ವೇದವಾಕ್ಯ

ಕೃಷ್ಣನ ಅನುಗ್ರಹ ಪಡೆಯಲು ನಾನು ಅವನ ಶಕ್ತಿ (ರಾಧಾ) ಗೆ ಶರಣಾಗುವೆ. ಅವನ ಶಕ್ತಿಯ ಅನುಗ್ರಹ ಪಡೆಯಲು ನಾನು ಕೃಷ್ಣನಿಗೆ ಶರಣಾಗುವೆ. ಅವರನ್ನು ಪೂಜಿಸುವುದರಿಂದ ಆರಾಧಕನು ಎಲ್ಲ ರೀತಿಯ ಪಾಪ ಕ್ರಿಯೆಗಳಿಂದ ಮುಕ್ತನಾಗುತ್ತಾನೆ. ಪೂರ್ಣ ತೃಪ್ತಿ ಹೊಂದುವ ಅವನು ಭಗವಂತನ ಶಾಶ್ವತಧಾಮಕ್ಕೆ ಹೋಗುತ್ತಾನೆ.

– ಛಾಂದೋಗ್ಯ ಉಪನಿಷದ್‌

* * * *

ಎಲ್ಲ ರೀತಿಯ ಭಯ ಮತ್ತು ಲಜ್ಜೆ ಸ್ವಭಾವವನ್ನು ಬಿಟ್ಟು ಬಿಡಿ. ಕೃಪೆ ತೋರುವ ಚೈತನ್ಯ ಮಹಾಪ್ರಭುವಿನ ಆಶ್ರಯ ಪಡೆಯಿರಿ. ಅವನು ಹೃದಯದ ಅತ್ಯಂತ ದುಷ್ಟ, ನೀಚತನದಿಂದ ನಮ್ಮನ್ನು ಕಾಪಾಡುತ್ತಾನೆ. ಆದುದರಿಂದಲೇ ಅವನನ್ನು ಪತಿತಪಾವನ ಎಂದು ಕರೆಯುವುದು. ಅಂದರೆ, `ಪತಿತರ ರಕ್ಷಕ’.

– ಶ್ರೀಲ ನರೋತ್ತಮ ದಾಸ ಠಾಕುರ, ಪ್ರಾರ್ಥನಾ.

* * * *

ಒಬ್ಬ ಮನುಷ್ಯನು ವಿಪ್ರನೇ ಅಥವಾ ಶೂದ್ರನೇ ಅಥವಾ ಸಂನ್ಯಾಸಿಯೇ ಎನ್ನುವುದು ಮುಖ್ಯವಲ್ಲ. ಕೃಷ್ಣ ವಿಜ್ಞಾನದಲ್ಲಿ ಪರಿಣತನಾಗಿದ್ದರೆ ಅವನು ಪರಿಪೂರ್ಣನಾದ ಮತ್ತು ನಿಜವಾದ ಗುರು.

– ಚೈತನ್ಯ ಚರಿತಾಮೃತ, ಮಧ್ಯ, 8.128

* * * *

ನನಗೆ ವೃಂದಾವನದಲ್ಲಿ ಇರಬೇಕೆಂಬ ಅಪೇಕ್ಷೆ ಇದೆ. ಆಗ ನಾನು ಯಮುನೆಯ ದಡದಲ್ಲಿ ಆಸೀನನಾಗಬಹುದು ಮತ್ತು ನನ್ನ ಬದುಕಿನ ಸುದೀರ್ಘವಾದ ಪ್ರತಿಯೊಂದು ದಿನವನ್ನೂ
ಕ್ಷಣ ಮಾತ್ರದಲ್ಲಿ ಶ್ರೀ ಕೃಷ್ಣನ ಬಗೆಗೆ ಧ್ಯಾನಿಸುತ್ತಾ ಕಳೆಯಬಹುದು.

– ಆದಿ ಶಂಕರಾಚಾರ್ಯ, ಅಭಿಲಾಷ್ಟಕ

* * * *

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi