ಆನೆಯ ನಿಖರವಾದ ತೂಕ

ಮೂರ್ಖ ಜನರು ಆಗಾಗ ಭಕ್ತರನ್ನು “ಕೆಲಸಕ್ಕೆ ಬಾರದ ಮಂದಿ”, “ದುರ್ಬಲ ಮನಸ್ಸಿನ ವ್ಯಕ್ತಿಗಳು” ಎಂದೆಲ್ಲ ಟೀಕಿಸುವುದುಂಟೆಂದೂ, ಇಂತಹ ಟೀಕಾಕಾರರು ಭಕ್ತರ ಮನಸ್ಸನ್ನು ಅರ್ಥಮಾಡಿಕೊಳ್ಳಲಾರರೆಂದೂ ಪ್ರಭುಪಾದರು ಒಂದು ಉಪನ್ಯಾಸದ ಕಾಲದಲ್ಲಿ ಹೇಳಿದರು. ಅಷ್ಟೇ ಅಲ್ಲ ಇಂತಹ ಅವಿವೇಕಿಗಳ ಮಾತಿಗೆ ಭಕ್ತರ ಕಿವಿಗೊಡಬೇಕಾದ್ದಿಲ್ಲವೆಂದೂ ಉಪದೇಶಿಸಿದರು. ತಮ್ಮ ಉಪದೇಶಕ್ಕೆ ನಿದರ್ಶನಪ್ರಾಯವಾಗಿ ಒಂದು ಕಥೆಯನ್ನು ಹೇಳಿದರು.

ಒಬ್ಬ ರಾಜನಿದ್ದ. ಅವನಿಗೊಬ್ಬ ಮಂತ್ರಿ. ಈ ಸಚಿವನು ಸದಾ ಸುಮ್ಮನೆ ಕೂತಿರುತ್ತಾಯೇ ಹೊರತು ಏನೂ ಕೆಲಸ ಮಾಡುವುದಿಲ್ಲವೆಂದು ರಾಜನ ಕೆಲವು ಚಾಕರರು ಅವನಲ್ಲಿ ದೂರಿದರು. ಮಂತ್ರಿಯಾಗಲಿಕ್ಕೆ ಯೋಗ್ಯತೆ (ಬುದ್ಧಿ) ಇರಬೇಕೆಂದು ರಾಜ ಹೇಳಿದ. ಚಾಕರರು ರಾಜನ ಮಾತನ್ನು ಕೇಳಲಿಲ್ಲ. ಸರಿ.

ತಾನು ಒಂದು ಪರೀಕ್ಷೆ ಏರ್ಪಡಿಸುವುದಾಗಿಯೂ, ಮಂತ್ರಿಯೂ ಸೇರಿದಂತೆ ಚಾಕರರೆಲ್ಲರೂ ಆ ಪರೀಕ್ಷೆಯಲ್ಲಿ ಭಾಗಿಗಳಾಗಬೇಕೆಂದೂ ರಾಜ ಪಣ ಇಟ್ಟ. ತಾನು ನೀಡುವ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಂದಿನ ಮಂತ್ರಿಯಾಗಬಹುದೆಂದೂ ರಾಜ ಘೋಷಿಸಿದ. ಪರೀಕ್ಷೆ ಹೀಗಿತ್ತು: ರಾಜನು ಅವರೆಲ್ಲರ ಮುಂದೆ ಒಂದು ಆನೆಯನ್ನು ತರಿಸಿ ನಿಲ್ಲಿಸಿ, “ಈ ಆನೆಯ ನಿಖರವಾದ ತೂಕ ಎಷ್ಟೆಂಬುದನ್ನು ನೀವು ಅಳೆದು ಹೇಳಬೇಕು” ಎಂದು.

ಚಾಕರರಿಗೆ ದಿಗ್ಭ್ರಮೆಯಾಯಿತು. “ಆನೆಯನ್ನು ಅಳೆಯಬಲ್ಲಂತಹ ತಕ್ಕಡಿಯನ್ನು ಎಲ್ಲಿ ತರುವುದು?” ಎಂಬುದು ಅವರಿಗೆದುರಾದ ಸಮಸ್ಯೆ. ಏನನ್ನೂ ಮಾಡಲಾಗದ ಆ ಚಾಕರರು ಕೊನೆಗೆ ರಾಜನ ಬಳಿ ಬಂದು ಜೋಲು ಮುಖ ಹಾಕಿಕೊಂಡು ನಿಂತರು. ಬಳಿಕ ರಾಜನು ಮಂತ್ರಿಯ ಕಡೆ ತಿರುಗಿ, “ಅಯ್ಯಾ, ಈ ಆನೆಯ ತೂಕ ಎಷ್ಟೆಂಬುದನ್ನು ದಯಮಾಡಿ ಅಳೆದು ಹೇಳಬಲ್ಲೆಯಾ?” ಎಂದು ಕೇಳಿದ.

ಆನೆಯ ತೂಕವನ್ನು ಅಳೆದು ಹೇಳಲು ಹೊರಟ ಮಂತ್ರಿಯು ಆರೇ ನಿಮಿಷಗಳಲ್ಲಿ ಹಿಂದಕ್ಕೆ ಬಂದು, “ಸ್ವಾಮಿ ಈ ಗಜದ ತೂಕ ಇಪ್ಪತ್ತು ಒಡ್ಡುಗಳು (1920 ಪೌಂಡ್‌ಗಳು) ಎಂದ. ಇತ್ತ ಆನೆಯನ್ನು ಅಳೆಯಲು ಈ ಮೊದಲು ವಿಫಲರಾಗಿ ಬಾಯಿಬಿಟ್ಟುಕೊಂಡು ನೋಡುತ್ತಾ ನಿಂತಿದ್ದ ಚಾಕರರು, “ಎಲಾ ಇದೇನು? ಈ ಮಂತ್ರಿ ಆರೇ ನಿಮಿಷದಲ್ಲಿ ಆನೆಯ ತೂಕವನ್ನು ನಿಖರವಾಗಿ ಹೇಳಿದ್ದು ಹೇಗೆ?” ಎಂದು ತಗಾದೆ ತೆಗೆದರು.

ಮಂತ್ರಿಯು ಇಲ್ಲ ಮಹಾಸ್ವಾಮಿ, ಆನೆಯ ತಕ್ಕಡಿಗೆ ಹಾಕಿ ತೂಗಿ ನೋಡುವುದು ಅಸಾಧ್ಯ” ಎಂದ.

“ಹಾಗಾದರೆ ನೀನು ಆನೆಯ ತೂಕ ಕಂಡುಹಿಡಿದದ್ದು ಹೇಗೆ?” ಎಂದು ಕೇಳಿದ ರಾಜ.

“ಸ್ವಾಮಿ, ನಾನು ಆನೆಯನ್ನು ಒಂದು ಹಡಗಿನಲ್ಲಿ ಹತ್ತಿಸಿ ತಂದು, ಆನೆ ಇಲ್ಲದ ಹಡಗಿನ ಮೇಲೆ ನೀರು ಎಷ್ಟು ಎತ್ತರ ಬರುತ್ತದೆ ಎಂಬುದನ್ನು ಗುರ್ತು ಹಾಕಿದೆ. ಆನೆಯನ್ನು ಹತ್ತಿಸಿದ ಮೇಲೆ ನೀರಿನ ಎತ್ತರವನ್ನು ಪುನಃ ಗುರುತು ಹಾಕಿದೆ. ಆಮೇಲೆ ಆನೆಯನ್ನು ಹಡಗಿನಿಂದ ಕೆಳಗಿಳಿಸಿ ಹಡಗಿಗೆ ತೂಕದ ಕಲ್ಲುಗಳನ್ನು ಹಾಕುತ್ತಾ ಹೋದೆ. ಆನೆ ಇದ್ದಾಗ ಹಾಕಿದ್ದ ಗುರುತಿನ ತನಕ ಹಡಗು ಮುಳುಗುವವರೆಗೂ ತೂಕದ ಕಲ್ಲುಗಳನ್ನು ಹಾಕಿದೆ. ಆನೆಯ ತೂಕ ಸುಲಭವಾಗಿ ಗೊತ್ತಾಯಿತು” ಎಂದು ಮಂತ್ರಿ ಹೇಳಿದ.

“ಮಂತ್ರಿಯ ಬುದ್ಧಿ ಯಾವ ಮಟ್ಟದ್ದು ಎಂಬುದು ಈಗಾಲಾದರೂ ಗೊತ್ತಾಯಿತೆ?” ಎಂದು ರಾಜ ಚಾಕರರ ಕಡೆ ತಿರುಗಿ ಕೇಳಿದ. “ಆಯಿತು ಸ್ವಾಮಿ” ಎಂದು ಅವರು ಒಪ್ಪಿಕೊಂಡರು.

ಈ ಕಥೆಯನ್ನು ಹೇಳಿ ಮುಗಿಸಿದ ಬಳಿಕ ಪ್ರಭುಪಾದರು ಧರ್ಮಗ್ರಂಥಗಳಲ್ಲಿನ ಒಂದು ವಾಕ್ಯವನ್ನು ಉದ್ಧರಿಸಿದರು: ಬುದ್ಧಿರ್‌ ಯಸ್ಯ ಬಲಂ ತಸ್ಯನಿರ್ಬುದ್ಧೇಸ್‌ ತು ಕುತೋ ಬಲಂ – “ಬುದ್ಧಿಯುಳ್ಳವನಿಗೆ ಬಲವೂ ಇದೆ.

ಬುದ್ಧಿಯಿಲ್ಲದ ಮೂರ್ಖನಿಗೆ ಬಲ ಇಲ್ಲ. “ತಮ್ಮ ಮಾತನ್ನು ಮುಂದುವರೆಸುತ್ತಾ ಪ್ರಭುಪಾದರು, “ವಿಜ್ಞಾನಿಗಳು, ನಾಸ್ತಿಕರು ಹಾಗೂ ಅವರ ಜೊತೆ ಸೇರಿಕೊಂಡ ಭಕ್ತರನ್ನು ಜರಿಯುವ ವಿವಿಧ ಜನರು ಮೂಢರು, ಅವಿವೇಕಿಗಳು, ನಾವು ಇಂತಹವರ ಸಲಹೆಯನ್ನು ಕೇಳುವುದೇ ಇಲ್ಲ” ಎಂದರು. ಕೊನೆಯ ಮಾತಾಗಿ ಪ್ರಭುಪಾದರು: “ನಾವು ಕೃಷ್ಣ ಅಥವಾ ಅವನ ಪ್ರತಿನಿಧಿಯಿಂದ ಸಲಹೆ ಪಡೆಯುತ್ತೇವೆ” ಎಂಬುದಾಗಿ ಹೇಳಿದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi