ವೇದವಾಕ್ಯ

ಹೇ ಕೌಂತೇಯ, ಸುಖದುಃಖಗಳು ಸ್ವಲ್ಪಕಾಲ ಕಾಣಿಸಿಕೊಳ್ಳುವುವು, ಕ್ರಮೇಣ ಮಾಯವಾಗುವುವು, ಚಳಿಗಾಲ ಮತ್ತು ಬೇಸಿಗೆಗಳು ಕಾಣಿಸಿಕೊಂಡು ಮಾಯವಾಗುವಂತೆ. ಭರತವಂಶಜನೆ, ಅವು ಇಂದ್ರಿಯಗಳ ಗ್ರಹಣಶಕ್ತಿಯಿಂದ ಉದ್ಭವವಾಗುತ್ತವೆ. ಅವುಗಳಿಂದ ಕ್ಷೋಭೆಗೊಳಗಾಗದೆ ಸಹಿಸುವುದನ್ನು ಕಲಿಯಬೇಕು.

– ಶ್ರೀ ಕೃಷ್ಣ, ಭಗವದ್ಗೀತೆ, 2.14

* * * *

ಸಕಲ ಮುನಿಗಳಿಗೆ ಗುರುವಾದ ವ್ಯಾಸಪುತ್ರ ಶುಕಮುನಿಗಳಿಗೆ ಗೌರವಪೂರ್ಣ ಪ್ರಣಾಮಗಳನ್ನು ಸಲ್ಲಿಸುವೆನು. ಅವರು, ಕತ್ತಲು ಕವಿದ ಪ್ರಪಂಚವನ್ನು ದಾಟಲು ಹೆಣಗುತ್ತಿರುವ ಸಾಂಸಾರಿಕರ ಮೇಲೆ ಪರಮ ಕರುಣೆ ತೋರಿ, ಸಕಲ ವೇದಗಳ ಸಾರವೆನಿಸಿದ, ಅತ್ಯಂತ ರಹಸ್ಯವಾದ ಈ ಪುರಾಣವನ್ನು ಸ್ವಾನುಭವದಿಂದ ಬೋಧಿಸಿದರು.

– ಶ್ರೀ ಸೂತ ಗೋಸ್ವಾಮಿ, ಶ್ರೀಮದ್‌ ಭಾಗವತ, 1.2.3

* * * *

ಉಪನಿಷತ್ತುಗಳು ಯಾವುದನ್ನು ನಿರಾಕಾರ ಬ್ರಹ್ಮವೆಂದು ಹೇಳುವುವೋ ಅದು ಆ ಭಗವಂತನ ದೇಹಕಾಂತಿ; ಪರಮಾತ್ಮನೆಂದು ಕರೆಯಲಾದ ಭಗವಂತನು ಅವನ ಸ್ಥಳೀಯ ವಿಸ್ತರಣೆ. ಚೈತನ್ಯ ಮಹಾಪ್ರಭುವೇ ಆರು ಬಗೆಯ ಐಶ್ವರ್ಯ ಸಮೇತನಾದ, ದೇವೋತ್ತಮ ಪರಮ ಪುರುಷನಾದ ಸಾಕ್ಷಾತ್‌ ಶ್ರೀಕೃಷ್ಣ. ಅವನೇ ಪರಮ ಸತ್ಯನು, ಅವನಿಗೆ ಸರಿಸಾಟಿಯಾದ ಅಥವಾ ಅವನಿಗಿಂತ ಹೆಚ್ಚಿನ ಸತ್ಯ ಬೇರೊಂದಿಲ್ಲ .

– ಶ್ರೀಲ ಕೃಷ್ಣದಾಸ ಕವಿರಾಜ ಗೋಸ್ವಾಮಿ, ಚೈತನ್ಯ ಚರಿತಾಮೃತ, ಆದಿ 1.3

* * * *

ಅತ್ಯಂತ ಕರುಣಾಮಯಿ, ದೇವೋತ್ತಮ ಪರಮ ಪುರುಷನಾದ ಶ್ರೀ ಕೃಷ್ಣ ಚೈತನ್ಯ ಮಹಾಪ್ರಭುಗಳ ಪಾದ ಕಮಲಗಳಿಗೆ ಶರಣಾಗುವೆ. ಮೌಢ್ಯದಲ್ಲಿ ಮುಳುಗಿರುವ ಆತ್ಮಗಳನ್ನು ಮುಕ್ತಿಗೊಳಿಸಿ ಅವರಿಗೆ ಕೃಷ್ಣಪ್ರೇಮದ ಅತ್ಯುನ್ನತ ಉಡುಗೊರೆ ನೀಡುತ್ತಾನೆ. ಈ ಮೂಲಕ ಅವನು ಅವರನ್ನು ಕೃಷ್ಣ ಪ್ರಜ್ಞೆಯಲ್ಲಿ ಹುಚ್ಚರಾಗುವಂತೆ ಮಾಡುತ್ತಾನೆ.

– ಶ್ರೀಲ ರೂಪ ಗೋಸ್ವಾಮಿ, ಗೋವಿಂದ ಲೀಲಾಮೃತ

* * * *

ಈ ಲೇಖನ ಶೇರ್ ಮಾಡಿ