ಇಂದ್ರಿಯಗಳ ಹತೋಟಿ ಯೋಗಕ್ಕೆ ಅಗತ್ಯ. ಮತ್ತು ಭಕ್ತಿ ಯೋಗ ಅಥವಾ ಕೃಷ್ಣ ಪ್ರಜ್ಞೆ ಇಂದ್ರಿಯಗಳ ಶುದ್ಧೀಕರಣ ಪ್ರಕ್ರಿಯೆಯಾಗಿದೆ. ಇಂದ್ರಿಯಗಳ ಶುದ್ಧೀಕರಣವಾದರೆ ಅವು ತಾನೇ ನಿಯಂತ್ರಣಕ್ಕೆ ಬಂದುಬಿಡುತ್ತವೆ. ಕೃತಕ ವಿಧಾನಗಳಿಂದ ಇಂದ್ರಿಯಗಳ ಚಟುವಟಿಕೆಯನ್ನು ತಡೆಯಲಾಗದು. ಆದರೆ ದೇವೋತ್ತಮನ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಇಂದ್ರಿಯಗಳನ್ನು ಶುದ್ಧೀಕರಿಸಿಕೊಂಡರೆ ಇಂದ್ರಿಯಗಳನ್ನು ಅನಗತ್ಯ ಚಟುವಟಿಕೆಗಳಿಂದ ನಿಯಂತ್ರಿಸಬಹುದು. ಅಷ್ಟೇ ಅಲ್ಲ, ದೇವರ ಅಲೌಕಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬಹುದು.
– ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
ಶ್ರೀಮದ್ ಭಾಗವತ 3.15.45, ಭಾವಾರ್ಥ
* * * *
ನಿಷ್ಪಕ್ಷಪಾತಕ್ಕೆ ಹೆಸರಾದ ಶ್ರೀಕೃಷ್ಣನು ತನ್ನ ಭಕ್ತರಿಗೆ ಮಾತ್ರ ಪಕ್ಷಪಾತಿ ಎಂಬುದು ಸೋಜಿಗ.
– ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಠಾಕುರ
ಬ್ರಹ್ಮ ಸಂಹಿತ 5.54, ಭಾವಾರ್ಥ
* * * *
ಶ್ರೀ ಕೃಷ್ಣನಿಗೆ ವೈರಿಯಾಗಿ ಇಂದ್ರಿಯ ತೃಪ್ತಿ ಇಚ್ಛಿಸಿದರೆ ಅವನು ದೇವರ ಮಾಯೆಯಿಂದ ಕೆಳಗುರುಳುತ್ತಾನೆ.
– ಶ್ರೀಲ ಜಗದಾನಂದ ಪಂಡಿತ, ಪ್ರೇಮ ವಿವರ್ತ
* * * *
ಶ್ರೀ ಕೃಷ್ಣನು ದೇವೋತ್ತಮ ಪರಮ ಪುರುಷ. ಅವನನ್ನು ಧ್ಯಾನಿಸಬೇಕು. ಅವನೊಡನೆ ಪ್ರೀತಿ ವಿನಿಮಯದ ರುಚಿಯನ್ನು ಆಸ್ವಾದಿಸಬೇಕು. ಅವನನ್ನು ಪೂಜಿಸಿ ಅವನಿಗಾಗಿ
ಯಜ್ಞಗಳನ್ನು ಮಾಡಬೇಕು.
– ಗೋಪಾಲ-ತಾಪನಿ ಉಪನಿಷದ್, ಪೂರ್ವ 50
* * * *
ಶ್ರೀ ಕೃಷ್ಣನ ಶಾಶ್ವತ ಸೇವಕನಾಗುವುದು ಜೀವಿಯ ಸ್ವರೂಪಸ್ಥಿತಿ, ಏಕೆಂದರೆ, ಜೀವಿಯು ಕೃಷ್ಣನ ತಟಸ್ಥಶಕ್ತಿ. ಅದು ಏಕಕಾಲಕ್ಕೆ ಭಗವಂತನಿಗಿಂತ ಭಿನ್ನ ಮತ್ತು ಒಂದು.
– ಶ್ರೀ ಚೈತನ್ಯ ಮಹಾಪ್ರಭು
ಶ್ರೀ ಚೈತನ್ಯ ಚರಿತಾಮೃತ, ಮಧ್ಯ-ಲೀಲ 20.108
* * * *
ನನ್ನ ಪ್ರೀತಿಯ ಉದ್ಧವನೇ, ನನ್ನ ಭಕ್ತರು ನನಗೆ ಸಲ್ಲಿಸುವ ಪರಿಶುದ್ಧ ಸೇವೆ ನನ್ನನ್ನು ಅವರ ಅಧೀನನ್ನಾಗಿಸುತ್ತದೆ. ಹಠಯೋಗ, ಸಾಂಖ್ಯ ಸಿದ್ಧಾಂತ, ಪುಣ್ಯಕಾರ್ಯ, ವೇದಾಧ್ಯಯನ, ವ್ರತ ಅಥವಾ ತ್ಯಾಗದಿಂದ ನನ್ನನ್ನು ನಿಯಂತ್ರಿಸಲಾಗದು.
– ಶ್ರೀಕೃಷ್ಣ , ಶ್ರೀಮದ್ ಭಾಗವತ 11.14.20
* * * *
ಯಾರೇ ಆಗಲಿ ಸೂರ್ಯಗ್ರಹಣದ ಸಮಯದಲ್ಲಿ ಕೋಟಿ ಗೋದಾನ ಮಾಡಲಿ, ಗಂಗೆ-ಯಮುನೆಯರ ಸಂಗಮದಲ್ಲಿ ಲಕ್ಷಗಟ್ಟಲೆ ವರ್ಷ ವಾಸಿಸಲಿ ಅಥವಾ ಬ್ರಾಹ್ಮಣರಿಗೆ ಪರ್ವತದಷ್ಟು ಸ್ವರ್ಣವನ್ನು ಅರ್ಪಣೆ ಮಾಡಲಿ, ಹರೇ ಕೃಷ್ಣ ಎಂಬ ಪವಿತ್ರ ನಾಮದ ಪಠಣದಿಂದುಂಟಾಗುವ ಅರ್ಹತೆಯ ನೂರನೆಯ ಒಂದು ಭಾಗ ಪುಣ್ಯವೂ ಮೊದಲು ಹೇಳಿದ ದಾನ ಕಾರ್ಯಗಳಿಂದ ಲಭಿಸುವುದಿಲ್ಲ.
– ವೇದ ಸೂಕ್ತಿ, ಶ್ರೀ ಚೈತನ್ಯ ಚರಿತಾಮೃತದಲ್ಲಿ ಉಲ್ಲೇಖ
ಆದಿ ಲೀಲ 3.79 ಭಾವಾರ್ಥ.
* * * *
ಮಹಾವಿಷ್ಣುವಿನ ಪಾದ ಕಮಲವು ಎಲ್ಲ ದೇವತೆಗಳ ಪರಮ ಲಕ್ಷ್ಯ, ಗುರಿ. ಆಕಾಶದಲ್ಲಿನ ಸೂರ್ಯನಂತೆ ಆ ಪಾದ ಕಮಲಗಳು ಪ್ರಕಾಶಿಸಿ ಆನಂದ ಉಂಟುಮಾಡುತ್ತವೆ.
– ಋಗ್ವೇದ, 1.22.20
* * * *