ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಭಕ್ತರ ನಡುವೆ ಬೆಳಗಿನ ವಾಯು ಸಂಚಾರ ಸಂದರ್ಭದಲ್ಲಿ, ಡಲ್ಲಾಸ್‌ನಲ್ಲಿ 1975ರ ಮಾರ್ಚ್‌ನಲ್ಲಿ ನಡೆದ ಸಂವಾದ.

ಶ್ರೀಲ ಪ್ರಭುಪಾದ : ಕ್ರಿಶ್ಚಿಯನ್ನರು ಹೇಳುತ್ತಾರೆ, “ನಾವು ಎಲ್ಲ ರೀತಿಯ ಪಾಪಗಳನ್ನು ಮಾಡಬಹುದು. ಆದರೆ ಕ್ರಿಸ್ತನು ನಮ್ಮ ಪಾಪಗಳನ್ನು ತಾನೇ ಹೊತ್ತುಕೊಂಡುಬಿಡುತ್ತಾನೆ. ಅವನು ಒಡಂಬಡಿಕೆ ಮಾಡಿಕೊಂಡಿದ್ದಾನೆ.” ಈ ರೀತಿ ಏನೋ ಅವರು ಹೇಳುತ್ತಾರಲ್ಲವೇ?
ಭಕ್ತ : ಹೌದು.
ಶ್ರೀಲ ಪ್ರಭುಪಾದ : ಪಾಪ, ಕ್ರಿಸ್ತನು ಅವರೆಲ್ಲ ಪಾಪದ ಕ್ರಿಯೆಗಳಿಗೆ ತಾನು ನೋವು, ಸಂಕಟ ಅನುಭವಿಸಬೇಕು. ಅವರೆನ್ನುತ್ತಾರೆ. ಅವನು ನಮ್ಮನ್ನು ಪಾಪದಿಂದ ರಕ್ಷಿಸಬೇಕೆಂದು ಬಯಸಿದ. ಆದುದರಿಂದ ಪಾಪ ಕರ್ಮಗಳಿಗೆ ಲಕ್ಷ್ಯ ಕೊಡಬಾರದೆಂದು ಅವನು ನಮಗೆ ಆದೇಶ ನೀಡಿದ. ಇದು ಬೂಟಾಟಿಕೆ.

ಮೆಲ್ಬೋರ್ನಲ್ಲಿ ಉಪನ್ಯಾಸ ನೀಡಲು ಕೆಲವು ಪಾದ್ರಿಗಳು ನನಗೆ ಆಹ್ವಾನ ನೀಡಿದರು. ಅವರು ಕೇಳಿದರು, “ಕ್ರಿಶ್ಚಿಯನ್ ಧರ್ಮವು ಅವನತಿ ಹೊಂದುತ್ತಿರುವುದಕ್ಕೆ ಏನು ಕಾರಣ? ನಾವೇನು ಮಾಡಿದ್ದೇವೆ?” ನಾನು ಉತ್ತರಿಸಿದೆ, “ನೀವು ಏನು ತಾನೆ ಮಾಡಿಲ್ಲ? ನೀವು ಏಸುಕ್ರಿಸ್ತನ ಅನುಯಾಯಿಗಳೆಂದು ಹೇಳಿಕೊಳ್ಳುವಿರಿ. ಆದರೂ ನೀವು ಎಲ್ಲ ರೀತಿಯ ಪಾಪ ಕರ್ಮಗಳನ್ನು ಮಾಡುತ್ತಿರುವಿರಿ. ಆದುದರಿಂದ ನೀವು ನಿಮ್ಮ ಆಷಾಢಭೂತಿತನವನ್ನು ಬೇಗನೆ ಅಂತ್ಯಗೊಳಿಸಬೇಕಾಗುತ್ತದೆ.” ನನ್ನ ಉತ್ತರದಿಂದ ಅವರಿಗೆ ಸಂತೋಷವೇನೂ ಆಗಲಿಲ್ಲ.
“ನಾವೇನು ಮಾಡಿದ್ದೇವೆ,” ಎಂದು ಅವರು ಕೇಳುತ್ತಾರೆ. ಅವರು ಎಷ್ಟೆಲ್ಲ ಪಾಪ ಕರ್ಮಗಳನ್ನು ಮಾಡಿದ್ದಾರೆ, ಆದರೂ ಅವರು ತಾವು ಪಾಪಿಗಳೆಂದು ಒಪ್ಪಿಕೊಳ್ಳುವುದಿಲ್ಲ. ಇದು ಆಷಾಢಭೂತಿತನ. ಟೆನ್ ಕಮಾಂಡ್‌ಮೆಂಟ್ಸ್‌ನಲ್ಲಿ ಬೈಬಲ್ ಸ್ಪಷ್ಟವಾಗಿ ಹೇಳಿದೆ, “ನೀವು ಕೊಲ್ಲಬಾರದು.” ಆದರೆ ಅವರು ಪಾಲಿಸುವುದಿಲ್ಲ. ಅದು ಪಾಪ.
ಮನಸಾರೆ ಪಾಪಿಗಳು. ಅಜ್ಞಾನದಿಂದ ಯಾರಾದರೂ ಪಾಪ ಕೃತ್ಯ ಎಸಗಿದರೆ ರಿಯಾಯಿತಿ ನೀಡಬಹುದು. ಆದರೆ ಗೊತ್ತಿದ್ದೂ ಪಾಪ ಕಮ ಮಾಡುವವರಿದ್ದಾರೆ. ಗೋ ವಧೆ ಪಾಪವೆಂದು ಅವರಿಗೆ ಗೊತ್ತು, ಆದರೂ ಅವರು ಅದನ್ನು ಮಾಡುತ್ತಾರೆ.
ಭಕ್ತ : ಶ್ರೀಲ ಪ್ರಭುಪಾದರೆ, ಅನೇಕ ಕ್ರಿಶ್ಚಿಯನ್ನರು ಮಾಂಸ ತಿನ್ನುವುದು ಪಾಪ ಎಂದು ಭಾವಿಸಿಲ್ಲ.
ಶ್ರೀಲ ಪ್ರಭುಪಾದ : ಅಂದರೆ ಬೈಬಲ್ ಅನ್ನು ತಪ್ಪಾಗಿ ವ್ಯಾಖ್ಯಾನಿಸಿದ ಪಾದ್ರಿಗಳು ಮೂರ್ಖರು. ಈ ಆಷಾಢಭೂತಿತನವು ಧರ್ಮದ ಹೆಸರಿನಲ್ಲಿ ನಡೆಯುತ್ತಲೇ ಇದೆ. ಆದರೆ ಅಂತಹ ಅಭಿಪ್ರಾಯಗಳನ್ನು ಬೋಧಿಸುವವರು ಜನರನ್ನು ಎಷ್ಟು ಕಾಲ ಮೋಸಗೊಳಿಸಬಹುದು? ನೀವು ಎಲ್ಲರನ್ನೂ ಸ್ವಲ್ಪ ಸಮಯ ಮೋಸಗೊಳಿಸಬಹುದು, ಕೆಲವರನ್ನು ಎಲ್ಲ ಸಮಯ ಮೋಸಗೊಳಿಸಬಹುದು, ಆದರೆ ನೀವು ಎಲ್ಲ ಸಮಯದಲ್ಲಿ ಎಲ್ಲರನ್ನೂ ವಂಚಿಸಲಾಗದು.
ಭಕ್ತ : ಕಮ್ಯೂನಿಸ್ಟರೂ ಕೂಡ ಕ್ರಿಶ್ಚಿಯನ್ ಧರ್ಮ ಬೂಟಾಟಿಕೆಯದು ಎನ್ನುತ್ತಾರೆ. ಅದು “ಜನರ ಅಫೀಮು,” ಎಂದು ಅವರು ಹೇಳುತ್ತಾರೆ. ಆದುದರಿಂದ ಅದನ್ನು ನಿಷೇಧಿಸಬೇಕೆಂದು ಒತ್ತಾಯಿಸುತ್ತಾರೆ.
ಶ್ರೀಲ ಪ್ರಭುಪಾದ : ಕಮ್ಯೂನಿಸ್ಟರಿಗೆ ಕ್ರಿಶ್ಚಿಯನ್ ಧರ್ಮದ ಜೊತೆಗೆ ಕೆಟ್ಟ ಅನುಭವವಾಗಿದೆ. ಮತ್ತು ಧರ್ಮದ ಅಗತ್ಯವಿದೆ ಎಂಬುದರ ಮಾಹಿತಿಯೂ ಅವರಿಗಿಲ್ಲ. ಆದುದರಿಂದ ಎಲ್ಲ ಧರ್ಮಗಳನ್ನೂ ನಿಷೇಧಿಸಬೇಕು ಎನ್ನುತ್ತಾರೆ.
ಭಕ್ತ : ಜಗತ್ತಿನ ಸಮಸ್ಯೆಗಳು ಎಷ್ಟು ದೊಡ್ಡವೆಂದರೆ ಜನರು ವಿಶ್ವ ಸರಕಾರಕ್ಕೆ ನಿಷ್ಠೆ ತೋರದಿದ್ದರೆ ಸಮಸ್ಯೆಗಳನ್ನು ಪರಿಹರಿಸಲಾಗದು ಎಂದು ಕಮ್ಯೂನಿಸ್ಟರು ಹೇಳುತ್ತಾರೆ.
ಶ್ರೀಲ ಪ್ರಭುಪಾದ : ನಾವೂ ಕೂಡ ಅದನ್ನೇ ಹೇಳುತ್ತೇವೆ. ಕೃಷ್ಣನು ಪರಮ ಪ್ರಭು. ಅವನಲ್ಲಿ ಆಶ್ರಯ ಪಡೆಯಿರಿ ಮತ್ತು ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತವೆ. ಅದನ್ನು ನಾವೂ ಬೋಸುತ್ತಿದ್ದೇವೆ.
ಭಕ್ತ : ಆದರೆ ಕೃಷ್ಣನನ್ನು ಪರಮೋತ್ತಮ ಭಗವಂತನೆಂದು ಮಾನ್ಯತೆ ಮಾಡಬೇಕೆಂಬ ಅಂಶವನ್ನು ಕಮ್ಯೂನಿಸ್ಟರು ಒಪ್ಪುವುದಿಲ್ಲ.

ಶ್ರೀಲ ಪ್ರಭುಪಾದ : ಏಕಲೇ ಈಶ್ವರ ಕೃಷ್ಣ, ಆರ ಸಬಾ ಭೃತ್ಯ : “ಏಕೈಕ ಮಾಲೀಕ ಕೃಷ್ಣ. ಉಳಿದವರು ಅವನ ಸೇವಕರು.” ಇದು ಭಗವದ್ಗೀತೆಯ ಮುಖ್ಯ ಸಿದ್ಧಾಂತ. ಈ ತತ್ತ್ವವನ್ನು ಒಪ್ಪಿಕೊಳ್ಳಿ ಮತ್ತು ತತ್‌ಕ್ಷಣ ಎಲ್ಲವೂ ಸರಿಹೋಗುತ್ತದೆ. ನೀವು ಭಗವದ್ಗೀತೆಯ ಅಧ್ಯಯನ ಮಾಡಿದರೆ ನಿರಾಕರಿಸುವಂತಹ ಅಥವಾ ನಿಮಗೆ ಒಳ್ಳೆಯದಲ್ಲದ ಒಂದೇ ಒಂದು ಶಬ್ದವನ್ನೂ ನೀವು ಕಾಣುವುದಿಲ್ಲ. ಇಡೀ ಭಗವದ್ಗೀತೆಯು ಕಾರ್ಯ ಸಾಧ್ಯವಾದುದು. ಮಾನವ ನಾಗರಿಕತೆಗೆ ಸಮಾನ ಮನೋಧರ್ಮದ್ದು, ಹಿತಕರವಾದುದು. ನೀವು ಯಾರೆಂಬುದನ್ನು ನೀವು ಅರಿತುಕೊಳ್ಳಬೇಕು ಎಂದು ಕೃಷ್ಣನು ಮೊದಲು ಬೋಧಿಸುತ್ತಾನೆ. ನೀವು ದೇಹವಲ್ಲ. ನೀವು ದೇಹದೊಳಗೆ ಆಧ್ಯಾತ್ಮಿಕ ಆತ್ಮ. ಇದು ಯಾರಿಗೆ ಗೊತ್ತು? ಭಗವದ್ಗೀತೆಯಲ್ಲಿ ಕೃಷ್ಣನು ಬೋಧಿಸುವ ಮೊದಲ ಪಾಠವಿದು. ನೀವು ದೇಹವಲ್ಲ, ಆದರೆ ನೀವು ದೇಹದೊಳಗಿನವರೆಂದು ಅರ್ಥ ಮಾಡಿಕೊಂಡಕೂಡಲೇ ನೀವು ಆತ್ಮ ಏನೆಂಬುದನ್ನು ಅರ್ಥಮಾಡಿಕೊಳ್ಳುತ್ತೀರಿ. ಆಗ ನಿಮ್ಮ ಆಧ್ಯಾತ್ಮಿಕ ಜ್ಞಾನ ಇನ್ನಷ್ಟು ಉತ್ತಮಗೊಳ್ಳುತ್ತದೆ. ಆದರೆ ಆತ್ಮ ಏನೆಂದು ಮೂರ್ಖರಿಗೆ ಗೊತ್ತಿಲ್ಲ. ಆದುದರಿಂದ ಅವರಿಗೆ ಆಧ್ಯಾತ್ಮಿಕ ಜ್ಞಾನವಿಲ್ಲ.
ಭಕ್ತ : ಹಸುಗಳಿಗೆ ಆತ್ಮವಿಲ್ಲ ಎಂದು ಅವರು ಭಾವಿಸಿದ್ದಾರೆ.
ಶ್ರೀಲ ಪ್ರಭುಪಾದ : ನೀನು ಅದನ್ನು ನಂಬುವೆಯ?
ಭಕ್ತ : ಇಲ್ಲ. ಗೋಗಳಿಗೆ ಆತ್ಮವಿದೆ. ಆತ್ಮದಿಂದ ದೇಹವು ಚಲಿಸುತ್ತದೆ.
ಶ್ರೀಲ ಪ್ರಭುಪಾದ : ಹೌದು. ಹಸುಗಳಲ್ಲಿ ಆತ್ಮವಿಲ್ಲ ಎಂದು ಅವರು ಹೇಗೆ ಹೇಳುತ್ತಾರೆ? ನಿಮ್ಮಲ್ಲಿ ಆತ್ಮವಿದೆ. ನಿಮ್ಮ ದೇಹ ಚಲಿಸುತ್ತಿದೆ. ನೀವು ಕೆಲಸ ಮಾಡುತ್ತಿರುವಿರಿ. ನೀವು ಆಹಾರ ಸೇವಿಸುತ್ತಿರುವಿರಿ. ನೀವು ಮಾತನಾಡುತ್ತಿರುವಿರಿ. ಮತ್ತು ನಿಮ್ಮ ದೇಹದಿಂದ ಆತ್ಮವು ಹೊರಟು ಹೋದ ಕೂಡಲೇ ದೇಹವು ಸತ್ತ ವಸ್ತುವಾಗುತ್ತದೆ. ಕೈ ಕಾಲುಗಳು ಅಲ್ಲಿದ್ದರೂ ಅವು ಕೆಲಸ ಮಾಡುವುದಿಲ್ಲ, ಏಕೆಂದರೆ ಆತ್ಮ ಹೊರಟು ಹೋಗಿಬಿಟ್ಟಿರುತ್ತದೆ.

ಆದುದರಿಂದ, ಹಸು ಮತ್ತು ನಿಮ್ಮ ದೇಹದ ನಡುವಣ ವ್ಯತ್ಯಾಸವೇನು? ಮಾನವ ತರ್ಕಕ್ಕೆ ಬನ್ನಿ. ನಿಮ್ಮ ದೇಹ ಮತ್ತು ಹಸುವಿನ ದೇಹದ ಮಧ್ಯೆ ಏನಾದರೂ ಅಗತ್ಯ ವ್ಯತ್ಯಾಸಗಳಿವೆಯೇ?
ಭಕ್ತ : ಇಲ್ಲ. ಆದರೆ ಮಾನವ ಜೀವಿಗಳಿಗೂ ಆತ್ಮವಿಲ್ಲ ಎಂದು ಅವರು ಈಗ ಹೇಳುತ್ತಿದ್ದಾರೆ. ಅವರೆನ್ನುತ್ತಾರೆ – ಹಸುಗಳಿಗೆ ಆತ್ಮ ಇಲ್ಲದಿರುವುದರಿಂದ ನಾವು ಹಸುವನ್ನು ತಿನ್ನಬಹುದು ಮತ್ತು ಮಾನವ ಜೀವಿಗಳಿಗೂ ಆತ್ಮ ಇಲ್ಲದಿರುವುದರಿಂದ.
ಶ್ರೀಲ ಪ್ರಭುಪಾದ : ನೀವು ಶಿಶುವನ್ನು ಗರ್ಭದಲ್ಲಿಯೇ ಕೊಲ್ಲಬಹುದು. ಮೂರ್ಖತನದ ಮುನ್ನಡೆಯನ್ನು ನಾಗರಿಕತೆಯ ಪ್ರಗತಿ ಎಂದು ಒಪ್ಪಿಕೊಳ್ಳಲಾಗಿದೆ. ಏಕೆ? ಆಧ್ಯಾತ್ಮಿಕ ಜ್ಞಾನವಿಲ್ಲ.






Leave a Reply