ಒಬ್ಬ ವ್ಯಕ್ತಿ ಸ್ನೇಹಿತನ ಮನೆಗೆ ಭೇಟಿ ನೀಡಿದಾಗ, ಸ್ನೇಹಿತ ಅವನನ್ನು ಪ್ರೀತ್ಯಾದರಗಳಿಂದ ಸ್ವಾಗತಿಸುತ್ತಾನೆ. ಉತ್ತಮವಾದ ಸುಖಾಸನವನ್ನು ನೀಡಿ ಉಪಚರಿಸುತ್ತಾನೆ. ಆ ವ್ಯಕ್ತಿ ಗೆಳೆಯನ ಆದರವನ್ನು ಸ್ವೀಕರಿಸಿ ಅವನೊಟ್ಟಿಗೆ ಯಾವುದೇ ಭೀತಿ ಇಲ್ಲದೆ ಕೂಡಬಹುದು. ಆದರೆ, ಹಾಗೆ ಆದರವನ್ನು ಸ್ವೀಕರಿಸಿದ ಮಾತ್ರಕ್ಕೆ ತಾನು ಕುಳಿತಿರುವ ಆ ಕೊಠಡಿ ತನ್ನ ಆಸ್ತಿ ಎಂದು ಭಾವಿಸಲಾದೀತೇ? ಅವನಿಗೆ ಹುಚ್ಚು ಹಿಡಿದಿದ್ದರೆ ಮಾತ್ರ ಆ ರೀತಿ ಚಿಂತಿಸಲು ಸಾಧ್ಯ.

ತಾನು ಕುಳಿತಿರುವ ಕೊಠಡಿಯಲ್ಲಿನ ಸಾಮಾನು, ಸರಂಜಾಮುಗಳು ತನ್ನ ಸ್ವಂತದ್ದಲ್ಲ ಎನ್ನುವ ವಸ್ತುಸ್ಥಿತಿ ಜ್ಞಾನ ಅವನಲ್ಲಿ ಇದ್ದರೂ ಕೂಡ ಅದರಿಂದ ಅವನ ಭದ್ರತೆಯ ಮೇಲೆ ಬೀರುವ ಪರಿಣಾಮ ಅತ್ಯಲ್ಪವಾದದ್ದು. ಈ ಸೌಕರ್ಯಗಳ ಕುರಿತಾದ ಶುದ್ಧ ಪ್ರಜ್ಞೆ ಹಾಗೂ ಆ ಕೊಠಡಿಯ ಮಾಲೀಕನಾದ ಸ್ನೇಹಿತನಿಂದಾಗಿ ಆ ವಾತಾವರಣ ವ್ಯಕ್ತಿಗೆ ಹಿತವನ್ನು ಉಂಟು ಮಾಡುತ್ತದೆ.
ಆದರೆ ಆ ವ್ಯಕ್ತಿ ಸ್ವಲ್ಪ ಸಮಯದ ಬಳಿಕ, ಸ್ನೇಹಿತ ನನಗೆ ಕೊಠಡಿ ಪ್ರವೇಶಿಸಲು ಅನುಮತಿ ನೀಡಿದ್ದಾನೆ, ಹಾಗಾಗಿ ಈ ಕೊಠಡಿಯ ಮಾಲೀಕ ನಾನೇ ಎಂಬ ಹುಚ್ಚು ಆಲೋಚನೆಯಲ್ಲಿ ತೊಡಗಿದರೆ ಅವನ ಅಧಿಕಾರದ ಬೆಲೆ ಏನು? ಬಲವಂತವಾಗಿ ಒಳ ನುಗ್ಗಿ ಕಾನೂನು ಬಾಹಿರವಾಗಿ ಕೊಠಡಿಯನ್ನು ಆಕ್ರಮಿಸಿಕೊಳ್ಳುವ ಈ ದುರಾಸೆಯ ಪರಿಣಾಮ ಪೊಲೀಸರ ಪ್ರವೇಶಕ್ಕೆ ನಾಂದಿಯಾಗುತ್ತದೆ.
ನಿಜವಾದ ಮಾಲೀಕನಿಂದ ಅಂಥ ಕಾರ್ಯ ಉಂಟಾಗುತ್ತದೆ. ಇದು ಸ್ನೇಹ ಸಂಬಂಧವನ್ನು ಹಾಳುಗೆಡವುತ್ತದೆ. ಆ ಕೊಠಡಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ವಿಫಲನಾದ ಆ ವ್ಯಕ್ತಿ ಹೇವರಿಕೆಯಿಂದ ಈ ಮಾಲೀಕತ್ವವನ್ನು ನಾನು ತ್ಯಜಿಸಿದ್ದೇನೆ ಎಂಬ ತಲೆ ಹರಟೆ ಮಾತುಗಳನ್ನಾಡಿ ಈ ಕೊಠಡಿಯನ್ನು ತೊರೆಯಬಹುದು.
ಈ ಮಾತುಗಳನ್ನು ಕೇಳಿ ಮಾಲೀಕನಿಗೆ ನಗು ಬರುವುದು ಸಹಜ. ಈ ಮಾಲೀಕತ್ವವನ್ನು ಆ ಆಗುಂತಕನಿಗೆ ಮುಖ್ಯವಾಗಿ ಕೊಟ್ಟವರು ಯಾರು ಎಂಬ ಆಶ್ಚರ್ಯ ಮಿಶ್ರಿತ ನಗು ಆ ಮಾಲೀಕನ ಮುಖದಲ್ಲಿ ಮೂಡುತ್ತದೆ.
ಪ್ರತಿಯೊಂದು ಬದ್ಧಾತ್ಮದ ಪರಿಸ್ಥಿತಿಯೂ ಇದೇ ಆಗಿದೆ. ಒಂದು ನಿರ್ದಿಷ್ಟ ಜೀವಿತಾವಧಿಯ ಚಕ್ರದ ಹುಟ್ಟು ಹಾಗೂ ಸಾವಿನಲ್ಲಿ ಬದ್ಧಾತ್ಮವು ಹೊಂದುವ ಸ್ಥಾನದ ಸ್ಥಿತಿ ಇದಕ್ಕಿಂತ ಭಿನ್ನವಾಗಿರುವುದಿಲ್ಲ. ಪ್ರತಿಯೊಂದು ಜೀವವೂ ತಾನು ತೆತ್ತ ಬೆಲೆಗೆ ಸಮಾನವಾದ ವಸ್ತುವನ್ನು ಬದಲಿಸುತ್ತಿರುತ್ತದೆ. ಈ ಐಹಿಕ ನಿಸರ್ಗವೆಂಬ ಅಂಗಡಿಯಲ್ಲಿ 84,00,000 ಬಗೆಯ ವಸ್ತ್ರಗಳಿವೆ. ಜೀವಿಗೆ ಇದರಲ್ಲಿ ಯಾವುದೊಂದು ವಸ್ತ್ರವನ್ನು ತಾನು ಭರಿಸಬಹುದಾದ ಮೊತ್ತಕ್ಕೆ ಸಮನಾಗಿ ಧರಿಸುವುದಕ್ಕೆ ಅವಕಾಶವಿದೆ.
ಉಳಿದೆಲ್ಲ ವಸ್ತ್ರಗಳನ್ನು ಪಕ್ಕಕ್ಕೆ ಸರಿಸಿ ಮನುಷ್ಯ ದೇಹವೆಂಬ ವಸ್ತ್ರವನ್ನು ಗಣನೆಗೆ ತೆಗೆದುಕೊಳ್ಳೋಣ. ಮನುಷ್ಯ ದೇಹದ ವಸ್ತ್ರದಲ್ಲಿ ಜೀವವು ಮೃಗಗಳ ವಸ್ತ್ರದಲ್ಲಿರುವುದಕ್ಕಿಂತಲೂ ಹೆಚ್ಚು ಒಗಟಾಗಿ ಇರುತ್ತದೆ. ಆ ನಿರ್ದಿಷ್ಟ ವಸ್ತ್ರವೇ ಇದಕ್ಕೆ ಕಾರಣವಾಗಿದೆ. ಮನುಷ್ಯ ದೇಹದ ಈ ವಸ್ತ್ರವು ಉಳಿದ 84,00,000 ಬಗೆ ಅಥವಾ ತಳಿಗಳಲ್ಲಿಯೂ ಪ್ರದರ್ಶಿತವಾಗುತ್ತದೆ.

ಮನುಷ್ಯತ್ವದ ಬೇರೆ ಬೇರೆ ವಸ್ತ್ರಗಳೂ ಹಲವು ಇವೆ. ಅವುಗಳಲ್ಲಿ ಬಹಳಷ್ಟು ಕಾಡು ಮೃಗಗಳಿಗಿಂತ ಹೆಚ್ಚೇನೂ ನಾಗರಿಕತೆ ಗಳಿಸಿಲ್ಲ. ರಾಷ್ಟ್ರೀಯ ಭಾವನೆಯ ನಾಗರಿಕ ರೂಪದಲ್ಲಿ ಅವು ತುಂಬ ಕಡಮೆ ಮನೋಹಿತವನ್ನು ಹೊಂದಿವೆ ಎಂದರ್ಥ.
ವಿವಿಧ ವಸ್ತ್ರಗಳನ್ನು ಪ್ರದರ್ಶಿಸುವ 84,00,000 ಜೀವರಾಶಿಗಳಲ್ಲಿ ಅತ್ಯಂತ ಉನ್ನತವಾದ ನಾಗರಿಕತೆಯನ್ನು ಹೊಂದಿರುವ ಮಾನವರಲ್ಲಿ ಮಾತ್ರ ರಾಷ್ಟ್ರೀಯ ಭಾವನೆಯ ಪ್ರಜ್ಞೆಯನ್ನು ಕಾಣಬಹುದಾಗಿದೆ. ಈ ರಾಷ್ಟ್ರೀಯ ಭಾವನೆಯೇ ವಿಶ್ವದ ವಿವಿಧ ರಾಷ್ಟ್ರಗಳ ನಿರ್ಮಾಣಕ್ಕೆ ಕಾರಣವಾಗಿದೆ.
ಈ ರಾಷ್ಟ್ರಗಳು ಪ್ರತಿಯೊಬ್ಬನನ್ನು ಶುದ್ಧ ಪ್ರಜ್ಞೆಗೆ ಬದಲಾಗಿ ಅಶುದ್ಧವಾದ ರಾಷ್ಟ್ರೀಯತೆಯ ಪ್ರಜ್ಞೆ ಮುನ್ನಡೆಸುತ್ತಿದ್ದು ತಮ್ಮ ಸ್ಥಾನದ ಭದ್ರತೆಗಾಗಿ ಪ್ರತಿಯೊಬ್ಬರೂ ಇನ್ನೊಬ್ಬರೊಂದಿಗೆ ಒಪ್ಪಂದ ಹಾಗೂ ಕೂಟಗಳ ರಚನೆಯಲ್ಲಿ ನಿರತರಾಗಿದ್ದಾರೆ. ರಾಷ್ಟ್ರೀಯತೆಯ ಅಶುದ್ಧ ಪ್ರಜ್ಞೆಯ ವಿಶ್ವದ ರಾಷ್ಟ್ರಗಳ ಮುಖ್ಯಸ್ಥರನ್ನು ಪ್ರತಿಯೊಂದು ರಾಷ್ಟ್ರದ ಹಿತಾಸಕ್ತಿಗಾಗಿ ವಿಶ್ವಾಸಾರ್ಹತೆಗಳಿಸಲು ಅವರನ್ನು ಕಾರ್ಯಪ್ರವೃತ್ತಗೊಳಿಸಿದೆ.
ಅವರೀಗ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ರಚಿಸಿದ್ದು ಸರಿಯಾದ ಹೊಂದಾಣಿಕೆಗಾಗಿ ವ್ಯರ್ಥ ಪ್ರಯತ್ನ ನಡೆಸಿದ್ದಾರೆ. ಪ್ರತಿಯೊಂದು ರಾಷ್ಟ್ರದ ಅಶುದ್ಧ ಪ್ರಜ್ಞೆಯಿಂದಾಗಿಯೇ ಒಂದು ನಿರ್ದಿಷ್ಟ ಭದ್ರತಾ ಕೇಂದ್ರಕ್ಕೆ ಬರುವಲ್ಲಿ ವಿಫಲರಾಗಿರುವುದು. ಹಾಗಾಗಿ, ಇಂದು ಅತ್ಯಂತ ಅಗತ್ಯವಾಗಿ ಬೇಕಾಗಿರುವುದು ಶುದ್ಧ ಪ್ರಜ್ಞೆಯನ್ನು ಜಾಗೃತಗೊಳಿಸುವ ಕೆಲಸ.
ಪರಮ ಪದವನ್ನು ಕಾಣುವುದಕ್ಕಾಗಿ ಅಧ್ಯಾತ್ಮ ಶಿಕ್ಷಣದ ಅಧ್ಯಯನ ಹಾಗೂ ಪ್ರಚಾರ ಇದಕ್ಕೆ ಅಗತ್ಯವಾಗಬೇಕು. ಈ ಕೆಲಸವನ್ನು ಭಗವಂತನು ಶ್ರೀ ಚೈತನ್ಯ ಮಹಾಪ್ರಭು ರೂಪದಲ್ಲಿ ತಾನೇ ನಿರ್ವಹಿಸಿದ್ದಾನೆ.
ಶುದ್ಧ ಪ್ರಜ್ಞೆ ಎಂದರೆ ಏನು? ಶುದ್ಧ ಪ್ರಜ್ಞೆ ಕುರಿತು ವಿಶದವಾದ ವ್ಯಾಖ್ಯೆ ಈಶೋಪನಿಷತ್‌ನಲ್ಲಿ ನಮಗೆ ಸಿಗುತ್ತದೆ. ಅದು ಹೀಗಿದೆ :

ಈ ಐಹಿಕ ಅಥವಾ ಭೌತಿಕ ಜಗತ್ತಿನಲ್ಲಿ ನಾವು ನೋಡುವ ಪ್ರತಿಯೊಂದೂ ಸರ್ವಶ್ರೇಷ್ಠನಾದ ಭಗವಂತನ ಪ್ರಭಾವ ಕ್ಷೇತ್ರಕ್ಕೆ ಸೇರಿದ್ದು. ಹಾಗಾಗಿ ಅವನು ಕೊಟ್ಟಿದ್ದನ್ನು ಮಾತ್ರ ನೀವು ಅನುಭವಿಸಬಹುದು, ಆನ೦ದಿಸಬಹುದು. ಆದರೆ ಬೇರೆಯವರ ಆಸ್ತಿಯನ್ನು ನೀವೆಂದೂ ಸ್ವೀಕರಿಸಬಾರದು.
ಮೇಲೆ ಹೆಸರಿಸಿದ 84 ಲಕ್ಷ ಬಗೆಯ ವಸ್ತ್ರಗಳನ್ನು ಧರಿಸಿರುವ ಜೀವಿಗಳು ಭಗವಂತನ ಪ್ರಭಾವ ಕ್ಷೇತ್ರವನ್ನು ಪ್ರವೇಶಿಸಬಹುದು. ಭಗವಂತನ ದೂತ ಎನಿಸಿರುವ ಐಹಿಕ ನಿಸರ್ಗವು ಆ ಪ್ರಭಾವ ಕ್ಷೇತ್ರದಲ್ಲಿ ಬದುಕುವುದಕ್ಕೆ ಅವನಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಜೀವನಾಧಾರ ಆವಶ್ಯಕತೆಗಳಾದ ಗಾಳಿ, ಬೆಳಕು, ನೆರಳು, ಆಹಾರ, ನೀರು, ವಸತಿ ಮೊದಲಾದ ಎಲ್ಲ ಸೌಲಭ್ಯಗಳನ್ನು ಜ್ಞಾನಾರ್ಜನೆಗಾಗಿ ಒದಗಿಸಿದ್ದಾನೆ.
ಕೆಳ ಹಂತದ ಜೀವಿಗಳಾದ ಜಲಚರ, ಗಿಡ, ಮರ, ಸರೀಸೃಪ, ಹಕ್ಕಿ, ಪಕ್ಷಿಗಳು, ಕಾಡು ಮೃಗಗಳು ಹಾಗೂ ಕಾಡು ಮಾನವರು ಕಾಡಿನಲ್ಲಿ ಜೀವಿಸುತ್ತಾ ನಿಸರ್ಗದ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ವಿಕಾಸವಾದದ ಹಂತ ಹಂತದ ಬೆಳವಣಿಗೆಯಲ್ಲಿ ತೊಡಗಿವೆ. ಜಲಚರಗಳಿಂದ ಸಸ್ಯ ಜೀವನ, ಸಸ್ಯ ಜೀವನದಿಂದ ಸರೀಸೃಪ, ಸರೀಸೃಪದಿಂದ ಪಕ್ಷಿ ಪಕ್ಷಿಯಿಂದ ಕಾಡು ಮೃಗದವರೆಗೆ ಈ ಕಾಡು ಮೃಗಗಳ ಬದುಕು ವಿಕಾಸಹೊಂದಿ ಅಲ್ಲಿಂದ ಮಾನವ ರೂಪತಾಳಿದೆ.
ಐಹಿಕ ನಿಸರ್ಗದ ಅತಿಥಿಗಳಾಗಿರುವ ಮಾನವರಲ್ಲದ ಮೃಗೀಯ ಜೀವಗಳು ಸಾಂಪ್ರದಾಯಿಕ ನಾಗರಿಕತೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಮತ್ತು ಪ್ರಕೃತಿಯ ಉತ್ಪನ್ನಗಳನ್ನು ಅಂದರೆ ನೈಸರ್ಗಿಕ ಸಂಪತ್ತನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ. ಆದರೆ, ನಾಗರಿಕ ಮಾನವ ತನ್ನ ವಿಕಸಿತ ಪ್ರಜ್ಞೆಯಿಂದಾಗಿ ನಿಸರ್ಗದ ನಿಯಮಗಳನ್ನು ದುರುಪಯೋಗಪಡಿಸಿಕೊಳ್ಳುವುದರ ಜೊತೆಗೆ ತನ್ನ ದೇಶ, ಊರು ಮೊದಲಾದವುಗಳ ಒಡೆತನ ತನ್ನದೇ ಎಂಬ ಭಾವನೆ ಹೊಂದಿರುತ್ತಾನೆ.
ಅದರಿಂದಾಗಿ ಅವನು ಉಪಾಧಿಗಳೆಂಬ ಬಲೆಯಲ್ಲಿ ಸಿಕ್ಕಿ ಬೀಳುತ್ತಾನೆ. ನಾಗರಿಕ ಮಾನವ ಈ ರೀತಿಯಾಗಿ ಅಭಿವೃದ್ಧಿ ನಾಗರಿಕತೆ ಹೆಸರಿನಲ್ಲಿ ತಪ್ಪುಗಳನ್ನು ಎಸಗುತ್ತಾನೆ. ಈ ನಾಗರಿಕ ರಾಷ್ಟ್ರಗಳು ತಾವು ಬದುಕುತ್ತಿರುವ ಈ ನೆಲದ ಒಡೆತನ ಸರ್ವಶ್ರೇಷ್ಠನಾದ ಭಗವಂತನಿಗೆ ಸೇರಿದ್ದು ಎನ್ನುವುದನ್ನು ಸಂಪೂರ್ಣವಾಗಿ ಮರೆಯುತ್ತವೆ. ಸರ್ವಶ್ರೇಷ್ಠನಾದ ಭಗವಂತನೇ ಎಲ್ಲ ಲೋಕಗಳ ಅಥವಾ ಗ್ರಹಗಳಿಗೆ ಒಡೆಯ. ಭಗವದ್ಗೀತೆಯಲ್ಲಿ ಕೃಷ್ಣ ಹೀಗೆ ಹೇಳುತ್ತಾನೆ.
ಎಲ್ಲ ತ್ಯಾಗ ಹಾಗೂ ಪ್ರಾಯಶ್ಚಿತ್ತಗಳ ಫಲಾನುಭವಿ ನಾನು, ಹಾಗೂ ಎಲ್ಲ ಗ್ರಹಗಳಿಗೂ, ವಿಶ್ವಕ್ಕೂ ನಾನೇ ಸರ್ವ ಶ್ರೇಷ್ಠ ಭಗವಂತ. ಎಲ್ಲ ಜೀವಿಗಳಿಗೂ ನಾನು ದಯಾಮಯನಾದ ಮಿತ್ರನು. ಇದನ್ನು ಅರಿತಾಗ ಮಾತ್ರ ನಿಶ್ಚಿತವಾದ ಶಾಂತಿಯನ್ನು ಆನಂದಿಸಬಹುದು.
ನಾಗರಿಕ ರಾಷ್ಟ್ರಗಳೆಂದು ಕರೆದುಕೊಳ್ಳುತ್ತಿರುವವರು ತಾವು ಜೀವಿಸುವುದಕ್ಕಿರುವ ನೆಲ ತಮ್ಮದಲ್ಲ ಸರ್ವಶ್ರೇಷ್ಠನಾದ ಭಗವಂತನಿಗೆ ಸೇರಿದ್ದು, ಅವನೇ ಇದರ ಒಡೆಯ ಎನ್ನುವ ವಸ್ತುಸ್ಥಿತಿಯನ್ನು ಸಂಪೂರ್ಣ ಮರೆತಿದ್ದಾರೆ.
ಶುದ್ಧ ಪ್ರಜ್ಞೆಯ ಮೂಲಕ ಬದುಕಿಗೊಂದು ಕ್ರಮವನ್ನು ರೂಪಿಸುವಲ್ಲಿ ಪ್ರಗತಿಯತ್ತ ಸಾಗಲು ಅನುಕೂಲವಾಗುವಂತೆ ಭಗವಂತನು ರಾಷ್ಟ್ರಗಳಿಗೆ ಇಂತಿಷ್ಟು ಪ್ರದೇಶಗಳನ್ನು ಬಿಟ್ಟುಕೊಟ್ಟಿದ್ದಾನೆ. ಅಲ್ಲದೆ ಜೀವನಕ್ಕೆ ಬೇಕಾದ ಅನುಕೂಲತೆಗಳನ್ನೂ ಕಲ್ಪಿಸಿಕೊಟ್ಟಿದ್ದಾನೆ. ಭಗವಂತನು ನಮಗೆ ಕೊಟ್ಟಿರುವ ಈ ನೆಲವನ್ನು ಪುಂಡರು, ಕೊಲೆಪಾತರು, ರಾಕ್ಷಸರು, ನಾಸ್ತಿಕರಿಗೆ ತರಬೇತಿ ನೀಡುವ ಶಿಬಿರಗಳನ್ನಾಗಿ ಮಾಡುವುದರ ಮೂಲಕ ಇಲ್ಲಿ ನರಕವನ್ನು ನಿರ್ಮಿಸುವುದಕ್ಕೆ ಅವಕಾಶ ನೀಡುವುದಿಲ್ಲ.

ಸಕಲ ಜೀವರಾಶಿಗಳಿಗೂ ಅವನೇ ಸರ್ವಶ್ರೇಷ್ಠ ಮಿತ್ರ. ನಾಗರಿಕ ರಾಷ್ಟ್ರಗಳಿಗೆ ಮಾರ್ಗದರ್ಶನ ನೀಡುವುದಕ್ಕಾಗಿಯೇ ವೇದ, ಪುರಾಣ ಮೊದಲಾದ ಪವಿತ್ರ ಗ್ರಂಥಗಳನ್ನು ಅವನು ರೂಪಿಸಿದ್ದಾನೆ. ಇಂತಹ ಪವಿತ್ರ ಗ್ರಂಥಗಳು ಇಲ್ಲದೇ ಹೋದಲ್ಲಿ ಅವರೆಲ್ಲರೂ ಮಾಯೆಯ ಪ್ರಭಾವಕ್ಕೆ ಅಥವಾ ಅಶುದ್ಧ ಪ್ರಜ್ಞೆಗೆ ಒಳಗಾಗಿ ತಮಗೆ ಗೋಚರಿಸಿದ ಪ್ರದೇಶಗಳೆಲ್ಲ ತಮ್ಮ ಒಡೆತನಕ್ಕೆ ಸೇರಿದ್ದು ಎಂಬ ಭಾವನೆಗೆ ಒಳಗಾಗುತ್ತಾರೆ.
ಭಗವಂತ ನಮ್ಮ ಜೀವನಕ್ಕಾಗಿ ನೀಡಿರುವ ಈ ನೆಲವನ್ನು ರಾಕ್ಷಸರು, ನಾಸ್ತಿಕರಿಂದ ರಕ್ಷಿಸುವ ಹೊಣೆ ನಮ್ಮದಾಗಬೇಕು. ಈ ಜಾಗ ನನಗೆ ಸೇರಿದ್ದು ಎಂಬ ಭಾವನೆ ಅಲ್ಲಿರಬಾರದು. ಸರ್ವಶ್ರೇಷ್ಠನಾದ ಭಗವಂತನ ಸೇವಕರೆಂಬ ಅರ್ಪಣಾ ಮನೋಭಾವದ ಪ್ರಜ್ಞೆ ನಮ್ಮಲ್ಲಿ ಇರಬೇಕು.
ಅಶುದ್ಧ ಪ್ರಜ್ಞೆಯಿಂದಾಗಿಯೇ ಮಹಾಭಾರತದಲ್ಲಿ ಅರ್ಜುನ ಕುರುಕ್ಷೇತ್ರದಲ್ಲಿ ಹೋರಾಡಲು ಹಿಂದೇಟು ಹಾಕಿದ. ತಾನು ಈ ನೆಲದ ಒಡೆಯನಲ್ಲ ಎನ್ನುವ ವಿಚಾರವನ್ನು ಅವನು ತಾತ್ಕಾಲಿಕವಾಗಿ ಮರೆತಿದ್ದ. ಶ್ರೀಕೃಷ್ಣನೇ ಸರ್ವಶ್ರೇಷ್ಠ ಒಡೆಯ, ಅರ್ಜುನ ಅವನ ಏಕೈಕ ಸೇವಕ. ಈ ವಸ್ತುಸ್ಥಿತಿಯನ್ನು ಭಗವದ್ಗೀತೆಯಲ್ಲಿ ವಿವಿಧ ದೃಷ್ಟಿಕೋನಗಳ ಮೂಲಕ ವಿವರಿಸಲಾಗಿದೆ.
ಒಡೆತನದ ಕುರಿತಾದ ಭ್ರಮೆಗಳು ಮಾಯವಾಗಿ ಅರ್ಜುನನಲ್ಲಿ ಭಗವಂತನ ಕರುಣೆಯ ಮೂಲಕ ಶುದ್ಧ ಪ್ರಜ್ಞೆ ಜಾಗೃತವಾಯಿತು. ಆ ಬಳಿಕ ಅರ್ಜುನ ಸರ್ವಶ್ರೇಷ್ಠ ಭಗವಂತನ ಆದೇಶಕ್ಕೆ ತಲೆಬಾಗಿದ. ಅರ್ಜುನನಲ್ಲಿದ್ದ ಅಹಿಂಸಾ ಮನೋಭಾವ ಒಡೆತನದ ಹಕ್ಕಿನ ಪ್ರಜ್ಞೆಯ ಮೂಲಕ ಕಲುಷಿತಗೊಂಡಿತ್ತು.
ಶ್ರೀಕೃಷ್ಣ ಅದನ್ನು ಮೊಳಕೆಯಲ್ಲಿಯೇ ಕಿತ್ತು ಹಾಕಿದ. ಸಮಾಜದಲ್ಲಿರುವ ಅನೇಕ ನಿಷ್ಕ್ರಿಯ ಮೂಲ ಧಾತುಗಳು ಪರಮದ ಭಕ್ತರಾಗುವ ಭಾವನೆಯನ್ನು ಹೊಂದುವುದು ಮೂರ್ಖತನವಾಗಿದೆ. ಭಗವಂತನ ನಿಜವಾದ ಭಕ್ತರು, ರಾಮಾಯಣದ ಹನುಮಂತ ಹಾಗೆ ತಮ್ಮ ನಡತೆಯಲ್ಲಿ ಹಿಂಸೆಯೂ ಅಲ್ಲದ ಅಹಿಂಸೆಯೂ ಇಲ್ಲದ ಸ್ಥಿತಿಯಲ್ಲಿ ಇರುತ್ತಾರೆ.
ಆದರೆ ಭಗವಂತನ ಸೇವೆಯಲ್ಲಿ ಅವರು ಹಿಂಸೆ ಮತ್ತು ಅಹಿಂಸೆ ಎರಡನ್ನೂ ಹೊಂದಬಲ್ಲವರಾಗಿರುತ್ತಾರೆ. ಶುದ್ಧ ಪ್ರಜ್ಞೆಯ ಮಾನದಂಡ ಇದೇ ಆಗಿದೆ. ಶುದ್ಧ ಪ್ರಜ್ಞೆಯ ರಾಷ್ಟ್ರೀಯತೆ ವಿಶ್ವಕ್ಕೆ ನಿಜವಾದ ಶಾಂತಿಯನ್ನು ತಂದುಕೊಡುತ್ತದೆ. ಅರ್ಜುನ ಹಾಗೂ ಹನುಮಂತ ಪಾಲಿಸಿದಂತಹ ಶುದ್ಧ ಪ್ರಜ್ಞೆಯನ್ನು ನಾವು ಪಾಲಿಸಿದಾಗ ಮಾತ್ರ ಇದು ಸಾಧ್ಯ.
ಇಂತಹ ಶುದ್ಧ ಪ್ರಜ್ಞೆ ಭಕ್ತಿಮಾರ್ಗದಿಂದ ಮಾತ್ರ ಸಾಧ್ಯ. ಸರ್ವಶ್ರೇಷ್ಠ ಭಗವಂತನನ್ನು ನಂಬದ ನಾಸ್ತಿಕರು ಈ ಶುದ್ಧ ಪ್ರಜ್ಞೆಯನ್ನು ಪಡೆಯಲು ಸಾಧ್ಯವಿಲ್ಲ. ಭಕ್ತಿ ಸೇವೆಯ ತತ್ತ್ವಗಳ ಮೂಲಕ ರಾಷ್ಟ್ರೀಯತೆಗೆ ಮಾರ್ಗದರ್ಶನ ದೊರಕುತ್ತದೆ. ಅರ್ಜುನ ಅನುಸರಿಸಿದ ಆ ವಿಶಿಷ್ಟ ಉದಾಹರಣೆಯೇ ನಮ್ಮ ಜೀವನದ ಗುರಿಯಾಗಬೇಕು.






Leave a Reply