ಬದಲಾವಣೆಯ ಹೊರತಾಗಿ ಯಾವುದೂ ಶಾಶ್ವತವಲ್ಲ ಎಂಬುದು ಗ್ರೀಕ್ ತತ್ತ್ವಜ್ಞಾನಿ ಹೆರ್ಕಾಲಿಟಸ್ ಅವರ ನಿರ್ವಹಣ ತಂತ್ರದ ಬಗೆಗಿರುವ ಒ೦ದು ಪ್ರಸಿದ್ಧ ಹೇಳಿಕೆಯಾಗಿದೆ. ಯಶಸ್ವಿ ನಿರ್ವಹಣ ಸಾಧನಗಳಲ್ಲಿ ವೃತ್ತಿಪರ ನಿರ್ವಾಹಕರು ಹೇರಳವಾಗಿ ಈ ಹೇಳಿಕೆಯನ್ನು ತಮ್ಮ ಬದಲಾವಣೆಯ ಆಡಳಿತ ಸೂತ್ರದಲ್ಲಿ ಬಳಸಿಕೊಳ್ಳುತ್ತಾರೆ. ಹೆರ್ಕಾಲಿಟಿಸ್‌ನ ಈ ಹೇಳಿಕೆ ಪ್ರತಿಯೊಬ್ಬನಿಪುಣ ಆಡಳಿತಗಾರನಿಗೆ ತಿಳಿದಿರುತ್ತದೆ.

ಈ ಹೇಳಿಕೆಯು ಕೇವಲ ಆಡಳಿತದಲ್ಲಿ ಮಾತ್ರವಲ್ಲದೇ ನಮ್ಮ ಜೀವನಗಳಲ್ಲಿನ ಎಲ್ಲ ವಿಷಯಗಳಿಗೆ ಸಂಬಂಧಿಸಿದ್ದಾಗಿದೆ ಎಂಬುದನ್ನು ಈ ವೃತ್ತಿನಿರತ ಮಂದಿ ಅರಿಯದಿರುವುದು ದುರಂತ. ನಾವು ಸ್ವಲ್ಪ ವಿಚಾರಿಸಿದರೂ ನಮಗೆ ನಮ್ಮ ಸುತ್ತ-ಮುತ್ತಲಿನ ಜಗತ್ತಿನ ಪ್ರತಿಯೊಂದೂ ಬದಲಾವಣೆಗೆ ಒಳಪಟ್ಟಿರುವುದು ಗೋಚರಿಸುತ್ತದೆ.
ನಮ್ಮ ಸುತ್ತಲಿನ ಜಗತ್ತು ಬದಲಾಗುತ್ತದೆ. ಸರ್ಕಾರಗಳು ಬದಲಾಗುತ್ತವೆ. ಋತುಗಳು ಬದಲಾಗುತ್ತವೆ. ಮಿತ್ರರು ಬದಲಾಗುತ್ತಾರೆ. ನಮ್ಮ ಗ್ರಹಿಕೆಗಳು ಬದಲಾಗುತ್ತವೆ. ನಮ್ಮ ದೇಹಗಳು ಕೂಡ ಬದಲಾಗುತ್ತವೆ. ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದಂತೆ
ದೇಹಿನೋಽಸ್ಮಿಸ್ ಯಥಾ ದೇಹೇ ಕೌಮಾರಂ ಯೌವನಂ ಜರಾ |
ತಥಾ ದೇಹಾಂತರ ಪ್ರಾಪ್ತಿರ್ ಧೀರಸ್ ತತ್ರ ನ ಮುಹ್ಯತಿ ||
ಈ ದೇಹದಲ್ಲಿ ಅಡಗಿರುವ ಆತ್ಮವು ಬಾಲ್ಯದಿಂದ ಯೌವನ, ಹಾಗೂ ಮುಪ್ಪು ಬರುವವರೆಗೂ ಅದರಲ್ಲಿ ಸಂಚರಿಸಿ ಸಾವು ಬಂದಾಗ ಬೇರೆ ದೇಹವನ್ನು ಪಡೆಯುತ್ತದೆ. ಧೀರನು ಈ ಬದಲಾವಣೆಯಿಂದ ಹೆದರಿಕೊಳ್ಳುವುದಿಲ್ಲ. ಅಷ್ಟೇಕೆ, ಆಧುನಿಕ ವಿಜ್ಞಾನವೂ ಸಹ ಪ್ರತಿ ಏಳು ವರ್ಷಗಳಿಗೊಮ್ಮೆ ನಮ್ಮ ಪ್ರತಿಯೊಂದು ಜೀವಕೋಶವೂ ಸಹ ಬದಲಾಗುತ್ತದೆ ಎಂದು ಹೇಳಿದೆ. ನಾವು ಮಾತ್ರ ಅದೇ ವ್ಯಕ್ತಿಗಳಾಗಿ ಇರುತ್ತೇವೆ. ಆದರೆ ನಮ್ಮ ದೇಹದಲ್ಲಿನ ಕೋಶಗಳು ಬದಲಾಗುತ್ತಲೇ ಇರುತ್ತವೆ.
ಆದಾಗ್ಯೂ ಮಾನವನ ಮನಸ್ಸು ಈ ಸ್ವಾಭಾವಿಕವಾದ ಬದಲಾವಣೆಯನ್ನು ವಿರೋಧಿಸುತ್ತದೆ. ವೃತ್ತಿಪರ ನಿರ್ವಾಹಕರು ಈ ಬದಲಾವಣೆಯ ಪ್ರಕ್ರಿಯೆಯನ್ನು ಸಂಸ್ಥೆಗಳಲ್ಲಿನ ವಾತಾವರಣಗಳಲ್ಲಿ ಗಮನಿಸಿದ್ದಾರೆ. ಆದರೆ ಯಾವುದೇ ವೃತ್ತಿಪರ ನಿರ್ವಾಹಕನೂ, ದೇಹದಲ್ಲಿನ ಬದಲಾವಣೆಗೆ ನಮ್ಮಲ್ಲಿರುವ ಪ್ರತಿಭಟನೆಯನ್ನು ಉದ್ದೇಶಿಸುವ ರೀತಿಯನ್ನು ತೋರಿಸಿಕೊಟ್ಟಿಲ್ಲ.
ನಮಗೆ ಈ ಬದಲಾವಣೆಗಳು ಇಷ್ಟವೂ ಇಲ್ಲ, ಬೇಕೂ ಇಲ್ಲ ಆದರೆ ಅದು ನಮ್ಮ ಕೈಯಲ್ಲಿಲ್ಲ. ತಾರುಣ್ಯ ದೇಹ ಹೊಂದಿರುವವರನ್ನು ನಾವು ಇಷ್ಟಪಟ್ಟರೂ ಕೂಡ ಅದೂ ಶಾಶ್ವತವಲ್ಲ. ಕಾಲವು ಯೌವನವನ್ನು ಮುಪ್ಪಿನಕಡೆಗೆ ಕೊಂಡೊಯ್ಯುತ್ತದೆ. ಯಾರೊಬ್ಬರೂ ಯೌವನದಿಂದ ಮುಪ್ಪಿನಕಡೆಗೆ ಹೋಗುವುದನ್ನು ಇಷ್ಟಪಡುವುದಿಲ್ಲ. ಆದರೆ ಕಾಲದ ಗತಿ ಅದು.
ಅನಿವಾರ್ಯವಾಗಿ ಪ್ರತಿಯೊಬ್ಬರೂ ಕೊನೆಯ ಪರೀಕ್ಷೆಯಾದ ಸಾವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಬದಲಾವಣೆಯನ್ನಂತೂ ಯಾರೂ ಇಷ್ಟಪಡುವುದಿಲ್ಲ. ಯಾವುದೇ ವೈದ್ಯರಾಗಲೀ, ಮನೋವೈದ್ಯರಾಗಲೀ, ಆಡಳಿತಗಾರರಾಗಲೀ, ಇದಕ್ಕೆ ಪರಿಹಾರ ಕಂಡು ಹಿಡಿದಿಲ್ಲ. ಆದ್ದರಿಂದ ಈ ಸಮಸ್ಯೆಯನ್ನು ಮರೆತುಬಿಡುವುದೇ ಲೇಸೆಂದು ಆಧುನಿಕ ನಾಗರಿಕತೆಯು ಸುಲಭವಾಗಿ ಕೈ ತೊಳೆದುಕೊಂಡುಬಿಡುತ್ತದೆ.
ಬದಲಾವಣೆಗೆ ಮನುಷ್ಯನಲ್ಲಿರುವ ಪ್ರತಿಭಟನೆಯನ್ನು ಉದ್ದೇಶಿಸಲು ವೃತ್ತಿಪರ ನಿರ್ವಾಹಕರು ಮನಸ್ಸಿನ ಹಂತದಲ್ಲಿ ಪ್ರಯತ್ನಿಸುತ್ತಾರೆ. ಬದಲಾವಣೆಗೆ ಇರುವ ಪ್ರತಿಭಟನೆಯ ಮೂಲ ಇನ್ನೂ ಆಳವಾಗಿ ಉದ್ದೇಶಿಸಬೇಕೆಂದು ಈ ವೃತ್ತಿಪರ ನಿರ್ವಾಹಕರಿಗೆ ತಿಳಿದಿಲ್ಲ.
ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳುವಂತೆ
ನಾಸತೋ ವಿದ್ಯತೇ ಭಾವೋ ನ ಭಾವೋ ವಿದ್ಯತೇ ಸತಃ |
ಉಭಯೋರ್ ಅಪಿ ದೃಷ್ಟೋ ಅಂತಸ್ ತ್ವನಯೋಸ್ ತತ್ತ್ವದರ್ಶಿಭಿಃ ||

ಈ ಶ್ಲೋಕವು ಹಿಂದಿನ ಶ್ಲೋಕವನ್ನು ತರ್ಕದಲ್ಲಿ ಅನುಗತಿಸುತ್ತದೆ.
ದೇಹವು ಬಾಲ್ಯದಿಂದ ಯೌವನ, ಯೌವನದಿಂದ ವೃದ್ಧಾಪ್ಯಕ್ಕೆ ಮಾರ್ಪಡಿಸುತ್ತಿದ್ದರೂ ನಾವು ಅದೇ ವ್ಯಕ್ತಿಯಾಗಿ ಉಳಿಯುತ್ತೇವೆ ಎಂಬುದು – ಸ್ಪಷ್ಟವಾಗಿ ಹಿಂದಿನ ಶ್ಲೋಕದಿಂದ ತಿಳಿದುಬರುತ್ತದೆ. ಆದ್ದರಿಂದ ದೇಹದ ಪ್ರಕೃತಿಯೇ ಬದಲಾವಣೆಗೊಳ್ಳುವುದು, ಅಂದರೆ ದೇಹವು ತಾತ್ಕಾಲಿಕ.
ಆದರೆ ನಮ್ಮ ಅಥವಾ ಆತ್ಮದ ಪ್ರಕೃತಿ ಶಾಶ್ವತವಾಗಿರುವುದು. ಅಂದರೆ ನಾವು ಬದಲಾಗುವುದಿಲ್ಲ. ನಾವು ಆಧಾರಭೂತವಾಗಿ ಶಾಶ್ವತವಾಗಿರುವುದರಿಂದ ತಾತ್ಕಾಲಿಕ ಪರಿಸರದಲ್ಲಿ ಅಸ್ತಿತ್ವದಲ್ಲಿರುವುದು ಅಸಹಜವಾದುದು. ನಾವು ಈಗಿರುವ ಸನ್ನಿವೇಶದಲ್ಲಿ ಪ್ರತಿ ಕ್ಷಣವೂ ಸಾವು ನಮ್ಮ ಅಸ್ತಿತ್ವಕ್ಕೆ ಸವಾಲು ಹಾಕುತ್ತದೆ.
ಈ ಕಾರಣದಿಂದ ನಮ್ಮೆಲ್ಲರಿಗೂ ಸಾವೆಂದರೆ ಭಯ. ನಮ್ಮೆಲ್ಲರಿಗೂ ವೃದ್ಧಾಪ್ಯ ಇಷ್ಟವೇ ಇಲ್ಲ. ರೋಗಗ್ರಸ್ತ ವಾದಾಗಂತಲೂ ಕ್ಷೋಭೆಗೊಳ್ಳುತ್ತೇವೆ. ಪ್ರತಿಕ್ಷಣ ಹುಟ್ಟು ಸಾವು, ರೋಗ ಮತ್ತು ಮುಪ್ಪು ನಮ್ಮನ್ನು ಬೆದರಿಸುತ್ತದೆ. ನಾವು ಮನಸ್ಸನ್ನು ಎಷ್ಟೇ ಚುರುಕುಗೊಳಿಸಿದರೂ, ವಿಜ್ಞಾನ ಮತ್ತು ತಂತ್ರಶಾಸ್ತ್ರದಲ್ಲಿ ಮುಂದುವರಿದರೂ, ಮಾನವ ಸಮಾಜವು ಈ ಸಮಸ್ಯೆಗಳನ್ನು ಕಾಣಲೇಬೇಕು.
ಆಧುನಿಕ ನಾಗರಿಕತೆಯು ತನ್ನಲ್ಲಿ ಸಾವಿಗೆ ಉತ್ತರವಿಲ್ಲವೆಂದು ಒಪ್ಪಿಕೊಂಡಿದೆ. ಆದ್ದರಿಂದ ಯಾರೂ ಸಾವಿನ ಬಗ್ಗೆ ಮಾತೆತ್ತುವುದಿಲ್ಲ! ಯಾವುದೇ ವಿದ್ಯಾಸಂಸ್ಥೆಗಳಲ್ಲಿ ಸಾವು ಮತ್ತು ಆತ್ಮದ ಬಗ್ಗೆ ತಿಳಿಹೇಳುವ ಶಾಖೆಗಳಿಲ್ಲ. ಕೊನೆಯ ಬದಲಾವಣೆಯಾದ ಸಾವನ್ನು ಹೇಗೆ ಎದುರಿಸಬೇಕೆಂದು ಯಾವ ವೃತ್ತಿಪರ ನಿರ್ವಾಹಕರೂ ನಮಗೆ ಬೋಧಿಸುವುದಿಲ್ಲ.
ನಮ್ಮನ್ನು ಪ್ರತಿಕ್ಷಣವೂ ದಿಟ್ಟಿಸಿ ನೋಡುವ ಈ ಸತ್ಯಕ್ಕೆ ಯಾರೂ ಗಮನವನ್ನೇ ಕೊಡುವುದಿಲ್ಲ! ಪ್ರತಿ ದಿನವೂ ನಾವು ಒಂದಲ್ಲಾ ಒಂದು ಸಾವನ್ನು ನೋಡುತ್ತೇವೆ. ಸ್ನೇಹಿತರೋ, ಬಂಧು-ಬಳಗದವರೋ ಯಾರಾದರೊಬ್ಬರು ಸಾಯುತ್ತಲೇ ಇರುತ್ತಾರೆ! ಆದರೂ ನಮಗೆ ಸಾವು ಎಂಬ ಸತ್ಯವು ಗೋಚರವಾಗುತ್ತಿಲ್ಲ. ಅದಕ್ಕೆ ಪರಿಹಾರವನ್ನಂತೂ ಹುಡುಕುತ್ತಲೇ ಇಲ್ಲ.
ಈ ಜಗತ್ತಿನಲ್ಲಿ ಅತಿ ಆಶ್ಚರ್ಯದ ಸಂಗತಿ ಏನು? ಎಂದು ಒಮ್ಮೆ ಯಮರಾಜನು ಮಹಾರಾಜ ಯುಧಿಷ್ಠಿರನಿಗೆ ಪ್ರಶ್ನಿಸಿದನು. ಮಹಾರಾಜ ಯುಧಿಷ್ಠಿರನು ಹೀಗೆ ಉತ್ತರಿಸಿದನು –
ಅಹನಿ ಅಹನಿ ಭೂತಾನಿ ಗಚ್ಛಂತೀಹ ಯಮಾಲಯಂ |
ಶೇಶೌ ಸ್ಥಾವರಂ ಇಚ್ಛಂತಿ ಕಿಂ ಆಶ್ಚರ್ಯ೦ ಆತಃಪರಂ ||
“ಪ್ರತಿಕ್ಷಣವೂ ನೂರಾರು ಸಾವಿರಾರು ಜೀವಿಗಳು ಸಾಯುತ್ತಿರುತ್ತವೆ. ಆದರೂ ಮೂಢ ಮನುಷ್ಯ ತಾನು ಚಿರಂಜೀವಿಯೆಂದು ಸಾವನ್ನು ಎದುರಿಸಲು ಸಿದ್ಧನಾಗುವುದಿಲ್ಲ. ಇದೇ ಈ ಜಗತ್ತಿನ ಪರಮ ಆಶ್ಚರ್ಯದ ಸಂಗತಿ. ಐಹಿಕ ಪ್ರಕೃತಿಯಿಂದ ನಾವು ಸಂಪೂರ್ಣ ನಿಯಂತ್ರಿತರಾಗಿದ್ದೇವೆ. ಸಾವು ಖಚಿತ. ಆದರೂ ಈ ಸತ್ಯವನ್ನು ಪರಿಗಣಿಸದೆ ನಾವು ಜಂಭದಿಂದ ಮೆರೆಯುತ್ತೇವೆ.
ಈ ನಮ್ಮ ವರ್ತನೆಯು ಅಪಾಯದಲ್ಲಿ ಸಿಲುಕಿಕೊಂಡಿರುವ ಮೊಲದ ವರ್ತನೆಯಂತಿದೆ. ಸಾವು ತಲೆದೋರಿದಾಗ ಮೊಲವು ಕಣ್ಣುಗಳನ್ನು ಮುಚ್ಚಿಕೊಂಡುಬಿಡುತ್ತದೆ. ಕಣ್ಣುಮುಚ್ಚಿಕೊಂಡರೆ ಆಘಾತ ತಪ್ಪುತ್ತದೆಯೇ? ಹೀಗೆ ಜನರೂ ಕೂಡ ಈ ಸತ್ಯಗಳಿಂದ ಓಡಿಹೋಗುತ್ತಿದ್ದಾರೆ. ಅದರ ಬಗ್ಗೆ ಯೋಚಿಸದೇ ಹೋದರೆ ಅದು ತಮ್ಮನ್ನು ಕಾಡಲಾರದೆಂದೋ ಏನೋ!!

ಶ್ರೀಕೃಷ್ಣನು ಈ ವಿಷಯದ ಬಗ್ಗೆ ಭಗವದ್ಗೀತೆಯಲ್ಲಿ ಆಳವಾಗಿ ತಿಳಿಸಿದ್ದಾನೆ. ಕೊನೆಯ ಬದಲಾವಣೆಯಾದ ಸಾವನ್ನು ಎದುರಿಸುವ ತಂತ್ರವನ್ನು ಶ್ರೀಕೃಷ್ಣನು ನಮಗೆ ಕೊಟ್ಟಿದ್ದಾನೆ. ಬದಲಾವಣೆಯ ಫಲಿತಾಂಶ ತಿಳಿಯದೇ ಇರುವತನಕ ಜನರು ಬದಲಾವಣೆಯನ್ನು ವಿರೋಧಿಸುತ್ತಾರೆ. ಆದರೆ ಬದಲಾವಣೆಯ ಪರಿಣಾಮ ಗೊತ್ತಿದ್ದು ಅದು ಒಳ್ಳೆಯದೇ ಆಗಿದ್ದರೆ, ಅದನ್ನು ಸ್ವಾಗತಿಸುತ್ತಾರೆ.
ಇದು ಸಹಜ. ಆದ್ದರಿಂದ ಸಾವಿನ ಹೊತ್ತಿಗೆ ಏನು ಬದಲಾವಣೆ ಆಗುವುದು ಮತ್ತು ಅದರ ಪರಿಣಾಮವೇನೆ೦ದು ಶ್ರೀಕೃಷ್ಣನು ವಿವರಿಸಲು ಪ್ರಾರಂಭಿಸುತ್ತಾನೆ –
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋಽಪರಾಣಿ |
ತಥಾ ಶರೀರಾಣಿ ವಿಹಾಯ ಜೀರ್ಣಾನಿ ಅನ್ಯಾನಿ ಸಂಯಾತಿ ನವಾನಿ ದೇಹೀ ॥
”ಹಳೆಯ ವಸ್ತ್ರಗಳನ್ನು ಕಳಚಿ ಹೊಸ ಉಡುಪನ್ನು ನಾವು ಧರಿಸುವಂತೆ, ಹಳೆಯದಾದ, ಜೀರ್ಣವಾದ ದೇಹವನ್ನು ತ್ಯಜಿಸಿ ನವ ದೇಹವನ್ನು ಆತ್ಮವು ಸ್ವೀಕರಿಸುತ್ತದೆ.” (ಭ.ಗೀ, 2.22) ಸುಂದರವಾದ ಉದಾಹರಣೆಯ ಮೂಲಕ ಶ್ರೀಕೃಷ್ಣನು ಸಾವಿನ ಪ್ರಕ್ರಿಯೆಯನ್ನು ವಿವರಿಸುತ್ತಾನೆ. ಈ ದೇಹವು ಉಡುಪಿದ್ದ ಹಾಗೆ.
ಉಡುಪೆಂದರೆ ಆಗಾಗ ಬದಲಾಯಿಸುವ ಹೊರಗಿನ ಹೊದಿಕೆ. ವ್ಯಕ್ತಿಯು ತನ್ನ ಉಡುಪನ್ನು ಎಷ್ಟು ಬಾರಿ ಬದಲಾಯಿಸಿದರೂ ಅದೇ ವ್ಯಕ್ತಿಯಾಗಿ ಉಳಿಯುತ್ತಾನೆ. ಇದೇ ರೀತಿ, ಈ ದೇಹವು ನಾವು (ಆತ್ಮವು) ಉಟ್ಟುಕೊಂಡಿರುವ ವಸ್ತ್ರ. ಬಾಲ್ಯದಿಂದ ಯೌವನ ಮತ್ತು ವೃದ್ಧಾಪ್ಯಕ್ಕೆ ಹೋಗುತ್ತಾ ನಾವು ದೇಹಗಳನ್ನು ಬದಲಾಯಿಸುತ್ತೇವೆ.
ಆದರೆ ನಾವು ಅದೇ ವ್ಯಕ್ತಿಯಾಗಿ ಉಳಿಯುತ್ತೇವೆ. ಸಾವು ಕೂಡ ದೇಹವನ್ನು ಬದಲಾಯಿಸುವ ಪ್ರಕ್ರಿಯೆಂದು ಶ್ರೀಕೃಷ್ಣನು ಇಲ್ಲಿ ತಿಳಿಸುತ್ತಿದ್ದಾನೆ. ಜೀವಮಾನದಲ್ಲಿ ದೇಹವನ್ನು ಬದಲಾಯಿಸುವುದು ಗಮನಕ್ಕೆ ಬರದಿರಬಹುದು. ಆದರೆ ಸಾವು ಎನ್ನುವುದು ಥಟ್ಟನೆ ದೇಹವನ್ನು ಬದಲಾಯಿಸುವ ಪ್ರಕ್ರಿಯೆ. ಆದ್ದರಿಂದ ನಾವು ಬೆರಗಾಗಿ ಅದನ್ನು ಗಮನಿಸುತ್ತೇವೆ!
ಮುಂದುವರಿದು, ಶ್ರೀಕೃಷ್ಣನು ಸಾವಿನ ಪರಿಣಾಮದ ಬಗ್ಗೆ ವಿವರಿಸುತ್ತಾನೆ : ಮೇಲೆ ಹೇಳಿದಂತೆ, ಹಳೆಯ ವಸ್ತ್ರ ಕಳಚಿದನಂತರ ವ್ಯಕ್ತಿಯು ಹೊಸ ಉಡುಪನ್ನು ಧರಿಸುತ್ತಾನೆ. ಇದೇ ರೀತಿ ಸಾವಿನ ಅನಂತರ ನಾವು ನವ ದೇಹವನ್ನು ಸ್ವೀಕರಿಸುತ್ತೇವೆ. ಹೀಗೆ ಒಂದೇ ಶ್ಲೋಕದಲ್ಲಿ ಶ್ರೀಕೃಷ್ಣನು ಸಾವು ಮತ್ತು ಅದರ ಪರಿಣಾಮವನ್ನು ವಿವರಿಸಿದ್ದಾನೆ.
ಆದರೆ ಈ ವಿಷಯವು ಇಲ್ಲೇ ಕೊನೆಗೊಳ್ಳುವುದಿಲ್ಲ! ಸಹಜವಾಗಿ ಮುಂದಿನ ಪ್ರಶ್ನೆ – ನಮಗೆ ಯಾವ ತರಹದ ದೇಹವು ದೊರಕುತ್ತದೆ? ಯಾರು ಇದನ್ನು ನಿರ್ಧರಿಸುತ್ತಾರೆ? ಮತ್ತು ಈ ನಿರ್ಧಾರವನ್ನು ಕೈಗೊಳ್ಳುವ ಆಧಾರವೇನು?
ಶ್ರೀಕೃಷ್ಣನು ಹೀಗೆ ಉತ್ತರಿಸುತ್ತಾನೆ –
ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜತಿ ಅಂತೇ ಕಲೇವರಂ |
ತಂ ತಂ ಏವೈತಿ ಕೌಂತೇಯ ಸದಾ ತದ್ ಭಾವ ಭಾವಿತಃ ||

“ಸಾವಿನ ಸಮಯದಲ್ಲಿ ನಮ್ಮ ಭಾವನೆಗಳಿಗೆ ಅನುಸಾರವಾಗಿ ನಾವು ಮುಂದಿನ ದೇಹವನ್ನು ಪಡೆಯುವೆವು.” (ಭ.ಗೀ. 8.6)
ಸಾವಿನ ಸಮಯದಲ್ಲಿ ನಮ್ಮ ಭಾವನೆಗಳು, ನಮ್ಮ ಜೀವನದಲ್ಲಿ ಮಾಡಿರುವಂತಹ ಚಟುವಟಿಕೆಗಳ ಮೇಲೆ ಅವಲಂಬಿಸಿರುತ್ತದೆ. ಜೀವನದಲ್ಲಿ ಇಂದ್ರಿಯ ತೃಪ್ತಿಯಲ್ಲಿ ತೊಡಗಿದವನಿಗೆ ಸಾವಿನ ಸಮಯದಲ್ಲಿ ಅದರ ಬಗ್ಗೆಯೇ ಯೋಚನೆ ಬರುತ್ತದೆ. ಅದಕ್ಕೆ ತಕ್ಕ ನವ ಶರೀರವನ್ನು ಅವನಿಗೆ ಕೊಡಲಾಗುತ್ತದೆ.
ಹೀಗೆ ಅವನಿಗೆ ಚಿಕ್ಕ ಇಚ್ಛೆಗಳನ್ನು ಸಂಪೂರ್ಣವಾಗಿ ತೀರಿಸಲು ಅವಕಾಶ ಸಿಕ್ಕುತ್ತದೆ. ಉದಾಹರಣೆಗೆ, ಮಾಂಸಾಹಾರದ ಚಟ ಹಿಡಿದವನಿಗೆ ಸಾವಿನ ಸಮಯದಲ್ಲಿ ಅದೇ ಭಾವನೆಗಳು ತುಂಬಿರುತ್ತವೆ. ಆದ್ದರಿಂದ ಮಾಂಸಾಹಾರಿಯಾದ ಸಿಂಹದ ಅಥವಾ ಹುಲಿಯ ದೇಹವನ್ನು ಆತನಿಗೆ ಕೊಡಲಾಗುತ್ತದೆ.
ಈ ರೀತಿ ಆತನಿಗೆ ಮಾಂಸವನ್ನು ತಿನ್ನಲು ಮಾನವ ಶರೀರದಲ್ಲಿ ಸಿಗುವುದಕ್ಕಿಂತ ಇನ್ನು ಹೆಚ್ಚು ಅನುಕೂಲಗಳು ಸಿಗುತ್ತವೆ. ಶ್ರೀಲ ಪ್ರಭುಪಾದರು ತಮ್ಮ ಸ್ನೇಹಿತನೊಬ್ಬನ ಬಗ್ಗೆ ಉದಾಹರಣೆ ಕೊಡುತ್ತಾರೆ. ಅವರ ಸ್ನೇಹಿತ ವ್ಯಾಪಾರಿಯಾಗಿದ್ದರು. ಅವನು ಸಾವಿನ ಮಂಚದಲ್ಲಿದ್ದಾಗ ವೈದ್ಯರು ಆತನಿಗೆ ಇನ್ನು ಕೆಲವೇ ದಿನಗಳು ಬದುಕಿರುತ್ತಾನೆಂದು ಹೇಳಿದರು.
ವ್ಯಾಪಾರದಲ್ಲಿ ಹಣವನ್ನು ಹಾಕಿದ್ದೂ ಅದು ಫಲಿಸುವ ದಿನಗಳನ್ನು ತಾನು ಕಾಣಬೇಕೆಂದೂ ಇನ್ನೂ ಕೆಲವು ತಿಂಗಳಾದರೂ ತನ್ನನ್ನು ಬದುಕಿಸಿರಬೇಕೆಂದು ವ್ಯಾಪಾರಿಯು ವೈದ್ಯರ ಬಳಿ ಕಳಕಳಿಯಿಂದ ಬೇಡಿಕೊಂಡನು. ಈ ವ್ಯಾಪಾರದಿಂದ ಬರುವ ಲಾಭದಿಂದ ಉಂಟಾಗುವ ತನ್ನ ಕುಟುಂಬದ ಸಮೃದ್ಧತೆಯನ್ನು ತಾನು ಕಾಣಬಹುದೆಂಬ ಆಸೆಯನ್ನು ವ್ಯಕ್ತಪಡಿಸಿದನು.
ಈ ವ್ಯಾಪಾರಿಯು ಜೀವಮಾನವಿಡೀ ತನ್ನ ಕುಟುಂಬಕ್ಕಾಗಿಯೇ ದುಡಿಯುತ್ತಿದ್ದು ವ್ಯಾಪಾರವೇ ಅವನ ಜೀವವಾಗಿತ್ತು. ಆದ್ದರಿಂದ ಮೃತ್ಯುವು ಸನಿಹ ಬಂದಾಗ, ವ್ಯಾಪಾರ ಮತ್ತು ಕುಟುಂಬದ ಹೊರತಾಗಿ ಬೇರೇನೂ ಯೋಚನೆ ಅವನಿಗೆ ಬಂದಿಲ್ಲ. ಈ ಉದಾಹರಣೆಯಿಂದ ನಾವು ಕಲಿಯಬೇಕಾದ್ದೇನೆಂದರೆ, ಜೀವನವಿಡೀ ಮಾಡಿದ ಕೆಲಸಗಳಿಂದ ಸಾವಿನ ಸಮಯದಲ್ಲಿ ನಮ್ಮ ಭಾವನೆಗಳು ರೂಪಿತಗೊಳ್ಳುತ್ತವೆ. ಹೀಗೆ ನಾವು ಜನನ ಮತ್ತು ಮರಣದ ಚಕ್ರದಲ್ಲಿ ಸಿಲುಕಿಕೊಂಡಿದ್ದೇವೆ.
ಜಾತಸ್ಯ ಹಿ ಧ್ರುವೋ ಮೃತ್ಯುರ್ ಧ್ರುವಂ ಜನ್ಮ ಮೃತಸ್ಯ ಚ |
ತಸ್ಮಾತ್ ಅಪರಿಹಾರ್ಯೇ ಅರ್ಥೇ ನ ತ್ತ್ವಂ ಶೋಚಿತುಂ ಅರ್ಹಸಿ ||
“ಜನ್ಮತಾಳಿರುವವನಿಗೆ ಮೃತ್ಯು ಖಚಿತ, ಮೃತ್ಯುವಿನ ಅನಂತರ ಜನ್ಮ ಖಚಿತ. ಆದ್ದರಿಂದ ಅನಿವಾರ್ಯವಾದ ಧರ್ಮಾಚರಣೆಯಲ್ಲಿ ನೀನು ಶೋಕಿಸಬೇಡ.” ಜನನ ಮತ್ತು ಮರಣ ದುಷ್ಟರ ಚಕ್ರ. ನಾವು ಜನ್ಮವೆತ್ತಿದ ಮೇಲೆ ಚಟುವಟಿಕೆಗಳಲ್ಲಿ ತೊಡಗದೆ ಇರುವುದು ಸಾಧ್ಯವಿಲ್ಲ. ಹೀಗೆ ಚಟುವಟಿಕೆಗಳಲ್ಲಿ ತೊಡಗಿದ ಮೇಲೆ ನಮ್ಮ ಮುಂದಿನ ದೇಹವು ನಿರ್ಧರಿಸಲಾಗುತ್ತದೆ. ಹೀಗೆ ಪುನಃ ನಾವು ಜನ್ಮ ಮೃತ್ಯು ಜರಾ ವ್ಯಾಧಿಗಳನ್ನು ಎದುರಿಸಬೇಕಾಗುತ್ತದೆ.
ಶ್ರೀಕೃಷ್ಣನು ಈ ರೀತಿಯಲ್ಲಿ ಸಾವನ್ನು ವಿವರಿಸಿದ್ದಾನೆ. ಇದಕ್ಕೆ ಪರಿಹಾರವೇನು? ಹೇಗೆ ಜನ್ಮ-ಮೃತ್ಯು ಚಕ್ರವನ್ನು ಕೊನೆಗೊಳಿಸುವುದೆಂಬುದು ನಮಗೆ ಬರುವ ಮುಂದಿನ ಪ್ರಶ್ನೆ. ಇದಕ್ಕೆ ಉತ್ತರವಾಗಿ ಶ್ರೀಕೃಷ್ಣನು ಹೇಳುತ್ತಾನೆ –
ತಸ್ಮಾತ್ ಸರ್ವೇಷು ಕಾಲೇಷು ಮಾಂ ಅನುಸ್ಮರ ಯುದ್ಧ್ಯ ಚ |
ಮಯ್ಯರ್ಪಿತ ಮನೋ ಬುದ್ಧಿರ್ ಮಾಂ ಏವೈಷ್ಯಸಿ ಅಸಂಶಯಃ ||
“ಆದ್ದರಿಂದ ಓ ಅರ್ಜುನ! ನೀನು ನನ್ನನ್ನೇ ಯಾವಾಗಲೂ ಸ್ಮರಿಸುತ್ತಾ ನಿನ್ನ ನಿಯತ ಕ್ಷತ್ರಿಯ ಕರ್ಮವನ್ನು ಆಚರಿಸು, ನಿನ್ನ ಚಟುವಟಿಕೆಗಳೆಲ್ಲಾ ನನಗೆ ಅರ್ಪಿಸುತ್ತಾ ಮನಸ್ಸು ಮತ್ತು ಬುದ್ಧಿಯನ್ನು ನನ್ನಲ್ಲಿ ನಲೆಗೊಳಿಸು. ಆಗ ನೀನು ನನ್ನನ್ನು ಪಡೆಯುವುದರಲ್ಲಿ ಸಂಶಯವಿಲ್ಲ.” ಸಾವಿನ ಸಮಯದಲ್ಲಿ ನಮ್ಮ ಭಾವನೆಗಳಿಗೆ ತಕ್ಕನಾದ ದೇಹವನ್ನು ನಮಗೆ ನೀಡಲಾಗುತ್ತದೆ.
ಆದ್ದರಿಂದ ಸಾವಿನ ಸಮಯದಲ್ಲಿ ಕೃಷ್ಣನನ್ನು ನಾವು ನೆನೆದರೆ ನಾವು ಅವನ ದೇಹಕ್ಕೆ ಸದೃಶವಾದ ದೇಹವನ್ನು ಪಡೆಯುತ್ತೇವೆ. ಶ್ರೀಕೃಷ್ಣನು ದೇವೋತ್ತಮ ಪರಮ ಪುರುಷನಾದ್ದರಿಂದ, ಅವನ ದೇಹವು ಸಂಪೂರ್ಣವಾಗಿ ಐಹಿಕ ಗುಣಗಳಿಗೆ ಅತೀತವಾದ ಆಧ್ಯಾತ್ಮಿಕವಾದದ್ದು. ಆದ್ದರಿಂದ ನಾವೂ ಕೂಡ ಐಹಿಕ ಪ್ರಕೃತಿಗೆ ಅತೀತವಾದ ದೇಹವನ್ನು ಪಡೆಯುವೆವು. ಹೀಗೆ ನಾವು ಜನ್ಮ ಮೃತ್ಯು, ಜರಾ ಮತ್ತು ವ್ಯಾಧಿಗಳ ಚಕ್ರದಿಂದ ಮುಕ್ತರಾಗುತ್ತೇವೆ.
ಸಾವಿನ ಸಮಯದಲ್ಲಿ ಕೃಷ್ಣನನ್ನು ನೆನೆಯಬೇಕಾದರೆ ನಮ್ಮ ಜೀವನದ ಚಟುವಟಿಕೆಗಳೆಲ್ಲಾ ಕೃಷ್ಣನ ಮೇಲೆ ಕೇಂದ್ರೀಕೃತವಾಗಿರಬೇಕು. ಆದ್ದರಿಂದ ಶ್ರೀಕೃಷ್ಣನು ಅವನನ್ನೇ ಸದಾ ನೆನೆಯಲು ಬೋಧಿಸುತ್ತಾನೆ – ತಸ್ಮಾತ್ ಸರ್ವೇಷು ಮಾಂ ಅನುಸ್ಮರ – ಹೀಗೆ ಕೃಷ್ಣನು ಸಾವಿನ ಪ್ರಕ್ರಿಯೆಯ ಬಗ್ಗೆ ಅದರ ಪರಿಣಾಮ ಮತ್ತು ಅದನ್ನು ಎದುರಿಸುವ ವಿಧಾನವನ್ನು ವಿವರಿಸಿದ್ದಾನೆ. ಶ್ರೀಕೃಷ್ಣನ ನಾಮ ಅವನಿಂದ ಬೇರೆ ಅಲ್ಲ. ಆದ್ದರಿಂದ ಕೃಷ್ಣನನ್ನು ನೆನೆಯುವುದೆಂದರೆ ಅವನ ನಾಮಸ್ಮರಣೆ ಮಾಡುವುದು ಎಂದರ್ಥ.
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಇದೊಂದೇ ಜನ್ಮ ಮೃತ್ಯು ಜರಾ ವ್ಯಾಧಿಗೆ ಪರಿಹಾರ. ಈ ಕಷ್ಟಗಳನ್ನು ನಾವು ಎದುರಿಸಬೇಕೆಂದರೆ ಕೃಷ್ಣನ ನಾಮಸ್ಮರಣೆಯೊಂದೇ ಮಾರ್ಗ. ಈ ನಾಮಸ್ಮರಣೆಯನ್ನು ಸದ್ಗುರುವಿನ ಆಶ್ರಯದಲ್ಲಿ ಮಾಡಬೇಕೆ ಹೊರತು ನಮಗೆ ಇಷ್ಟಬಂದಂತಲ್ಲ. ನಮಗೆಲ್ಲರಿಗೂ ಸದ್ಗುರುಗಳಾದ ಶ್ರೀಲ ಪ್ರಭುಪಾದರು ದಿನನಿತ್ಯವೂ ಕನಿಷ್ಠಪಕ್ಷ ಹದಿನಾರು ಮಾಲೆ ಹರೇಕೃಷ್ಣ ಮಹಾಮಂತ್ರ ಜಪ ಮಾಡಬೇಕೆಂದು ಆದೇಶಿಸಿದ್ದಾರೆ. ನಾವು ನಿಜವಾಗಿಯೂ ಸಾವನ್ನು ಜಯಿಸಬೇಕೆಂದಿದ್ದರೆ ಶ್ರೀಲ ಪ್ರಭುಪಾದರ ಈ ಆದೇಶವನ್ನು ನಮ್ಮ ಜೀವನವೆಂದು






Leave a Reply