ಶುಕದೇವ ಗೋಸ್ವಾಮಿಯವರ ಗುಣಗಳು ಓರ್ವ ಶ್ರೇಷ್ಠ ಸಾಕ್ಷಾತ್ಕಾರ ಹೊಂದಿದ ವ್ಯಕ್ತಿಯ ಸಮಾನವಾಗಿದೆ. ಆದ್ದರಿಂದಲೇ ಅವರು ಮಹಾರಾಜ ಪರೀಕ್ಷಿತನಿಗೆ ಪರಮಸತ್ಯವನ್ನು ಹೇಳುವಷ್ಟು ಸಮರ್ಥರಿದ್ದರು. ಶುಕದೇವ ಗೋಸ್ವಾಮಿಯವರು ಐಹಿಕ ಲೋಕ, ಆತ್ಮ, ಶ್ರೀಕೃಷ್ಣ ಇತ್ಯಾದಿ ಎಲ್ಲ ಪ್ರಶ್ನೆಗಳ ಬಗ್ಗೆ ಸತತ ಏಳು ದಿನಗಳಲ್ಲಿ ಉತ್ತರವನ್ನು ನೀಡಿದರು.

ಅವರು ಸಾಮಾನ್ಯ ನರರ ನಾಲ್ಕು ನೂನ್ಯತೆಗಳಿಂದ ಮುಕ್ತರಾಗಿದ್ದರು. (1) ಮೋಸ ಮಾಡುವ ಪ್ರವೃತ್ತಿ (2) ತಪ್ಪು ಮಾಡುವ ಪ್ರವೃತ್ತಿ (3) ಭ್ರಮೆಗೆ / ಮಾಯೆಗೆ ಒಳಗಾಗುವ ಪ್ರವೃತ್ತಿ ಮತ್ತು (4) ಅಪರಿಪೂರ್ಣ ಇಂದ್ರಿಯ ಪರಿಜ್ಞಾನಗಳು. ಶುಕದೇವ ಗೋಸ್ವಾಮಿಗಳ ವಿಚಾರಗಳಿಗೆ ಯಾವ ಆಧುನಿಕ ವಿಜ್ಞಾನ ಪುಸ್ತಕವೂ ಹತ್ತಿರಬಾರದು.
ನಿರಂತರವಾಗಿ ಪ್ರಸ್ತುತೀಕರಿಸಿದ ಬದಲಾಯಿಸಿ ಮತ್ತು ಬದಲು ಮಾಡಿರುವುದು (ಆಧುನಿಕ ವಿಜ್ಞಾನದಂತೆ) ಸತ್ಯವೆಂದು ಹೇಳಲಾಗದು. ಶ್ರೀಮದ್ ಭಾಗವತವು ನಿರಂತರ ಸತ್ಯ. ಇದನ್ನು ಪ್ರಸ್ತುತೀಕರಿಸುವ ಅಥವಾ ಪರಿಹರಿಸುವ ಅಗತ್ಯವಿಲ್ಲ. ಶ್ರೀಮದ್ ಭಾಗವತದಲ್ಲಿ ಹೇಳಿರುವ ಎಲ್ಲ ಭವಿಷ್ಯ ನುಡಿಗಳು ಸತ್ಯವಾಗಿವೆ ಮತ್ತು ಮುಂದೆಯೂ ಸತ್ಯವಾಗಲಿವೆ.
ಶ್ರೀಮದ್ ಭಾಗವತದ ವಾಕ್ಯಗಳನ್ನು ನಮ್ಮ ಅಪರಿಪೂರ್ಣ ಸೀಮಿತ ವಿಚಾರದೃಷ್ಟಿಯಿಂದಾಗಿ ಹಗುರವಾಗಿ ತಳ್ಳಿಹಾಕಲಾಗದು. ಪ್ರಭುವಿನ ಸಂದೇಶಗಳನ್ನು (ಸರಿಯಾಗಿ ಕೇಳಿದರೆ ಹಾಗೂ ಪಠಿಸಿದರೆ, ಅದೇ ಸದ್ಗುಣ ಅಥವಾ ಪುಣ್ಯವಾಗುವ) ಕೇಳಲು ಆಕಾಂಕ್ಷೆಯನ್ನು ಬೆಳೆಸಿಕೊಂಡ ಭಕ್ತನ ಹೃದಯದಿಂದ ಐಹಿಕ ಭೋಗದ ಆಸಕ್ತಿಯನ್ನು ಶ್ರೀಮದ್ ಭಾಗವತವು ತೊಡೆದು ಹಾಕುತ್ತದೆ. ಇದು ವೈಷ್ಣವ ಗುರುವಿನ ಗುಣವೂ ಆಗಿದೆ. ಮಾನಸಿಕ ಊಹೆಗಳಿಂದ ಸಂಗ್ರಹವಾಗಿರುವ ತಪ್ಪು ಮಾರ್ಗಗಳನ್ನು ನಿರ್ಮೂಲಗೊಳಿಸುವುದು.
ನಷ್ಟ ಪ್ರಾಯೇಷು ಅಭದ್ರೇಷು ನಿತ್ಯಂ ಭಾಗವತ ಸೇವಯ |
ಭಗವತಿ ಉತ್ತಮ ಶ್ಲೋಕೇ ಭಕ್ತಿರ್ಭವತಿ ನೈಷ್ಠಿಕಿ || ಭಾಗವತ 1.2.18
ನಿಯತವಾಗಿ ಶ್ರೀಮದ್ ಭಾಗವತವನ್ನು ಕೇಳುವುದು ಮತ್ತು ಪರಿಶುದ್ಧ ಭಕ್ತನ ಭಕ್ತಿಪೂರ್ಣ ಸೇವೆಯಲ್ಲಿ ತೊಡಗುವುದರಿಂದ ಹೃದಯದಲ್ಲಿ ತೊಂದರೆ ಉಂಟುಮಾಡುವ ಎಲ್ಲವೂ ಸಂಪೂರ್ಣವಾಗಿ ನಾಶವಾಗುತ್ತದೆ ಮತ್ತು ಪಾರಮಾರ್ಥಿಕ ಸೂಕ್ತಗಳಿಂದ ಸ್ತುತಿಸಲ್ಪಟ್ಟ ದೇವೋತ್ತಮ ಪರಮ ಪುರುಷನಲ್ಲಿ ಭಕ್ತಿಸೇವೆಯು ನಿತ್ಯ ಸತ್ಯವಾಗಿ ಸ್ಥಾಪಿತವಾಗುತ್ತದೆ.
ತದಾ ರಜಸ್ ತಮೋ ಭಾವಾಃ ಕಾಮ ಲೋಭಾದಯಶ್ಚಯೇ ।
ಚೇತ ಏತೈರ್ ಅನಾವಿದ್ಧಂ ಸ್ಥಿತಂ ಸತ್ತ್ವೇ ಪ್ರಸೀದತಿ || ಭಾಗವತ 1.2.19
“ಹೃದಯದಲ್ಲಿ ಅಖಂಡ ಪ್ರೇಮಯುತವಾದ ಭಕ್ತಿಸೇವೆಯು ಸ್ಥಾಪಿಸಲ್ಪಟ್ಟ ಕೂಡಲೇ ಕಾಮ, ಮೋಹ, ಆಸೆ ಇತ್ಯಾದಿ ತಾಮಸಿಕ ಮತ್ತು ರಜೋಗುಣಗಳ ಪ್ರಭಾವಗಳು ಹೃದಯದಲ್ಲಿ ನಿರ್ಮಲವಾಗುತ್ತದೆ. ಆಗ ಭಕ್ತನು ಸಾತ್ವಿಕನಾಗುತ್ತಾನೆ. ಮತ್ತು ಸಂಪೂರ್ಣವಾಗಿ ಸಂತೋಷ ಹೊಂದುತ್ತಾನೆ.
ಏವಂ ಪ್ರಸನ್ನ ಮನಸೋ ಭಗವದ್ಭಕ್ತಿ ಯೋಗತಃ |
ಭಗವತ್ ತತ್ತ್ವವಿಜ್ಞಾನಂ ಮುಕ್ತಸಂಗಸ್ಯ ಜಾಯತೇ || ಭಾಗವತ 1.2.20
ಹೀಗೆ ಸತ್ತ್ವಗುಣ ಸಂಪನ್ನನಾದ ವ್ಯಕ್ತಿಯು ಪ್ರಭುವಿನ ಭಕ್ತಿಸೇವೆಯ ಸಂಪರ್ಕದಿಂದ ಚೇತನಗೊಂಡಿರುವ ಇಂದ್ರಿಯಗಳನ್ನು ಹೊಂದಿ ಎಲ್ಲ ಐಹಿಕ ಸಂಬಂಧದಿಂದ ವಿಮುಕ್ತನಾಗಿ ದೇವೋತ್ತಮ ಪರಮ ಪುರುಷನ ಬಗ್ಗೆ ಸಕಾರಾತ್ಮಕ ವೈಜ್ಞಾನಿಕ ಜ್ಞಾನವನ್ನು ಹೊಂದುತ್ತಾನೆ.
ಭಿದ್ಯತೇ ಹೃದಯ ಗ್ರಂಥಿಶ್ಭಿದ್ಯಂತೇ ಸರ್ವ ಸಂಶಯಾಃ |
ಕ್ಷೀಯಂತೇ ಚಾಸ್ಯ ಕರ್ಮಾಣಿ ದೃಷ್ಟೈ ವಾತ್ಮನೀಶ್ವರೇ || ಭಾಗವತ 1.2.21

ಹೃದಯದಲ್ಲಿರುವ ಗಂಟು ಮುರಿದು ಎಲ್ಲ ತಪ್ಪು ಕಲ್ಪನೆಗಳು ಮಾಯವಾಗುತ್ತವೆ. ತನಗೆ ತಾನು ಇಂದ್ರಿಯಗಳ ಗುಲಾಮನಲ್ಲದೇ ಅವುಗಳ ಸ್ವಾಮಿಯೆಂಬುದು ಅರಿವಾಗುತ್ತದೆ.
ಅತೋ ವೈ ಕವಯೋ ನಿತ್ಯಂ ಭಕ್ತಿಂ ಪರಮಯಾ ಮುದಾ |
ವಾಸುದೇವೇ ಭಗವತಿ ಕುರ್ವಂತಿ ಆತ್ಮ ಪ್ರಸಾದನೀಂ || ಭಾಗವತ 1.2.22
ಖಂಡಿತವಾಗಿ, ಕಾಲಾಂತರದಲ್ಲಿ ಎಲ್ಲ ಆಧ್ಯಾತ್ಮಿಕವಾದಿಗಳು ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನ ಭಕ್ತಿಸೇವೆಯನ್ನು ಅಪಾರ ಸಂತೋಷದಿಂದ ಮಾಡುತ್ತಾನೆ. ಏಕೆಂದರೆ ಭಕ್ತಿಸೇವೆಯು ಆತ್ಮ ಚೈತನ್ಯವನ್ನು ನೀಡುತ್ತದೆ.
ಉತ್ತಮ ಶ್ಲೋಕ ಚರಿತಂ ಚಕಾರ ಭಗವಾನ್ ಋಷಿಃ|
ಧನ್ಯಂ ಸ್ವಸ್ತಿ ಅಯನಂ ಮಹತ್ || ಭಾಗವತ 1.3.40
ಈ ಶ್ರೀಮದ್ ಭಾಗವತವು ಪ್ರಭುವಿನ ಸಾಹಿತ್ಯಿಕ ಅವತಾರವಾಗಿದೆ ಇದನ್ನು ಪರಮ ಪುರುಷನ ಅವತಾರವಾದ ಶ್ರೀಲ ವ್ಯಾಸದೇವರು ರಚಿಸಿದ್ದಾರೆ. ಇದು ಎಲ್ಲ ಜನರ ಅಂತಿಮ ಆಹಾರವಾಗಿದೆ. ಅದು ಸಂಪೂರ್ಣ ಯಶಸ್ಸು ಸಂಪೂರ್ಣ ಆನಂದ ಮತ್ತು ಪರಿಪೂರ್ಣವಾದದ್ದು.
ಕೃಷ್ಣೇ ಸ್ವಧಾಮೋಪಗತೇ ಧರ್ಮ ಜ್ವಾನಾದಿಭಿಃ ಸಹ |
ಕಲೌ ನಷ್ಟ ದೃಶಾಂ ಏಷ ಪುರಾಣಾರ್ಕೋಽಧುನೋದಿತಃ || ಭಾಗವತ 1.2.
ಈ ಭಾಗವತ ಪುರಾಣವು ಸೂರ್ಯನಂತೆ ಪ್ರಖರವಾಗಿ ಹೊಳೆಯುತ್ತಿದೆ. ಮತ್ತು ಇದು ಶ್ರೀಕೃಷ್ಣನ ಧರ್ಮ, ಜ್ಞಾನ ಇತ್ಯಾದಿಗಳಿಂದ ಸ್ವಧಾಮಕ್ಕೆ ತಿರೋಭಾವ ಹೊಂದಿದ ಅನಂತರ ಹೊರಹೊಮ್ಮಿದೆ. ಕಲಿಯುಗದಲ್ಲಿ ಅಜ್ಞಾನದ ಅಂಧಕಾರದಿಂದ ತಮ್ಮ ದೃಷ್ಟಿಯನ್ನು ಕಳೆದುಕೊಂಡ ವ್ಯಕ್ತಿಗಳು ಈ ಪುರಾಣದಿಂದ ಬೆಳಕನ್ನು ಪಡೆಯುತ್ತಾರೆ.
ಶ್ರೀಲ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಶ್ರೀಮದ್ ಭಾಗವತದ 1.2.18ರಲ್ಲಿ ಅದರ ಉದ್ದೇಶವನ್ನು ವಿವರಿಸುತ್ತಾರೆ. ಎರಡು ರೀತಿಯ ಭಾಗವತಗಳಿವೆ. ಒಂದು ಭಾಗವತ ಪುಸ್ತಕ, ಇನ್ನೊಂದು ವ್ಯಕ್ತಿ ಭಾಗವತ, ಭಗವದ್ಭಕ್ತ. ಇವೆರಡೂ ಭಾಗವತಗಳು ಎಲ್ಲ ಕಷ್ಟಗಳಿಗೆ ಸಮರ್ಥ ಪರಿಹಾರಗಳು.
ಎರಡೂ ಅಥವಾ ಇವೆರಡರಲ್ಲಿ ಯಾವುದಾದರೂ ಒಂದು ಎಲ್ಲ ಕಡೆಗಳನ್ನು ನಿವಾರಿಸಲು ಸೂಕ್ತವಾಗಿದೆ. ಓರ್ವ ಭಾಗವತ ಭಕ್ತನು ಪುಸ್ತಕ ಭಾಗವತದಂತೆ ಸತ್ತ್ವಶೀಲವಾದದ್ದು ಏಕೆಂದರೆ ಭಾಗವತ ಭಕ್ತನು ಭಾಗವತ ಪುಸ್ತಕದ ಪ್ರಕಾರ ತನ್ನ ಜೀವನವನ್ನು ನಡೆಸುತ್ತಾನೆ ಮತ್ತು ಭಾಗವತ ಪುಸ್ತಕವು ಪರಮ ಪುರುಷ ಹಾಗೂ ಭಾಗವತರಾದ ಅವನ ಪರಿಶುದ್ಧ ಭಕ್ತರ ಕುರಿತಾಗಿ ಸಂಪೂರ್ಣ ವಿವರಗಳನ್ನು ಹೊಂದಿದೆ.
ಭಾಗವತ ಪುಸ್ತಕ ಮತ್ತು ವ್ಯಕ್ತಿ ಇಬ್ಬರೂ ಸಾಮ್ಯರು. ಭಕ್ತ ಭಾಗವತನು ಪರಮ ಪುರುಷ, ಭಗವಾನನ ಪ್ರತಿನಿಧಿ. ಆದ್ದರಿಂದ ಭಕ್ತ ಭಾಗವತನನ್ನು ಪ್ರಸನ್ನಗೊಳಿಸಿ ಭಾಗವತ ಪುಸ್ತಕದ ಪ್ರಯೋಜನವನ್ನು ಪಡೆಯಬಹುದು. ಭಕ್ತ ಭಾಗವತ ಅಥವಾ ಭಾಗವತ ಪುಸ್ತಕದ ಸೇವೆಯನ್ನು ಮಾಡಿ ಕಾಲಕ್ರಮೇಣ ವ್ಯಕ್ತಿಯು ಭಕ್ತಿಪಥದಲ್ಲಿ ಮುಂದುವರಿಯುತ್ತಾನೆಂದು ಮಾನವ ವಿವೇಚನೆ ಅರಿಯಲು ವಿಫಲವಾಗುತ್ತದೆ.

ಆದರೆ ಈ ಸತ್ಯಗಳನ್ನು, ತನ್ನ ಪೂರ್ವಜನ್ಮದಲ್ಲಿ ಕೆಲಸಗಾರ್ತಿಯ ಮಗನಾಗಿ ಹುಟ್ಟಿದ್ದ ಶ್ರೀಲ ನಾರದ ದೇವರು ವಿವರಿಸಿದ್ದಾರೆ. ಕೇವಲ ಮಹಾಸಂತರ ಸಂಪರ್ಕದಲ್ಲಿರುವುದರಿಂದ ಮತ್ತು ಅವರು ಬಿಟ್ಟ ಆಹಾರವನ್ನು ಅಂಗೀಕರಿಸಿ ಕೆಲಸಗಾರನ ಮಗನು ಮಹಾಭಕ್ತನಾಗಲು ಅವಕಾಶ ಹೊಂದಿದನು.
ಈ ಅದ್ಭುತ ಪರಿಣಾಮಗಳು ಭಾಗವತರ ಸಂಪರ್ಕದಿಂದ ಉಂಟಾಗುತ್ತದೆ. ಈ ಪ್ರಭಾವವನ್ನು ಪ್ರಾಯೋಗಿಕವಾಗಿ ಅರ್ಥಮಾಡಿಕೊಳ್ಳಲು, ಇಂತಹ ರೀತಿಯಲ್ಲಿ ಭಾಗವತರೊಂದಿಗೆ ಶ್ರದ್ಧೆಯಿಂದ ಸಂಪರ್ಕ ಸಾಧಿಸಿ ಬಹಳ ಸುಲಭವಾಗಿ ಪಾರಮಾರ್ಥಿಕ ಜ್ಞಾನವನ್ನು ಪಡೆಯಬಹುದು. ಹೀಗೆ ಪ್ರಭುವಿನ ಭಕ್ತಿಸೇವೆಯಲ್ಲಿ ನಿಷ್ಠರಾಗಬಹುದು.
ಭಾಗವತರ ಮಾರ್ಗದರ್ಶನದಲ್ಲಿ ಭಕ್ತಿಸೇವೆಯಲ್ಲಿ ನಾವು ತೊಡಗಿದಷ್ಟು ಭಗವಂತನ ದಿವ್ಯ ಪ್ರೇಮ ಭಕ್ತಿಸೇವೆಯಲ್ಲಿ ನಿಷ್ಠರಾಗುತ್ತೇವೆ. ಆದ್ದರಿಂದ ಭಾಗವತ ಪುಸ್ತಕದ ಸಂದೇಶಗಳನ್ನು ಭಾಗವತ ಭಕ್ತರಿಂದ ಸ್ವೀಕರಿಸಬೇಕು ಮತ್ತು ಈ ಎರಡೂ ಭಾಗವತಗಳ ಸಂಯೋಜನೆಯಿಂದ ಆರಂಭಿಕ ಶಿಷ್ಯನು ಪ್ರಗತಿ ಸಾಧಿಸಲು ಸಾಧ್ಯ.
ಭಾಗವತ ಪುಸ್ತಕವು ಶ್ರೀಮದ್ ಭಾಗವತ 1.1.3ರಲ್ಲಿ ಹೀಗೆ ಹೇಳುತ್ತದೆ.
ನಿಗಮ ಕಲ್ಪತರೋರ್ ಗಲಿತಂ ಫಲಂ ಶುಕ ಮುಖಾದ್ ಅಮೃತ ದ್ರವ ಸಂಯುತಂ।
ಪಿಬತ ಭಾಗವತಂ ರಸಮಾಲಯಂ ಮುಹುರಹೋ ರಸಿಕಾ ಭುವಿ ಭಾವುಕಾಃ ||
ಓ ತಜ್ಞರೇ ಮತ್ತು ಬುದ್ಧಿವಂತರೇ (ಜ್ಞಾನಿಗಳೇ), ಶ್ರೀಮದ್ ಭಾಗವತವನ್ನು ಆನಂದಿಸಿ. ವೇದ ಸಾಹಿತ್ಯದ ವಾಂಛಿತ ವೃಕ್ಷದ ಪಕ್ವಫಲವನ್ನು ಆಸ್ವಾದಿಸಿ. ಇದು ಶ್ರೀ ಶುಕದೇವ ಗೋಸ್ವಾಮಿಯವರ ಅಧರಗಳಿಂದ ಹೊರಹೊಮ್ಮಿರುವುದು. ಹೀಗಾಗಿ, ಅದರ ಅಮೃತರಸವು ಎಲ್ಲರಿಗೂ ಹಾಗೂ ಮುಕ್ತಾತ್ಮಗಳಿಗೂ ಆನಂದ ತರುತ್ತದೆ.
ಈ ಕಾರಣದಿಂದಲೇ ಅದು ಇನ್ನೂ ಹೆಚ್ಚು ಸ್ವಾದಯುಕ್ತವಾದ ಫಲವಾಗಿದೆ. ಶ್ರೀಮದ್ ಭಾಗವತವನ್ನು ಅದನ್ನು ಸಾಕ್ಷಾತ್ಕರಿಸಿದ ಭಗವದ್ಭಕ್ತನಿಂದ ಅರಿಯಬೇಕು. ಭಾಗವತದಲ್ಲಿ ಪ್ರಭುವಿನ ದಿವ್ಯಲೀಲೆಗಳನ್ನು ವಿವರಿಸಲಾಗಿದೆ ಮತ್ತು ವಿವರಣೆಯನ್ನು ವ್ಯವಸ್ಥಿತವಾಗಿ ಶುಕದೇವ ಗೋಸ್ವಾಮಿಯವರಿಂದ ಚಿತ್ರೀಕರಿಸಲಾಗಿದೆ.
ವಿಮುಕ್ತಿಗಾಗಿ ಯಾಚಿಸುವ ಮತ್ತು ಪರಮ ಪುರುಷನೊಂದಿಗೆ ಐಕ್ಯವನ್ನು ಸಾಧಿಸಲು ಇಚ್ಛಿಸುವವರನ್ನು ಒಳಗೊಂಡಂತೆ ಎಲ್ಲವರ್ಗಗಳ ವ್ಯಕ್ತಿಗಳಿಗೆ ಪ್ರಿಯವಾದದ್ದು ಸಂಸ್ಕೃತದಲ್ಲಿ ಗಿಣಿಯನ್ನು ಶುಕ ಎನ್ನುತ್ತಾರೆ. ಅಂತಹ ಪಕ್ಷಿಗಳು ಕೆಂಪು ಕೊಕ್ಕುಗಳಿಂದ ಹಣ್ಣನ್ನು ಕಚ್ಚಿದರೆ ಅದರ ಸಿಹಿತನ ಹೆಚ್ಚುವುದು. ಮಾಧುರ್ಯ ವರ್ಧಿಸುವುದು.
ಜ್ಞಾನದಲ್ಲಿ ಪಕ್ವವಾದ ಶ್ರೀಮದ್ ಭಾಗವತವನ್ನು ಶ್ರೀ ಶುಕದೇವ ಗೋಸ್ವಾಮಿಯವರು ನುಡಿದಿದ್ದಾರೆ. ಅವರನ್ನು ಶುಕಕ್ಕೆ ಹೋಲಿಸಿದ್ದಾರೆ. ಈ ಗಿಳಿಗೆ ಹೋಲಿಸಿರುವುದು ತಮ್ಮ ತಂದೆಯಿಂದ ಕೇಳಿದ ಭಾಗವತವನ್ನು ನಿಖರವಾಗಿ ಪಠಿಸುವ ಸಾಮರ್ಥ್ಯಕ್ಕೋಸ್ಕರ ಅಲ್ಲ. ಎಲ್ಲವರ್ಗದ ಜನರಿಗೆ ನಾಟುವಂತೆ ಕೃತಿಯನ್ನು ಮಂಡಿಸುವ ಸಾಮರ್ಥ್ಯಕ್ಕೋಸ್ಕರ.
ಏಳು ದಿನಗಳ ಕಾಲ ಸಾವನ್ನು ನಿರೀಕ್ಷಿಸುತ್ತಿದ್ದ ಮಹಾರಾಜ ಪರೀಕ್ಷಿತರಿಗೆ ಪರಮಭಕ್ತ ಶುಕದೇವ ಗೋಸ್ವಾಮಿಯವರು ಶ್ರೀಮದ್ ಭಾಗವತವನ್ನು ಹೇಳಿದರು. ಮಹಾರಾಜ ಪರೀಕ್ಷಿತರು ಶುಕದೇವ ಗೋಸ್ವಾಮಿಗಳಿಂದ ಪರಿಪೂರ್ಣತೆಯನ್ನು ಸಾಧಿಸುವುದು ಹೇಗೆಂದು ಕೇಳುತ್ತಾರೆ. ಆದ್ದರಿಂದ ಗಂಗಾನದಿಯ ತೀರದಲ್ಲಿ ಜ್ಞಾನಿ ಸಂತರ ಮಹಾಸಭೆಯಲ್ಲಿ ಮಹಾರಾಜ ಪರೀಕ್ಷಿತರಿಗೆ ಶುಕದೇವ ಗೋಸ್ವಾಮಿಗಳು ಶ್ರೀಮದ್ ಭಾಗವತವನ್ನು ವಿವರಿಸುತ್ತಾರೆ.






Leave a Reply