ಕೃಷ್ಣ : ದಿವ್ಯ ಪ್ರೇಮಿ

ನಿನ್ನಿಚ್ಛೆಯಂತೆ ಸಮಯಾಸಮಯದಲಿ ಸೇವಕನಂತೆ ದುಡಿವ ದಾಸ ನಾನು ನೀನಾಜ್ಞಾಪಿಸುವ ತನಕ ನನ್ನ ಸಮಯಕ್ಕೆ ಬೆಲೆ ಇಲ್ಲ. ವೇಳೆ ನೋಡುತ್ತ ನಿನಗಾಗಿ ಕಾಯುವ ನಾನು ಅನಂತ ಕಾಲದ ಲೋಕವನು ನಿಂದಿಸಲಿ ಹೇಗೆ ? ನಿನ್ನ ಸೇವಕನ ನೀನೆ ಕಳಿಸಿರುವಾಗ ಅಗಲಿಕೆಯು ಕಹಿಯೆಂದು ನಾ ಹೇಗೆ ದೂರಲಿ ? 

ಹೊಟ್ಟೆಕಿಚ್ಚಿನ ಆಲೋಚನೆಯಲ್ಲಿ ಮುಳುಗಿ ನೀನೆಲ್ಲಿರುವೆ, ನಿನ್ನ ವ್ಯವಹಾರಗಳೇನೆಂದು ಪ್ರಶ್ನಿಸಲೆ ನಾನು ? ನೀನವರನ್ನು ಎನಿತು ಸಂತಸವಾಗಿಟ್ಟರೂ ನಾ ಮಾತ್ರ ನೊಂದ ದಾಸನಂತೆ ನಿಷ್ಫಲ ಆಲೋಚನೆಯಲ್ಲಿ ಉಳಿಯುವೆ ನಿನ್ನಿಚ್ಛೆಯಂತೆ ಪ್ರೇಮವೂ ಶುದ್ಧ ಪೆದ್ದು ಏನು ಮಾಡಿದರೂ ಕೆಡಕು ಬಗೆಯುವುದಿಲ್ಲ ನೀನು (ವಿಲಿಯಂ ಶೇಕ್ಸ್‌ಫಿಯರ್‌, ಸಾನೆಟ್ ಸಂಖ್ಯೆ 57)

ಭಗವದ್ಗೀತೆಯಲ್ಲಿ ಕೃಷ್ಣ ದಿವ್ಯ ಪ್ರೇಮಿ. ಬಹುತೇಕ ಮಂದಿಗೆ ಇದು ಸಣ್ಣ ಸಂಗತಿ ಎನಿಸುತ್ತದೆ. ಆದರೆ ಇಡೀ ಸೃಷ್ಟಿಯೇ ಭಗವದ್ಗೀತೆ ಎನ್ನುವುದನ್ನು ನಾವು ಮನಗಂಡಾಗ ಇದು ನಮಗೂ ಅನ್ವಯಿಸುತ್ತದೆ ಎನ್ನುವುದನ್ನು ಅರಿಯಲು ಸಾಧ್ಯ. ಕೃಷ್ಣ ನಮ್ಮೆಲ್ಲರ ಪ್ರೇಮಿ. ನಾವು ಅವನ ಸೃಷ್ಟಿ. ತನ್ನ ಸೃಷ್ಟಿಯನ್ನು ಅವನು ಪ್ರೀತಿಸುತ್ತಾನೆ. ಅವನೊಬ್ಬ ಚತುರಮತಿ ಪ್ರೇಮಿ. ನಮ್ಮ ಕಣ್ಣಿಗೆ ಕಾಣಿಸದಂತೆ ಅವನು ಬಚ್ಚಿಟ್ಟುಕೊಳ್ಳುತ್ತಾನೆ.

ಅದಕ್ಕಾಗಿಯೇ ನಾವು ಅವನಿಗೆ ಮೊರೆ ಇಡುತ್ತೇವೆ. ನಮ್ಮ ಬಗ್ಗೆ ಅವನಿಗಿರುವ ಪ್ರೇಮ ಅಪರಿಮಿತವಾದದ್ದು. ಅದನ್ನು ಗ್ರಹಿಸುವುದು ನಮ್ಮಿಂದ ಅಸಾಧ್ಯ. ಅವನು ನಮ್ಮ ಕಣ್ಣಿಗೆ ಕಾಣಿಸದಂತೆ ಅಡಗಿಕೊಂಡಾಗ ಅದರಲ್ಲಿ ದೈವತ್ವದ ಛಾಯೆ ಕಾಣಿಸಿಕೊಳ್ಳುತ್ತದೆಯಾದರೂ ನಿಜವಾಗಿಯೂ ಅವನು ಅಡಗಿಕೊಂಡಿರುವುದಿಲ್ಲ.

ಅವನು ನಿರಂತರವಾಗಿ ನಮ್ಮೆದುರಿಗೆ ಇರುತ್ತಾನೆ. ಆದರೆ ನಾವು ಅವನನ್ನು ಹುಡುಕಾಡುತ್ತಿರುತ್ತೇವೆ. ನಮ್ಮೆದುರಿಗಿದ್ದರೂ ಅವನನ್ನು ಗುರುತಿಸಲು ನಮಗೆ ಸಾಧ್ಯವಾಗುವುದಿಲ್ಲ. ನಮ್ಮ ಅತ್ಯಂತ ಕಿರು ಬೇಡಿಕೆಯನ್ನು ನೆರವೇರಿಸುವಂತಹ ಪ್ರೇಮಿ ಅವನು. ನಮ್ಮ ದೂರದ ಬಯಕೆಗಳೆಲ್ಲವೂ ಕೂಡ ಅವನತ್ತಲೇ ಇರುತ್ತದೆ.

ಐಹಿಕ ಪ್ರೇಮದ ಅಂಶಗಳು ಅಲ್ಲಿ ಕಾಣುತ್ತವೆಯಾದರೂ ಅವನ ಪ್ರೇಮ ಐಹಿಕವಾದುದಲ್ಲ. ಆದರೆ ಐಹಿಕ ಪ್ರೇಮದ ದೃಷ್ಟಿಯಿಂದ ನಾವು ಅವನನ್ನು ಬಯಸಿದಾಗ ಅಷ್ಟೇ ಸಾಮಾನ್ಯವಾಗಿ ಅವನು ನಡೆದುಕೊಳ್ಳುತ್ತಾನೆ. ಆದರೆ ನಿಜವಾಗಲೂ ಇದು ಅವನ ಶುದ್ಧ ಪ್ರೇಮದ ಕುರುಹು. ಅವನ ಶುದ್ಧ ಪ್ರೇಮ ಪರಿಪೂರ್ಣವಾಗಿ ನಮಗೆ ಗೋಚರವಾದಲ್ಲಿ ಆ ಪ್ರೇಮಾಗ್ನಿಯಲ್ಲಿ ನಾವು ಕರಗಿ ಹೋಗುತ್ತೇವೆ.

ಅವನ ನಿಜವಾದ ಪ್ರೇಮ ಇದ್ದೇ ಇದೆ. ಆದರೆ ಆ ಪ್ರೇಮದ ಕುರುಹಿನಲ್ಲೇ ನಾವು ತೃಪ್ತಿಪಟ್ಟುಕೊಳ್ಳುತ್ತೇವೆ. ಅವನ ಪ್ರೇಮದ ಸಂಕೇತವೇ ಮಾನವರ ನಡುವಿನ ಒಲವಿನ ವಿವಿಧ ಹಂತಗಳಲ್ಲಿ ನಿರೂಪಿಸಬಹುದಾಗಿದೆ. ಮನುಷ್ಯರ ನಡುವಿನ ಪ್ರೀತಿಗೆ ಮಿತಿ ಇದೆ. ಅದು ಕಾಲದ ಪರಿಮಿತಿಗೆ ಒಳಪಟ್ಟಿದ್ದು ಹಾಗೂ ನಿಗದಿತ ಮಟ್ಟದಿಂದ ಕೂಡಿದ್ದು.

ಆದರೆ ಮನುಷ್ಯ ಹಾಗೂ ಕೃಷ್ಣನ ನಡುವಿನ ಪ್ರೇಮ ಅನಂತವಾದದ್ದು ಹಾಗೂ ಹೆಚ್ಚು ಸಂಕೀರ್ಣವಾದದ್ದು. ಈ ಅನುನಯ ಶತಶತಮಾನಗಳಿಂದ ನಡೆದುಕೊಂಡು ಬರುತ್ತಿದೆ. ಶತಶತಮಾನಗಳಿಂದ ಪ್ರತಿಯೊಬ್ಬನ ಆತ್ಮವೂ ಬಯಕೆಯ ಬೆನ್ನು ಹತ್ತಿ ನಿಜವಾಗಿಯೂ ನಮ್ಮನ್ನು ತೃಪ್ತಿಪಡಿಸುವಂತಹ ಪ್ರೇಮಕ್ಕಾಗಿ ಅವ್ಯಕ್ತನನ್ನು ಹುಡುಕುತ್ತ ವಿಶ್ವದ ತುಂಬ ಅಲೆದಾಡುತ್ತಿದೆ.

ಅದೆಷ್ಟೋ ಜೀವಗಳು ಹುಟ್ಟು, ವೃದ್ಧಾಪ್ಯ, ರೋಗ, ಸಾವು ಇವುಗಳ ಕೊನೆಯಿರದ ಬಂಧನದ ಅಲೆದಾಟದಲ್ಲೇ ಜೀವ ಸವೆಸುತ್ತಿವೆ. ಈ ಎಲ್ಲ ಸಮಯದಲ್ಲಿಯೂ ನಮ್ಮ ನಿಜವಾದ ಪ್ರೇಮಿ ನಾವು ಅವನತ್ತ ತಿರುಗುತ್ತೇವೆಯೇ ಎನ್ನುವುದನ್ನು ಗಮನಿಸುತ್ತಿರುತ್ತಾನೆ ಹಾಗೂ ಕಾಯುತ್ತಿರುತ್ತಾನೆ.

ಈ ಸೃಷ್ಟಿಯ ಆದಿಯ ಮೊದಲೂ ಕೂಡ ಅವನು ನಮ್ಮ ಪ್ರಗತಿ, ನಮ್ಮ ಪಾವಿತ್ರ್ಯವನ್ನು ಗಮನಿಸುತ್ತಿದ್ದಾನೆ. ಅಂತಿಮವಾಗಿ ಅವನನ್ನು ಎದುರಿಸುವವರೆಗೂ ಕಾಯುತ್ತಾನೆ. ನಮ್ಮ ಆಟವನ್ನು ಬದಿಗಿಟ್ಟು, ನಿಜವಾದ ಪ್ರೇಮಿಗಳಾಗಿ ಅವನತ್ತ ತಿರುಗಿದಾಗ ನಮ್ಮ ಪ್ರಶ್ನೆಗಳಿಗೆ ಅವನಿಂದ ಉತ್ತರ ಸಿಗುತ್ತದೆ.

ತನ್ನ ಪ್ರಿಯಕರನೊಂದಿಗಿನ ಮೊದಲ ಭೇಟಿಯಲ್ಲಿ ಪ್ರಿಯತಮೆಯೊಬ್ಬಳು ಅನುಭವಿಸುವ ಉದ್ರೇಕಕ್ಕಿಂತಲೂ ಮಿಗಿಲಾದುದು ಅವನನ್ನು ಅರ್ಥಮಾಡಿಕೊಳ್ಳುವುದು ಹಾಗೂ ಗ್ರಹಿಸುವುದು. ಕೃಷ್ಣ ಒಂದಿರುಳಿನ ಇಲ್ಲವೆ ಜೀವಕಾಲದ ಸಂಗಾತಿಯಲ್ಲ. ಅವನೊಬ್ಬ ಚಿರಂತನ ಪ್ರೇಮಿ. ಅವನ ಪ್ರೇಮ ಕಾಲೋಚಿತವಾದುದಾಗಲಿ, ಮಿತಿ ಉಳ್ಳದ್ದಾಗಲಿ ಇಲ್ಲವೆ ನಿಗದಿತ ಮಟ್ಟದ್ದಾಗಲಿ ಅಲ್ಲ. ಅವನ ಪ್ರೇಮ ಅನಂತವಾದದ್ದು, ಶಾಶ್ವತವಾದದ್ದು, ಅಪರಿಮಿತವಾದ ಮಹಾಸಾಗರದಂತೆ.

ಅವನನ್ನು ಪ್ರೀತಿಸುವವನು ಅಮಿತಾನಂದದ ಹರ್ಷ ಗೀತೆಯನ್ನು ಅನುಭವಿಸುತ್ತಾನೆ. ಸಂತಸದಿಂದ ಕೊಳಲು, ಡೋಲು ಮೊದಲಾದ ಸಂಗೀತ ವಾದ್ಯಗಳನ್ನು ನುಡಿಸುತ್ತಾನೆ. ಸಂಭ್ರಮದಿಂದ ಹಾಡಿ ಕುಣಿಯುತ್ತಾನೆ. ಅವನ ಪ್ರೇಮದ ರುಜುವಾತು ಅನಂತವಾದದ್ದು. ಅಗಣಿತ ದೂತರನ್ನು ಕಳುಹಿಸುತ್ತಾನೆ. ಇವೆಲ್ಲವುಗಳ ಮೂಲಕ ಭಕ್ತನ ತಾಳ್ಮೆ ಪರೀಕ್ಷಿಸುತ್ತಾನೆ. ಇದು ಅವನ ಪ್ರೇಮದ ಕುರುಹು.

ಅವನ ಅವತಾರಗಳು ಕೂಡ ಅನುನಯದ ಸೂಚನೆಗಳು ಎನ್ನುವುದು ಭಕ್ತನಿಗೂ ಗೊತ್ತು. ಅವನ ಮತ್ತು ಭಕ್ತರ ನಡುವಿನ ಪಥದಲ್ಲಿರುವ ಬಿರುಕುಗಳನ್ನು ಪ್ರೇಮ ಪತ್ರಗಳಿಂದ ತುಂಬುತ್ತಾನೆ. ನಕ್ಷತ್ರಗಳ ಮೂಲಕ ತನ್ನ ಸಂದೇಶ ಸಾರುತ್ತಾನೆ. ಇಲ್ಲವೆ ತನ್ನ ಸಂದೇಶಗಳನ್ನು ಮೂಲೆಗಳಲ್ಲಿರಿಸಿ ನಾವು ಎಡವಿ ಬೀಳುವಂತೆ ಮಾಡುತ್ತಾನೆ. ಇವೆಲ್ಲವೂ ಕೂಡ ಭಕ್ತರು ಅವನಿಗಾಗಿ ನಡೆಸುವ ಹುಚ್ಚಾಟಗಳೇ ಆಗಿವೆ. ಇದಕ್ಕೆ ಎಳೆ ತರುವವನೂ ಅವನೇ.

ಅವನ ವದನ, ಸತ್ಯ, ನಿರಂತರತೆ, ಆಧ್ಯಾತ್ಮಿಕ ರೂಪವನ್ನು ನೋಡುವುದಕ್ಕೆ ನಾವು ಬಹುಕಾಲ ಕಾಯಬೇಕು. ನಮ್ಮನ್ನು ಅವನು ದೂರಕ್ಕೆ ಕರೆದೊಯ್ಯಬೇಕು, ಮಗ್ನರನ್ನಾಗಿ ಮಾಡಬೇಕು. ಅವನ ಬಯಕೆಯಂತೆ – ಕ್ರೂರವಾಗಿ ಇಲ್ಲವೇ ಸ್ನೇಹಪೂರ್ವಕವಾಗಿ – ಯಾವುದಾದರೂ ಸರಿ ತಿರಸ್ಕರಿಸದಂತೆ ಇಲ್ಲವೇ ಮರೆಯದಂತೆ ನೋಡಿಕೊಳ್ಳಲಿ ಎಂದು ಬಯಸುತ್ತೇವೆ.

ನಮ್ಮನ್ನು ಐಹಿಕ ಸುಖಭೋಗದ ಸ್ವರ್ಗದಲ್ಲಿರಿಸಿ ನಮ್ಮನ್ನು ಅವನು ಮರೆಯುವುದಕ್ಕಿಂತ ನರಕದಲ್ಲಿರಿಸಿ ಅವನ ಪ್ರಜ್ಞೆ ದೊರಕುವಂತಾಗುವುದೇ ಹೆಚ್ಚು ಒಳಿತು. ನಮ್ಮನ್ನು ತೃಪ್ತಿಪಡಿಸುವುದು ಅವನಿಂದ ಮಾತ್ರ ಸಾಧ್ಯ ಎಂದು ನಾವು ತಿಳಿದಿದ್ದೇವೆ. ಪ್ರತಿಯೊಂದು ಕೂಡ ಪರಿಹಾರ, ಮೂದಲಿಕೆ, ಹಾಗಾದಾಗ ಅವನ ಪ್ರೀತಿಯನ್ನು ಸಮರ್ಥಿಸುವುದು ಈ ಪಾಪದ ಬದುಕನ್ನು ನೋಡಿದಾಗ ಅವನಿಗೆ ನಾವು ಯೋಗ್ಯರಾಗಬಲ್ಲೆವೇ ಎಂಬ ಅಚ್ಚರಿ ಉಂಟಾಗುತ್ತದೆ.

ಪ್ರೀತಿ ಪಾತ್ರನಾದವನು ಮಾತ್ರವೇ ಪ್ರೇಮಿಗೆ ಯೋಗ್ಯನಾಗುತ್ತಾನೆ. ನಮ್ಮ ಶೋಚನೀಯ ಹಾಗೂ ಹತಾಶ ಸ್ಥಿತಿಯೇ ಅವನನ್ನು ಪ್ರೀತಿಸುವಂತೆ ಮಾಡುತ್ತದೆ ಎಂಬ ನಂಬಿಕೆ ನಮ್ಮದು. ಅವನಲ್ಲಿ ಪರಿಪೂರ್ಣವಾಗಿ ಶರಣಾಗುವುದೇ ನಮಗೆ ಉಳಿದಿರುವ ಒಂದೇ ಆಸರೆ. ಅವನು ನಮ್ಮನ್ನು ಬಯಸಲಿ, ಬಿಡಲಿ ನಾವು ಅವನಿಗೆ ಪೂರ್ಣವಾಗಿ ಶರಣಾಗಬೇಕು. ತನ್ನನ್ನು ಪ್ರೀತಿಸುತ್ತಿರುವವನೇ ತನ್ನತ್ತ ಬರಲಿ ಎಂದು ಪ್ರೇಮಿಯಾದವನು ಕಾಯುವುದಿಲ್ಲ.

ನಾವು ಕೃಷ್ಣನಿಗೆ ಶರಣಾಗುವುದನ್ನು ಕಲಿಯಬೇಕು. ನಿರಂತರವಾಗಿ ಅವನನ್ನು ಧ್ಯಾನಿಸಬೇಕು, ಪ್ರಾರ್ಥಿಸಬೇಕು, ಎಲ್ಲವನ್ನೂ ಅವನಿಗೆ ನಿವೇದಿಸಬೇಕು, ಅವನನ್ನು ಬಿಟ್ಟು ಉಳಿದೆಲ್ಲವನ್ನೂ ನಿರಾಕರಿಸಬೇಕು, ಅವನೊಬ್ಬನಿಂದಲೇ ತೃಪ್ತಿ ಹೊಂದಲು ಸಾಧ್ಯ. ನಾವು ಪ್ರಾಪಂಚಿಕವಾದ ಎಲ್ಲ ಪಡಿಯಚ್ಚು ಚಿಹ್ನೆಗಳನ್ನು ತಿರಸ್ಕರಿಸಬೇಕು.

ಭೂಮಿಯ ಮೇಲೆ ನಾವು ಕಾಣುವ ಸೌಂದರ್ಯ ಅವನಿಂದ ಹೊಮ್ಮಿದ ಜೀವಕಳೆ ಎನ್ನುವುದನ್ನೂ ನಾವು ನೆನಪು ಮಾಡಿಕೊಳ್ಳಬೇಕು. ಅದೊಂದೇ ಅವನ ಸೌಂದರ್ಯದ ಕುರುಹು. ಒಂದು ಗಳಿಗೆ ಮೂಡುವ ಸೌಂದರ್ಯವದು. ನಾವು ಯಾವುದನ್ನೇ ಕುರಿತು ಕಿಂಚಿತ್ ಬಯಕೆ ಇಲ್ಲವೇ ಪ್ರೇಮವನ್ನು ಹೊಂದಿದ್ದೇ ಆದಲ್ಲಿ ಅದು ಅವನ ಕುರಿತದ್ದೇ ಎನ್ನುವುದನ್ನು ನಾವು ಮನಗಾಣಬೇಕು.

ತೇಜೋಮಯವಾದ ಮತ್ತು ಶೋಭಾಯಮಾನವಾದ ಕಾಂತಿಯನ್ನು ನೋಡಿದಾಗ ಅದು ಅವನ ಹೆಜ್ಜೆಗುರುತು ಎನ್ನುವ ಅರಿವು ನಮಗಿರಬೇಕು. ಇನ್ನೊಬ್ಬರನ್ನು ಪ್ರೀತಿಸುವುದರ ಅರ್ಥ ಸಾಮಾನ್ಯವಾಗಿ ಎಲ್ಲರಿಗೂ ತಿಳಿದದ್ದೇ – ತವಕ, ತಲ್ಲಣ, ನಡುಕ, ಇದಕ್ಕಿದ್ದಂತೆ ಹೆಚ್ಚುವ ಹೃದಯದ ಬಡಿತ, ಏಕಾಂತ, ಪ್ರೇಮಿಯ ಕುರಿತು ನಿರಂತರ ಜಪ, ಪ್ರೇಮಿಯ ಹೆಸರಿಟ್ಟು ಕರೆಯುವುದು, ಸಂಗೀತದಲ್ಲಿ ಕಲಾಕೃತಿಯಲ್ಲಿ ಪ್ರೇಮಿಯನ್ನು ಕಾಣುವುದು, ಸದಾ ಬಳಿಯೇ ಇರಬೇಕೆಂಬ ಹಂಬಲಿಕೆ, ಪ್ರೇಮಿಗೆ ಅಪ್ರಿಯವಾದ ಅಳುಕು ಉಂಟಾಗದಿರಲಿ ಎನ್ನುವ ಭಾವನೆ ಗುಪ್ತವಾಗಿ ಭಿನ್ನವಾಗಿರುತ್ತದೆ.

ಇವೆಲ್ಲವೂ ಅತ್ಯಲ್ಪ ಹಾಗೂ ಮಿತಿ ಇರುವ ಪ್ರಮಾಣದವು. ಒಬ್ಬರಿಂದ ಒಬ್ಬರಿಗೆ ಎಲ್ಲರು ಈ ಭಾವಗಳನ್ನು ಅನುಭವಿಸಿರುತ್ತಾರೆ. ಇದು ಒಂದು ತುಣುಕು ಮಿಥ್ಯಾಭಾವ ಶಕ್ತಿಯಿಂದ ಇನ್ನೊಂದು ಮಿಥ್ಯಾಭಾವ ಶಕ್ತಿಯ ಅನುಭವಕ್ಕೆ ಬಂದಿರುತ್ತದೆ. ಇಂತಹ ಭಾವನೆಗಳು ಅಲ್ಪಾವಧಿ ಮಾತ್ರ ಇರುತ್ತದೆ.

ಇಂತಹ ಭಾವನೆ, ಚಿಂತನೆ, ವ್ಯಾಮೋಹ ಆತ್ಮ ಹಾಗೂ ದಿವ್ಯ ಪ್ರೇಮಿಯ ನಡುವೆ ಎಷ್ಟು ಬೃಹತ್ತಾಗಿ ಇರಬಹುದು? ಇನ್ನೊಬ್ಬರ ಮೇಲಿನ ಪ್ರೀತಿ ಅವನನ್ನು ಕುರಿತಾದದ್ದೇ ಎನ್ನುವುದನ್ನು ನಾವು ಮನಗಾಣಬೇಕು. ಅದು ರಹಸ್ಯವಾದದ್ದು. ಈ ರಹಸ್ಯವನ್ನು ತೆಗೆದು ಹಾಕಿದಾಗ ನಮ್ಮ ಪ್ರೀತಿ ಮೂಲ ಸ್ಥಾನದಲ್ಲಿ ಮತ್ತು ನಿರ್ಮಲವಾಗಿ ಗೋಚರಿಸುತ್ತದೆ.

ಆದರೆ ನಮ್ಮ ಪ್ರೀತಿಗೆ ಮಿತಿ ಇದೆ. ದಿವ್ಯ ಪ್ರೇಮಿಯ ಪ್ರೇಮದ ಜೊತೆ ಅದನ್ನು ಹೋಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ನಮಗೆ ಅವನು ತೋರಿಸುವ ಸಹಾನುಭೂತಿಯನ್ನು ಗ್ರಹಿಸುವುದಕ್ಕಾಗುವುದಿಲ್ಲ. ಅದು ಅನಂತವಾದದ್ದು. ನಾವು ಅವನ ಎದೆಗೊರಗಿ ಮಲಗಬಹುದು ಇಲ್ಲವೇ ತೂಕಡಿಸಬಹುದು.

ಅದು ಕೂಡ ಅನಂತವಾದದ್ದು. ನಮ್ಮನ್ನು ಹೊರುವ ಅವನ ಭುಜಗಳು, ಪರ್ವತಗಳು, ಅವನ ಎದೆ ಹುಲ್ಲುಗಾವಲು ಮತ್ತು ಸುವರ್ಣ ಪುಷ್ಪಗಳು. ಅವನ ದೇಹದ ಮೇಲೆ ಮಲಗುವ ನಮ್ಮನ್ನು ಶಾಶ್ವತವಾಗಿ ಸಲಹುತ್ತಿದ್ದಾನೆ. ಅವನ ಮಹಿಮೆ ಹಾಗೂ ಸದ್ಗುಣಗಳಿಗೆ ಕೊನೆ ಎಂಬುದು ಇಲ್ಲ. ಅವನು ಕಣ್ಣು ಹಾಯಿಸಿದರೆ ಸೃಷ್ಟಿ ಅವನ ಧ್ವನಿಯೇ ಎಲ್ಲ ಶಬ್ದಗಳಿಗೆ ಮೂಲ, ಅವನ ಕರೆ ಗೆಳೆತನದ ಎಚ್ಚರ.

ಅಂತಹ ಪ್ರೇಮಿಯನ್ನು ದೂರವಿಡುವುದು ಹೇಗೆ ಸಾಧ್ಯ? ಅವನು ನಮ್ಮೊಂದಿಗಿಲ್ಲ ಎಂದರೆ ದುಃಖವಾಗುತ್ತದೆ. ನಾವೆಷ್ಟು ಚಿಕ್ಕವರಾಗಿ, ಕರುಣಾಜನಕರಾಗಿ ಅಪೂರ್ಣವಾಗಿ ಬಿಡುತ್ತೇವೆ. ಸಾವು ಕೂಡ ಅವನಿಂದ ದೂರಾಗಬಾರದು ಎಂದು ನಾವು ಬಯಸುತ್ತೇವೆ. ಆದರೆ ನಿಜವಾಗಿಯೂ ನಾವು ಅವನನ್ನು ಪ್ರೀತಿಸುವುದಿಲ್ಲ.

ಈ ಭೂಮಿಯ ಮೇಲೆ ನಾವು ಕಷ್ಟದಿಂದ ಬದುಕುತ್ತಿರುವುದೇ ಅದಕ್ಕೆ ನಿದರ್ಶನ. ಆದರೆ ನಾವೀಗ ಅವನಿಗಾಗಿ ಸಿದ್ಧರಾಗಬೇಕು. ಈ ತುಚ್ಛವಾದ, ಇಷ್ಟವಿಲ್ಲದ, ರೋಗಗ್ರಸ್ಥ ಬದುಕಿನಿಂದ ಹೊರಗೊಯ್ಯುವಂತಹ ಅವನ ಕರೆಗೆ ತಯಾರಿ ಮಾಡಬೇಕು. ಅವನು ನಮಗಾಗಿ ಬಹುಕಾಲದಿಂದ ಕಾದಿದ್ದಾನೆ.

ಹಾಗೆಯೇ ನಾವೂ ಅವನಿಗಾಗಿ ಕಾಯಬೇಕು. ಅವನಿಗಾಗಿ ನಾವು ಸಿದ್ಧರಾಗಬೇಕು. ಅವನಿಗಾಗಿ ಹಂಬಲಿಸುವ ನಾವು ಅವನ ಪರಮ ಸತ್ಯವಾದ ಪ್ರೇಮವನ್ನು ಪಡೆಯುವುದಕ್ಕೆ ಯೋಗ್ಯರಾಗಬೇಕು. ಆಗ ಅಂತಿಮವಾಗಿ ಅವನೊಡನೆ ಮುಖಾಮುಖಿಯಾಗಲು ಸಾಧ್ಯ.

ಕೃಷ್ಣನ ಭಕ್ತಿಯ ಕುರಿತು ಚೈತನ್ಯ ಮಹಾಪ್ರಭುಗಳನ್ನು ಒಮ್ಮೆ ಪ್ರಶ್ನಿಸಿದಾಗ ‘ಹೆಸರಿಗೆ ಮಾತ್ರ ನಾನು ಭಕ್ತ.

ಜನ ಸಮೂಹಕ್ಕೆ ತಿಳಿಸುವ ಸಲುವಾಗಿ ಕೃಷ್ಣನಿಗೆ ಮೊರೆ ಇಡುತ್ತೇವೆ. ನಿಜವಾಗಿಯೂ ಕೃಷ್ಣನ ಭಕ್ತನಾಗಿದ್ದಲ್ಲಿ ಅವನಿಂದ ದೂರವಿರುವ ಬದಲು ಅವನಿಗಾಗಿ ಸಾಯುತ್ತಿದ್ದೆ.’ ಕೃಷ್ಣನನ್ನು ಒಂದು ಕ್ಷಣವೂ ಅಗಲಿರುವುದು ಸಾಧ್ಯವಿಲ್ಲ ಎಂದು ಚೈತನ್ಯ ಮಹಾಪ್ರಭು ಹೇಳಿದ್ದರು. ನಾವು ಯಾರನ್ನೇ ಪ್ರೇಮಿಸುತ್ತಿದ್ದರೆ ಅವರ ಜಪ ಮಾಡುತ್ತಾ ಕೊಠಡಿಯಲ್ಲಿ ಕುಳಿತಿರಲು ಸಾಧ್ಯವಿಲ್ಲ.

ಅವನಿಗಾಗಿ ಬೆನ್ನು ಹತ್ತಿ ಎಲ್ಲ ತ್ಯಾಗಕ್ಕೂ ಸಿದ್ಧರಾಗುತ್ತೇವೆ. ಇದು ಪರಮ ಸತ್ಯವಾದದ್ದು ಎನ್ನುವುದನ್ನು ನಾವೆಲ್ಲರೂ ಬಲ್ಲೆವು. ಮಾನವನ ಆತ್ಮ ಈ ರೀತಿಯಾಗಿ ಕೃಷ್ಣನಿಗೆ ಹಂಬಲಿಸಬೇಕು. ಐಹಿಕ ಬದುಕಿನ ಸುಖಲೋಲುಪತೆಯಲ್ಲಿ ಮುಳುಗಿ, ಹೆಂಡತಿ, ಮಕ್ಕಳು, ಕುಟುಂಬ, ಉದ್ಯೋಗ, ಹಣ, ದೇಶಗಳ ಹಂಬಲದಲ್ಲಿ ನಾವು ಎಲ್ಲಿಯವರೆಗೆ ಮುಳುಗಿರುತ್ತೇವೆಯೋ ಅಲ್ಲಿಯ ತನಕ ಅವನನ್ನು ಪಡೆದುಕೊಳ್ಳಲು ನಮ್ಮಿಂದ ಸಾಧ್ಯವಾಗುವುದಿಲ್ಲ.

ಮಾನವರಷ್ಟು ತೀವ್ರವಾಗಿ ಕೃಷ್ಣನನ್ನು ಹಂಬಲಿಸುವುದು ದೇವತೆಗಳಿಂದಲೂ ಸಾಧ್ಯವಿಲ್ಲ. ಐಹಿಕ ಸಂತಸದ ಜೊತೆ ದೀರ್ಘವಾದ ಬದುಕನ್ನು ಸವಿಯುವ ದೇವತೆಗಳು ಕೃಷ್ಣನ ಅಧೀನದಲ್ಲಿ ಇದ್ದರೂ ಕೂಡ ಅವನಿಗಾಗಿ ಅವರು ಹಂಬಲಿಸುವುದಿಲ್ಲ. ಕೃಷ್ಣನ ರಾಜಧಾನಿಯನ್ನು ಸೇರಲು ದೇವತೆಗಳು ಭೂಮಿಯಲ್ಲಿ ಮಾನವರಾಗಿ ಪುನರ್ಜನ್ಮವನ್ನು ತಾಳಿ ಅಂತಿಮ ಮುಕ್ತಿಯನ್ನು ಅವರು ಹೊಂದಬೇಕು.

ಆ ಕಾರಣ, ಕೃಷ್ಣನನ್ನು ಪಡೆಯಲು ಮಾನವ ಜನ್ಮವೇ ಹೆಚ್ಚು ಸೂಕ್ತವಾದದ್ದು. ಮಾನವನ ಬದುಕು ಕ್ಷಣಿಕವಾದದ್ದು ಮತ್ತು ಭೂಮಿಯ ಮೇಲಿನ ನಿಜ ಸಂತಸವನ್ನು ಗಳಿಸುವಷ್ಟು ದೃಢವಲ್ಲದ್ದು. ಆದರೂ ಕೂಡ ಅವನು ಹೆಚ್ಚು ದಿನ ಬದುಕಿ, ಮುಕ್ತಿ ಹೊಂದುವ ಬಗೆಯನ್ನು ತಿಳಿದುಕೊಳ್ಳುವಷ್ಟು ಬುದ್ಧಿವಂತಿಕೆ ಪಡೆದಿದ್ದಾನೆ. ಎಲ್ಲವೂ ಕೃಷ್ಣಮಯ ಎಂದು ಅರಿತಾಗ ಮಾತ್ರ ಅವನು ಮುಕ್ತಿಯನ್ನು ಹೊಂದಲು ಸಾಧ್ಯ. ಈ ವಿಶ್ವವನ್ನು ಸೃಷ್ಟಿಸುವ, ನಾಶಪಡಿಸುವ ಎಲ್ಲವೂ ಅವನಲ್ಲಿಯೇ ಇದೆ. ಅವನೇ ಇದಕ್ಕೆಲ್ಲ ಉಗಮ ಸ್ಥಾನ ಎನ್ನುವುದನ್ನು ಅರಿತುಕೊಂಡರೆ ಮುಕ್ತಿ ಪಡೆಯಲು ಸಾಧ್ಯ.

‘ಜಗತ್ತಿನ ಎಲ್ಲ ಚರಾಚರ ವಸ್ತುಗಳಲ್ಲಿ ನಾನು ಅವ್ಯಕ್ತವಾದ ರೂಪದಲ್ಲಿ ವ್ಯಾಪಿಸಿದ್ದೇನೆ. ಪ್ರತಿಯೊಂದು ಜೀವಿಯೂ ನನ್ನಲ್ಲಿ ವ್ಯಾಪಿಸಿದೆ. ಆದರೆ ನಾನು ಅವರಲ್ಲಿ ಅಸ್ತಿತ್ವ ಪಡೆದಿಲ್ಲ (ಗೀತಾ 9.4), ಕೃಷ್ಣನಿಗಾಗಿ ಹಂಬಲಿಸಿದ, ಅವನಿಗಾಗಿ ಹುಡುಕಾಟ ನಡೆಸಿದ ವ್ಯಕ್ತಿ ಈ ಜಗತ್ತಿನಲ್ಲಿ ಅತ್ಯಮೂಲ್ಯವಾದ ಬಹುಮಾನವನ್ನು ಕಳೆದುಕೊಂಡಂತೆ.

ಕಲ್ಲು ಪಡೆಯುವುದಕ್ಕಾಗಿ ರತ್ನವನ್ನು ಬಿಸುಟ ಹಾಗೆ ಅವನ ಬದುಕು. ಅಂತಹವನ ಈ ಬದುಕು ಆತ್ಮಹತ್ಯೆ ಮಾಡಿಕೊಂಡಂತೆ. ತನ್ನ ಎಪ್ಪತ್ತು ವರ್ಷಗಳ ಜೀವಿತಾವಧಿ ಯನ್ನು ಬಾಹ್ಯ ಶರೀರದ ಸುಖದಲ್ಲಿಯೇ ಸವೆಯುತ್ತಾನೆ. ‘ನಾನಿಲ್ಲಿ ಸುಖವಾಗಿ ಬದುಕಿರುವಾಗ ಆಧ್ಯಾತ್ಮಿಕ ಬದುಕು ಏಕೆ ಬೇಕು, ಕೃಷ್ಣನೇಕೆ ಬೇಕು’ ಎಂದು ಹೇಳುತ್ತಾನೆ.

ಇಲ್ಲವೇ ತನ್ನ ನಿರಾಸೆಯಲ್ಲಿ ‘ಶೂನ್ಯ’ದ ಮೊರೆ ಹೋಗುತ್ತಾನೆ. ಇಲ್ಲವೇ ಎಲ್ಲವನ್ನೂ ಮರೆಯುವುದಕ್ಕಾಗಿ ಮಲಗುತ್ತಾನೆ. ಅಂತಹ ಬದುಕು ಪ್ರಾಣಿಗಳ ಬದುಕಿಗಿಂತಲೂ ಕಡೆಯಾದದ್ದು. ಇಂತಹ ಬದುಕಿನ ತನ್ನ ದೈವಿಕ ಪ್ರಕೃತಿಗೇ ಅವನು ದ್ರೋಹ ಬಗೆಯುತ್ತಾನೆ. ಆದರೆ ಪ್ರಾಣಿಗಳು ಆ ಪ್ರಕೃತಿಗೆ ನೈಜವಾಗಿ ಜೀವನ ನಡೆಸುತ್ತವೆ.

ಪ್ರಾಣಿಯ ಬದುಕು ಪ್ರಾಣಿಗಳಿಗೇ ಮೀಸಲಾದದ್ದು, ಮನುಷ್ಯನಿಗಾಗಿ ಅಲ್ಲ. ಭಗವಂತನ ಹುಡುಕಾಟವೇ ಮಾನವ ಬದುಕಿನ ಸಂಕಲ್ಪ. ಅಂತಿಮ ಜ್ಞಾನದ ಅನ್ವೇಷಣೆ. ಅಂದರೆ ದೇವರನ್ನು ಕಾಣುವುದು ಮಾನವರ ಬದುಕಿನ ಉದ್ದೇಶ. ದೈವತ್ವದ ವಿಶಿಷ್ಟಗುಣ ಹೊಂದಿರುವ ಕೃಷ್ಣ ಪರಮ ಜ್ಞಾನದ ಮಹಾನಂದ ನೀಡುತ್ತಾನೆ.

ಅವನ ಈ ಹುಡುಕಾಟ ಅಂತಿಮವಾಗಿ ನಮ್ಮನ್ನು ಅವನತ್ತ ಕರೆದೊಯ್ಯುತ್ತದೆ. ‘ಹಲವು ಜನ್ಮಗಳ ಅಂತ್ಯದಲ್ಲಿ ಪ್ರಜ್ಞಾವಂತನಾದ ಮನುಷ್ಯ ಎಲ್ಲವೂ ವಾಸುದೇವ ಎನ್ನುವುದನ್ನು ಅರಿತು ನನ್ನಲ್ಲಿ ಆಶ್ರಯ ಬೇಡುತ್ತಾನೆ. ಅಂತಹ ಉತ್ಕೃಷ್ಟ ಆತ್ಮ ಹೊಂದಿರುವ ವ್ಯಕ್ತಿ ವಿರಳ. (ಗೀತಾ 7.19).

‘ಈ ಭೂಮಿ, ಸ್ವರ್ಗಗಳು ಎಲ್ಲಿಂದ ಬಂದವು? ಈ ಸಮುದ್ರ, ನೆಲ, ದೇಶಗಳು ಹೇಗೆ ಬಂದವು? ನಾನು, ನನ್ನ ದೇಹ ಬಂದಿದ್ದು ಹೇಗೆ? ಈ ನೆಲ, ಗಾಳಿ, ನೀರು, ಮಣ್ಣಿನಿಂದ ಹೇಗೆ ರೂಪ ಪಡೆದೆ? ನನ್ನ ವಂಶಪಾರಂಪರೆ ಬೆಳೆದಿದ್ದು ಹೇಗೆ? ನನಗೆ ಪೂರ್ವಜನ್ಮವಿತ್ತೇ? ಇದ್ದರೆ ಏನಾಗಿದ್ದೆ? ಸತ್ತ ನಂತರ ಏನಾಗುತ್ತೇನೆ? ಮನಸ್ಸು ಹಾಗೂ ಬುದ್ಧಿವಂತಿಕೆ ದೇಹಕ್ಕಿಂತ ಹೇಗೆ ಭಿನ್ನ? ನನ್ನ ಆತ್ಮ ಚಿರಂತನವಾದದ್ದು ಎಂದು ಕೇಳಿದ್ದೇನೆ.

ನನ್ನ ದೇಹದ ಯಾವ ಭಾಗದಲ್ಲಿ ಆತ್ಮವಿದೆ? ಈ ಆತ್ಮವೇ ಪರಮಾತ್ಮನೇ? ಇದೇ ದೇವರೇ? ಇಲ್ಲವೇ ಇದು ಭಗವಂತನ ಒಂದು ಭಾಗವೇ? ಇದು ಭಗವಂತನ ಒಂದು ಭಾಗವೇ ಆಗಿದ್ದಲ್ಲಿ ದೇವರ ಜೊತೆಗಿನ ಇದರ ಸಂಬಂಧವೇನು? ಮನಸ್ಸು ಹಾಗೂ ಅಹಮಿಕೆಯಿಂದ ಆತ್ಮ ಹೇಗೆ ಭಿನ್ನ? ಮನಸ್ಸು ಸಾಯುತ್ತದೆಯೇ? ಅಹಮಿಕೆ ಸಾಯುವುದೇ? ದೇಹಕ್ಕೆ ಸಾವಿದೆ ಆದರೆ ನನ್ನತನಕ್ಕೆ?

ಜಗತ್ತಿನಲ್ಲಿರುವ ಜೀವಿಗಳಿಗಿಂತ ನನ್ನ ವ್ಯಕ್ತಿತ್ವ ಹೇಗೆ ಭಿನ್ನವಾದದ್ದು? ಆ ವ್ಯಕ್ತಿತ್ವ ಸಾಯುವುದೇ? ಈ ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಯನ್ನೂ ಪ್ರೀತಿಸುವಂತೆ ಮಾಡುವ ಯಾವ ಶಕ್ತಿ ನನ್ನೊಳಗೆ ಇದೆ? ನಾನು ಭಗವಂತನ ಪ್ರತಿಬಿಂಬ ಮತ್ತು ಹೋಲಿಕೆಯನ್ನು ಹೇಗೆ ಪಡೆದಿದ್ದೇನೆ ಈ ಎಲ್ಲ ಪ್ರಶ್ನೆಗಳನ್ನು ಪ್ರತಿಯೊಬ್ಬನೂ ಕೂಡ ಕೇಳಿಕೊಳ್ಳಬೇಕು.

ಉತ್ತರ ಸಿಗದ ಅಸಾಧ್ಯ ಪ್ರಶ್ನೆಗಳೇನಲ್ಲ ಇವು. ಈ ಪ್ರಶ್ನೆಗಳಿಗೆ ಸರಳವಾಗಿ ಮತ್ತು ಸ್ಫುಟವಾಗಿ ಉತ್ತರ ಹೇಳಬಹುದು. ಭಗವದ್ಗೀತೆಯಲ್ಲಿ ಬಹುತೇಕ ಉತ್ತರಗಳು ವಿವರಣಾತ್ಮವಾಗಿ ಇವೆ. ಪದ, ಶಬ್ದಗಳಲ್ಲಿ ವಿವರಿಸಲಾರದ ಹಲವಾರು ಉತ್ತರಗಳನ್ನು ಕೃಷ್ಣ, ನಮಗೆ ತೋರಿಸುತ್ತಾನೆ.

ಸಂತೋಷವಾಗಿರುವ ಆಸಕ್ತಿ ಯಾರಲ್ಲಿ ಇದೆಯೋ ಅಂತಹವರು ಕೃಷ್ಣನ ಜ್ಞಾನದ ಮೊರೆ ಹೋಗುವುದು ಕರ್ತವ್ಯ. ಕೃಷ್ಣ ಒಬ್ಬ ಮಹಾನ್ ಪ್ರೇಮಿ, ಎಲ್ಲಕ್ಕೂ ಮಿಗಿಲಾದ ಮಿತ್ರ. ಅವನಿಗಾಗಿ ಪ್ರಾಮಾಣಿಕವಾಗಿ, ನಮ್ರವಾಗಿ ಧ್ಯಾನಿಸುವ ಯಾವ ಆತ್ಮವನ್ನೂ ಅವನು ನಿರಾಕರಿಸುವುದಿಲ್ಲ.

‘ಪಾರ್ಥ, ನನ್ನಲ್ಲಿ ಆಶ್ರಯ ಪಡೆದ ಪ್ರತಿಯೊಬ್ಬರು ಅವರದು ಪಾಪದ ಜನ್ಮ (ಮಹಿಳೆಯರು, ವೈಶ್ಯರು ಹಾಗೂ ಶೂದ್ರರು) ವಾದರೂ ಅವರು ಅತ್ಯುನ್ನತವಾದ ಗಮ್ಯಸ್ಥಾನ ತಲಪುತ್ತಾರೆ’ (ಗೀತಾ : 9.32). ಅವನಿಗಾಗಿ ಹಂಬಲಿಸದವರು ಮತ್ತೆ ಮತ್ತೆ ಪೈಶಾಚಿಕ ಗರ್ಭವನ್ನು ಹೊಂದುತ್ತಲೇ ಇರುತ್ತಾರೆ.

‘ಈ ಕ್ರೂರ ದ್ವೇಷಿಗಳನ್ನು ಪಾಪಕೃತ್ಯ ಮಾಡುವವರನ್ನು ನೀಚ ಮನುಷ್ಯರನ್ನು ರಾಕ್ಷಸರ ಗರ್ಭಕ್ಕೆ ನಿರಂತರ ಚಕ್ರದಲ್ಲಿ ಸಿಲುಕುವ ಅವರು ನನ್ನನ್ನು ಎಂದಿಗೂ ಸೇರಿಕೊಳ್ಳುವುದಿಲ್ಲ. ಕುಂತಿ ಪುತ್ರ, ಅಂತಹವರು ಇನ್ನಷ್ಟು ಕೆಳ ಹಂತಕ್ಕೆ ತಳ್ಳಲ್ಪಡುತ್ತಾರೆ’ (ಗೀತಾ: 16.19-20). ಅಂತಹ ಆತ್ಮಗಳು 84 ಲಕ್ಷ ಜೀವರಾಶಿಗಳಲ್ಲಿ ಅಗಣಿತವಾಗಿ ವಲಸೆ ಹೋಗುತ್ತಾರೆ.

ಮಾನವ ಹಾಗೂ ಜಗತ್ತಿಗೆ ವೈಯಕ್ತಿಕವಾಗಿ ಆತ್ಮವನ್ನು ನಿವೇದಿಸುವ ವಿಶ್ವಾಸ ಇಲ್ಲದಿದ್ದಾಗ ಆ ನಂಬಿಕೆಯನ್ನು ಅದು ಅನುಸರಿಸುವುದಿಲ್ಲ. ಈಗಿನ ಕಾಲದಲ್ಲಿ ಈ ಪ್ರಮಾಣದ ನಿರಾಸೆ, ಅಸಂತೋಷ ಅದರಲ್ಲಿಯೂ ಯುವ ಜನಾಂಗದಲ್ಲಿ ಕಾಣುವ ನಿರಾಶಾಭಾವನೆಗೆ ಇದೇ ಕಾರಣ. ಇಪತ್ತನೇ ಶತಮಾನದಲ್ಲಿ ನಿರಾಶಾಭಾವವೇ ಮೇಲುಗೈ ಸಾಧಿಸಿದೆ.

ಅದರಲ್ಲಿಯೂ ಎರಡು ಮಹಾ ಸಮರ ಹಾಗೂ ಅಣ್ವಸ್ತ್ರದಳ್ಳುರಿ ಜನರನ್ನು ಇನ್ನಷ್ಟು ನಿರಾಸೆಗೆ ತಳ್ಳಿದೆ. ಇಂತಹ ಪರಿಸ್ಥಿತಿಯಲ್ಲಿ ‘ನಾಳೆ ಎಲ್ಲವನ್ನೂ ಅವರು ನಾಶ ಮಾಡುವ ಮೊದಲು ಇದ್ದಷ್ಟು ಕಾಲ ಬದುಕಬೇಕು’ ಎನ್ನುವ ಚಿಂತೆ ಮಾನವನದು. ‘ಬದುಕಬೇಕು’ ಎನ್ನುವ ಈ ಬಯಕೆಯೇ ನಿಜವಾದ ಬಯಕೆಯ ನೆರಳು.

ಅದು ಪರಮಾನಂದದ ಚಿರಂತನ ಸಂತಸದ ಬಯಕೆ. ಐಹಿಕ ಸಂಪರ್ಕದಿಂದಾಗಿ ಈ ಬಯಕೆ ಅಡ್ಡದಾರಿ ಹಿಡಿದಿದೆ. ಮನುಷ್ಯ ತನ್ನ ಸಂತಸದ ಬಯಕೆಯನ್ನು ಭೂಮಿಗೆ ನಿರ್ದೇಶಿಸುತ್ತಾನೆಯೇ ಹೊರತು ಭಗವಂತನತ್ತ ಅಲ್ಲ. ದೇವರ ವಿಚಾರ ಬಂದಾಗ ಇದೊಂದು ಅಂತ್ಯವಿಧಿಯ ಇಲ್ಲವೇ ಘೋರವಾದ ವಿಪತ್ತಿನ ಸಮಯ ಎಂದೇ ಬಹುತೇಕ ಜನ ಚಿಂತಿಸುತ್ತಾರೆ.

‘ಶಾಪಗ್ರಸ್ತನಾಗಿ ಈ ಭೂಮಿಗೆ ಇಳಿದು ಬಂದಿದ್ದೇನೆ’ ಎಂಬ ಪ್ರಾಚೀನ ಒಡಂಬಡಿಕೆಯ ಮಾತುಗಳು ದೇವರ ವಿಚಾರ ಬಂದಾಗ ಹಲವು ಜನರ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತದೆ. ದೇವರ ಕುರಿತು ಮನುಷ್ಯರ ಭಾವನೆ ಕೆಲವೊಂದು ಸಮಯದಲ್ಲಿ ದೂರವಾದದ್ದು ಮತ್ತೆ ಕೆಲವು ಸಲ ಕೇಡೆಣಿಸುವಂತಹದ್ದು.

ಇದಕ್ಕೆ ಮುಖ್ಯ ಕಾರಣ ಮನುಷ್ಯ ಕೃಷ್ಣನಿಂದ ಅಗಲಿರುವುದು. ಒಮ್ಮೆ ಮನುಷ್ಯ ಕೃಷ್ಣನನ್ನು ಚಿರಂತನ ಪ್ರೇಮಿಯಾಗಿ ನೋಡಿದಾಗ ಅವನಲ್ಲಿ ಇರುವ ಭಯ ನಿವಾರಣೆಯಾಗುತ್ತದೆ. ಸೃಷ್ಟಿಕರ್ತನಾದ ಕೃಷ್ಣ ತನ್ನ ಮಕ್ಕಳೊಂದಿಗೆ ಸಂತಸದಿಂದ ಇರಲು ಬಯಸುತ್ತಾನೆ. ಆಗ ಅವನ ಕುರಿತಾಗಿ ಅಗಲಿಕೆಯಿಂದ ಉಂಟಾದ ಭಯ ಕಳೆದುಹೋಗುತ್ತದೆ.

ಆಗ ಕೃಷ್ಣನ ಮುಖದಲ್ಲಿ ಮುಖವಿಟ್ಟು ನೋಡಲು ಮನುಷ್ಯ ಹಿಂಜರಿಯುವುದಿಲ್ಲ. ಬಹುಕಾಲದಿಂದ ಅವನು ನೀಡುತ್ತಿರುವ ಪ್ರೀತಿಯ ಸಂದೇಶದ ಫಲವನ್ನು ಪಡೆದುಕೊಳ್ಳುತ್ತಾನೆ. ಕೃಷ್ಣಪ್ರಜ್ಞೆಯ ಮೂಲಕವೇ ಆಧ್ಯಾತ್ಮಿಕ ಮರುಹುಟ್ಟಿನ ಆರಂಭ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi