ಸನಾತನ ಧರ್ಮ ಏಕೆ? ಏನು?

ಪ್ರಶ್ನೋತ್ತರ ರೂಪದಲ್ಲಿರುವ ಶ್ರೀಲ ಪ್ರಭುಪಾದರ “ಸನಾತನ ಧರ್ಮ ಏಕೆ? ಏನು?” ಎಂಬ ಪುಸ್ತಕದಲ್ಲಿ ಸನಾತನ ಧರ್ಮದ ಸುಂದರವಾದ ಪರಿಚಯವನ್ನು ಮಾಡಿಕೊಡಲಾಗಿದೆ. ಅದರ ಅಗತ್ಯವನ್ನು ಮತ್ತು ಅದರ ಪ್ರಸ್ತುತತೆಯನ್ನು ಪ್ರಸ್ತುತಪಡಿಸಲಾಗಿದೆ.

ಸನಾತನ ಧರ್ಮ ಎಂದರೆ ಹಿಂದೂ ಧರ್ಮವಲ್ಲ! ಅದು ವಿಶ್ವಧರ್ಮ, ಸಕಲ ಮಾನವರಿಗೆ ಲೇಸನ್ನು ಬಯಸುವ ಧರ್ಮ; ಮಾನವನು ಹುಟ್ಟಿನಿಂದ ದೊಡ್ಡವನಾಗುವುದಿಲ್ಲ! ಹುಟ್ಟಿದಾಗ ಎಲ್ಲರೂ ಶೂದ್ರರೇ! ಶಿಕ್ಷಣದಿಂದ, ಸಂಸ್ಕೃತಿಯಿಂದ ತಪಸ್ಸಿನಿಂದ ಹಾಗೂ ಸೇವೆಯಿಂದ ಕೀಳು ಕುಲದಲ್ಲಿ ಹುಟ್ಟಿದವನೂ ಶ್ರೇಷ್ಠನಾಗುತ್ತಾನೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ.

“ಬ್ರಹ್ಮ ಸಂಪ್ರದಾಯ”ಕ್ಕೆ “ರುದ್ರ ಸಂಪ್ರದಾಯ” ಮತ್ತು “ಶ್ರೀ ಸಂಪ್ರದಾಯ” ಅಥವಾ “ಕುಮಾರ ಸಂಪ್ರದಾಯ”ಗಳಲ್ಲಿ ಯಾವುದಾದರೊಂದು ಸಂಪ್ರದಾಯಕ್ಕೆ ಸೇರಲೇಬೇಕು ಮಾನವರು! ಎಲ್ಲವೂ ಸಮಾನ ಸಂಪ್ರದಾಯಗಳೇ! ಭಗವಂತನ ಸ್ಪಷ್ಟ ಕಲ್ಪನೆ, ಭಗವಂತನ ಪ್ರೀತಿ, ಆತನ ಸೇವೆ, ಸಮರ್ಪಣಾಭಾವ ಅತ್ಯಗತ್ಯ.

ಆತನ ಪ್ರಸನ್ನತೆಗಾಗಿ – “ಬೇರೆ ಎಲ್ಲ ಧರ್ಮಗಳನ್ನು ಪರಿತ್ಯಜಿಸಿ ಕೇವಲ ಎನಗೆ ಶರಣಾಗತನಾಗು. ಎಲ್ಲ ಪಾಪಗಳಿಂದ ನಿನ್ನನ್ನು ಮುಕ್ತನನ್ನಾಗಿ ಮಾಡುತ್ತೇನೆ. ಭಯಬೇಡ!” ಎಂದು ಭಗವಾನ್‌ ಶ್ರೀಕೃಷ್ಣನು ಆಶ್ವಾಸನೆ ನೀಡುತ್ತಾನೆ. ಭಗವದ್ಗೀತೆಯ ಈ ಸಂದೇಶವು ವಿಶ್ವಮಾನ್ಯವಾಗಿದೆ! ಮಾನವ ಕುಲದ ಕಲ್ಯಾಣದ ತಾರಕ ಮಂತ್ರವಾಗಿದೆ!

ಈ ಕೃತಿಯಲ್ಲಿ ಕೇಳಲಾಗಿರುವ ಮಹತ್ವದ ಪ್ರಶ್ನೆಗಳಿಗೆ ಶ್ರೀಲ ಪ್ರಭುಪಾದರು ಸಮರ್ಪಕವಾದ ಸಂಕ್ಷಿಪ್ತ ಉತ್ತರಗಳನ್ನು ನೀಡಿದ್ದಾರೆ. ಕಲಹ ಮತ್ತು ಕಪಟದ ಯುಗವಾದ ಕಲಿಯುಗದ ದಿಕ್ಕುಗೆಡ್ಡವರಿಗೆ ಈ ಕೃತಿಯು ದಾರಿ ದೀಪವಾಗಿದೆ. ಶ್ರೀಲ ಪ್ರಭುಪಾದರು ಅಭಿನಂದನಾರ್ಹರು!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

One response to “ಸನಾತನ ಧರ್ಮ ಏಕೆ? ಏನು?”

  1. ಹೆಚ್ ದೇವರಾಜ Avatar
    ಹೆಚ್ ದೇವರಾಜ

    🙏🙏👌👌

UPI ID : bvdsstseva@sbi