ವೇದವಾಕ್ಯ

ಭಕ್ತರೆಂದರೆ ಸದಾ ಪ್ರೀತಿ ವಾತ್ಸಲ್ಯ ತೋರುವ ಶ್ರೀ ಗೌರಹರಿ (ಚೈತನ್ಯ ಮಹಾಪ್ರಭು) ಯನ್ನು ಸುಮ್ಮನೆ ಪೂಜಿಸಿ. ಅವನು ಅದೇ ದೇವೋತ್ತಮ ಪರಮ ಪರುಷ, ಕೃಷ್ಣ. ವ್ರಜದಲ್ಲಿ ಅವನು ಗೋಪಾಲಕನ ರೂಪದಲ್ಲಿ ಕಾಣಿಸಿಕೊಂಡಿದ್ದ. ನಂದ ಮತ್ತು ಯಶೋದಾರ ಹೃದಯ ತುಂಬಿದ್ದ.

– ಶ್ರೀಲ ಭಕ್ತಿವಿನೋದ ಠಾಕುರ, ಭೋಗ-ಆರತಿ, ಶ್ಲೋಕ 1 (ಗೀತಾವಳಿಯಿಂದ)

* * * *

ಎಲ್ಲ ವೇದಗಳೂ ದೇವೋತ್ತಮ ಪರಮ ಪುರುಷನ ಚರಣ ಕಮಲವನ್ನು ವರ್ಣಿಸುತ್ತವೆ.

– ಕಠ ಉಪನಿಷದ್‌: 1.2.15

* * * *

ಒಬ್ಬ ವ್ಯಕ್ತಿಯು ಗುರುವಿಗೆ ಸಲ್ಲಿಸುವ ನಿಷ್ಠೆಯ ಸೇವೆಯಿಂದ ಸಕಲ ಜೀವಿಗಳ ಆತ್ಮನಾದ ನಾನು   ತುಂಬ   ತೃಪ್ತನಾಗುವೆನು.   ಅಷ್ಟು   ತೃಪ್ತಿಯನ್ನು   ನಾನು   ಧಾರ್ಮಿಕ   ಪೂಜೆ ಪುನಸ್ಕಾರಗಳಿಂದಾಗಲೀ, ಬ್ರಾಹ್ಮಣ   ದೀಕ್ಷೆಯಿಂದಾಗಲೀ, ತಪಸ್ಸಿನಿಂದಾಗಲೀ ಅಥವಾ ಸ್ವಯಂ ನಿಗ್ರಹದಿಂದಾಗಲೀ ಪಡೆಯಲಾರೆ.

–  ಶ್ರೀಕೃಷ್ಣ, ಶ್ರೀಮದ್‌ ಭಾಗವತಮ್‌: 10.80.34

* * * *

ಎಲ್ಲ ವೇದಗಳೂ ಸಾರುತ್ತವೆ, `ಶ್ರೀಕೃಷ್ಣನ ಪವಿತ್ರ ನಾಮವನ್ನು ಪಠಿಸಿ. ಆ ರೀತಿ ಪಠಿಸುವುದರಿಂದ ನೀವು ಆಧ್ಯಾತ್ಮಿಕ ಪ್ರೀತಿಯನ್ನು ಹೊಂದುವಿರಿ ಮತ್ತು ಎಣೆ ಇಲ್ಲದ ಆನಂದ ನಿಮ್ಮದಾಗುತ್ತದೆ.’ ವೇದಗಳು ಮತ್ತೂ ಹೇಳುತ್ತವೆ, `ಆಧ್ಯಾತ್ಮಿಕ ಜಗತ್ತಿನ ಶ್ರೇಷ್ಠ ಮುಕ್ತ ಆತ್ಮಗಳು ಸದಾ ಪವಿತ್ರ ನಾಮವನ್ನು ಪಠಿಸುತ್ತವೆ.’

– ಶ್ರೀಲ ಹರಿದಾಸ ಠಾಕುರ, ಶ್ರೀ ಹರಿನಾಮ ಚಿಂತಾಮಣಿ: 7.53-54

* * * *

ನನ್ನ ಪ್ರಿಯ ಮಿತ್ರನೇ, ನೀನು ನಿನ್ನ ಲೌಕಿಕ ಮಿತ್ರರ ವಿಷಯದಲ್ಲಿ ವ್ಯಾಮೋಹವನ್ನು ಹೊಂದಿದ್ದರೆ, ಯಮುನೆಯ ದಡದ ಕೇಶಿಘಾಟಿನಲ್ಲಿ ನಿಂತಿರುವ ಪ್ರಭು ಗೋವಿಂದನ ನಗುಮುಖವನ್ನು ನೋಡಬೇಡ.  ಓರೆನೋಟ ಬೀರುತ್ತಾ ತನ್ನ ಕೊಳಲನ್ನು ಅವನು ತುಟಿಗಿರಿಸುತ್ತಾನೆ.  ಅದು ನವಪಲ್ಲವದಂತೆ ಕಾಣುತ್ತದೆ. ತ್ರಿಭಂಗಿಯಲ್ಲಿರುವ ಅವನ ದಿವ್ಯ ದೇಹವು ಬೆಳದಿಂಗಳಿನಲ್ಲಿ ಉಜ್ವಲವಾಗಿ ಕಾಣುತ್ತದೆ.

-ಶ್ರೀ ರೂಪ ಗೋಸ್ವಾಮಿ, ಭಕ್ತಿರಸಾಮೃತ ಸಿಂಧು: 1.2.239

* * * *

ಭಕ್ತಿಸೇವೆಯ ಕ್ರಿಯೆಯಲ್ಲಿ ಆಸಕ್ತನಾದ, ನನ್ನ ಪಾದಕಮಲಗಳ ಸೇವೆಯಲ್ಲಿ ಸದಾ ನಿರತನಾದ ಶುದ್ಧಭಕ್ತನು ನನ್ನೊಂದಿಗೆ ಒಂದಾಗಲು ಎಂದೂ ಬಯಸುವುದಿಲ್ಲ. ಹಿಮ್ಮೆಟ್ಟದೆ ನಿರತನಾದ ಅಂತಹ ಭಕ್ತನು ಸದಾ ನನ್ನ ಲೀಲೆಗಳನ್ನು, ಕ್ರಿಯೆಗಳನ್ನು, ಸ್ತೋತ್ರಗೈಯುವನು.

-ಶ್ರೀ ಕಪಿಲ, ಶ್ರೀಮದ್‌ ಭಾಗವತಮ್‌: 3.25.34

* * * *

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi