ಶ್ರೀಕೃಷ್ಣ ಪಾಕಶಾಲೆ
– ಶ್ರೀಮತಿ ಸುಭದ್ರಾ ಪ್ರಕಾಶ್
ಅವಲಕ್ಕಿ ಲಾಡು

ಬೇಕಾಗುವ ಪದಾರ್ಥಗಳು :
ಅವಲಕ್ಕಿ – 1 ಬಟ್ಟಲು
ತೆಂಗಿನ ತುರಿ – 1 ಬಟ್ಟಲು
ಹಾಲು – 1/2 ಬಟ್ಟಲು
ತುಪ್ಪ -1/2 ಬಟ್ಟಲು
ಬೆಲ್ಲ – 1/4 ಕೆ.ಜಿ.
ಏಲಕ್ಕಿ – 4
ದ್ರಾಕ್ಷಿ – ಸ್ವಲ್ಪ
ಗೋಡಂಬಿ – ಸ್ವಲ್ಪ
ಮಾಡುವ ವಿಧಾನ:
ಅವಲಕ್ಕಿಯನ್ನು ತರಿ ತರಿಯಾಗಿ ಬೀಸಿಕೊಳ್ಳಿ. ಬೆಲ್ಲವನ್ನು ಪುಡಿ ಮಾಡಿ. ಹಾಲನ್ನು ಕಾಯಿಸಿ ಅದಕ್ಕೆ ಬೆಲ್ಲದ ಪುಡಿಯನ್ನು ಸೇರಿಸಿ ಕುದಿಸಿ. ಏಲಕ್ಕಿ ಪುಡಿಯನ್ನು ಕುಡಿಯುವ ಹಾಲಿಗೆ ಹಾಕಿ ಕಲಸಿ. ಅವಲಕ್ಕಿ ತರಿ ಮತ್ತು ತೆಂಗಿನ ತುರಿ ಸೇರಿಸಿ ಕಲಸಿ. ಇದಕ್ಕೆ ಹಾಲನ್ನು ಹಾಕಿ ಹದವಾಗಿ ಕಲಸಿ ಲಾಡು ಕಟ್ಟಿ. ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿಯನ್ನು ಲಾಡಿನ ಮೇಲೆ ಇಟ್ಟು ಅಲಂಕರಿಸಿ. ಶ್ರೀಕೃಷ್ಣನಿಗೆ ನೈವೇದ್ಯ ಮಾಡಿ ಸೇವಿಸಿ.
ಅವಲಕ್ಕಿ ಪಾಯಸ

ಬೇಕಾಗುವ ಪದಾರ್ಥಗಳು :
ಅವಲಕ್ಕಿ – 1 ಬಟ್ಟಲು
ತೆಂಗಿನ ತುರಿ – 1 ಬಟ್ಟಲು
ಹಾಲು – 1 ಲೀಟರ್
ಸಕ್ಕರೆ – 1/4 ಕೆ.ಜಿ.
ತುಪ್ಪ – 4 ಚಮಚ
ದ್ರಾಕ್ಷಿ, ಗೋಡಂಬಿ – ಸ್ವಲ್ಪ
ಮಾಡುವ ವಿಧಾನ:
ಹಾಲನ್ನು ಕಾಯಿಸಿ, ಸಕ್ಕರೆ ಸೇರಿಸಿ ಕುದಿಸಿ. ಅವಲಕ್ಕಿಯನ್ನು ತೊಳೆದು ನೀರು ಬಸಿದು ಕುದಿಯುತ್ತಿರುವ ಹಾಲಿಗೆ ಹಾಕಿ ಕಲಸಿ. ತೆಂಗಿನ ತುರಿಯನ್ನು ಸೇರಿಸಿ. ಅವಲಕ್ಕಿ ಬೆಂದ ಮೇಲೆ ಏಲಕ್ಕಿ ಪುಡಿಯನ್ನು ಹಾಕಿ ಕಲಸಿ. ದ್ರಾಕ್ಷಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಸೇರಿಸಿ. ಶ್ರೀಕೃಷ್ಣನಿಗೆ ಅರ್ಪಿಸಿ ಸೇವಿಸಿ.
ರವೆ ರೊಟ್ಟಿ

ಬೇಕಾಗುವ ಪದಾರ್ಥಗಳು :
ಬಾಂಬೆ ರವೆ / ಮೀಡಿಯಂ ರವೆ – 1 ಬಟ್ಟಲು
ಕ್ಯಾರೆಟ್ ತುರಿ – 1/2 ಬಟ್ಟಲು
ತೆಂಗಿನ ತುರಿ – 1/2 ಬಟ್ಟಲು
ಕೊತ್ತಂಬರಿ ಸೊಪ್ಪು – 1/2 ಬಟ್ಟಲು
ಜೀರಿಗೆ – 1 ಚಮಚ
ಕರಿಬೇವು – 2 ಎಸಳು
ಉಪ್ಪು – ರುಚಿಗೆ ತಕ್ಕಷ್ಟು
ಅಡುಗೆ ಸೋಡಾ – ಚಿಟಿಕೆ
ಮಾಡುವ ವಿಧಾನ :
ರವೆಯನ್ನು ಒಂದು ಅಗಲವಾದ ಪಾತ್ರೆಗೆ ಹಾಕಿ. ಕ್ಯಾರೆಟ್ ತುರಿ ಮತ್ತು ತೆಂಗಿನ ತುರಿಯನ್ನು ಸೇರಿಸಿ. ಕೊತ್ತಂಬರಿ ಮತ್ತು ಕರಿಬೇವನ್ನು ಸಣ್ಣದಾಗಿ ಕತ್ತರಿಸಿ. ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಕಲಸಿ. 10 ನಿಮಿಷ ನೆನೆಯಲು ಬಿಡಿ. ನಾನ್ ಸ್ಟಿಕ್ ತವಾಗೆ ಎಣ್ಣೆ ಸವರಿ ರೊಟ್ಟಿ ತಟ್ಟಿ. ಎರಡೂ ಕಡೆ ಹದವಾಗಿ ಬೇಯಿಸಿ.
ಸೌತೇಕಾಯಿ ರವಾ ಇಡ್ಲಿ

ಬೇಕಾಗುವ ಪದಾರ್ಥಗಳು :
ಮೀಡಿಯಂ ರವೆ – 2 ಬಟ್ಟಲು
ಸೌತೇಕಾಯಿ – 1 (ಮೀಡಿಯಂ ಅಳತೆ)
ಕೊತ್ತಂಬರಿ ಸೊಪ್ಪು – 1 ಕಂತೆ
ಕರಿಬೇವು – 2 ಎಸಳು
ಕ್ಯಾರೆಟ್ ತುರಿ – 1 ಬಟ್ಟಲು
ಉಪ್ಪು – ರುಚಿಗೆ ತಕ್ಕಷ್ಟು
ಅಡುಗೆ ಸೋಡಾ – ಚಿಟಿಕೆ
ಮಾಡುವ ವಿಧಾನ:
ರವೆಯನ್ನು ಹದವಾಗಿ ಹುರಿದು ಆರಲು ಬಿಡಿ. ಸೌತೇಕಾಯಿಯ ಸಿಪ್ಪೆಯನ್ನು ತೆಗೆದು ತುರಿದುಕೊಳ್ಳಿ. ಕೊತ್ತಂಬರಿ, ಕರಿಬೇವನ್ನು ಸಣ್ಣಗೆ ಕತ್ತರಿಸಿ. ಎಲ್ಲ ಸಾಮಗ್ರಿಗಳನ್ನು ಸೇರಿಸಿ ಕಲಸಿ. 10 ನಿಮಿಷ ನೆನೆಯಲು ಬಿಡಿ. ಇಡ್ಲಿ ಸ್ಟಾಂಡ್ ಗೆ ಎಣ್ಣೆ ಸವರಿ ಇಡ್ಲಿ ಹಿಟ್ಟನ್ನು ಹಾಕಿ. 15 ನಿಮಿಷ ಬೇಯಿಸಿ. ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಸೇವಿಸಿ.






Leave a Reply