ಭಾಗವತದ ಪಾತ್ರ ಪರಿಚಯ : ಭಕ್ತ ಮಹಾಶಯರು
(ಆಧಾರ – ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಭಾವಾರ್ಥಗಳು; ಭಾಗವತ; ಪ್ರಥಮ ಸ್ಕಂಧ; 12, 16ನೇ ಅಧ್ಯಾಯಗಳು)
ಶ್ರೀಕೃಷ್ಣ (ವಿಷ್ಣು)ನ ಪರಿಪೂರ್ಣಭಕ್ತ. ಅವನು ಐದು ವರ್ಷದವನಿದ್ದಾಗಲೇ ಭಗವಂತನ ಶುದ್ಧಭಕ್ತನಾದುದಕ್ಕೆ ಅವನ ತಂದೆ ಹಿರಣ್ಯಕಶಿಪು ಅವನನ್ನು ಉಗ್ರವಾಗಿ ದ೦ಡಿಸಿದನು.

ಪ್ರಹ್ಲಾದನು ಹಿರಣ್ಯಕಶಿಪುವಿನ ಮೊದಲ ಮಗ. ಅವನ ತಾಯಿಯ ಹೆಸರು ಕಯಾದು. ಪ್ರಹ್ಲಾದ ಮಹಾರಾಜನು ಭಗವಂತನ ಭಕ್ತಿಸೇವೆಯಲ್ಲಿ ಅಧಿಕಾರ ಪಡೆದವನು. ಅವನು ತನ್ನ ತಂದೆಯನ್ನು ಶ್ರೀನೃಸಿಂಹದೇವನಿಂದ ಕೊಲ್ಲಿಸಿದನು.
ತಂದೆಯಾದವನು ಭಕ್ತಿಸೇವಾ ಮಾರ್ಗದಲ್ಲಿ ಅಡ್ಡಿಯಾದರೆ ಅವನನ್ನೂ ಕೂಡ ನಿವಾರಿಸಬೇಕೆಂಬುದಕ್ಕೆ ಪ್ರಹ್ಲಾದನು ನಿದರ್ಶನವಾದನು. ಅವನಿಗೆ ನಾಲ್ಕು ಜನ ಗಂಡು ಮಕ್ಕಳು. ಹಿರಿಯ ಮಗ ವಿರೋಚನನು ಮೇಲೆ ಹೇಳಿದ ಬಲಿ ಮಹಾರಾಜನ ತಂದೆ.
ಪ್ರಹ್ಲಾದ ಮಹಾರಾಜನ ಕಾರ್ಯಗಳ ಚರಿತ್ರೆಯ ಶ್ರೀಮದ್ಭಾಗವದ ಏಳನೆಯ ಸ್ಕಂಧದಲ್ಲಿ ವರ್ಣಿತವಾಗಿದೆ.
ಜನಮೇಜಯ

ಮಹಾರಾಜ ಪರೀಕ್ಷಿತನ ಪ್ರಸಿದ್ಧ ಪುತ್ರ ಹಾಗೂ ರಾಜರ್ಷಿ ದೊರೆಗಳಲ್ಲಿ ಒಬ್ಬ. ಆತನ ತಾಯಿಯ ಹೆಸರು ಇರಾವತಿ ಅಥವಾ ಕೆಲವರ ಪ್ರಕಾರ ಮಾದ್ರವತಿ. ಜನಮೇಜಯ ಮಹಾರಾಜನಿಗೆ ಜ್ಞಾತಾನೀಕ ಹಾಗೂ ಶಂಕುವರ್ಣ ಎಂಬ ಇಬ್ಬರು ಮಕ್ಕಳು. ಈತ ಕುರುಕ್ಷೇತ್ರ ಪುಣ್ಯಸ್ಥಳದಲ್ಲಿ ಅನೇಕ ಯಜ್ಞಗಳನ್ನು ಮಾಡಿದನು.
ಈತನಿಗೆ ಶ್ರುತಸೇನ, ಉಗ್ರಸೇನ ಹಾಗೂ ಎರಡನೇ ಭೀಮಸೇನ ಎಂಬ ಮೂವರು ತಮ್ಮಂದಿರಿದ್ದರು. ತನ್ನ ಪ್ರಸಿದ್ಧ ತಂದೆಯಾದ ಪರೀಕ್ಷಿತ ರಾಜನಿಗೆ ಬಂದಿದ್ದ ಅಕ್ರಮ ಶಾಪದ ವಿರುದ್ಧ ಸೇಡುತೀರಿಸಿಕೊಳ್ಳಲು ನಿರ್ಧರಿಸಿ, ಜನಮೇಜಯ ತಕ್ಷಲ (ಅಜಂತ)ದ ಮೇಲೆ ಧಾಳಿ ಮಾಡಿದನು.
ತನ್ನ ತಂದೆಯನ್ನು ಕಚ್ಚಿಕೊಂಡಿದ್ದ ತಕ್ಷಕನನ್ನೊಳಗೊಂಡು ಇಡೀ ಸರ್ಪಕುಲವನ್ನೇ ನಾಶಮಾಡಲು ಈತ ಸರ್ಪಯಜ್ಞವನ್ನಾಚರಿಸಿದನು. ಅನೇಕ ಪ್ರಭಾವೀ ದೇವತೆಗಳು ಹಾಗೂ ಋಷಿಗಳ ಕೋರಿಕೆಯಂತೆ ಆತ ಸರ್ಪಕುಲವನ್ನು ಕೊಲ್ಲುವ ತನ್ನ ನಿರ್ಧಾರವನ್ನು ಬದಲಾಯಿಸಬೇಕಾಯಿತು.
ಆದರೆ ಯಜ್ಞವನ್ನು ನಿಲ್ಲಿಸಿದರೂ ಆತ ಸಂಬಂಧಪಟ್ಟ ಎಲ್ಲರಿಗೂ ಸೂಕ್ತ ಬಹುಮಾನ ನೀಡಿ ತೃಪ್ತಿಪಡಿಸಿದನು. ಆ ಸಮಾರಂಭದಲ್ಲಿ ಮಹಾಮುನಿ ವೇದವ್ಯಾಸರೂ ಹಾಜರಿದ್ದು, ಸ್ವತಃ ಅವರೇ ರಾಜನ ಮುಂದೆ ಕುರುಕ್ಷೇತ್ರಯುದ್ಧದ ಇತಿಹಾಸವನ್ನು ನಿರೂಪಿಸಿದರು.

ಅನಂತರ ವೇದವ್ಯಾಸರ ಆದೇಶದಂತೆ ಅವರ ಶಿಷ್ಯ ವೈಶಂಪಾಯನ ಮಹಾಭಾರತದ ವಸ್ತುವಿಷಯವನ್ನು ರಾಜನ ಮುಂದೆ ನಿರೂಪಿಸಿದನು.
ತನ್ನ ಪ್ರಸಿದ್ಧ ತಂದೆಯ ಅಕಾಲಿಕ ಮರಣದಿಂದ ಆತ ಬಹಳ ನೊಂದು, ಮತ್ತೆ ಆತನನ್ನು ನೋಡಬಯಸಿ, ತನ್ನ ಅಪೇಕ್ಷೆಯನ್ನು ಮಹಾಮುನಿ ವೇದವ್ಯಾಸರ ಮುಂದೆ ವ್ಯಕ್ತಪಡಿಸಿದನು. ವೇದವ್ಯಾಸರೂ ಸಹ ಆತನ ಅಪೇಕ್ಷೆಯನ್ನು ಈಡೇರಿಸಿದರು.
ಆತನ ತಂದೆ ಅವನ ಮುಂದೆ ಬಂದನು. ಜನಮೇಜಯ ತನ್ನ ತಂದೆ ಮತ್ತು ವೇದವ್ಯಾರಿಬ್ಬರನ್ನೂ ಬಹಳ ಗೌರವ ಹಾಗೂ ವೈಭವದಿಂದ ಪೂಜಿಸಿದನು. ಸಂಪೂರ್ಣ ತೃಪ್ತನಾದ ಆತನು ಯಾಗಕ್ಕೆ ಬಂದಿದ್ದ ಬ್ರಾಹ್ಮಣರಿಗೆ ಅತ್ಯಂತ ಉದಾರವಾಗಿ ದಾನ ನೀಡಿದನು.






Leave a Reply