ಮನೆಯಲ್ಲಿ ವಿಗ್ರಹಾರಾಧನೆ

ನೀವು ಕೃಷ್ಣನ ಫೋಟೋವನ್ನು ಪೂಜಿಸುತ್ತೀರಾದರೆ ಅದಕ್ಕೆ ಗೋಡೆಯಲ್ಲಿರುವ ಗೂಡು ಅಥವಾ ಕೋಣೆಯ ಮೂಲೆಯಲ್ಲಿರುವ ಮೇಜು ಅಥವಾ ನಿಮ್ಮ ಪುಸ್ತಕಗಳನ್ನಿಡುವ ಷೆಲ್ಫ್‌ನ ಮೇಲ್ಭಾಗವಾದರೂ ಆದೀತು.

ನಿಮ್ಮ ಮನೆಯಲ್ಲಿ ಅತಿಥಿಯನ್ನು ಒಂದು ಮೂಲೆಯಲ್ಲಿ ಕೂರಿಸಿ ನೀವು ಅವರನ್ನು ನಿರ್ಲಕ್ಷಿಸುವಂತಿಲ್ಲ. ಅತಿಥಿ “ದೈವ”ದ ಬಳಿ ಕುಳಿತುಕೊಳ್ಳಲು ನಿಮಗೂ ಒಂದು ‍ಸ್ಥಳ ಮೀಸಲಿಡಬೇಕು. ನಿಮ್ಮ ಸ್ಥಳ ದೇವರಿಗೆ ಎದುರಾಗಿರಬೇಕು. ಆತನ ಮುಖ ನೋಡುತ್ತಾ ಆನಂದಿಸಲು ಅನುಕೂಲವಾಗಿರಬೇಕು.

ಒಂದು ಶ್ರೀಲ ಪ್ರಭುಪಾದರ ಮೂರ್ತಿ/ ಚಿತ್ರ, ಪ್ರಭುಪಾದರ ಹಿಂದಿನ ನಾಲ್ವರು ಆಚಾರ್ಯರ ಚಿತ್ರ, ಒಂದು ಶ್ರೀ ಚೈತನ್ಯ ಮಹಾಪ್ರಭುಗಳ ಮತ್ತು ಅವರ ಅನುಯಾಯಿಗಳ (ಪಂಚತತ್ವ, ಆರ್ವರು ಗೋಸ್ವಾಮಿಗಳ) ಚಿತ್ರ ಮತ್ತು ಶ್ರೀ ರಾಧಾ-ಕೃಷ್ಣರ ವಿಗ್ರಹ/ ಚಿತ್ರ (ಇದು ಉಳಿದೆಲ್ಲದಕ್ಕಿಂತ ತುಸು ದೊಡ್ಡದಾಗಿರಲಿ) ನಿಮ್ಮ ಮಂಟಪವನ್ನು ಅಲಂಕರಿಸಬೇಕು.

ಇವುಗಳ ಜತೆಗೆ ಶುಭ್ರ ಮಂಟಪ ವಸ್ತ್ರ ಪ್ರತಿಯೊಂದು ವಿಗ್ರಹಕ್ಕೂ ಒಂದೊಂದು ನೀರಿನ ಲೋಟ, ದೀಪದ ಕಂಬಗಳು ನೈವೇದ್ಯ ಅರ್ಪಿಸುವುದಕ್ಕಾಗಿ ತಟ್ಟೆಗಳು ಮತ್ತು ಬಟ್ಟಲುಗಳು, ಚಿಕ್ಕ ಘಂಟೆ, ಧೂಪ, ಊದುಬತ್ತಿ, ಊದುಬತ್ತಿ ಚುಚ್ಚಿಡುವ ಪೀಠಗಳು, ಹೂವು, ಹೂಬುಟ್ಟಿಗಳು ಬೇಕು.

ದೇವರ ಮಂಟಪವನ್ನು ಪ್ರತಿನಿತ್ಯ ಸ್ವಚ್ಛಗೊಳಿಸಬೇಕು. ವಿಗ್ರಹರಾಧನೆಯಲ್ಲಿ ಸ್ವಚ್ಛತೆಗೆ ಪರಮೋಚ್ಛ ಸ್ಥಾನ. ದೇವರ ಮಂಟಪವೆಂದರೆ ದೇಮೋತ್ತಮ ಪರಮ ಪುರುಷ ಶ್ರೀಕೃಷ್ಣ ಮತ್ತು ಅವನ ಶುದ್ಧ ಭಕ್ತರ ವಾಸಸ್ಥಾನ. ಅದರ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ತಾಳುವಂತೆಯೇ ಇಲ್ಲ.

ದೇವರ ಮಂಟಪದಲ್ಲಿ ಇರಿಸಿರುವ ಲೋಟದಲ್ಲಿರುವ ನೀರುನ್ನು ನಿತ್ಯ ಬದಲಿಸಬೇಕು. ಹಾಗೆಯೇ ದೇವರಿಗೆ ಅಲಂಕರಿಸಿರುವ ಹೂವನ್ನೂ ಬದಲಿಸಿ ನಿತ್ಯ ಹೂವು ಮುಡಿಸಬೇಕು. ಕನಿಷ್ಠ ದಿನಕ್ಕೊಮ್ಮೆಯಾದರೂ ಊದುಬತ್ತಿಗಳನ್ನು ದೀಪಗಳನ್ನು ಹಚ್ಚಬೇಕು.

  • ಪ್ರತಿನಿತ್ಯ ಶ್ರೀಕೃಷ್ಣ ಚೈತನ್ಯ ಮತ್ತು ಪ್ರಭುಪಾದರ ಚಿತ್ರ / ವಿಗ್ರಹಗಳನ್ನು ಅದಕ್ಕಾಗಿಯೇ ಮೀಸಲಿಟ್ಟಿರುವ ಶು‍‍ಭ್ರ ವಸ್ತ್ರದಿಂದ ಒರೆಸಬೇಕು.
  • ವಿಗ್ರಹ / ಚಿತ್ರಗಳನ್ನು ಬಿಡಿ ಹೂವು ಮತ್ತು ಹೂಮಾಲೆಗಳಿಂದ ಅಲಂಕರಿಸಬೇಕು.
  • ಶ್ರೀಕೃಷ್ಣ ಮತ್ತು ಅವನ ಶುದ್ಧ ಭಕ್ತರಿಗೆ ಆರತಿ ಬೆಳಗಬೇಕು. ನಿತ್ಯ ಆರತಿ ಬೆಳಗಲು ನಿರ್ದಿಷ್ಠ ಸಮಯ ನಿಗದಿಪಡಿಸಿಕೊಂಡು, ಸಾಧ್ಯವಾದರೆ ಒಂದಕ್ಕಿಂತ ಹೆಚ್ಚು ಆರತಿಯನ್ನು ಬೆಳಗಿ.
  • ಸಂಪ್ರದಾಯದಂತೆ ಮೊದಲ ಆರತಿಯನ್ನು ಸೂರ್ಯೋದಯಕ್ಕೆ ಒಂದು ಅಥವಾ ಅರ್ಧ ತಾಸು ಮೊದಲು, ಎರಡನೇ ಆರತಿಯನ್ನು ಭಗವಂತನಿಗೆ ಮಧ್ಯಾಹ್ನದ ನೈವೇದ್ಯ ಅರ್ಪಿಸಿದ ನಂತರ ಹಾಗೂ ಮೂರನೇ ಆರತಿಯನ್ನು ಸಂಜೆ ಸೂರ್ಯಾಸ್ತಕ್ಕಿಂತ ಒಂದು ಅಥವಾ ಅರ್ಧ ತಾಸು ಮೊದಲು ನರೆವೇರಿಸಬಹುದು.
  • ರಾತ್ರಿ ಮಂಟಪ ಮುಚ್ಚುವ ಮೊದಲು ದೇವರಿಗೆ ಮುಡಿಸಲಾಗಿರುವ ಹೂವು ಮತ್ತು ಹೂಮಾಲೆಯನ್ನು ತೆಗೆಯಬೇಕು. ಅದನ್ನೇ ಮಹಾಪ್ರಸಾದವಾಗಿ ಹಂಚಬೇಕು. ಶುಭ್ರ ಒದ್ದೆ ವಸ್ತ್ರದಿಂದ ಮಂಟಪವನ್ನು ಸ್ವಚ್ಛಗೊಳಿಸಿ. ಮಂಟಪದೊಳಗಿನ ಎಲ್ಲಾ ದೀಪಗಳನ್ನು ನಂದಿಸಬೇಕು.

ಆರತಿ ಬೆಳಗುವ ಸಂದರ್ಭದಲ್ಲಿ ಭಗವಂತನಿಗೆ ಈ ಕೆಳಗಿನ ಸೇವೆಗಳನ್ನು ಅರ್ಪಿಸಬಹುದು.

1. ಧೂಪ- ಊದುಬತ್ತಿ (ಬೆಸ ಸಂಖ್ಯೆಯಲ್ಲಿ ಅಗರಬತ್ತಿಗಳನ್ನು ಹೊತ್ತಿಸಿ 7 ಬಾರಿ ಭಗವಂತನೆದುರು ವೃತ್ತಾಕಾರವಾಗಿ ಪ್ರದಕ್ಷಿಣೆ ಮಾಡಿಸಬೇಕು)

2 ದೀಪ ( ತುಪ್ಪ ಅಥವಾ ಕರ್ಪೂರದ ಆರತಿಯನ್ನು 4 ಬಾರಿ ಭಗವಂತನ ಪಾದಪದ್ಮಗಳಿಗೆ, ಎರಡು ಬಾರಿ ಒಕ್ಕಳಕ್ಕೆ, 3 ಬಾರಿ ಮುಕಾರವಿಂದಕ್ಕೆ 7 ಬಾರಿ ಅವನ ಮೂರ್ತಿಗೆ ವೃತ್ತಾಕಾರದಲ್ಲಿ ಪ್ರದಕ್ಷಿಣೆ ಮಾಡಿಸಬೇಕು)

3 ಅರ್ಘ್ಯ ( ಚಿಕ್ಕ ಶಂಖುವಿನಲ್ಲಿರಿಸಿದ ಸುಗಂಧ ಜಲವನ್ನೂ ಭಗವಂತನೆದುರು 3 ಬಾರಿ ಮುಕಾರವಿಂದಕ್ಕೆ ಮತ್ತು 7 ಬಾರಿ ಮೂರ್ತಿಗೆ ವೃತ್ತಾಕಾರದಲ್ಲಿ ಪ್ರದಕ್ಷಿಣೆ ಮಾಡಿಸಬೇಕು)

4 ವಸ್ತ್ರ (ಮೇಲೆ ತಿಳಿಸಿದಂತೆ ಶುದ್ಧ ಕರವಸ್ತ್ರದ ಸೇವೆಯನ್ನೂ ಸಲ್ಲಿಸಬೇಕು)

5 ಪುಷ್ಪ (ಹಿತ್ತಾಳೆ ಅಥವಾ ಬೆಳ್ಳಿ ತಟ್ಟಿಯಲ್ಲಿಟ್ಟಿರುವ ಹೂವುಗಳಿಂದ ಭಗವಂತನಿಗೆ 7 ಬಾರಿ ಆರತಿ ಮಾಡಬೇಕು)

6. ಚಾಮರ ( ಭಗವಂತನಿಗೆ ಕನಿಷ್ಠ ಪಕ್ಷ 7 ಬಾರಿ ಚಾಮರ ಬೀಸಬೇಕು)

7 ವ್ಯಜನ (ಕನಿಷ್ಠ ಪಕ್ಷ 7 ಬಾರಿ ಬೀಸಬೇಕು)

ಇದು ಸಂಪೂರ್ಣ ಆರತಿ ಮಾಡುವ ವಿಧಾನ.

  • ಶ್ರೀಕೃಷ್ಣ ಮತ್ತು ಆತನ ಶುದ್ಧ ಭಕ್ತರಿಗೆ ಪೂಜೆ ಸಂದರ್ಭದಲ್ಲಿ ನೈವೇದ್ಯ ಸಲ್ಲಿಸಬೇಕು. ಕೃಷ್ಣನಿಗೆ ಅರ್ಪಿಸಲು ನಿಮ್ಮಿಂದ ಅಡುಗೆ ತಯಾರಿಸುವುದು ಅಸಾಧ್ಯವಾದರೆ ಹಣ್ಣು ಮತ್ತು ತರಕಾರಿಗಳನ್ನು ಅರ್ಪಿಸಬಹುದು. ಅದೂ ಸಿಗದಿದ್ದರೆ ಶುದ್ಧ ಜಲವನ್ನು ತುಳಿಸಿ ಎಲೆಯೊಂದಿಗೆ ಅರ್ಪಿಸಬಹುದು. ಭಗವಂತ ಇವುಗಳನ್ನೆಲ್ಲ ತನಗಾಗಿ ಬಯಸುವುದಿಲ್ಲ. ಬದಲಿಗೆ ತನ್ನ ಭಕ್ತರು ಪ್ರೀತಿಯಿಂದ ಇವುಗಳನ್ನು ಅರ್ಪಿಸಿದರೆ ಆತ ಸಂಪ್ರೀತನಾಗುತ್ತಾನೆ.
  • ಭಗವಂತಿಗೆ ನೈವೇದ್ಯ ಸಿದ್ಧಪಡಿಸುವ ಅಡುಗೆ ಪಾತ್ರೆಗಳು ಸ್ವಚ್ಛವಾಗಿರಬೇಕು.
  • ಯಾವುದೇ ಕಾರಣಕ್ಕೂ ಮಾಂಸಾಹಾರ ಮತ್ತು ಮೊಟ್ಟೆಯನ್ನು ಭಗವಂತನಿಗೆ ಅರ್ಪಿಸಬಾರದು. ಈರುಳ್ಳಿ, ಬೆಳ್ಳುಳ್ಳಿಗಳೂ ನಿಷಿದ್ಧ.
  • ಮುಖ್ಯವಾಗಿ ಕೃಷ್ಣನಿಗಾಗಿ ಅಡಿಗೆ ಸಿದ್ಧಪಡಿಸುತ್ತಿದ್ದೇನೆ ಎಂಬುದು ಮನದಲ್ಲಿರಲಿ. ಬೇರಾರು ನೈವೇದ್ಯ ಮಾಡುವ ಮುನ್ನ ಅದನ್ನು ಭಕ್ಷಿಸದ ಹಾಗೆ ನೋಡಿಕೊಳ್ಳಿ.
  • ನೈವೇದ್ಯವನ್ನು ಮಂಟಪದಲ್ಲಿ ಭಗವಂತನ ಮುಂದಿರಿಸಿ. ಎಡಗೈಯಲ್ಲಿ ಗಂಟೆಯನ್ನು ಬಾರಿಸುತ್ತಾ ಈ ಮಂತ್ರವನ್ನು ಪಠಿಸಿ.

ಶ್ರೀಕೃಷ್ಣ ಚೈತನ್ಯ ಮತ್ತು ಪ್ರಭುಪಾದರಿಗೆ ಕ್ರಮವಾಗಿ ಈ ಮೂರೂ ಶ್ಲೋಕಗಳನ್ನು ತಲಾ ಮೂರು ಬಾರಿ ಪಠಿಸಬೇಕು. ನಂತರ ನೈವೇದ್ಯವನ್ನು 5-1೦ ನಿಮಿಷ ಕಾಲ ಭಗವಂತನ ಮುಂದೆ ಇಡಬೇಕು. ಆನಂತರ ಈ ನೈವೇದ್ಯವನ್ನು ಮಿಕ್ಕ ಆಹಾರದ ಜೊತೆ ಬೆರೆಸಬೇಕು. ಕೊನೆಯಲ್ಲಿ ಈ ಪ್ರಸಾದವನ್ನು ಎಲ್ಲರಿಗೂ ಹಂಚಬೇಕು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi