ವೇದವಾಕ್ಯ

ಭಗವಂತನ ಪರಿಶುದ್ಧ ಪ್ರೇಮದಲ್ಲಿ ಅಲೌಕಿಕ ಭಕ್ತಿ ಸೇವೆಯ ಹಂತವನ್ನು ಮುಟ್ಟಿದಾಗ
ವ್ಯಕ್ತಿಯು ಪರಿಪೂರ್ಣ, ಶಾಶ್ವತ ಮತ್ತು ಶಾಂತನಾಗುತ್ತಾನೆ.

– ನಾರದ ಭಕ್ತಿ ಸೂತ್ತ 4

* * * *

ಸಾಸಿವೆಯಲ್ಲಿ ತೈಲ ಇರುವಂತೆ, ಮರದಲ್ಲಿ ಬೆಂಕಿ ಇರುವಂತೆ, ಹಾಲಿನಲ್ಲಿ ಬೆಣ್ಣೆ ಇರುವಂತೆ ಮತ್ತು ಹೂವಿನಲ್ಲಿ ಸುವಾಸನೆ ಇರುವಂತೆ ನಾನು, ಪರಮಾತ್ಮ, ಎಲ್ಲ ಜೀವಿಗಳ ಹೃದಯದಲ್ಲಿ ನೆಲೆಸಿರುವೆ.

– ಶ್ರೀ ವಿಷ್ಣು, ವಾಸುದೇವ ಉಪನಿಷದ್‌

* * * *

ಓ ಮನವೇ, ಮುರಭಿಯನ್ನು ಕುರಿತು ಯೋಚಿಸುವುದರಲ್ಲಿ ಆನಂದ ಸವಿಯುವುದನ್ನು ನಿಲ್ಲಿಸಬೇಡ. ಅವನು ಸರಸಿಜ ನಯನ, ಸ-ಶಂಖ-ಚಕ್ರ. ದಿಟವಾಗಿಯೂ ಶ್ರೀಹರಿಯ ದಿವ್ಯ ಪಾದಗಳನ್ನು ಧ್ಯಾನಿಸುವುದರ ಹೊರತು ಅಂತಹ ಮಹತ್‌ ಸುಖವನ್ನು ಕೊಡುವ ಬೇರೇನೂ ನಾ ಕಾಣೆ.

– ಮುಕುಂದ ಮಾಲಾ, ಸೂತ್ರ 7

* * * *

ಕೃಷ್ಣನ ಪವಿತ್ರನಾಮ, ವ್ಯಕ್ತಿತ್ವ, ಲೀಲೆಗಳು, ಚಟುವಟಿಕೆಗಳು ಎಲ್ಲವೂ ಕಲ್ಲುಸಕ್ಕರೆಯಂತೆ ದಿವ್ಯ ರುಚಿಯನ್ನು ಹೊಂದಿವೆ. ಅವಿದ್ಯೆ (ಅಜ್ಞಾನ) ಎಂಬ ಕಾಮಾಲೆ ಹತ್ತಿದವನಿಗೆ ಸಿಹಿ ತಿಂಡಿಯ ಸವಿ ಗೊತ್ತಾಗುವುದಿಲ್ಲ, ಆದರೆ ಈ ಸವಿಯಾದ ನಾಮಗಳನ್ನು ಸುಮ್ಮನೆ ಪ್ರತಿನಿತ್ಯ ಜಪಿಸುವವನ ನಾಲಗೆಯಲ್ಲಿ ಸಹಜವಾಗಿ ರುಚಿ ಹುಟ್ಟಿ, ಅವನ ರೋಗವು ಕ್ರಮೇಣ ಬುಡಸಮೇತ ನಾಶವಾಗುತ್ತದೆ.

– ಉಪದೇಶಾಮೃತ – 7

* * * *

ಈ ಲೇಖನ ಶೇರ್ ಮಾಡಿ