ಭಾರತೀಯ ಹಳ್ಳಿಗರಿಗೆ, ತಮ್ಮ ಕೃಷಿ ಜೀವನದಲ್ಲಿ, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ದೈನಂದಿನ ಜೀವನದ ಒಂದು ಅವಿಭಾಜ್ಯ ಅಂಗ. ಆತ ತನ್ನ ಎಲ್ಲ ಅವಶ್ಯಕತೆಗಳಿಗೂ ನಿಸರ್ಗದ ಕೊಡುಗೆ ಉಪಯೋಗಿಸಿ, ಮಣ್ಣಿನ ಗುಡಿಸಲಿನಿಂದ ಹಿಡಿದು ಆತನ ಕರಮಗ್ಗದ ಬಟ್ಟೆಯವರೆಗೂ, ತಯಾರಿಸಿಕೊಳ್ಳುವಲ್ಲಿ ಸಿದ್ಧಹಸ್ತ ಮತ್ತು ಗ್ರಾಮ ರಕ್ಷಣೆ ಕಾಯಕದಲ್ಲಿ ಗೋವುಗಳನ್ನು ಸಂರಕ್ಷಿಸುವುದು ಯಾವಾಗಲೂ ಬಹು ಮಹತ್ವದ ವಿಷಯವಾಗಿದೆ.

ಜನಸಂಖ್ಯೆಯ ಪ್ರತಿಶತ 80ರಷ್ಟು ಮಂದಿ ವಾಸಿಸುವ ಗ್ರಾಮಗಳ ಪ್ರತಿಯೊಂದು ಮನೆಯಲ್ಲಿ ಗೋವು ಮತ್ತು ಎತ್ತುಗಳು ಅತ್ಯಗತ್ಯ. ಹಸುಗಳು, ಹುಲ್ಲನ್ನು ತಿಂದು ನಮ್ಮ ಶರೀರಕ್ಕೆ ಅಗತ್ಯವಿರುವ ಎಲ್ಲ ಪೋಷಕಾಂಶ ಹೊಂದಿರುವ ಹಾಲನ್ನು ಸಂತೋಷದಿಂದ ನೀಡುತ್ತವೆ.
ಹಾಲಿನಿಂದ ನಾವು ಚೀಸ್, ಮೊಸರು, ಬೆಣ್ಣೆ, ತುಪ್ಪ, ಗಿಣ್ಣು, ಕೆನೆ ಮತ್ತು ಇನ್ನೂ ಅಸಂಖ್ಯ ರೀತಿಯ ಹಾಲು ಆಧಾರಿತ ತಿನಿಸುಗಳ ತಯಾರಿಕೆ ಭಾರತೀಯ ಅಡುಗೆ ಪದ್ಧತಿಯಲ್ಲಿ ನಿಸ್ಸಿಮರಾದವರಿಗೆ ಗೊತ್ತು. ಹಾಲನ್ನು ನೀಡುವುದರಿ೦ದಲೇ ವೇದಗಳು ಗೋವನ್ನು ತಾಯಿ ಎಂದು ಒಪ್ಪಿಕೊಳ್ಳುತ್ತೇವೆ.
ಭಾರತೀಯರಿಗೆ ಆಕಳ ಸಗಣಿಯು ರೋಗನಿರೋಧಕ ಶಕ್ತಿ ಹೊಂದಿರುವುದೂ ಗೊತ್ತು. ಯಾವುದೇ ಹಳ್ಳಿಯಲ್ಲೂ ಸಗಣಿಯ ಬೆರಣಿಯನ್ನು ತಟ್ಟಿ ಬಿಸಿಲಿನಲ್ಲಿ ಒಣಗಿಸಿ ಅಡುಗೆ ಒಲೆ ಉರಿಸಲು ಬಳಸುವುದು ಸರ್ವೇಸಾಮಾನ್ಯ. ಗೋಮೂತ್ರ ಪಿತ್ತಜನಕಾಂಗ ಕಾಯಿಲೆಗೆ ಒಳ್ಳೆ ಔಷಧವೆಂದು, ಔಷಧ ವಿಜ್ಞಾನದ ವೇದ ಸಾಹಿತ್ಯ ಆಯುರ್ವೇದವೇ ಹೇಳಿದೆ.
ಎತ್ತು, ಸಣ್ಣ ಹಿಡುವಳಿದಾರರಿಗೆ ಸಹ ಅಮೂಲ್ಯ ಆಸ್ತಿ. ಕಟ್ಟುಮಸ್ತಾದ ಎತ್ತಿಗೆ ಇಡೀ ದಿನ ಹೊಲದಲ್ಲಿ ನೇಗಿಲು ಎಳೆಯುವ ಕಾಯಕವೆಂದರೆ ಇಷ್ಟ. ಎತ್ತುಗಳ ಬಳಕೆ ಯಂತ್ರಕ್ಕಿಂತ ನಿಧಾನವಾಗಿರಬಹುದು, ಆದರೆ ಅದು ಭಾರ ಯಂತ್ರಗಳು ಮಾಡುವಂತೆ ಮಣ್ಣನ್ನು ಗಟ್ಟಿಗೊಳಿಸುವದಿಲ್ಲ ಮತ್ತು ಉತ್ಪಾದಕತೆಯನ್ನು ಕ್ಷೀಣಿಸುವದಿಲ್ಲ.
ಭಾರತದಲ್ಲಿ ಯಂತ್ರಗಳ ಬಳಕೆಯಿಂದ ಇತರ ತೊಂದರೆಗಳೂ ಇವೆ. ಋತುಮಾನ ಬದಲಾವಣೆ ಮತ್ತು ಮಾನ್ಸೂನ್ ಗಳೊಂದಿಗೆ ಅದು ಹೊಂದಿಕೊಳ್ಳಲಾಗದ್ದು ಅವುಗಳಲ್ಲೊಂದು. (ಬಿಡಿ ಭಾಗಗಳು ಮತ್ತು ಮೆಕ್ಯಾನಿಕ್ನನ್ನು ಹುಡುಕುವ ಸಮಸ್ಯೆ ಬಗ್ಗೆ ಏನು ಹೇಳುವುದು) ಎತ್ತು ನಮಗೆ ಆಹಾರ ಒದಗಿಸುವುದರಿಂದ ಅದನ್ನು ತಂದೆ ಎಂದು ಪರಿಗಣಿಸಲಾಗಿದೆ.
ವೈದಿಕ ಸಮಾಜವು ಮಾನವ ಮತ್ತು ಆಕಳ ನಡುವೆ ಬಿಡಿಸಲಾಗದ ಬಾಂಧವ್ಯವಿದೆ ಎಂದು ಮನಗಂಡಿದೆ. ಆಕಳು ತನ್ನ ಕರುವಿಗೆ ಅವಶ್ಯವಿರುವುದಕ್ಕಿಂತ ಸಾಕಷ್ಟು ಹೆಚ್ಚು ಹಾಲು ಉತ್ಪಾದಿಸುತ್ತದೆ. ಕರುವನ್ನು ನಿರ್ಬಂಧಗೊಳಿಸದೆ ಮೊಲೆಯುಣ್ಣಿಸಿದರೆ, ಗಂಟುಗಳು ಉದ್ಭವವಾಗಿ ಹಸುವಿನ ಸಾವಿಗೂ ಕಾರಣವಾಗಬಹುದು. ಕರುವಿಗೆ ಜನನವಿತ್ತ ಹಸುವು ಶಾಂತವಾಗಿ ಹಾಲನ್ನು ಉತ್ಪಾದಿಸುತ್ತಲೇ ಇರುತ್ತದೆ. ಹೇಳಬೇಕೆಂದರೆ ಹಾಲನ್ನು ಕರೆಯದಿದ್ದರೆ ಅದಕ್ಕೆ ನೋವಾಗುತ್ತದೆ.
ಈಗಿನ ದಿನಗಳಲ್ಲಿ ಡೇರಿಗಳಲ್ಲಿ ಹಸುಗಳ ದುರ್ಬಳಕೆ ನಡೆದು, ಹೆಚ್ಚಕಮ್ಮಿ ಹಾಲಿನ ಫ್ಯಾಕ್ಟರಿಗಳಂತಾಗಿರುವುದನ್ನು ಜನ ವಿರೋಧಿಸುತ್ತಾರೆ. ಕರು ಹುಟ್ಟಿದ ಕೂಡಲೆ ತಾಯಿಯಿಂದ ಬೇರ್ಪಡಿಸಲಾಗುತ್ತದೆ; ಆಕಳು ಹಾಲು ಕೊಡುವುದನ್ನು ನಿಲ್ಲಿಸುವ ವಯಸ್ಸಿನಲ್ಲಿ ಕಸಾಯಿ ಖಾನೆಗೆ ನೂಕಲಾಗುತ್ತಿದೆ.

ಇದು ವೈದಿಕ ವ್ಯವಸ್ಥೆಯಲ್ಲ. ಆಕಳುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ವೇದಗಳು ಹೇಳುತ್ತವೆ. ಆದರೆ ಎಲ್ಲಾದರೂ ಹಸುಗಳನ್ನು ಅದರ ಹಾಲು ಮತ್ತು ಮಾಂಸಕ್ಕಾಗಿ ದುರ್ಬಳಕೆ ಮಾಡದೆ, ಬಸವಳಿಯುವಂತೆ ಮಾಡದೆ ಕಾರ್ಯಗತ ಉದಾಹರಣೆ ದೊರೆಯುತ್ತದೆಯೆ?
ಹೇಳಬೇಕೆಂದರೆ, ಗ್ರಾಮೀಣ ಭಾರತವು ಇದನ್ನು ಕಾರ್ಯಗತವಾಗಿಸಿರುವುದಾಗಿ ನೋಡಲು ಒಂದು ಉತ್ತಮ ಸ್ಥಳ. ಇನ್ನೊಂದು ಉದಾಹರಣೆ ಎಂದರೆ ಗೋ ಸಂರಕ್ಷಣೆಯನ್ನೇ ತನ್ನ ತತ್ವಗಳಲ್ಲೊಂದಾಗಿ ಹೊಂದಿರುವ ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್), ಭಗವದ್ಗೀತೆಯಲ್ಲಿ ಗೋ ಸಂರಕ್ಷಣೆಗೆ ಒಂದು ಧಾರ್ಮಿಕ ತತ್ವದ ಸ್ಥಾನ ನೀಡಲಾಗಿದೆ.
ಎಲ್ಲ ಇಸ್ಕಾನ್ ಫಾರ್ಮ್ಗಳೂ ಈ ಮಹತ್ವದ ತತ್ವಕ್ಕೆ ಬದ್ಧವಾಗಿವೆ. ಇದರ ಫಲವಾಗಿ ಗೋವುಗಳು ಸಂತಸ ಮತ್ತು ಶಾಂತಿಯಿಂದಿದ್ದು ಸಾಕಷ್ಟು ಕೆನೆಭರಿತ ಹಾಲು ನೀಡುತ್ತಿವೆ. ಇಸ್ಕಾನ್ ಫಾರ್ಮ್ಗಳಲ್ಲಿ ( ಜಗತ್ತಿನಾದ್ಯಂತ 50 ಫಾರ್ಮ್ಗಳಿವೆ) ಹಸುಗಳು ಮತ್ತು ಎತ್ತುಗಳು ಸ್ಥಳೀಯ ಸ್ಪರ್ಧೆಗಳಲ್ಲಿ ಅನೇಕ ಬಹುಮಾನ ಗೆದ್ದಿವೆ.
ಸ್ವಾವಲಂಬಿ ರೈತ ಸಮುದಾಯವನ್ನು ರೂಪಿಸುವುದು ಇಸ್ಕಾನ್ನ ಪ್ರಮುಖ ಉದ್ದೇಶಗಳಲ್ಲಿ ಒಂದು. ಇಲ್ಲಿರುವ ಕೃಷಿ ತಂತ್ರಗಳು ಸಾಂಪ್ರದಾಯಿಕ ಮತ್ತು ಸಾವಯವ. ಕೇವಲ ಲಾಭಗಳಿಸುವ ದೃಷ್ಟಿಯಿಂದ ನಿರ್ಮಿಸಲ್ಪಟ್ಟ ಆಧುನಿಕ ಯಂತ್ರಗಳ ಬಳಕೆಯು ತುಂಬ ಕಮ್ಮಿ. ಈ ಫಾರ್ಮ್ಗಳಲ್ಲಿ ಬದುಕಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಉತ್ಪಾದಿಸಲು ಮಾನವರು ಮತ್ತು ಪ್ರಾಣಿಗಳು ಪರಸ್ಪರವಾಗಿ ಒಬ್ಬರಿಗೊಬ್ಬರು ಹೊಂದಿಕೊಂಡು ಕೆಲಸ ಮಾಡುವರು.
ವೇದದ ನೀತಿಯಾದ ಎಲ್ಲ ಜೀವಿಗಳ ಬಗೆಗೂ ‘ಅಹಿಂಸೆ’ಯನ್ನು ಇಲ್ಲಿ ಲಕ್ಷ್ಯವಹಿಸಿ ಅನುಸರಿಸಲಾಗುತ್ತದೆ. ಆದ್ದರಿಂದ, ಪ್ರಾಣಿವಧೆಯಂಥ ಯಾವುದೇ ಹಿಂಸೆಯನ್ನೂ ದೂರವಿರಿಸಿರುವ ಮಾತೇನು, ಸಸ್ಯದ ಜೀವವನ್ನೂ ಆಹಾರಕ್ಕಾಗಿ ಮಾತ್ರ ಬಳಸಲಾಗುತ್ತದೆ. ಯಾವುದೇ ವಸ್ತುವು ನಮ್ಮಲ್ಲಿ ದೊರೆಯದಿದ್ದರೆ, ಹೊರಗಿನಿಂದ ತರುವ ಅವಶ್ಯಕತೆ ಬಂದರೂ, ಹೆಚ್ಚು ಉಳಿದ ಹಾಲು ಮಾರಿ ಬಳಸಬಹುದು.
ಇಲ್ಲವಾದಲ್ಲಿ ಹಾಲನ್ನು ಬಹುಕಾಲ ಉಳಿಯುವಂಥ ತುಪ್ಪ ಮಾಡಿ ಭವಿಷ್ಯದಲ್ಲಿ ವಸ್ತು ವಿನಿಮಯಕ್ಕೂ ಬಳಕೆ ಮಾಡಬಹುದು. ಆದ್ದರಿಂದಲೇ ಆಕಳಿಗೆ ವೈದಿಕ ಆರ್ಥಿಕತೆಯ ಮೂಲವಾಗಿತ್ತು ಮತ್ತು ಸಾಧ್ಯವಿದ್ದಷ್ಟೂ ಉನ್ನತ ಸ್ಥಾನಮಾನ ದೊರೆತಿತ್ತು.
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ದಿನಂಪ್ರತಿ ಸಾವಿರಾರು ಹಸುಗಳ ವಧೆ ಕಂಡು ಶ್ರೀಲ ಪ್ರಭುಪಾದರು ತತ್ತರಗೊಂಡಿದ್ದರು. ಅದು ಅವರಿಗೆ ಸಂವೇದನೆ ಹುಟ್ಟಿಸಿದ್ದು ಮಾತ್ರವಲ್ಲ, ಅಂಥ ಪ್ರಯೋಜನಕಾರಿ ಜೀವಿಯನ್ನು ಕೇವಲ ಮಾಂಸಕ್ಕೋಸ್ಕರ ಕೊಲ್ಲುವುದು ಅರ್ಥವಿಹೀನ ಎಂದೆನಿಸುತ್ತದೆ. ಇದು ಒಂದು ರೀತಿ ಬೆಲೆ ಬಾಳುವ ಕಾರನ್ನು ಕೊಂಡು ಅದನ್ನು ಗುಜರಿ ಮಾಡಿ ಚಿಲ್ಲರೆ ಬೆಲೆಗೆ ಮಾರಿದಂತೆ. ನಾವು ನಮ್ಮ ಯಂತ್ರಗಳಿಗೆ ಮೌಲ್ಯ ಕಟ್ಟುತ್ತೇವೆ. ಆದರೆ ಯಾವುದಾದರೂ, ಸ್ವಲ್ಪ ಹುಲ್ಲು ತಿಂದು ಹಾಲು ಕೊಡುವ ಯಂತ್ರ ಇದೆಯೆ?

ಕರ್ನಾಟಕದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ಇಸ್ಕಾನ್ ಫಾರ್ಮ್ ಈ ವೈದಿಕ ಆರ್ಥಿಕ ವ್ಯವಸ್ಥೆ, ಸರಳ ಜೀವನ ಉನ್ನತ ಚಿಂತನೆ ಆಧರಿಸಿ ಸ್ಥಾಪಿಸಲಾಗಿದೆ. ದೇವರ ಸೃಷ್ಟಿಯ ಭಾಗವೇ ಆಗಿರುವ ಎಲ್ಲ ಜೀವಿಗಳಿಗೆ ಗೌರವ ಕೊಡುವುದು ನಿಸರ್ಗದೊಂದಿಗೆ ಸಮನ್ವಯಗೊಳಿಸಿಕೊಳ್ಳುವುದು ಅತ್ಯವಶ್ಯ. ಅದರಲ್ಲೂ ಆಕಳಿಗೆ, ಅದರ ಸೌಮ್ಯ ಸ್ವಭಾವದಿಂದಾಗಿ, ಯಾವತ್ತೂ ಇನ್ನೂ ಒಂದಿಷ್ಟು ಹೆಚ್ಚು ಗೌರವ ಸಲ್ಲಬೇಕು.






Leave a Reply