ನಮ್ರನಾಗಿ ಕೇಳುವುದರಿಂದಲೇ ಮನಸ್ಸಿನ ಅಜ್ಞಾನದ ಎಲ್ಲ ದೋಷಗಳೂ ನಿವಾರಣೆಯಾಗುತ್ತವೆ ಮತ್ತು ಕೃಷ್ಣನಲ್ಲಿ ಗಾಢವಾದ ಪ್ರೇಮ ಉಂಟಾಗುತ್ತದೆ. ಇದೇ ಶಾಂತಿಮಾರ್ಗ.
– ಚೈತನ್ಯ ಚರಿತಾಮೃತ, ಆದಿ ಲೀಲ, 1.107
* * * *
ಮಂದಹಾಸದ ನಗೆಯ, ಸಂತೋಷ ಭರಿತ ಕಮಲವದನದ ಶ್ರೀ ಹರಿಯನ್ನು ಕುರಿತು ನಾನು ಸದಾ ಯೋಚಿಸುವೆ. ಅವನು ನಂದ ಮಹಾರಾಜನ ಪುತ್ರನಾದರೂ ಅವನು ಶ್ರೇಷ್ಠ ಮುನಿಗಳಾದ ನಾರದರಿಂದ ಪೂಜಿಸಲ್ಪಡುವ ಪರಮ ಪರಾತ್ಪರ ಸತ್ಯ.
– ಮುಕುಂದ ಮಾಲಾ, ಸ್ತೋತ್ರ 7
* * * *
ಪರಮ ಪುರುಷನ ಪ್ರೇಮಪೂರ್ಣ ಭಕ್ತಿ ಸೇವೆಯ ನೆಲೆಗೆ ಕೊಂಡೊಯ್ಯುವ ವೃತ್ತಿಯೇ ಮಾನವರೆಲ್ಲರಿಗೂ ಪರಮ ವೃತ್ತಿ (ಧರ್ಮ) ಎನ್ನಿಸಿಕೊಳ್ಳುತ್ತದೆ. ಆತ್ಮಕ್ಕೆ ಸಂಪೂರ್ಣ ತೃಪ್ತಿ ನೀಡಬೇಕಾದಲ್ಲಿ ಅಂತಹ ಭಕ್ತಿ ಸೇವೆಯು ಬೇರೆ ಯಾವುದರಿಂದಲೂ ಪ್ರೇರಿತವಲ್ಲದ್ದೂ ನಿರಂತರವಾದದ್ದೂ ಆಗಿರಬೇಕು.
– ಶ್ರೀಮದ್ ಭಾಗವತ, 1.2.6
* * * *
ಒಬ್ಬನೇ ಸೂರ್ಯನು ಇಡೀ ವಿಶ್ವವನ್ನು ಹೇಗೆ ಬೆಳಗುತ್ತಾನೋ ಹಾಗೆಯೇ ದೇಹದೊಳಗಿರುವ ಜೀವಿಯು ಪ್ರಜ್ಞೆಯಿಂದ ಇಡೀ ದೇಹವನ್ನು ಬೆಳಗುತ್ತಾನೆ.
– ಭಗವದ್ಗೀತೆ, 13.34
* * * *






Leave a Reply