(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು)

ಒಬ್ಬ ವ್ಯಕ್ತಿಯು ನಿಜವಾಗಿಯೂ ಭಕ್ತಿಸೇವೆಯನ್ನು ಕಾರ್ಯಗತಗೊಳಿಸುತ್ತಿದ್ದರೆ ಅವನು ಸಂತೋಷವಾಗಿರಬೇಕು. ಅವನು ಸಂತೋಷವಾಗಿಲ್ಲದಿದ್ದರೆ ಅವನು ಸರಿಯಾಗಿ ಮಾಡುತ್ತಿಲ್ಲ ಎಂದು ಅರ್ಥ. ಅವನು ಭಕ್ತಿಸೇವೆಯ ಹೆಸರಿನಲ್ಲಿ ಇನ್ನೇನೋ ಮಾಡುತ್ತಿರಬೇಕು. ಅವನು ನಿಜವಾಗಿಯೂ ಭಕ್ತಿಸೇವೆಯನ್ನು ಸಲ್ಲಿಸುತ್ತಿದ್ದರೆ ಅವನು ಸಂತೋಷವಾಗಿರಬೇಕು. ಅದು ಹೇಗೆಂದರೆ, ನೀವು ನಿಜವಾಗಿಯೂ ಊಟ ಮಾಡುತ್ತಿದ್ದರೆ, ನಿಮಗೆ ಶಕ್ತಿ ಬರಬೇಕು ಮತ್ತು ನಿಮ್ಮ ಹಸಿವು ತಣಿಯಬೇಕು. “ನಾನು ತಿನ್ನುತ್ತಿರುವೆ. ಆದರೆ ನನಗೆ ನನ್ನ ಹಸಿವು ಇಂಗಿದ ತೃಪ್ತಿ ಇಲ್ಲ” ಎಂದು ನೀವು ಹೇಳಲಾಗದು. ಅದು ಅಸಾಧ್ಯ. ಹಾಗಾದರೆ, ನೀವು ಊಟ ಮಾಡುತ್ತಿಲ್ಲ ಅಥವಾ ನಿಮ್ಮ ಕರುಳ ಹುಳುಗಳು ಅದನ್ನು ನುಂಗಿಹಾಕುತ್ತಿರಬಹುದು. ಕೆಲವು ಬಾರಿ ಹಾಗೆ ಆಗುತ್ತದೆ. ನಿಮ್ಮ ಕರುಳಿನಲ್ಲಿ ಹುಳುಗಳಿದ್ದು ನೀವು ಆಹಾರವನ್ನು ಸೇವಿಸುತ್ತಲೇ ಇದ್ದರೂ ನಿಮಗೆ ಬಲ ಬರುವುದಿಲ್ಲ. ಹುಳುಗಳು ಆ ಆಹಾರವನ್ನು ತೆಗೆದುಕೊಂಡು ಬಿಟ್ಟಿರುತ್ತವೆ. ಆದುದರಿಂದ ಹುಳುಗಳ ತೊಂದರೆ ನಿವಾರಣೆಗೆ ಔಷಧ ತೆಗೆದುಕೊಳ್ಳಬೇಕು. ಇಲ್ಲವಾದರೆ ಅವು ಎಲ್ಲವನ್ನೂ ತಿಂದುಹಾಕುತ್ತವೆ. ನಿಮಗೆ ಹಸಿವಾಗುತ್ತದೆ, ಆದರೆ ನಿಮಗೆ ಶಕ್ತಿ ಬರುವುದಿಲ್ಲ. ಇದು ಹುಳು ರೋಗ.
ಆದುದರಿಂದ, ನಾನು ಭಕ್ತಿಸೇವೆಯನ್ನು ಸಲ್ಲಿಸುತ್ತಿದ್ದರೂ ನನಗೆ ತೃಪ್ತಿ ಸಿಗದಿದ್ದರೆ, ಅಲ್ಲಿ ಮಾಯೆಯ ಆಟ ನಡೆದಿದೆ ಎಂದು ಅರ್ಥ. ಇಲ್ಲವಾದರೆ ಬೇರೆ ತರ್ಕವಿಲ್ಲ. ಅವನು ಸಂತೋಷವನ್ನು ಅನುಭವಿಸಬೇಕು. ಇಲ್ಲದಿದ್ದರೆ ಸೇವಾ ವಿಧಾನವನ್ನು ಸರಿಪಡಿಸಿಕೊಳ್ಳಬೇಕು. ಬದಲಾವಣೆ ಮಾಡಿಕೊಳ್ಳಬೇಕಾಗಿಲ್ಲ, ವಿಧಾನವನ್ನು ತಿದ್ದಿಕೊಳ್ಳಬೇಕು… ನೀವು ನಿಜವಾಗಿಯೂ ಭಕ್ತಿಸೇವೆಯನ್ನು ಕಾರ್ಯಗತಗೊಳಿಸುತ್ತಿದ್ದರೆ ನೀವು ಸಂತೋಷದಿಂದ ಇರಬೇಕು. ನೀವು ಸಂತೋಷವಾಗಿಲ್ಲದಿದ್ದರೆ, ನೀವು ಕಾರ್ಯಗತಗೊಳಿಸುತ್ತಿಲ್ಲ. ಅಲ್ಲಿ ಏನೋ ದೋಷ ಇದೆ. ಹೌದು.






Leave a Reply