ಶ್ರೀ ಕೃಷ್ಣನ ಪವಿತ್ರ ನಾಮವನ್ನು ಜಪಿಸುವ ಭಕ್ತನನ್ನು ಮನಸಾ ಗೌರವಿಸಬೇಕು. ಆಧ್ಯಾತ್ಮಿಕ ದೀಕ್ಷೆ ಪಡೆದು ವಿಗ್ರಹಾರಾಧನೆ ಮಾಡುವ ಭಕ್ತನಿಗೆ ನಮ್ರ ನಮನಗಳನ್ನು ಸಲ್ಲಿಸಬೇಕು. ಅಚಲ ಭಕ್ತಿಸೇವೆಯಲ್ಲಿ ಮುಂದುವರಿದು, ಇತರರನ್ನು ನಿಂದಿಸುವ ಸ್ವಭಾವವಿಲ್ಲದ ಶುದ್ಧ ಭಕ್ತರ ಸಹವಾಸ ಮಾಡಿ ಅವರ ಸೇವೆಯನ್ನು ನಿಷ್ಠೆಯಿಂದ ಮಾಡಬೇಕು.
– ಶ್ರೀಲ ರೂಪ ಗೋಸ್ವಾಮಿ, ಉಪದೇಶಾಮೃತ, ಶ್ಲೋಕ 5
* * * *
ಕೆಟ್ಟ ಸಂಗವನ್ನು ತೊರೆದು, ಭಕ್ತರ ಸಹವಾಸವನ್ನು ಮಾತ್ರ ಮಾಡಬೇಕು. ತಮ್ಮ ಸಾಕ್ಷಾತ್ಕಾರದ ಉಪದೇಶಗಳಿಂದ ಅಂತಹ ಸಂತರು ವ್ಯಕ್ತಿಯ ಭಕ್ತಿಸೇವೆಗೆ ಪ್ರತಿಕೂಲವಾದ ಚಟುವಟಿಕೆಗಳಿಗೆ ಅಂಟಿಕೊಳ್ಳುವ ಗಂಟನ್ನು ಕತ್ತರಿಸಬಲ್ಲರು.
– ಭಾಗವತ 11.26.26
* * * *
ಓ! ಮುಕುಂದ! ನಾನು ನಿನಗೆ ಶಿರಸಾಬಾಗಿ ವಂದಿಸುವೆ ಮತ್ತು ನನ್ನ ಈ ಒಂದು ಇಚ್ಛೆಯನ್ನು ಪೂರೈಸು ಎಂದು ಗೌರವದಿಂದ ಕೋರುವೆ : ನನ್ನ ಮುಂದಿನ ಎಲ್ಲ ಜನ್ಮಗಳಲ್ಲಿಯೂ ನಿನ್ನ ಕೃಪೆಯಿಂದ ನಿನ್ನ ಪಾದ ಕಮಲವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಲು ಮತ್ತು ಎಂದಿಗೂ ಮರೆಯದಿರಲು ಇಚ್ಛಿಸುವೆ.
– ಮುಕುಂದಮಾಲಾ, ಸ್ತೋತ್ರ 3
* * * *
ಕೆಲವರು ಧ್ಯಾನದಿಂದ, ಮತ್ತೆ ಕೆಲವರು ಜ್ಞಾನವನ್ನು ಉಪಯೋಗಿಸಿಕೊಂಡು, ಇನ್ನೂ ಕೆಲವರು ನಿಷ್ಕಾಮ ಕರ್ಮದಿಂದ ತಮ್ಮೊಳಗಿರುವ ಪರಮಾತ್ಮನನ್ನು ಕಾಣುತ್ತಾರೆ.
– ಭಗವದ್ಗೀತೆ, 13.25
* * * *