ಅನುಕರಣೆಯ ಫಲ

ಕಥಾಮೃತ ಬಿಂದು

– ಆಕರ: ಪ್ರಭುಪಾದರ ಪ್ರವಚನ, 30 ಸೆಪ್ಟೆಂಬರ್ 1976, ವೃಂದಾವನ

ಶ್ರೀಲ ಪ್ರಭುಪಾದರು ಭಾಗವತ ತರಗತಿಗಳನ್ನು ನೀಡುವಾಗಲೂ ಪ್ರಚಲಿತ ಸಮಸ್ಯೆಗಳನ್ನು ಕುರಿತು ಚರ್ಚಿಸುತ್ತಿದ್ದರು. ಕೃಷ್ಣ ಪ್ರಜ್ಞೆಯ ಗಳಿಕೆಯಲ್ಲಿ ಯಾವುದೂ ಒಂದು ತಡೆಯಾಗಬಾರದೆಂದು ಅವರ ಕಳಕಳಿಯಾಗಿತ್ತು. ಒಂದು ದಿನ ಅವರು ನಮ್ಮ ( ಭಾರತೀಯರ) ಅನುಕರಣೆಯ ಮನಃಸ್ಥಿತಿಯ ಬಗ್ಗೆ ವಿಶ್ಲೇಷಿಸುತ್ತ ಈ ಕಥೆ ಹೇಳಿದರು:

ಒಂದು ಮಧ್ಯಾಹ್ನ ಊಟದ ಸಮಯ, ನ್ಯಾಯಾಲಯದ ನ್ಯಾಯಾಧೀಶ ವಕೀಲರೆಲ್ಲ ಊಟಕ್ಕೆ ಕುಳಿತಿದ್ದರು. ಅದು 1914ನೇ ಇಸವಿ. ಮೊದಲ ವಿಶ್ವಯುದ್ಧ ನಡೆಯುತ್ತಿದ್ದ ಕಾಲ. ಯುದ್ಧ ಬಿರುಸಿನಿಂದ ಸಾಗಿತ್ತು, ಭಾರತದಲ್ಲಿ ಬ್ರಿಟಿಷ್ ಆಡಳಿತವಿತ್ತು.

ಆಂಗ್ಲೇಯ ಹೈಕೋರ್ಟ್‌ ನ್ಯಾಯಾಧೀಶರೊಬ್ಬರು ಆಶುತೋಷ್ ಮುಖರ್ಜಿಯವರನ್ನು ಉದ್ದೇಶಿಸಿ, “ಮಿ. ಮುಖರ್ಜಿ….. ಈಗ ಜರ್ಮನ್ನರು ಇತ್ತ ಬಂದರೆ ನೀವೇನು ಮಾಡುವಿರಿ?” ಎಂದು ಪ್ರಶ್ನಿಸಿದರು.

ಅದಕ್ಕುತ್ತರವಾಗಿ ಮುಖರ್ಜಿ, ನಾವು ಅವರನ್ನು ಸ್ವಾಗತಿಸಿ ಗೌರವಿಸುವೆವು. ಅವರ ಮನಬಂದಂತೆ ವ್ಯವಹರಿಸಲು ಬಿಟ್ಟು ಕೊಡುವೆವು” ಎ೦ದು ನುಡಿದರು.

ಇದನ್ನು ನಿರೀಕ್ಷಿಸದ ನ್ಯಾಯಾಧೀಶರು ದಂಗುಬಡಿದು ಹೋದರು. ಅವರ ಮುಖಚರ್ಯೆ ಗಮನಿಸಿದ ಮುಖರ್ಜಿ ನೀಡಿದ ಉತ್ತರ ಹೀಗಿತ್ತು- “ಹೌದು, ನೀವು ನಮಗೆ ಕಲಿಸಿ ಕೊಟ್ಟಿರುವುದೇ ಕೇವಲ ಸೇವಕರಾಗಿ ದುಡಿಯಲು. ನಮ್ಮ ಕೆಲಸವೇನಿದ್ದರೂ ತಲೆತಗ್ಗಿಸಿ ಸ್ವಾಗತ ಕೋರುವುದಷ್ಟೇ. ಸೇವಕರಾಗಿಯೇ ಇರಲು ನಮಗೆ ತರಬೇತಿ ನೀಡಲಾಗಿದೆ!”

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi