿಂದ ದೂರವಾಗುತ್ತಿದ್ದು, ದೇವೋತ್ತಮ ಶ್ರೀ ವಾಸುದೇವನ ದಾಸನಾದ ಮಹಾರಾಜ ಭರತನು ಜೀವನದ ಪರಿಪೂರ್ಣತೆಯನ್ನು ಸಾಧಿಸುವುದರಲ್ಲಿ ಇದ್ದ. ಆದರೆ ಆ ಪರಮ ಪ್ರಭುವಿನ ಇಚ್ಛೆ ಬೇರೆಯಾಗಿತ್ತು. ಜೀವನದ ಪರಾಕಾಷ್ಠೆಯನ್ನು ತಲಪುವ ಮುನ್ನವೇ ಅಷ್ಟು ವೈಭವವಿಲ್ಲದ ಮೃತ್ಯು ಬಂದಿತು.

ಆಕಸ್ಮಿಕ ಬಂಧನ

ಗಂಡಕಿ ನದಿ ತಟದಲ್ಲಿ ಭಗವಂತ ಶ್ರೀ ವಾಸುದೇವನ ನಾಮ ಜಪಿಸುತ್ತಿರುವಾಗ ಮಹಾರಾಜ ಭರತ ಆಕಸ್ಮಿಕವಾಗಿ ನದಿಯಲ್ಲಿ ತೇಲುತ್ತಿರುವ ಒಂದು ಜಿಂಕೆ ಮರಿಯತ್ತ ಆಕರ್ಷಿತನಾದನು. ಒಡನೆ ಮಹಾರಾಜನಿಗೆ ಈ ತಬ್ಬಲಿಯ ಮೇಲೆ ಕರುಣೆ, ಅನುಕಂಪ ಮತ್ತು ಸಹಾನುಭೂತಿ ಎಲ್ಲವೂ ಮೂಡಿ ಬಂದು, ಈ ಜಿಂಕೆ ಮರಿಯನ್ನು ಸ್ವಂತ ಪುತ್ರನಂತೆ ಆದರಿಸಿ ಮೋಹದಿಂದ ಚುಂಬಿಸಿ ಶುಶ್ರೂಷೆ ಮಾಡಿ ಪಾಲಿಸಿ ಪೋಷಿಸಿದನು.

ಮರಿಯನ್ನು ಹುಲಿ ಮತ್ತು ಇತರ ಪ್ರಾಣಿಗಳು ಬಾಧಿಸದಂತೆ ರಕ್ಷಣೆ ನೀಡಿದನು. ಅದಕ್ಕೆ ತುರಿಕೆ ಉಂಟಾದಾಗ ಅದನ್ನು ಮುದ್ದು ಮಾಡಿ, ಯಾವುದೇ ಬಾಧೆ ಉಂಟಾಗದಂತೆ ನೋಡಿಕೊಳ್ಳಲು ಪ್ರಯತ್ನಿಸಿದನು. ಈ ನಿತ್ಯ ಚಟುವಟಿಕೆಗಳಲ್ಲಿ ತನ್ಮಯನಾದ ಮಹಾರಾಜ ಈ ಮಧ್ಯೆ ಆಧ್ಯಾತ್ಮಿಕ ತತ್ತ್ವಗಳನ್ನು ಗಮನಿಸಿದೆ, ದೇವೋತ್ತಮ ಪರಮ ಪುರುಷನಿಗೆ ಆರಾಧನೆ ಮಾಡದೆ ಭಗವಂತನನ್ನು ಮರೆತು ಉಪೇಕ್ಷೆ ಮಾಡಿದನು.

ಕೆಲವೊಮ್ಮೆ ಆ ಜಿಂಕೆ ಮರಿಯನ್ನು ಕಾಣದೇ ಇದ್ದಾಗ ಬಹಳ ಕ್ಷೋಭಿತನಾಗುತ್ತಿದ್ದನು. ಆತನ ಪತಿಯ ಅಲ್ಪನಿಗೆ ಐಶ್ವರ್ಯ ಪ್ರಾಪ್ತಿಯಾಗಿ ಒಡನೇ ಎಲ್ಲ ಕಳೆದುಕೊಂಡ ಜಿಪುಣನಂತೆ ಶೋಚನೀಯವಾಗಿತ್ತು. ಹೀಗೆ ಜಿಂಕೆ ದೂರವಾದಾಗ ಅವನು ವಿರಹತಪ್ತನಾಗಿ ಶೋಕಿಸುತ್ತಾನೆ. ಒಂದು ದಿನ ಸೂರ್ಯಾಸ್ತವಾದರೂ ಜಿಂಕೆ ಮರಿ ಮರಳಿ ಬಾರದಿದ್ದಾಗ ಆತ ಕಳವಳಿಸಿ, ಅರಣ್ಯದಲ್ಲಿ ಶೋಕಿಸುತ್ತಾ ಅಲೆದಾಡಿದನು.

ಅಕಸ್ಮಾತ್ತಾಗಿ ಮಹಾರಾಜ ಭರತ ಅರಣ್ಯದಲ್ಲಿ ಕೊರಗುತ್ತಾ ಮೃತಪಟ್ಟನು. ಅಂತ್ಯ ಸಮಯದಲ್ಲಿಯೂ ಜಿಂಕೆ ಮರಿಯನ್ನೇ ನೆನಸುತ್ತಾ ಪ್ರಾಣ ಕಳೆದುಕೊಂಡು ಮಹಾರಾಜನು ಪ್ರಕೃತಿಯ ನಿಯಮದಂತೆ ಒಂದು ಜಿಂಕೆಯಾಗಿಯೇ ಕಾಲಂಜಾರಾ ಬೆಟ್ಟದಲ್ಲಿ ಪುನರ್ಜನ್ಮ ಪಡೆಯುವಂತಾಯಿತು.

ದಂಡನೆ

ಭಗವದ್ಗೀತೆಯಲ್ಲಿನ ಸಾಲುಗಳು (8.6)

ಯಂ ಯಂ ವಾಪಿ ಸ್ಮರನ್ ಭಾವಂ

ತ್ಯಜತ್ಯನ್ಯೇ ಕಲೇವರಮ್ |

ತಮೇವೈತಿ ಕೌನ್ತೇಯ ಸದಾ ತದ್ಭಾವಭಾವಿತಃ ।।

ಮನುಷ್ಯರು ನಿಧನ ಹೊಂದುವ ವೇಳೆಯಲ್ಲಿ ಮನಸ್ಸಿನಲ್ಲಿ ಏನು ನೆನಸುತ್ತಾನೋ, ಅದೇ ಅವನ ಪುನರ್ಜನ್ಮದ ಜೀವನವನ್ನು ನಿರ್ಧರಿಸುತ್ತದೆ. ಅದರಂತೆ ಮಹಾರಾಜ ಭರತನಿಗೆ ಜಿಂಕೆಯಾಗಿ ಪುನರ್ಜನ್ಮ ದೊರಕಿತು. ತಾತ್ಪರ್ಯವಾಗಿ ಆಧ್ಯಾತ್ಮಿಕ ಪ್ರಕ್ರಿಯೆಗಳನ್ನು ಉಪೇಕ್ಷಿಸಿದ್ದರಿಂದ ಈ ಶಿಕ್ಷ ದೊರಕಿತು. ಆದರೆ ಪೂರ್ವಜನ್ಮದ ಸರಣಿಯನ್ನು ಕರುಣಾಳು ಭಗವಂತನು ಅವನಿಗೆ ನೀಡಿದನು. ಆದುದರಿಂದ ಜಿಂಕೆಯ ದೇಹದಲ್ಲಿ ಇದ್ದರೂ ಭರತ ಮಹಾರಾಜನಿಗೆ ತನ್ನ ದಂಡನೆಯ ಅರಿವಿತ್ತು.

ಜಿಂಕೆಯ ದೇಹವನ್ನು ಪಡೆದ ಮಹಾರಾಜ ಭರತ ತನ್ನ ಪೂರ್ವ ಜನ್ಮದಲ್ಲಿ ಯಾವ ಗಂಡಕಿ ನದೀ ತೀರದ ಪುಲಹಾ ಆಶ್ರಮದಲ್ಲಿ ಭಗವಂತನ ಸ್ವಾಧೀನನಾಗಿ ಭಕ್ತಿಯೋಗವನ್ನು ಆಚರಿಸುತ್ತಿದ್ದನೋ, ಅದೇ ಸ್ಥಳಕ್ಕೆ ಆಗಮಿಸುತ್ತಾನೆ. ಅಲ್ಲಿ ಲೌಕಿಕ ವಸ್ತುಗಳ ಮೇಲೆ ಲಕ್ಷ್ಯ ನೀಡದೇ ಅವುಗಳ ಸಹವಾಸವನ್ನು ವರ್ಜಿಸುತ್ತಾನೆ.

ತನ್ನ ಪೂರ್ವ ಜನ್ಮದಲ್ಲಿ ಭಗವಂತನನ್ನು ಉಪೇಕ್ಷಿಸಿ ಮಾಡಿದ ಕಾರ್ಯಕ್ಕೆ ಪಶ್ಚಾತ್ತಾಪ ಪಡುತ್ತಾನೆ. ತದನಂತರ ದೇವೋತ್ತಮ ಪರಮ ಪುರುಷನಾದ ಶ್ರೀ ವಾಸುದೇವನ ಅದ್ಭುತ ಲೀಲೆ ಮತ್ತು ಗುಣಗಳು, ಹಾಗೂ ಮಧುರನಾಮದ ಸ್ಮರಣೆ, ಶ್ರವಣ ಕೀರ್ತನೆಗಳ ಪ್ರಕ್ರಿಯೆಯನ್ನು ಪುನರಾರಂಭಿಸುತ್ತಾನೆ. ಹಾಗೆ ಭಕ್ತಿಯೋಗದ ತತ್ತ್ವಗಳನ್ನು ಸ್ಮರಿಸುತ್ತಾ ಜಿಂಕೆಯ ದೇಹವನ್ನು ತ್ಯಜಿಸುತ್ತಾನೆ.

ಕೃಪಾಳು ಭಗವಂತನು ಅವನ ಭಕ್ತ ದಾಸನಿಗೆ ಅನುಗ್ರಹ ನೀಡಿ, ಭಕ್ತಿಸೇವೆಯನ್ನು ಸಲ್ಲಿಸಲು ಸಕಲ ಸಾಧನೆಗಳನ್ನು ಒದಗಿಸಿ, ಅವನಿಗೆ ಒಂದು ಧಾರ್ಮಿಕ ವಂಶದಲ್ಲಿ ಜನ್ಮ ನೀಡುತ್ತಾರೆ.

ಅಂತಿಮ ಜೀವನ

ಭಗವಂತ ವಾಸುದೇವನಿಗೆ ಭಕ್ತಿ ಸೇವೆ ಸಲ್ಲಿಸಿದ ಮಹಾರಾಜ ಭರತ ಪೂರ್ಣವಾಗಿ ಮನುಷ್ಯ ರೂಪ ಪಡೆದು ಸಂಪನ್ನನಾಗಿ, ಅವನ ಎರಡೂ ಪೂರ್ವ ಜನ್ಮಗಳನ್ನು ಜ್ಞಾಪಿಸಿಕೊಳ್ಳುತ್ತಾ ಐಹಿಕ ಭೋಗಾಸಕ್ತರ ಸಹವಾಸವನ್ನು ವರ್ಜಿಸಲು, ಕಿವುಡು ಮೂಕನಂತೆ ನಟಿಸುತ್ತಾ ಭಗವಂತ ವಾಸುದೇವನ ಗುಣ ಮತ್ತು ಕಾರ್ಯಗಳನ್ನು ಜಪಿಸುತ್ತಾ ಪವಿತ್ರ ಭಕ್ತನಾದನು.

ಸಾಮಾನ್ಯ ಜನರು ಆತನನ್ನು ಮಂಕು ಬುದ್ಧಿಯವನೆಂದು ಭಾವಿಸಿದರು. ಹೀಗೆ ಭರತ ಮಹಾರಾಜನು ಪರಮ ಸತ್ಯನಾದ ಪರಮ ಪ್ರಭು ವಾಸುದೇವನನ್ನು ಸಾಕ್ಷಾತ್ಕರಿಸಿ ಜೀವನದ ಪರಿಪೂರ್ಣತೆಯನ್ನು ಸ್ಥಾಪಿಸಿದರು. ಲೌಕಿಕ ದೇಹವನ್ನು ಪರಿಪೂರ್ಣತೆಯನ್ನು ಸ್ಥಾಪಿಸಿದನು. ಲೌಕಿಕ ದೇಹವನ್ನು ತ್ಯಜಿಸಿದ ನಂತರ ಭಗವಂತನ ಪರದುಭಾಷ ವೈಕುಂಠವನ್ನು ತ್ಯಜಿಸಿದನಂತರ ಭಗವಂತನ ಪರಮಧಾಮ ವೈಕುಂಠವನ್ನು ಸೇರಿದನು.

ಭಗವಂತನ ವಿಶಿಷ್ಟ ಅನುಗ್ರಹ

ಯಾವ ಮಾನವನು ಪರಮಾತ್ಮನ ಭಕ್ತಿಸೇವೆಯನ್ನು ಶ್ರದ್ಧೆಯಿಂದ ಸಲ್ಲಿಸುತ್ತಾನೋ, ಅವನಿಗೆ ಪರಮ ದೇವೋತ್ತಮ ಪುರುಷ ಶ್ರೀ ಕೃಷ್ಣನಿಂದ ಜ್ಞಾನಶಕ್ತಿಯೂ ಹಾಗೂ ಜ್ಞಾಪಕಶಕ್ತಿಯೂ ಪ್ರಾಪ್ತಿಯಾಗುತ್ತದೆ. ಮಹಾರಾಜ ಭರತನು ಜಿಂಕೆಯ ಜನ್ಮ ಪಡೆದಿದ್ದರೂ ಸಹ, ನಿರಂತರ ಭಗವಂತನ ಸೇವೆ ಸಲ್ಲಿಸಿ ದಾಸನಾಗಿ ಜೀವನದ ಪರಿಪೂರ್ಣತೆಯನ್ನು ಪಡೆದನು.

ಲೌಕಿಕ ಜೀವನ ಮತ್ತು ಈ ಚಟುವಟಿಕೆಗಳ ಪರಿಣಾಮವೂ ಅವನ ಶರೀರದಲ್ಲಿ ಕೊನೆಗಾಣುತ್ತದೆ. ಯಾವ ಬದುಕಿನ ಗುರಿ ಸುಖ ಮತ್ತು ಆರಾಮವನ್ನು ಈ ಜೀವನದಲ್ಲಿ ಅಥವಾ ಸ್ವರ್ಗ ಜೀವನದಲ್ಲಿ ಪಡೆಯುವುದೇ ಆಗಿದೆಯೋ ಅದೇ ಲೌಕಿಕ ಜೀವನ. ಈ ಲೌಕಿಕ ಹಾಗೂ ಐಹಿಕ ಅಸ್ತಿತ್ವಗಳು, ಕೇವಲ ತಾತ್ಕಾಲಿಕವಾಗಿದ್ದು ಪುಣ್ಯ ಕಾರ್ಯಗಳಿಂದಾಗಿ ಸ್ವರ್ಗಲೋಕ ಸೇರಿದರೂ ಅಲ್ಲಿಂದ ಈ ಲೋಕಕ್ಕೆ ಪತನ ಹೊಂದಬೇಕಾಗುತ್ತದೆ.

ಈ ಲೌಕಿಕ ಜೀವನ ತೃಪ್ತಿಯನ್ನು ನೀಡುವುದಿಲ್ಲ. ಆದರೆ ಈ ಪರಮಾನಂದಕ್ಕಾಗಿ ಹಂಬಲಿಸುತ್ತೇವೆ. ಹೀಗೇ ಲೌಕಿಕ ನ್ಯೂನತೆಗಳನ್ನು ಅರ್ಥಮಾಡಿಕೊಂಡವನಿಗೆ ಮಾತ್ರವೇ ಭಕ್ತಿಯೋಗದ ಪ್ರಾಮುಖ್ಯ ಅರಿವಾಗುವುದು.

ಐಹಿಕ ಜೀವನದ ನಿರ್ಬಲತೆಯ ಒಂದು ಐತಿಹಾಸಿಕ ನಿರೂಪಣೆ

ಮಹಾರಾಜ ಇಕ್ಷ್ವಾಕುವಿನ ಸುಪುತ್ರ, ದಾನ ಧರ್ಮಶೀಲನಾದ ರಾಜ ನೃಗ ಪರೋಪಕಾರಿಯಾಗಿದ್ದನು. ಆತ ರಾಜ್ಯದ ಹೆದ್ದಾರಿಗಳಲ್ಲಿ ವೃಕ್ಷಗಳನ್ನು ಬೆಳಸಿ, ಕೆರೆ ಬಾವಿಗಳನ್ನು ತೋಡಿಸಿ ಇತ್ಯಾದಿ ದಯಾಧರ್ಮದ ಕಾರ್ಯಗಳನ್ನು ಬಳಸಿ, ಇತಿಹಾಸದಲ್ಲಿ ಪ್ರಖ್ಯಾತನಾಗಿದ್ದನು. ಆಕಾಶದ ತಾರೆಗಳನ್ನು, ಭೂಮಿಯ ಧೂಳನ್ನು ಹಾಗೂ ಸುರಿಮಳೆಯ ಹನಿಗಳನ್ನು ಹೇಗೆ ಗಣಿಸಲು ಸಾಧ್ಯವಿಲ್ಲವೋ ಹಾಗೇ ರಾಜ ನೃಗನು ದಾನಮಾಡಿದ ಹಸುಗಳ ಸಂಖ್ಯೆ ಅಗಣಿತವಾಗಿತ್ತು.

ಹಸುಗಳನ್ನು ಗುಣಹೀನರಿಗೆ ಕೊಡದೇ ಸುಶಿಕ್ಷಿತ ಬ್ರಾಹ್ಮಣ ವರ್ಗದವರಿಗೆ ವಿನಿಯೋಗಿಸಿದನು. ಆ ಬ್ರಾಹ್ಮಣರೂ ಕೂಡ ಶ್ರೀಮಂತರಾಗಿರದೇ ಜೀವನದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದರಲ್ಲಿ ಹೆಣಗಾಡುತ್ತಿರುವವರು.

ವೈಪರೀತ್ಯ

ಹೀಗೆ ಹಸುಗಳನ್ನು ಮೇಯಿಸುತ್ತಾ ಇದ್ದಾಗ ಒಬ್ಬ ಬ್ರಾಹ್ಮಣನ ಹಸು ಆಕಸ್ಮಿಕವಾಗಿ ದಾರಿತಪ್ಪಿ ಮಹಾರಾಜ ನೃಗನ ಹಸುಗಳೊಂದಿಗೆ ಸೇರಿಕೊಂಡಿತು. ಅವನಿಗೆ ಅರಿವಿಲ್ಲದೇ ರಾಜ ನೃಗನು ಅದೇ ದಾರಿತಪ್ಪಿ ಬಂದ ಹಸುವನ್ನು ಈ ಬಾರಿ ಇನ್ನೊಬ್ಬ ಬ್ರಾಹ್ಮಣನಿಗೆ ದಾನ ಮಾಡುತ್ತಾನೆ.

ಈ ಬ್ರಾಹ್ಮಣನು ಈ ಹಸುವನ್ನು ಪ್ರೀತಿಯಿಂದ ಬೆಳಸುತ್ತಾ ಇದ್ದಾಗ ಆ ಹಸುವಿನ ಮೊದಲನೆ ಮಾಲೀಕನು ತಾನೇ ಆ ಹಸುವಿನ ಹಕ್ಕುದಾರನೆಂದೂ ಮತ್ತು ತನಗೆ ಮಾತ್ರ ಅದರ ಮೇಲೆ ಅಧಿಕಾರವಿದೆಯೆಂದೂ ಹೇಳಿ ಇನ್ನೊಬ್ಬ ಬ್ರಾಹ್ಮಣನ ಜೊತೆ ವಾದಿಸುತ್ತಾ, ಇಬ್ಬರೂ ಕಚ್ಚಾಡಿದರು.

ಇಬ್ಬರೂ ಬ್ರಾಹ್ಮಣರು ಮಹಾರಾಜನ ಮೇಲೆ ಆರೋಪಿಸಿ, ಒಮ್ಮೆ ದಾನಮಾಡಿಕೊಟ್ಟ ಹಸುವನ್ನು ಹಿಂದಕ್ಕೆ ತೆಗೆದುಕೊಂಡು ಮತ್ತೆ ಇನ್ನೊಬ್ಬನಿಗೆ ದಾನ ಕೊಡುವುದು ಮಹಾ ಅಪರಾಧವೆಂದು ವಾದಿಸಿದರು. ಬ್ರಾಹ್ಮಣರ ಜೊತೆ ಈ ತರಹದ ವಂಚನೆಯ ವಹಿವಾಟು ಮಹಾರಾಜನಿಗೆ ಶೋಭೆಯನ್ನು ಕೊಡುವುದಿಲ್ಲ ಎಂದರು. ಈ ಪರಿಸ್ಥಿತಿಯ ಬಗ್ಗೆ ಅರಿವಿಲ್ಲದೆ ಮಹಾರಾಜನು ದಿಗ್ಭ್ರಾಂತನಾದನು.

ಮಹಾರಾಜನು ನಮ್ರತೆಯಿಂದ ಇಬ್ಬರಿಗೂ ಆ ಒಂದು ಹಸುವಿನ ಸ್ಥಾನದಲ್ಲಿ ಒಂದು ಲಕ್ಷ ಹಸುಗಳನ್ನು ದಾನವಾಗಿ ನೀಡುತ್ತೇನೆಂದು ವಿನಮ್ರವಾಗಿ ಬೇಡಿಕೊಂಡನು. ಮತ್ತು ಆತನ ತಪ್ಪನ್ನು ಕ್ಷಮಿಸಿ ಬ್ರಾಹ್ಮಣರ ಸೇವಕನಾಗಿ ಸ್ವೀಕರಿಸಬೇಕೆಂದು ಅವರಲ್ಲಿ ಕೋರಿದನು. ಈ ಅವನತಿಯಿಂದ ತನ್ನನ್ನು ನರಕಕ್ಕೆ ತಳ್ಳಬೇಡಿ ಎಂದು ಇಬ್ಬರಲ್ಲೂ ಮೊರೆ ಇಟ್ಟನು.

ಆದರೆ ಇಬ್ಬರೂ ಬ್ರಾಹ್ಮಣರೂ ಅವನ ಮೊರೆಗೆ ಬೆಲೆ ಕೊಡದೇ ಅವರೇ ಹಸುವಿನ ಹಕ್ಕುದಾರರೆಂದು ಮತ್ತೆ ತರ್ಕಿಸಿದರು. ಮಹಾರಾಜನು ನೀಡಿದ ಒಂದು ಲಕ್ಷ ಹಸುಗಳನ್ನು ಸ್ವೀಕರಿಸಲು ಒಪ್ಪಂದಕ್ಕೆ ಒಡಂಬಡದೇ ಇಬ್ಬರೂ ಬ್ರಾಹ್ಮಣರು ಕೋಪತಾಪದಿಂದ ಸಿಡಿಮಿಡಿಯುತ್ತಾ ಅವರ ಸ್ವಾಧೀನತೆಯ ಹಕ್ಕನ್ನು ಅಪಹರಿಸಿಕೊಂಡಂತಾಯಿತು ಎಂದು ಬಗೆದು ಆ ಸ್ಥಳದಿಂದ ನಿರ್ಗಮಿಸಿದರು.

ಐಹಿಕ ಜೀವನವನ್ನು ಸಾಗಿಸುವವರು ಬುದ್ಧಿವಂತರಲ್ಲ

ಈ ಘಟನೆ ಸಂಭವಿಸಿದನಂತರ ಮಹಾರಾಜನ ಅಂತಿಮ ಕಾಲದಲ್ಲಿ, ಮೃತ್ಯುವಿನ ಮೇಲ್ವಿಚಾರಕನಾದ ಯಮರಾಜನಿಂದ ಕರೆ ಬರುತ್ತದೆ. ಈ ಸಂದರ್ಭದಲ್ಲಿ ಯಮರಾಜನು ನೃಗನನ್ನು ಪಶ್ನಿಸುತ್ತಾನೆ – “ನೀನು ಮೊದಲು ನಿನ್ನ ಒಳ್ಳೆಯ ಕರ್ಮಗಳ ಫಲಗಳನ್ನು ಅನುಭವಿಸಲು ಸಿದ್ಧವಾಗಿರುವೆಯೋ? ಅಥವಾ ದುಷ್ಕರ್ಮಗಳ ಫಲವನ್ನು ಅನುಭವಿಸಲು ಸಿದ್ಧವಾಗಿರುವೆಯೋ?” ಮಹಾರಾಜನ ಅನೇಕ ದಾನಧರ್ಮ ಕಾರ್ಯಗಳನ್ನು ಗಮನಿಸಿ, ಯಮರಾಜನು ಮಹಾರಾಜನ ಮುಂದಿನ ಜೀವನದ ಸುಖಭೋಗದ ಎಲ್ಲೆಯನ್ನು ಅರಿಯಬಹುದು ಎನ್ನುತ್ತಾನೆ.

ಮಹಾರಾಜನ ಲೌಕಿಕ ಕಾರ್ಯಗಳಿಗೆ ಯಾವ ಸೀಮೆಯೂ ಇರಲಿಲ್ಲವೆಂದು ಯಮರಾಜನು ಉಲ್ಲೇಖಿಸಿದನು. ಆದರೆ ಮಹಾರಾಜ ಚಕಿತನಾಗಿ ತಾನು ಮೊದಲು ತನ್ನ ದುಷ್ಕರ್ಮಗಳ ಶಿಕ್ಷೆಯನ್ನು ಅನುಭವಿಸಿ ಅನಂತರ ಸುಖಕರ್ಮಗಳ ಫಲವನ್ನು ಅನುಭವಿಸುವುದಾಗಿ ಇಚ್ಛಿಸುತ್ತಾನೆ. ಒಡನೆ ಯಮರಾಜನು ನೃಗನನ್ನು ಗವುಳಿಯಾಗಿ ರೂಪಿಸುತ್ತಾನೆ.

ಯಾವ ಮಾನವನು ಜೀವನದಲ್ಲಿ ಐಹಿಕ ಚಟುವಟಿಕೆಗಳಲ್ಲಿ ತನ್ಮಯನಾಗಿ ಬಾಳುತ್ತಾನೋ ಅದರಿಂದ ಪಡೆಯುವ ಆನಂದವು ಕೇವಲ ಅಲ್ಪವೂ ಹಾಗೂ ಅಸ್ಥಿರವೂ ಆಗಿರುತ್ತದೆ. ಪರಮ ಪ್ರಭುವಿಗೆ ಭಕ್ತಿಸೇವೆಯನ್ನು ಸಲ್ಲಿಸಿ ಅನುಭವ ಪ್ರಾಪ್ತಿಗೊಳ್ಳುವುದಕ್ಕೂ ಮತ್ತು ಈ ಅಸ್ಥಿರವಾದ ಉಲ್ಲಾಸಕ್ಕೂ ಯಾವ ಹೋಲಿಕೆಯೂ ಇಲ್ಲ. ಲೌಕಿಕ ಸುಖಭೋಗದಲ್ಲಿ ತೊಡಗಿರುವವರ ಬುದ್ದಿಯು ಇಂದ್ರಿಯ ಭೋಗದ ಪ್ರವೃತ್ತಿಯಿಂದ ಅಪವೃತವಾಗಿದೆ.

ಭಕ್ತಿಯೋಗದ ಅನುಪಮ ವೈಶಿಷ್ಟ್ಯ

ಭಕ್ತಿಯೋಗವನ್ನು ಬೇರೆ ಯಾವ ಪ್ರವೃತ್ತಿ ಅಥವಾ ಚಟುವಟಿಕೆಗಳ ಜೊತೆಗೆ ಹೋಲಿಸಲು ಸಾಧ್ಯವಿಲ್ಲ. ಭಕ್ತಿಯೋಗದ ಆಚರಣೆಯಿಂದ ಉತ್ಪನ್ನವಾಗುವ ಪರಿಣಾಮವು ಪ್ರಕೃತಿ ಹಾಗೂ ಕಾಲದ ಪ್ರಭಾವದಿಂದ ವಿನಾಶಕವಾಗುವುದಿಲ್ಲ. ಆದುದರಿಂದ ಭಕ್ತಿಯೋಗವು ದಿವ್ಯವಾದದ್ದು, ಭಕ್ತಿಯೋಗವನ್ನು ಆಚರಿಸಿದವನಿಗೆ ಮರಣಾಂತರವೂ ದೇವೋತ್ತಮ ಪರಮ ಪುರುಷನು ಅನುಗ್ರಹಿಸುತ್ತಾನೆ.

ಆತನಿಗೆ ಮನುಷ್ಯನಾಗಿ ಒಂದು ಪಾಂಡಿತ್ಯವುಳ್ಳ ಉಚ್ಚಮಟ್ಟದ ಬ್ರಾಹ್ಮಣ ವಂಶದಲ್ಲಿ ಇಲ್ಲವೇ ಗೌರವಿತ ಐಶ್ವರ್ಯ ಕುಟುಂಬದಲ್ಲಿ ಪುನರ್ಜನ್ಮ ಪ್ರಾಪ್ತಿಯಾಗಿ ಇನ್ನೂ ಮುಂದಕ್ಕೆ ಆಧ್ಯಾತ್ಮಿಕ ಪ್ರಗತಿ ಹೊಂದುವ ಸಾಧ್ಯತೆ ಇದೆ.

ಆದರೆ ಇದಕ್ಕೆ ತತ್‌ ವಿರುದ್ಧವಾಗಿ ಲೌಕಿಕ ಪ್ರವೃತ್ತಿಗಳು ತಾತ್ಕಾಲಿಕವಾಗಿದ್ದು, ಸ್ಥಿರವಾದ ಪರಿಣಾಮವನ್ನು ಉಂಟುಮಾಡುವುದಿಲ್ಲ. ಇಂತಹ ಐಹಿಕ ಚಟುವಟಿಕೆಗಳ ಫಲಗಳು ಪ್ರಕೃತಿಯ ನಿಷ್ಠುರ ನಿಯಮಗಳಿಂದ ನಾಶವಾಗುತ್ತದೆ. ಸಾವು ನಮ್ಮೆಲ್ಲ ಚಟುವಟಿಕೆಗಳಿಗೆ ಪೂರ್ಣ ವಿರಾಮವಾಗುತ್ತದೆ. ಇದರ ಅರ್ಥಾನುಸಾರವಾಗಿ ಶ್ರೀಮದ್ ಭಾಗವತದಲ್ಲಿ ಒಂದು ಶ್ಲೋಕ ಹೀಗಿದೆ:

ತ್ಯಕ್ತ್ವಾ ಸ್ವ-ಧರ್ಮಾಮ್ ಚರಣಾಭಜಂ ಹರೇಃ

ಭಜನ್ ಅಪಕ್ವೋSತ ಪಟೇತ್ ತತೋ ಯದಿ |

ಯತ್ರಾಕ್ವಾಭಾದ್ರಮ್ ಅಭುದ್ ಅಮುಖ್ಯ ಕಿಮ್

ಕೋ ವಾರ್ತಾ ಆಪ್ತೋ ಭಜತಂ ಸ್ವಧರ್ಮತಃ ||

“ಯಾರು ಸ್ವಂತ ತೃಪ್ತಿಯನ್ನು ಬಿಟ್ಟು “ಭಕ್ತಿಯೋಗದ” ದಾರಿ ಹಿಡಿಯುತ್ತಾನೋ ಅಂತಹವನು ಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಅದರಿಂದ ಅವನಿಗಾಗುವ ನಷ್ಟವೇನು? ಮತ್ತು ಒಬ್ಬ ತನ್ನ ಲೌಕಿಕ ಕ್ರಿಯೆಯನ್ನು ಪರಿಪೂರ್ಣ ಮಾಡುವುದರಿಂದ ಬರುವ ಲಾಭವಾದರೂ ಏನು?” (ಭಾಗವತ 1.5.17)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi