ಪರಿಪೂರ್ಣ ಪ್ರಶ್ನೆಗಳು-ಪರಿಪೂರ್ಣ ಉತ್ತರಗಳು

ಮನುಷ್ಯಜೀವಿ ಏನನ್ನೋ ಹುಡುಕುತ್ತಿರುವುದು ಎಲ್ಲರ ಅನುಭವದಲ್ಲಿದೆ. ಏನನ್ನು ಹುಡುಕುತ್ತಿದ್ದೇನೆ ಎಂದು ಕೂಡ ಮನುಷ್ಯನಿಗೆ ಗೊತ್ತಿಲ್ಲ. ಸಹಜವೇ, ಗೊತ್ತಿದ್ದರೆ ಯಾಕೆ ಹುಡುಕುತ್ತಾನೆ? ಮನುಷ್ಯ ಹುಡುಕುತ್ತಿರುವುದು ಏನನ್ನು ಎಂಬುದರ ನಿಚ್ಚಳ ಅರಿವನ್ನು ಉಂಟುಮಾಡುವ ಪ್ರಯತ್ನವೇ ನಮ್ಮ ಆ‍ಧ್ಯಾತ್ಮ ವಾಙ್ಞಯ. ಪ್ರಪಂಚದಲ್ಲಿ ಕೃಷ್ಣಕೇಂದ್ರಿತವಾದ “ಭಗವದ್ಗೀತೆ ಮತ್ತ ಭಾಗವತ” ಗ್ರಂಥಗಳಿಗೆ ಅನನ್ಯ ಸ್ಥಾನವಿದೆ.

ಈ ಮಾತುಗಳನ್ನು ನಿಮಗೆ ಯುಕ್ತ ಕಂಡಂತೆ ನೀವು ಬಳಸಬಹುದು.

ಶ್ರೀಲ ಪ್ರಭುಪಾದರು ನಮಗೆ ಬಿಟ್ಟುಕೊಟ್ಟ ಅನರ್ಘ್ಯ ರತ್ನಗಳೆಂದರೆ ಅವರ ಪುಸ್ತಕಗಳು. ತಮ್ಮ ಪುಸ್ತಕಗಳನ್ನು ರೆಕಾರ್ಡೆಡ್‌ ಚಾಂಟಿಂಗ್‌ ಅಂದರೆ ಭಗವದ್‌ ಕೀರ್ತನೆ ಎಂದೇ ವರ್ಣಿಸಿದ್ದರು. ತಮ್ಮ ಪುಸ್ತಕಗಳನ್ನು ಅನುವಾದ ಮಾಡಲು ಅಹರ್ಶಿಸಿ ಕಾರ್ಯೋನ್ಮುಖರಾಗಿದ್ದರು.

ಇಸ್ಕಾನ್‌ನಂಥ ದೊಡ್ಡ ಸಂಸ್ಥೆಯನ್ನು ನಡೆಸುವ ಸುದೀರ್ಘ ಜವಾಬ್ದಾರಿಯೊಡನೆ ಪುಸ್ತಕ ಪ್ರಕಾಶನಕ್ಕೆ ಎಂದೂ ಮಲತಾಯಿ ಧೋರಣೆಯನ್ನು ನೀಡಲಿಲ್ಲ. ಪ್ರತಿ ರಾತ್ರಿ ಸುಮಾರು ಒಂದೆ ಗಂಟೆಗೆ ಎದ್ದು ನಾಲ್ಕು ಗಂಟೆಗಳ ಕಾಲ ಅನುವಾದದಲ್ಲಿ ತೊಡಗುತ್ತಿದ್ದರು. ಹೀಗೆ ಅವರ ಲೇಖನಿಯಿಂದ ಸುಮಾರು 90 ಪುಸ್ತಕಗಳು ಹೊರಬಂದವು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi