ಹೀಗೊಬ್ಬ ಕುಡುಕ

ಆಕರ : 27, ಜೂನ್, 1972ರಂದು ಲಾಸ್‌ ಏಂಜಲಿಸ್‌ನಲ್ಲಿ ಶ್ರೀ ಶ್ರೀಮದ್‌ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ನೀಡಿದ ಉಪನ್ಯಾಸ

ಶ್ರೀಲ ಪ್ರಭುಪಾದರು ತಮ್ಮ ಉಪನ್ಯಾಸದಲ್ಲಿ ಸಾವಿನ ಅನಂತರವೂ ಲಿಂಗಭೇದಗಳಿರುತ್ತವೆಯೇ ಎಂದು ಪ್ರಶ್ನಿಸುವವರನ್ನು ಕುರಿತು ಹೇಳುತ್ತಿದ್ದರು. ಆ ಬಗ್ಗೆ ವಿಶ್ಲೇಷಣೆ ನಡೆಸುತ್ತ ಅವರು ಕೊಟ್ಟ ಸಾಮತಿ ಇದು –

ಒಬ್ಬ ವ್ಯಕ್ತಿ ಮಿತಿಮೀರಿ ಕುಡಿಯುತ್ತಿದ್ದ. ಕುಡಿತಕ್ಕೆ ಆತನಿಗೆ ಸಮಯಾಸಮಯಗಳ ಪರಿವೆಯೇ ಇರುತ್ತಿರಲಿಲ್ಲ. ಅವನ ಸ್ನೇಹಿತನಿಗೆ ಅದನ್ನು ಕಂಡು ಆತಂಕವೆನಿಸಿತು. ಆತನನ್ನು ಒಲಿಸುವ ಸಲುವಾಗಿ ಅವನಿಗೆ ಕುಡಿತ ಬಿಡುವಂತೆ ಬೋಧಿಸಿದ. “ನೀನು ಹೀಗೆ ಕುಡುಕನಾಗಿ ಹೋದರೆ ನರಕಕ್ಕೆ ಹೋಗುತ್ತೀ’ ಎಂದ.

ಅದು ಪಾಪವೆಂದೂ, ಬಿಟ್ಟು ಬಿಡಬೇಕೆಂದೂ ಕಿವಿಮಾತು ಹೇಳಿದ. ಆದರೆ, ಆ ಕುಡುಕ, “ಓಹ್ ! ನನ್ನ ತಂದೆಯೂ ಕುಡಿಯುತ್ತಾರೆ” ಎಂದ. ಸ್ನೇಹಿತ “ಹಾಗಾದರೇ ಅವರೂ ನರಕಕ್ಕೆ ಹೋಗುವರು’ ಎಂದು ಉತ್ತರಿಸಿದ. ಕುಡುಕ, “ನನ್ನ ಸಹೋದರನೂ ಕುಡುಕನೇ’ ಎಂದಾಗ, “ಅವನಿಗೂ ಅದೇ ಗತಿ” ಎಂಬ ಉತ್ತರ ಹೊರಟಿತು.

ಆ ಕುಡುಕ, ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ – ಹೀಗೆ ಮನೆಮಂದಿ ಎಲ್ಲರನ್ನೂ ಉಲ್ಲೇಖಿಸುತ್ತಾ “ಅವರೂ ಕುಡಿಯುವರು’ ಎನ್ನುತ್ತಿದ್ದ ಅದಕ್ಕೆ ಪ್ರತಿಯಾಗಿ, ಸ್ನೇಹಿತರಿಂದ, “ಹಾಗಾದರೆ ಅವರೂ ನರಕಕ್ಕೆ ಸೇರುವರು’ ಎಂದು ಉತ್ತರ ಬರುತ್ತಿತ್ತು.

ಕೊನೆಗೆ ಕುಡುಕ ಹೇಳಿದ. “ಓಹ್, ಹಾಗಾದರೆ ಆ ನರಕವೂ ಸ್ವರ್ಗವೇ ಆಗಿಬಿಡುವುದು! ನಾವೆಲ್ಲರೂ ಇಲ್ಲಿಯೂ ಕುಡಿಯುತ್ತೇವೆ, ಅಲ್ಲಿಯೂ ಹೋಗಿ ಕುಡಿಯುವೆವು, ಆಗ ಅದು ನರಳ ಹೇಗಾದೀತು? ಅದು ಸ್ವರ್ಗವೇ ಸರಿ!’

ನೀತಿ : ಸ್ವರ್ಗದ ಅರಿವಿರದವರು ನರಕವನ್ನು ಸ್ವರ್ಗವೆಂದು ಭ್ರಮಿಸುತ್ತಾರೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi