ಯೋಗೇಶ್ವರನಾದ ಕೃಷ್ಣನು ಎಲ್ಲಿರುವನೋ ಮತ್ತು ಧನುರ್ಧಾರಿಯಾದ ಅರ್ಜುನನು ಎಲ್ಲಿ
ಇರುವನೋ ಅಲ್ಲಿ ನಿಶ್ಚಯವಾಗಿಯೂ ಸಿರಿ, ವಿಜಯ, ಅಸಾಧಾರಣ ಶಕ್ತಿ ಮತ್ತು ನೀತಿ
ಇವುಗಳು ಇರುತ್ತವೆ. ಇದು ನನ್ನ ಅಭಿಪ್ರಾಯ.
– ಸಂಜಯ, ಭಗವದ್ಗೀತೆ 18.78
* * * *
ವೈಷ್ಣವರಲ್ಲದವರಿಂದ ಕೃಷ್ಣನನ್ನು ಕುರಿತು ಏನೂ ಕೇಳಬಾರದು. ಸರ್ಪದ ನಾಲಗೆ ಸ್ಪರ್ಶಿಸಿದ ಹಾಲು ವಿಷಪೂರಿತವಾಗುತ್ತದೆ. ಅದೇ ರೀತಿ, ಕೃಷ್ಣನನ್ನು ಕುರಿತ ವೈಷ್ಣವನಲ್ಲದವರ ಉಪನ್ಯಾಸವೂ ವಿಷಪೂರಿತ.
– ಶ್ರೀಲ ಸನಾತನ ಗೋಸ್ವಾಮಿ, ಹರಿ ಭಕ್ತಿ ವಿಲಾಸ
* * * *
ಪರಮ ಪ್ರಭುವಿನ ಇಚ್ಛೆಯಂತೆ, ಸಂತೋಷವೋ ಸಂಕಟವೋ, ಬದುಕಿನ ಯಾವುದೇ ಸ್ಥಿತಿಯಿರಲಿ, ವ್ಯಕ್ತಿಯು ಅದರಲ್ಲಿ ತೃಪ್ತನಾಗಿರಬೇಕು. ಈ ರೀತಿ ಸಹಿಷ್ಣುವಾಗಿರುವವನು ಮಾಯೆಯ ಕಗ್ಗತ್ತಲನ್ನು ಬಹು ಸುಲಭವಾಗಿ ದಾಟಲು ಸಮರ್ಥನಾಗುತ್ತಾನೆ.
– ಶ್ರೀ ನಾರದ ಮುನಿ, ಶ್ರೀಮದ್ ಭಾಗವತ, 4.8.33
* * * *
ದೈವತ್ವದ ಅತಿ ಉತ್ಕೃಷ್ಟ ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಕೃಷ್ಣನಲ್ಲಿ ಕಾಣಬಹುದು. ಅವನ ವಿರುದ್ಧ ಅನಗತ್ಯ ವಾದ ಮಾಡುವುದೆಂದರೆ ತಮಗೆ ತಾವೇ ಮೋಸ ಮಾಡಿಕೊಂಡಂತೆ ಮತ್ತು ಅವನು ಅವರಿಗಾಗಿ ಇಟ್ಟಿರುವ ಅನುಗ್ರಹದಿಂದ ತಮಗೆ ತಾವೇ ವಂಚಿಸಿಕೊಂಡಂತೆ.
– ಶ್ರೀಲ ಭಕ್ತಿ ವಿನೋದ ಠಾಕುರ,
ಶ್ರೀ ಚೈತನ್ಯ ಮಹಾಪ್ರಭು ಅವರ ಬದುಕು ಮತ್ತು ಬೋಧನೆ
* * * *






Leave a Reply