ವ್ಯಕ್ತಿಯು ಸ್ವಂತದ ಇಂದ್ರಿಯಗಳ ತೃಪ್ತಿಗಾಗಿ ಮಾಡುವುದೆಲ್ಲವೂ ಕಾಮ (ವಿಷಯಾಭಿಲಾಷೆ). ಆದರೆ ಕೃಷ್ಣನ ಇಂದ್ರಿಯಗಳ ತೃಪ್ತಿಗಾಗಿ ಮಾಡುವುದೆಲ್ಲವೂ ಪ್ರೇಮ (ಒಲವು).
– ಚೈತನ್ಯ ಚರಿತಾಮೃತ, ಆದಿ ಲೀಲ, 4.165
* * * *
ಬದುಕಿನ ಪರಿಪೂರ್ಣತೆಯನ್ನು ಹೊಂದಲು ಭಕ್ತಿಸೇವೆಯೊಂದೇ ಮಾರ್ಗವೆಂಬ ದೃಢ ನಿರ್ಧಾರದಲ್ಲಿ ನೆಲೆ ನಿಂತ ಮೇಲೂ ಧಾರ್ಮಿಕ ಆದೇಶಗಳ ಪಾಲನೆಯನ್ನು ಮುಂದುವರಿಸಬೇಕು.
– ನಾರದ ಭಕ್ತಿ ಸೂತ್ರ – 12
* * * *
ಓ, ನನ್ನ ಪ್ರಭುವೇ! ಅಗ್ನಿಯಂತೆ ಶಕ್ತಿಶಾಲಿಯಾದವನೇ, ಸರ್ವಶಕ್ತನೇ, ನಿನ್ನ ಪಾದಗಳಿಗೆರಗಿ ಪ್ರಣಾಮ ಸಲ್ಲಿಸುವೆ. ಓ, ನನ್ನ ಭಗವಂತನೇ, ನಿನ್ನನ್ನು ಹೊಂದಲು ನನ್ನನ್ನು ಸರಿಯಾದ ಪಥದಲ್ಲಿ ಮುನ್ನಡೆಸು. ನನ್ನ ಈ ಹಿಂದಿನ ಎಲ್ಲ ಕರ್ಮಗಳೂ ನಿನಗೆ ತಿಳಿದಿದೆ. ಆದುದರಿಂದ ನನ್ನ ಪ್ರಗತಿಗೆ ಯಾವುದೇ ಅಡೆ ತಡೆಯಾಗದಿರಲು ನನ್ನನ್ನು ನನ್ನ ಹಿಂದಿನ ಎಲ್ಲ ಪಾಪ ಪ್ರತಿಕ್ರಿಯೆಗಳಿಂದ ಮುಕ್ತಗೊಳಿಸು.
– ಶ್ರೀ ಈಶೋಪನಿಷದ್, ಮಂತ್ರ 18
* * * *
ಭಕ್ತರು ವಿಧವಿಧದ ಚಟುವಟಿಕೆಗಳಲ್ಲಿ ನಿರತರಾಗಿದ್ದಾಗಲೂ ತಮ್ಮ ಮನಸ್ಸುಗಳನ್ನು ನಿನ್ನ ಪಾದಕಮಲಗಳಲ್ಲಿ ಸಂಪೂರ್ಣವಾಗಿ ತನ್ಮಯಗೊಳಿಸಿರುತ್ತಾರೆ ಮತ್ತು ಅವರು ನಿನ್ನ ದಿವ್ಯನಾಮಗಳನ್ನು ಮತ್ತು ರೂಪಗಳನ್ನು ನಿರಂತರವಾಗಿ ಶ್ರವಣ, ಕೀರ್ತನ, ಚಿಂತನಗಳನ್ನು ಮಾಡುವರಲ್ಲದೆ, ಇತರರು ಕೂಡ ನಿನ್ನ ದಿವ್ಯನಾಮಗಳನ್ನು ಮತ್ತು ರೂಪಗಳನ್ನು ಸ್ಮರಿಸುವಂತೆ ಮಾಡುವರು. ಅಂತಹವರು ಯಾವಾಗಲೂ ಅಲೌಕಿಕ ನೆಲೆಯಲ್ಲಿ ಇರುತ್ತಾರೆ ಮತ್ತು ಹೀಗೆ ದೇವೋತ್ತಮ ಪರಮ ಪುರುಷನನ್ನು ಅರಿತುಕೊಳ್ಳಬಲ್ಲರು.
– ಶ್ರೀಮದ್ ಭಾಗವತ 10.2.37
* * * *