ಶ್ರೀಲ ವೇದವ್ಯಾಸರು

– ಅನುವಾದ: ಕಿರಣ

ವೇದವ್ಯಾಸರು ಓರ್ವ ಸಶಕ್ತ ಆತ್ಮವಾಗಿದ್ದು, ಬರಹರೂಪದಲ್ಲಿ ವೇದ ಜ್ಞಾನ, ವಿವೇಕ ಮತ್ತು ಇತಿಹಾಸವನ್ನು ಈ ಲೋಕಕ್ಕೆ ಪ್ರಸ್ತುತ ಪಡಿಸಿದ ಶಕ್ತ್ಯಾವೇಶ ಅವತಾರರು. ಕೃಷ್ಣದೈಪಾಯನ ವ್ಯಾಸರು ಹಲವಾರು ವೇದ ಸಾಹಿತ್ಯವನ್ನು ನೀಡಿದ್ದಾರೆ.

ಮೊದಲು ಅವರು ವೇದವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದರು. ಅನಂತರ ಅವುಗಳನ್ನು ಪುರಾಣದಲ್ಲಿ ವಿವರಿಸಿದರು. ಮಹಾಭಾರತವನ್ನು ಅವರು ಗಣೇಶನಿಗೆ ಹೇಳಿದಾಗ ಗಣೇಶ ಮೊದಲ ಬಾರಿ ಅದನ್ನು ಲಿಖಿತ ರೂಪದಲ್ಲಿ ಬರೆದನು. ಮಹಾಭಾರತದಲ್ಲಿ ಭಗವದ್ಗೀತೆಯನ್ನು ನೀಡಲಾಗಿದೆ.

ಅನಂತರ ಎಲ್ಲ ವೇದ ಸಾಹಿತ್ಯವನ್ನು ವೇದ ಸೂತ್ರದಲ್ಲಿ ಕ್ರೋಡೀಕರಿಸಲಾಗಿ, ಭವಿಷ್ಯದಲ್ಲಿ ಮಾರ್ಗದರ್ಶನಕ್ಕಾಗಿ ಶ್ರೀಮದ್‌ ಭಾಗವತವೆಂದು ಕರೆಯಲ್ಪಡುವ ವೇದಾಂತ ಸೂತ್ರವನ್ನು ಕುರಿತು ಸಹಜ ವ್ಯಾಖ್ಯೆಯನ್ನು ನೀಡಿದರು. ಇದನ್ನು ಪರಮ ಪ್ರಭು ಮತ್ತು ಅವನ ಭಕ್ತರ ಲೀಲೆಗಳನ್ನು ಹೆಚ್ಚು ಪರೋಕ್ಷ ರೀತಿಯಲ್ಲಿ ಬಹಿರಂಗಗೊಳಿಸುವ ಒಂದು ಆಕಾಂಕ್ಷೆಯನ್ನು ವ್ಯಕ್ತಪಡಿಸಿದನಂತರ ರಚಿಸಲಾಯಿತು.

ಸುಖದೇವ ಗೋಸ್ವಾಮಿಗಳು ವೇದವ್ಯಾಸರ ಮಗ. ಅವರು ಭಾಗವತವನ್ನು ಏಳುದಿನಗಳ ಕಾಲ ಆಹಾರ ಮತ್ತು ನೀರಿಲ್ಲದೆ ಸಾವನ್ನು ಕಾಯುತ್ತಿದ್ದು, ಗಂಗಾನದಿ ತೀರದಲ್ಲಿ ಋಷಿವರ್ಯರಿಂದ ಸುತ್ತುವರಿದ ಸಮ್ರಾಟ ಪರೀಕ್ಷಿತನಿಗೆ ಹೇಳಿದರು. ಈ ಭಾಗವತ ಪುರಾಣವು ಸೂರ್ಯನಂತೆ ಕಾಂತಿಯುತವಾಗಿದೆ.

ಧರ್ಮ, ಜ್ಞಾನ ಇತ್ಯಾದಿ ತನ್ನ ಸ್ವಧಾಮಕ್ಕೆ ಪ್ರಭು ಕೃಷ್ಣ ಹೋದಾಗ ಇದು ಹೊರಹೊಮ್ಮಿದೆ, ಕಲಿಯುಗದಲ್ಲಿ ಅಜ್ಞಾನದ ಗಾಢಾಂಧಕಾರದಲ್ಲಿ ತಮ್ಮ ದೃಷ್ಟಿಯನ್ನು ಕಳೆದುಕೊಂಡ ಪ್ರಾಮಾಣಿಕ ವ್ಯಕ್ತಿಗಳು ಈ ಪುರಾಣದಿಂದ ಬೆಳಕನ್ನು ಪಡೆಯಲಿ. ಈ ಚರ್ಚೆಯು ಮಹಾಭಾರತ ಯುದ್ಧದ 25-26 ವರ್ಷಗಳನಂತರ ಸಂಭವಿಸಿತು.

ಆಷಾಢ (ಜುಲೈ-ಆಗಸ್ಟ್)ನ ತಿಂಗಳ ಪೂರ್ಣಿಮೆಯ ದಿನವನ್ನು ‘ಗುರು ಪೂರ್ಣಿಮಾ’ ಎನ್ನಲಾಗುತ್ತವೆ. ಅಂದು ತಮ್ಮ ಅಸೀಮ ಪ್ರೇಮ ಮತ್ತು ಪರಮ ಕೃಪೆಯಿಂದ ಬ್ರಹ್ಮ ವಿದ್ಯೆಯ ಜ್ಞಾನವನ್ನು ನೀಡಿದ ಆಚಾರ್ಯರಿಗೆ ವಿಶಿಷ್ಟ ಪೂಜೆಯನ್ನು ಮಾಡುವ ಪುಣ್ಯದಿನವಾಗಿದೆ.

ಎಲ್ಲ ಪ್ರಾಮಾಣಿಕ ಸಾಧಕರ ಗುರು ಪರಂಪರೆಯು ನಿರಂತರವಾಗಿ ಮುಂದುವರಿಯುತ್ತಿದೆ. ತನ್ನ ಜೀವನದಲ್ಲಿ ಬೋಧನೆಗಳನ್ನು ತನ್ನದೇ ಉದಾಹರಣೆಯ ಮೂಲಕ ಕಲಿಸುವವನು ಆಚಾರ್ಯನು. ಸಾಮಾನ್ಯವಾಗಿ ಎಷ್ಟು ಭಕ್ತರು ತಮ್ಮ ಗುರುಗಳ ಆವಿರ್ಭಾವದಂದು ಈ ಪೂಜೆಯನ್ನು ಆಚರಿಸುವುದು ವಾಡಿಕೆ.

ಆಚಾರ್ಯರಲ್ಲಿ ಶ್ರೀಲ ವೇದವ್ಯಾಸರು ಅಗ್ರಗಣ್ಯರು. ಅವರು ಅವಿರ್ಭಾವ ಹೊಂದಿದ ದಿನದಂದು ಅವರನ್ನು ವೇದ ಸಂಪ್ರದಾಯದ ಅನುಯಾಯಿಗಳೆಲ್ಲ ಗೌರವಿಸುತ್ತಾರೆ.

ಅವರು ವೇದವನ್ನು ನಾಲ್ಕು ಭಾಗಗಳಾಗಿ (1131 ಶಾಖೆಗಳು) – ಋಗ್ವದ (21 ಶಾಖೆಗಳು), ಯಜುರ್ವೇದ (101 ಶಾಖೆಗಳು) ಸಾಮ (1000 ಶಾಖೆಗಳು) ಮತ್ತು ಅಥರ್ವ ವೇದ (9 ಶಾಖೆಗಳು) ವಿಂಗಡಿಸಿದರು.

ಅವರು ಬ್ರಹ್ಮಸೂತ್ರವನ್ನು ಬರೆದರು. ಇದು ಜೀವ ಬ್ರಹ್ಮ ಮತ್ತು ವಿಶ್ವಕ್ಕೆ ಸಂಬಂಧಿಸಿದಂತೆ ಉಪನಿಷತ್ತುಗಳ ಸಂದೇಶಗಳನ್ನು ಸಮಗ್ರಗೊಳಿಸುವ ಸೂತ್ರಗಳು (564). ಅವರು 18 ಪುರಾಣಗಳನ್ನು (ಬ್ರಹ್ಮ ಪುರಾಣ, ಪದ್ಮ ಪುರಾಣ, ಭಾಗವತ ಪುರಾಣ, ಶಿವ ಪುರಾಣ, ಸ್ಕಂಧ ಪುರಾಣ, ಗರುಡ ಪುರಾಣ, ಬ್ರಹ್ಮಾನಂದ ಪುರಾಣ ಇತ್ಯಾದಿ) ಬರೆದರು.

ಇದರಲ್ಲಿ ವಿಷ್ಣು ಪುರಾಣವನ್ನು ವೇದವ್ಯಾಸರ ತಂದೆಯವರಾದ ಪರಾಶರಾಚಾರ್ಯ ಬರೆದರು. ಆದರೆ ಇದನ್ನು ಸಂಪಾದಿಸಿ ಪ್ರಸ್ತುತಪಡಿಸಿದ್ದು ವ್ಯಾಸರು. ಅವರು ಧರ್ಮದ ಮುಕುಟ ಪ್ರಾಯವಾದ ಭಗವದ್ಗೀತೆಯನ್ನು ಒಳಗೊಂಡ ಮಹಾಭಾರತದ ಹಲವಾರು ಘಟನೆಗಳನ್ನು ವೀಕ್ಷಿಸಿದರು ಮತ್ತು ವಿವರಿಸಿದರು. ಶ್ರೀ ವ್ಯಾಸರು ಚಿರಂಜೀವಿಗಳು. ಅವರನ್ನು ಸೂಕ್ತವಾಗಿಯೇ ವ್ಯಾಸ ಅಂದರೆ ವಿಪುಲ ಜ್ಞಾನಿ ಎಂದು ಮತ್ತು ಅನಂತ ಋಷಿಯೆಂದು ಕರೆಯಲಾಗಿದೆ.

ವೇದವ್ಯಾಸರನ್ನು ಬಾದರಾಯಣ, ಕೃಷ್ಣ, ಕೃಷ್ಣ ದ್ವೈಪಾಯನ, ದ್ವೈಪಾಯನ, ಸತ್ಯವತಿ-ಸುತ್ತ, ಪರಾಶರ್ಯ, ಪರಾಶರಾತ್ಮಜ ಎಂದು ಕರೆಯಲಾಗಿದೆ. ಅವರು ಮಹಾಮುನಿ ಪರಾಶರ್ಯರ ಮಗ. ಸತ್ಯವತಿ ಮಹಾರಾಜ ಶಂತನುವಿನೊಂದಿಗೆ ವಿವಾಹವಾಗುವ ಮುನ್ನ ಪರಾಶರರಿಂದ ಅವರನ್ನು ಪಡೆದಳು. ಅವರು ನಾರಾಯಣನ ಶಕ್ತ್ಯಾವೇಶ ಅವತಾರ. ಅವರು ವಿಶ್ವಕ್ಕೆ ವೇದ ಜ್ಞಾನವನ್ನು ಪ್ರಸರಿಸಿರುತ್ತಾರೆ.

ವಿಶಿಷ್ಟವಾಗಿ ಪುರಾಣಗಳನ್ನು ಸೇರಿಸಿ ಎಲ್ಲ ವೇದ ಗ್ರಂಥಪಠನೆಯ ಮುಂಚೆ ವ್ಯಾಸದೇವರಿಗೆ ಗೌರವವನ್ನು ಸೂಚಿಸಬೇಕು. ಅವರ ಮಗನಾದ ಶುಕಮುನಿಗಳು ಮತ್ತು ವೈಶಂಪಾಯನನಂತಹ ಋಷಿವರ್ಯರು ವೇದದ ವಿವಿಧ ಶಾಖೆಗಳಲ್ಲಿ ಅವರ ಶಿಷ್ಯರಾಗಿದ್ದರು. ಬ್ರಹ್ಮಸೂತ್ರ ವೇದಾಂತ ಸೂತ್ರಗಳು ಅಥವಾ ಬಾದರಾಯಣ ಸೂತ್ರಗಳನ್ನು ಅವರೇ ರಚಿಸಿದ್ದು.

ಉಗ್ರ ತಪಸ್ಸುಗಳ ವ್ರತಗಳ ಕಾರಣದಿಂದ ಅವರು ಋಷಿಗಳಲ್ಲಿ ಅತ್ಯಂತ ಆದರಣೀಯರಾಗಿದ್ದಾರೆ. ಕಲಿಯುಗದಲ್ಲಿ ಎಲ್ಲ ಜನರ ಒಳತಿಗಾಗಿ ಮಹಾಭಾರತ ದಾಖಲಿಸಲು ಇಚ್ಚಿಸಿದಾಗ ಅವರು ತಾವು ಹೇಳಿದ್ದನ್ನು ಬರೆಯಬಲ್ಲ ಒಬ್ಬ ಕುಶಾಗ್ರ ಬರಹಗಾರನ ಅಗತ್ಯವನ್ನು ಕಂಡರು.

ಬ್ರಹ್ಮನ ಆದೇಶದ ಅನುಸಾರವಾಗಿ ಶ್ರೀ ಗಣೇಶನು ಬರೆಯುವ ಕಾರ್ಯವನ್ನು ವಹಿಸಿಕೊಂಡನು. ಆದರೆ ವ್ಯಾಸದೇವನು ಒಂದು ಕ್ಷಣವೂ ಹೇಳುವುದನ್ನು ನಿಲ್ಲಿಸಬಾರದೆಂದು ಷರತ್ತನ್ನು ಹಾಕಿದನು. ಹೀಗಾಗಿ ವ್ಯಾಸರ ವಾಸಸ್ಥಳವಾದ ಗುಹೆಯಲ್ಲಿ ವ್ಯಾಸರು ಹಾಗೂ ಗಣೇಶ ಇಬ್ಬರ ಸಂಯುಕ್ತ ಪ್ರಯತ್ನದಿಂದ ಮಹಾ ಕಥನವಾದ ಮಹಾಭಾರತ ರಚಿತವಾಯಿತು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi