ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಗೋಸ್ವಾಮಿ

ಇದು ಶ್ರೀ ಶ್ರೀಮದ್‌ ಭಕ್ತಿಸಿದ್ಧಾಂತ ಸರಸ್ವತಿ ಗೋಸ್ವಾಮಿ ಮಹಾರಾಜ ಅವರ ಜೀವನ ಚರಿತ್ರೆ.  ಕೃಷ್ಣಪ್ರಜ್ಞೆ ಮತ್ತು ಶ್ರೀ ಚೈತನ್ಯರ ಬೋಧನೆಗಳನ್ನು  ಪ್ರಚುರ ಪಡಿಸಲು ಅವರು ನೀಡಿದ ಕೊಡುಗೆಯ ಮುಖ್ಯಾಂಶಗಳನ್ನು ಇಲ್ಲಿ ಸರಣಿಯಾಗಿ ವಿವರಿಸಲಾಗಿದೆ.

ಭಕ್ತಿಸಿದ್ಧಾಂತ ಸರಸ್ವತಿ ಆವಿರ್ಭಾವ‌

  • ಜಗನ್ನಾಥಪುರಿಯಲ್ಲಿ ಫೆಬ್ರವರಿ 6, 1874ರಲ್ಲಿ ಜನಿಸಿದ ಅವರು ಜನ್ಮದಿಂದಲೇ ಶ್ರೇಷ್ಠ ವ್ಯಕ್ತಿಯಾಗುವ ಲಕ್ಷಣಗಳನ್ನು ತೋರಿದರು.
  • ಬಾಲ್ಯದಲ್ಲಿಯೇ ವಿಶೇಷ ಘಟನೆಗಳು ಸಂಭವಿಸಿದವು. ಉದಾಹರಣೆಗೆ ಶ್ರೀ ಜಗನ್ನಾಥನಿಂದ ಹಾರವನ್ನು ಪಡೆದು ಭಗವಂತನ ಕೃಪೆಗೆ ಪಾತ್ರವಾಗಿದ್ದು.

ಶಿಕ್ಷಣ ಮತ್ತು ಆರಂಭಿಕ ಜೀವನ

  • ಬಿಮಲಾಪ್ರಸಾದ್‌, ಅನಂತರ ಭಕ್ತಿಸಿದ್ಧಾಂತ, ಅತ್ಯಂತ ಬುದ್ಧಿವಂತರಾಗಿದ್ದರು. ಏಳನೆಯ ವಯಸ್ಸಿನೊಳಗೇ ಅವರು ಭಗವದ್ಗೀತೆಯ ಕಂಠಪಾಠ ಮಾಡಿದ್ದರು.
  • ಚರ್ಚೆ‌ ಮತ್ತು ಬರೆಹಗಳೂ ಸೇರಿದಂತೆ ಅನೇಕ ವಿದ್ವತ್‌ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದರು. ಆಧ್ಯಾತ್ಮಿಕ ಬೋಧನೆಗಳ ಮೇಲೆ ಕೂಡ ಅವರ ಗಮನ ಕೇಂದ್ರೀಕೃತವಾಗಿರುತಿತ್ತು.

ದೀಕ್ಷೆ

  • ಸಿದ್ಧಾಂತ ಸರಸ್ವತಿಯವರು 1900ರಲ್ಲಿ ಶ್ರೀಲ ಗೌರ ಕಿಶೋರ ದಾಸ ಬಾಬಾಜಿ ಅವರಲ್ಲಿ ದೀಕ್ಷೆಗಾಗಿ ಕೋರಿದರು.
  • ಸಿದ್ಧಾಂತರ ಅಪಾರ ವಿದ್ವತ್ತಿನ ಕಾರಣ ಬಾಬಾಜಿಯವರು ಮೊದಲು ಹಿಂಜರಿದರು.
  • ಸಿದ್ಧಾಂತರು ಬಾಬಾಜಿಯವರ ಕೃಪೆಗೆ ತಮ್ಮ ತೀವ್ರ ಅಭಿಲಾಷೆ ವ್ಯಕ್ತಪಡಿಸಿದಾಗ ಬಾಬಾಜಿಯವರು ಅವರಿಗೆ ದೀಕ್ಷೆ ನೀಡಲು ಒಪ್ಪಿದರು. ಅವರಿಗೆ ಶ್ರೀ ವಾರ್ಷಭಾನವಿ ದೇವಿ ದಯಿತ ದಾಸ ಎಂದು ದೀಕ್ಷಾ ನಾಮವನ್ನು ನೀಡಿದರು.

ಸಿದ್ಧಾಂತ ಸರಸ್ವತಿ ಆರಂಭಿಕ ಚಟುವಟಿಕೆಗಳು

  • ಅವರು 1898ರಲ್ಲಿ ಅನೇಕ ಪವಿತ್ರ ಸೈಳಗಳಿಗೆ ಭೇಟಿ ನೀಡಿದರು. ಆ ಸ್ಥಳಗಳ ಬಗ್ಗೆ ಚೈತನ್ಯ ಚರಿತಾಮೃತದ ತಮ್ಮ ವ್ಯಾಖ್ಯಾನಕ್ಕೆ ಮಾಹಿತಿ ಸಂಗ್ರಹಿಸಿದರು.
  • ಶ್ರೀ ಚೈತನ್ಯರ ಬೋಧನೆಗಳನ್ನು ಪ್ರಚುರ ಪಡಿಸುತ್ತಾ ಅವರು 1900ರಲ್ಲಿ “ಬಂಗೆ ಸಮಾಜಿಕತಾ” ಪುಸ್ತಕವನ್ನು ಪ್ರಕಟಿಸಿದರು. ಅದರಲ್ಲಿ ವಿವಿಧ ಮತಗಳನ್ನು ಸಮಾಲೋಚಿಸಿ, ಚೈತನ್ಯರ ಮತವನ್ನು ಎತ್ತಿಹಿಡಿದರು.
  • ಪುರಿಯಲ್ಲಿ ಹರಿದಾಸ ಠಾಕುರರ ಸಮಾಧಿ ಬಳಿ ಭಕ್ತಿ ಕುಟೀರವನ್ನು ಸ್ಥಾಪಿಸಲು ತಮ್ಮ ತಂದೆಗೆ ನೆರವಾದರು.

ವಿವಾದಗಳು ಮತ್ತು ಬೋಧನೆ ಪ್ರಯತ್ನಗಳು

  • ಕೀರ್ತನೆ ಪದ್ಧತಿಗಳಲ್ಲಿನ  ಪಥ ವಿಚಲನೆಯ ವಿರುದ್ಧ ಸಾರ್ವಜನಿಕ ಚರ್ಚೆಗಳಲ್ಲಿ‌ ತೊಡಗಿದರು.
  • “ವೈಷ್ಣವ ವಿಶ್ವಕೋಶ” ವನ್ನು ರಚಿಸಿದರು. ಈ ಮೂಲಕ ತಮ್ಮ ವಿದ್ವತ್‌ ಪ್ರತಿಭೆಯನ್ನು ಹೊರಹೊಮ್ಮಿಸಿದರು.
  • ಪುರಿಯಲ್ಲಿ ಅಪಸಂಪ್ರದಾಯಗಳಿಂದ ತೀವ್ರ ವಿರೋಧವನ್ನು ಎದುರಿಸಿದರು. ಆದರೆ ತಪ್ಪು ಗ್ರಹಿಕೆ ವಿರುದ್ಧ ಬೋಧನೆ ಮುಂದುವರಿಸಿದರು.

ನಾಮ ಭಜನೆಗೆ ಬದ್ಧತೆ

  • ಯೋಗಪೀಠದಲ್ಲಿ, ಹುಲ್ಲಿನ ಗುಡಿಸಿನಲ್ಲಿ ವಾಸಿಸುತ್ತಾ ದಿನಕ್ಕೆ ಮೂರು ಲಕ್ಷ ನಾಮಜಪ ಮಾಡುವ ಪ್ರತಿಜ್ಞೆ ಮಾಡಿದರು.
  • ನಾಲ್ಕು ವರ್ಷಗಳ ಕಾಲ ತೀವ್ರ ಪರಿತ್ಯಾಗ ಮತ್ತು ಕಠಿಣವಾದ ಜಪ ಪದ್ಧತಿಯನ್ನು  ಅನುಸರಿಸಿದರು.

ಗೌಡೀಯ ಮಠದ ಸ್ಥಾಪನೆ

  • ತಮ್ಮ ಬೋಧನಾ ಧ್ಯೇಯವನ್ನು ಇನ್ನಷ್ಟು ಮುಂದುವರಿಸಲು ಅವರು 1918ರಲ್ಲಿ ಗೌಡೀಯ ಮಠವನ್ನು ಸ್ಥಾಪಿಸಿದರು.
  • ಪ್ರಮುಖ ವೈಷ್ಣವ ಸಾಹಿತ್ಯದ ಪ್ರಕಟಣೆ ಮತ್ತು ಭಾರತದಾದ್ಯಂತ ಬೋಧನಾ ಪ್ರವಾಸವನ್ನು ಸಂಘಟಿಸಲು ಗಮನ ಕೇಂದ್ರೀಕರಿಸಿದರು.
  • ವೈಷ್ಣವ ವಿಶ್ವಕೋಶವನ್ನು ಪೂರ್ಣಗೊಳಿಸಿ ಶ್ರೀಲ ಭಕ್ತಿವಿನೋದರ ಅಪೇಕ್ಷೆಯನ್ನು ಫಲಪ್ರದಗೊಳಿಸಿದರು.

ವಿದ್ವಾಂಸರು ಮತ್ತು ಭಾರತಶಾಸ್ತ್ರಜ್ಞರೊಂದಿಗೆ ನಿರತ

  • ವೈಷ್ಣವ ತತ್ತ್ವವನ್ನು ಕುರಿತ ತಪ್ಪುಗ್ರಹಿಕೆಯನ್ನು ಸರಿಪಡಿಸಲು ಶ್ರೀಲ ಭಕ್ತಿಸಿದ್ಧಾಂತರು ಪಾಶ್ಚಿಮಾತ್ಯ ವಿದ್ವಾಂಸರೊಂದಿಗೆ ಚರ್ಚೆಯಲ್ಲಿ‌ ನಿರತರಾದರು.
  • ಭಗವಂತನ ಅಲೌಕಿಕ ಲಕ್ಷಣ ಮತ್ತು ಭಕ್ತಿಯ ವೈಶಿಷ್ಟ್ಯಕ್ಕೆ  ಅವರು ಮಹತ್ವ ನೀಡಿದರು.
  • ಅವರ ಚರ್ಚೆಗಳು‌ ಪಾಶ್ಚಿಮಾತ್ಯ ದೃಷ್ಟಿಕೋನಕ್ಕೆ ಸವಾಲು ಹಾಕುವ ವೈಷ್ಣವ ಸಿದ್ದಾಂತದ ಗಾಢತೆಯನ್ನು ಪ್ರಕಟಿಸಿದವು.

ಗೌಡೀಯ ಮಠಗಳ ವಿಸ್ತರಣೆ

  • ಗೌಡೀಯ ಮಠವು 1920 ದಶಕದ ಕೊನೆ ಮತ್ತು 1930ರ ದಶಕದ ಆರಂಭದಲ್ಲಿ ಗಮನಾರ್ಹ‌ ಬೆಳವಣಿಗೆಯನ್ನು ಕಂಡಿತು.
  • ಶ್ರೀಲ ಸರಸ್ವತಿ ಠಾಕುರರು ಅನೇಕ ಮಂದಿರಗಳನ್ನು ಸ್ಥಾಪಿಸಿದರು ಮತ್ತು ವ್ಯಾಪಕವಾಗಿ ಬೋಧನಾ ಕಾರ್ಯವನ್ನು ಆರಂಭಿಸಿದರು.
  • ಅವರು ಆಧ್ಯಾತ್ಮಿಕ ಶಿಕ್ಷಣವನ್ನು ಪ್ರಚುರ ಪಡಿಸಿದರು ಮತ್ತು ಕೃಷ್ಣಪ್ರಜ್ಞೆಯನ್ನು ಹರಡಲು ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮಗಳನ್ನು‌ ಆಯೋಜಿಸಿದರು.

ಬ್ರಹ್ಮ ಸಂಹಿತೆಯ ಮಹತ್ವ

  • ಬ್ರಹ್ಮ ಸಂಹಿತೆಯ ಒಂದು ಪ್ರಮುಖ ಧರ್ಮಗ್ರಂಥವಾಗಿದ್ದು, ಅದು ಶ್ರೀ ಚೈತನ್ಯರ ಬೋಧನೆಗಳು ಮತ್ತು ಅಚಿಂತ್ಯ ಭೇದಾಭೇದ ತತ್ತ್ವದ ಸಾರವನ್ನು ಒಳಗೊಂಡಿದೆ.
  • ಧಾರ್ಮಿಕ ಸೇವೆ, ಆತ್ಮದ ಲಕ್ಷಣ ಮತ್ತು ಆಧ್ಯಾತ್ಮಿಕ ಲೋಕ ಸೇರಿದಂತೆ ಅನೇಕ ವಿಷಯಗಳನ್ನು ಅದು ಒಳಗೊಂಡಿದೆ. ಹೀಗಾಗಿ ಕೃಷ್ಣಪ್ರಜ್ಞೆಯನ್ನು ಅರ್ಥಮಾಡಿಕೊಳ್ಳಲು ಅದು ಅವಶ್ಯವಾಗಿದೆ ಎಂದು ಬೋಧಿಸಿದರು.

ಪಾಶ್ಚಿಮಾತ್ಯರಿಗೆ ಬೋಧನೆ

  • ಶ್ರೀಲ ಸರಸ್ವತಿ ಠಾಕುರರು ಕೃಷ್ಣಪ್ರಜ್ಞೆಯನ್ನು ಯೂರೋಪಿಗೆ ವಿಸ್ತರಿಸುವ ಗುರಿ ಹೊಂದಿದ್ದರು. ಬೋಧನೆಯ ಸೂಕ್ತ ಮನೋಭಾವವನ್ನು ಅವರು ತಮ್ಮ ಶಿಷ್ಯರಿಗೆ ವಿವರಿಸಿದರು.
  • ಶ್ರೀ ಚೈತನ್ಯರ ಸಂದೇಶವನ್ನು ಹರಡುವಾಗ ವಿನಯ, ಗೌರವ ಮತ್ತು ಆಧ್ಯಾತ್ಮಿಕ ಗುರುವಿಗೆ ಸೇವೆ ಸಲ್ಲಿಸುವ ಮಹತ್ವವನ್ನು ಅವರ ಬೋಧನೆಯು ಒತ್ತಿ ಹೇಳಿತು.

ಅಂತಿಮ ದಿನಗಳು

  • ತಮ್ಮ ಅಂತಿಮ ದಿನಗಳಲ್ಲಿ ಶ್ರೀಲ ಸರಸ್ವತಿ ಠಾಕುರರು ವಿನಯಶೀಲತೆ, ಅಹಂನ ಅಪಾಯ ಮತ್ತು ಪ್ರಾಮಾಣಿಕ  ಭಕ್ತಿಯ ಅಗತ್ಯಗಳತ್ತ ತಮ್ಮ ಶಿಷ್ಯರ ಗಮನ ಕೇಂದ್ರೀಕರಿಸಿದ್ದರು.
  • ತಮ್ಮ ಧ್ಯೇಯದಲ್ಲಿ ಒಗ್ಗಟ್ಟಿನಿಂದ ಉಳಿಯಬೇಕು ಮತ್ತು ಕೃಷ್ಣಸೇವೆಯಲ್ಲಿ ಅರ್ಪಣಾಭಾವ‌ ಹೊಂದಿರಬೇಕು ಎಂದು ಅವರು ತಮ್ಮ ಅನುಯಾಯಿಗಳಿಗೆ ಹೇಳಿದರು. ಇದು ಅವರ ಬೋಧನೆಗಳ ಮುಂದುವರಿಕೆಗೆ ಭರವಸೆಯನ್ನು ನೀಡಿತು.

ಆಧ್ಯಾತ್ಮಿಕ ಆಶಯಗಳು ಮತ್ತು ಸಾಕ್ಷಾತ್ಕಾರಗಳು

  • ಬೋಧಕನು ಕೃಷ್ಣನಿಗೆ ಸೇವೆ ಸಲ್ಲಿಸುವ ಮತ್ತು ಐಹಿಕ ಅನಾನುಕೂಲಗಳ ಆಚೆಗೆ ಶಾಶ್ವತ ಬದುಕನ್ನು ಪಡೆಯುವ ಆಕಾಂಕ್ಷೆಯನ್ನು ವ್ಯಕ್ತಪಡಿಸುತ್ತಾನೆ.
  • ಕೃಷ್ಣಸೇವೆಯ ಅಲೌಕಿಕ ಲಕ್ಷಣವನ್ನು ಅರ್ಥಮಾಡಿಕೊಳ್ಳಲು ಇರುವ ಆಕರ್ಷಣೆ ಮತ್ತು ವಿಮುಖತೆಯನ್ನು ಜಯಿಸಿ ಮುನ್ನಡೆಯಲು ಒತ್ತು.

ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿಯವರ ತಿರೋಭಾವ

  • ಮಹತ್ವವಾದ ಆಧ್ಯಾತ್ಮಿಕ ಆಂದೋಲನವನ್ನು ಸ್ಥಾಪಿಸಿದ ಮೇಲೆ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಅವರು  ಜನವರಿ1, 1937ರಂದು ಕಣ್ಮರೆಯಾದರು.
  • ಆಡಳಿತ ಆಯೋಗದ ರಚನೆ ಮತ್ತು  ಭಗವಂತ ಮತ್ತು ಅವನ ಭಕ್ತರಿಗೆ ಸೇವೆಯನ್ನು ಹರಡುವುದು ಅವರ ಕೊನೆಯ ಆದೇಶಗಳಲ್ಲಿ ಸೇರಿವೆ.

ವೈಷ್ಣವ ಸಿದ್ಧಾಂತಕ್ಕೆ ಕೊಡುಗೆ

  • ಅನೇಕ ವೈಷ್ಣವ ಪಂಥಗಳಲ್ಲಿ ಒಗ್ಗಟ್ಟನ್ನು ಪ್ರೋತ್ಸಾಹಿಸಿ ಅವರು 64 ಮಂದಿರಗಳನ್ನು ಸ್ಥಾಪಿಸಿದರು ಮತ್ತು ಅಸಂಖ್ಯ ಪುಸ್ತಕಗಳನ್ನು ಪ್ರಕಟಿಸಿದರು.
  • ಜಾತೀಯತೆ ಮತ್ತು ನಿರಾಕಾರತೆ ವಿರುದ್ಧ ಪ್ರಬಲ ವಾದಕ್ಕೆ ಪ್ರಸಿದ್ಧರಾಗಿದ್ದ ಅವರು ಪರಿಶುದ್ಧ ಭಕ್ತಿಸೇವೆಯ ಮಹತ್ವವನ್ನು ಒತ್ತಿಹೇಳಿದರು.

ಶ್ರೀ ಚೈತನ್ಯ ಮಹಾಪ್ರಭುಗಳ ಧ್ಯೇಯ

  • ಆಧ್ಯಾತ್ಮಿಕ ಜ್ಞಾನದ ಅರಿವಿಗೆ ಮಾನವ ಜನ್ಮದ ಮಹತ್ವವನ್ನು ಶ್ರೀ ಚೈತನ್ಯ ಮಹಾಪ್ರಭುಗಳು ಒತ್ತಿ ಹೇಳಿದರು.
  • ಕೃಷ್ಣಪ್ರಜ್ಞೆಯನ್ನು ಜಾಗತಿಕವಾಗಿ ಹರಡುವುದು ಅವರ ಧ್ಯೇಯವಾಗಿತ್ತು. ಈ ಮೂಲಕ ಪೂರ್ವ‌ ಮತ್ತು ಪಶ್ಚಿಮದ ಜನರನ್ನು ಒಗ್ಗೂಡಿಸುವುದು ಉದ್ದೇಶವಾಗಿತ್ತು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi