ವೇದವಾಕ್ಯ

ಭಗವತ್‌ ಕೃಪೆಯಿಂದ, ಓರ್ವ ಅನಭಿಜ್ಞನು ಕೂಡ, ಅತ್ಯುನ್ನತ ಆಧ್ಯಾತ್ಮಿಕ ಸಿದ್ಧಿಯ ಸ್ತೋತ್ರಗಳನ್ನು ರಚಿಸಬಹುದು. ಅಂತಹ ಆಧ್ಯಾತ್ಮಿಕ ಸಿದ್ಧಿಯು ಭೌತಿಕ ಅರ್ಹತೆಗಳಿಂದ ಪರಿಮಿತವಾಗಿರುವುದಿಲ್ಲ. ಆದರೆ, ಅದು ಒಬ್ಬನ ದಿವ್ಯಸೇವಾರ್ಪಣೆಯ ಪ್ರಾಮಾಣಿಕ ಪ್ರಯತ್ನದ ಪ್ರಭಾವದಿಂದ ಅಭಿವೃದ್ಧಿಗೊಳ್ಳುವುದು. ಆಧ್ಯಾತ್ಮಿಕ ಸಿದ್ಧಿಗೆ ಏಕಮೇವ ಅರ್ಹತೆಯೆಂದರೆ, ಸ್ವಯಂ ಪ್ರೇರಣೆಯ ಸಾಧನೆ.

  – ಶ್ರೀ ಶ್ರೀಮದ್‌ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ,

ಶ್ರೀಮದ್‌ ಭಾಗವತಮ್‌ 3.9.38 

* * * *

ರಸಮಯವಾದ ಲೀಲೆಗಳು ಹಾಗೂ ವೈಭವ ಉಳ್ಳ ಅರ್ಹತೆಯ ಅನೇಕ ಮಂದಿ ಈ ಜಗತ್ತಿನಲ್ಲಿದ್ದಾರೆ ಎಂದು ಜನರು ಹೇಳಬಹುದು. ಆದರೆ ವ್ರಜದ ರಾಜಕುಮಾರ ಶ್ರೀ ಕೃಷ್ಣನೇ ಇದೆಲ್ಲದರ ಮೂಲ ಎಂದು ಸಂತರು, ಋಷಿಗಳು  ಖಚಿತವಾಗಿ ಹೇಳುತ್ತಾರೆ.

– ಕೃಷ್ಣದಾಸ ಕವಿರಾಜ ಗೋಸ್ವಾಮಿ, ಗೋವಿಂದ ಲೀಲಾಮೃತ

* * * *

ಇದ್ದುದನ್ನು ಇದ್ದಂತೆ ವಿಷಯಗಳನ್ನು ತಿಳಿದುಕೊಳ್ಳುವಲ್ಲಿ ಬಹಳ ನಿಪುಣರೂ ಅತ್ಯಂತ ಬುದ್ಧಿಶಾಲಿಗಳೂ ಆದ ವ್ಯಕ್ತಿಗಳು, ಕೀರ್ತನೆಗೂ ಶ್ರವಣಕ್ಕೂ ತಕ್ಕುದಾದ ಭಗವಂತನ ಪವಿತ್ರಕಾರ್ಯಗಳನ್ನು ಲೀಲೆಗಳನ್ನು ಕುರಿತಾದ ಆಖ್ಯಾನಗಳನ್ನು ಕೇಳುವುದರಲ್ಲಿ ನಿರತರಾಗಿರುತ್ತಾರೆ.  ಅಂತಹವರು ಅತ್ಯುನ್ನತವಾದ ಭೌತಿಕ ವರವಾಗಿರುವ ಮೋಕ್ಷವನ್ನು ಕೂಡ ಲೆಕ್ಕಿಸುವುದಿಲ್ಲ.  ಹೀಗಿರುವಾಗ, ಬೇರೆ ಕಡಮೆ ಮಹತ್ತ್ವದ ವರಗಳಾಗಿರುವ ಸ್ವರ್ಗಲೋಕದ ಭೌತಿಕ ಸುಖವನ್ನು ಕುರಿತು ಹೇಳುವುದೇನಿದೆ?

– ಚತ್ಸುಕುಮಾರರು, ಶ್ರೀಮದ್‌ ಭಾಗವತಮ್‌  3.15.48

* * * *

ಕೃಷ್ಣನ ಪವಿತ್ರ ನಾಮವು ಸಿಹಿಯಲ್ಲಿ ಸಿಹಿ, ಪುಣ್ಯದಲ್ಲಿ ಪುಣ್ಯ. ಎಲ್ಲ ವೇದಗಳ ಈ ಅಲೌಕಿಕ ಫಲವು ಸಂಪೂರ್ಣವಾಗಿ ಆಧ್ಯಾತ್ಮಿಕ. ಯಾರಾದರೂ ಇದನ್ನು ಪಠಿಸಿದರೆ, ನಂಬಿಕೆ ಅಥವಾ ತಿರಸ್ಕಾರದಿಂದ, ಅವರು  ಮುಕ್ತರಾಗುತ್ತಾರೆ. 

– ಸ್ಕಾಂದ ಪುರಾಣ, ಪ್ರಭಾಸ-ಖಂಡ

* * * *

ಅಪೌರುಷ ಧರ್ಮ ಗ್ರಂಥಗಳಲ್ಲಿ ಒಪ್ಪಿತವಾಗಿರುವ ಹಾಗೂ ದೇವೋತ್ತಮ ಪರಮ ಪುರುಷನ ತೃಪ್ತಿಯ ಗುರಿ ಹೊಂದಿರುವ ಯಾವುದೇ ಚಟುವಟಿಕೆಗಳನ್ನು ಭಕ್ತಿ ಸೇವೆಯ ನಿಯಂತ್ರಕ ತತ್ತ್ವಗಳೆಂದು ಸಂತ ಗುರುಗಳು ಅಂಗೀಕರಿಸುತ್ತಾರೆ. ಸೂಕ್ತ ಗುರುವಿನ ಮೂಲಕ ಅಂತಹ ಸೇವೆಯನ್ನು ಕ್ರಮಬದ್ಧವಾಗಿ ಯಾರು ಅನುಷ್ಠಾನಗೊಳಿಸುವರೋ ಅವರು ಕ್ರಮೇಣ ದೇವೋತ್ತಮ ಪರಮ ಪುರುಷನ ಪರಿಶುದ್ಧ ಪ್ರೀತಿಯ ವೇದಿಕೆ ಏರಬಹುದು.

– ಶ್ರೀ ನಾರದ ಮುನಿ, ನಾರದ-ಪಂಚರಾತ್ರ

* * * *

ಓ! ದೇವರೇ, ನೀನು ನಿನ್ನ ಯೋಗಮಾಯೆಯಿಂದ ಅಡಗಿಕೊಂಡರೂ ನಿನಗೆ ಸಂಪೂರ್ಣವಾಗಿ ಶರಣಾಗಿರುವ ಭಕ್ತರು ನಿನ್ನ ವೈಭವವನ್ನು ಸತತವಾಗಿ ನೋಡಬಹುದಾಗಿದೆ. ನಿನ್ನ ವೈಭವವು ಕಾಲ, ಸ್ಥಳ, ಮತ್ತು ಯಾವುದೇ ಲೌಕಿಕ ವಸ್ತುವಿನಿಂದ ಮೀರಿದುದು. ಅದಕ್ಕೆ ಸಮನಾದ ಅಥವಾ ಉತ್ಕೃಷ್ಟವಾದುದು ಬೇರೊಂದಿಲ್ಲ.

– ಶ್ರೀ ಯಾಮುನಾಚಾರ್ಯ, ಸ್ತೋತ್ರ ರತ್ನ  13

* * * *

ಈ ಲೇಖನ ಶೇರ್ ಮಾಡಿ