ಪರಂಪರೆ
– ಅನುವಾದ: ಕಿರಣ
ಈ ಕೆಳಕ೦ಡ ಲೇಖನವು ಬಂಗಾಳಿ ಪತ್ರಿಕೆಯಾದ “ಗೌಡಿಯಾ” ಮಾಸಿಕ ಪತ್ರಿಕೆಯ 18ನೆಯ ಸಂಪುಟದ 18ನೇ ಸಂಚಿಕೆಯಲ್ಲಿ ಬಂಗಾಳಿ ವರ್ಷ 1829ದ 8ನೇ ಪಕ್ಷ (ಕ್ರಿ.ಶ. 1922)ದಲ್ಲಿ ಪ್ರಕಟವಾಯಿತು. ಈ ಪತ್ರಿಕೆಯನ್ನು ಶ್ರೀ ಶ್ರೀಮದ್ ಭಕ್ತಿಸಿದ್ಧಾಂತ ಸರಸ್ವತೀ ಠಾಕುರರು ಸಂಸ್ಥಾಪಿಸಿದರು ಮತ್ತು ಅವರು ಪತ್ರಿಕೆಯ ಸಂಪಾದಕರಾಗಿದ್ದರು.

ಶ್ರೀ ಮಹಾಪ್ರಭುಗಳ ಕಾಲದಲ್ಲಿ ಎಲ್ಲ ವ್ರಜವಾಸಿ ಗೋಸ್ವಾಮಿಗಳ ಹೆಸರು ಬಹಳ ಖ್ಯಾತಿ ಹೊಂದಿತ್ತು. ಆನಂತರ, ಅವರ ತಿರೋಭಾವದ ಬಳಿಕ ಪ್ರಭುಗಳ ಪರಿಶುದ್ಧ ಭಕ್ತಿ ಸೇವೆಯು ಶ್ರೀನಿವಾಸ ಆಚಾರ್ಯ, ಠಾಕುರ ನರೋತ್ತಮ ಮತ್ತು ಶ್ಯಾಮಾನಂದ ಪ್ರಭುಗಳೆಂಬ ಮೂವರು ಖ್ಯಾತ ಪ್ರಭುಗಳ ಆಶ್ರಯದಲ್ಲಿ ಸಂಪೂರ್ಣವಾಗಿ ಅರಳಿತು. ಠಾಕುರ ನರೋತ್ತಮರಿಂದ ಪ್ರಾರಂಭವಾದ ಶಿಷ್ಯ ಸಂಪ್ರದಾಯದಲ್ಲಿ ಶ್ರೀಲ ವಿಶ್ವನಾಥ ಚಕ್ರವರ್ತಿಯವರು ನಾಲ್ಕನೆಯ ಸ್ಥಾನದಲ್ಲಿರುವವರು.
ಶ್ರೀ ವಿಶ್ವನಾಥ ಚಕ್ರವರ್ತಿಯವರ ಕಥೆಯು ಹೆಚ್ಚು ಕಡಮೆ ಗೌಡೀಯ ವೈಷ್ಣವರಲ್ಲಿ ಮಾತ್ರ ತಿಳಿದಿತ್ತು. ಶ್ರೀಲ ಚಕ್ರವರ್ತಿ ಠಾಕುರರು ಶ್ರೀಮದ್ ಭಾಗವತ ಮತ್ತು ಭಗವದ್ಗೀತೆಯ ಪರಿಶೀಲನೆಯಲ್ಲಿ ತೋರಿಸಿದ ಅಸಾಧಾರಣ ಸಾಧನೆಯನ್ನು ಹಾಗೂ ಗೋಸ್ವಾಮಿಗಳು ತಮ್ಮ ಪುಸ್ತಕಗಳಲ್ಲಿ ವ್ಯಕ್ತಗೊಳಿಸಿರುವ ಅಭಿಪ್ರಾಯಗಳ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರುವ ಅವರನ್ನು ಗೌಡೀಯ ವೈಷ್ಣವರು ಶ್ಲಾಘಿಸುತ್ತಾರೆ.
“ನಮ್ಮ ಠಾಕುರರು ಗೌಡೀಯ ವೈಷ್ಣವ ಧರ್ಮದ ಐತಿಹಾಸಿಕ ಬೆಳವಣಿಗೆಯ ಮಧ್ಯ ಅವಧಿಯಲ್ಲಿ ಸಂರಕ್ಷರು, ಮಾರ್ಗದರ್ಶಿಗಳು ಮತ್ತು ಆಚಾರ್ಯರಾಗಿದ್ದರು.” ಇತ್ತೀಚೆಗೆ ವೈಷ್ಣವರಲ್ಲಿ ಚಕ್ರವರ್ತಿ ಠಾಕುರರ ಮೂರು ಅತ್ಯಂತ ಪ್ರಖ್ಯಾತ ಪುಸ್ತಕಗಳ ಕುರಿತು ಈ ಹೇಳಿಕೆಯಿದೆ.
“ಕಿರಾಣ ಒಂದು ಕಾನಾ, ಏ ತೀನ್ ನಿಯೇ ವೈಷ್ಣವ ಪಾನ,” “ಉಜ್ವಲ-ನೀಲಮಣಿ- ಕಿರಣ, ಭಕ್ತಿರಸಾಮೃತ ಸಿಂಧು ಬಿಂದು ಮತ್ತು ಭಾಗವತಾಮೃತ – ಈ ಮೂರು ಪುಸ್ತಕಗಳನ್ನು ವೈಷ್ಣವರು ತಮ್ಮ ಐಶ್ವರ್ಯವೆಂಬಂತೆ ಸ್ವೀಕರಿಸುತ್ತಾರೆ ಮತ್ತು ಬಳಸುತ್ತಾರೆ. ಈ ನಿಟ್ಟಿನಲ್ಲಿ ಈ ಮಂತ್ರವನ್ನು ಎಲ್ಲೆಡೆ ಸ್ತುತಿಸುವುದನ್ನು ನಾವು ಕೇಳುತ್ತೇವೆ.”
ವಿಶ್ವಸ್ಯ ನಾಥ-ರಿಪೋಸೌ ಭಕ್ತಿ ವರ್ತ್ಮಾ ಪ್ರದರ್ಶನಾತ್ |
ಭಕ್ತಾ ಚಕ್ರೇ ವರ್ತಿತತ್ವಾತ್ ಚಕ್ರವರ್ತೀ ಆಖ್ಯಾಯS…ಭವತ್ ||
ಅವರು ಭಕ್ತಿ ಪಥದ ವಿಶ್ವವಾಸಿ (ವಸ್ತು ವಿಶ್ವದ ನಿವಾಸಿ)ಗಳನ್ನು ತೋರಿಸಿರುವುದರಿಂದ ಅವರನ್ನು ವಿಶ್ವನಾಥ ಎನ್ನುತ್ತಾರೆ. ಅವರು ಭಕ್ತರ ಚಕ್ರ (ವೃತ್ತ) ದಲ್ಲಿರುವುದರಿಂದ ಅವರನ್ನು ಚಕ್ರವರ್ತಿಯೆನ್ನುತ್ತಾರೆ.
ಶ್ರೀಲ ಚರ್ಕವರ್ತಿ ಠಾಕುರರು ಶ್ರೀ ನರೋತ್ತಮರ ನೈಜ ಸ್ಥಿತಿಯನ್ನು ಸಮರ್ಥಿಸುತ್ತಾರೆ. ಈ ಹಿಂದೆ, ಅತ್ಯಂತ ಉನ್ನತ ಮಧುರರಸದ ಮಾಧುರ್ಯವನ್ನು ಆಸ್ವಾದಿಸುವುದು ಹೇಗೆಂದು ಅರಿತ ಭಕ್ತರ ರಾಜ ಅಥವಾ ರಸಿಕ ರಾಜನೆಂದು ಖ್ಯಾತಿಯನ್ನು ಶ್ರೀಲ ನರೋತ್ತಮ ಠಾಕುರ ಮಹಾಶಯರು ಸಾಧಿಸಿದರು. ಖಚಿತವಾಗಿ ಇದು ಸತ್ಯವೇ ಆಗಿದೆ.
ಪತಿತಾತ್ಮಗಳನ್ನು ಕಠಿಣ ಸಂಕಷ್ಟಗಳಿಂದ ಸಂಪೂರ್ಣವಾಗಿ ಆವೃತಗೊಳಿಸುವ ಶಕ್ತಿಯೇ ನಿಷ್ಠಾವಂತ ಸೇವಕರಾದ, ಪ್ರಭು ಹರಿಯ ಕುರಿತು ಮಾತ್ಸರ್ಯ ಹೊಂದಿರುವ ಕೆಲವು ವ್ಯಕ್ತಿಗಳು ನರೋತ್ತಮರಂತಹ ಅದ್ಭುತ ನೈಜ ರಸಿಕರನ್ನು ಅವರ ಐಹಿಕ ರಸದ ಕೂಪಕ್ಕೆ ಬಲವಂತವಾಗಿ ತಳ್ಳುವ ಪ್ರಯತ್ನಕ್ಕೆ ಕೈ ಹಾಕಿದ್ದರು.
ಅವರು ಯಶಸ್ವಿಯಾಗಲಿಲ್ಲವೆಂದು ಹೇಳುವ ಅಗತ್ಯವೇ ಇಲ್ಲ. ಶ್ರೀ ನರೋತ್ತಮ ಠಾಕುರರ ಆಧ್ಯಾತ್ಮಿಕ ಚಟುವಟಿಕೆಗಳನ್ನು ಅರಿಯಲು ಅಸಮರ್ಥರಾದ ಹಲವಾರು ಪ್ರಕೃತ ಸಹಜೀಯರು ಅವರಿಗೆ ಶಹಾಜಿಯ ಕುಲ-ಭೂಷಣ (ಅಗ್ಗದ ಅನುಕರಣೆ ಮಾಡುವ ಕುಟುಂಬದ ಆಭರಣ) ಎಂದು ಬಿರುದನ್ನು ನೀಡಿದರು. ಶ್ರೀಲ ವಿಶ್ವನಾಥ ಚಕ್ರವರ್ತಿ ಠಾಕುರರು ಈ ಅನುಕರಣೆಯ ಸಹಜೀಯ ಮನೋವಿಕಾರದ ಹರಡುವಿಕೆಯನ್ನು ತಡೆಯುವ ಮತ್ತು ಶ್ರೀಲ ಠಾಕುರ ಮಹಾಶಯರ ವಾಸ್ತವಿಕ ಆಧ್ಯಾತ್ಮಿಕ ಶ್ರೇಣಿಯನ್ನು ನಿಜವಾಗಿ ಸಮರ್ಥಿಸಲು ಆವಿರ್ಭಾವ ಹೊಂದಿದರು.
ವಿಶ್ವನಾಥರ ವಂಶ, ಜನ್ಮ ಮತ್ತು ಅಧ್ಯಯನ
ಶ್ರೀಲ ವಿಶ್ವನಾಥರು ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ರಾಧಾ ದೇಶ ಪ್ರದೇಶದ ಬ್ರಾಹ್ಮಣ ಕುಲ (ರಾಧಾ ಶ್ರೇಣಿಯ ವಿಪ್ರಕುಲ) ದಲ್ಲಿ ಜನಿಸಿದರು. ಅವರ ಕಾವ್ಯನಾಮ ”ಹರಿ ವಲ್ಲಭ” ಎಂದು ಕೆಲವರು ಹೇಳುತ್ತಾರೆ. ಅವರ ಹಿರಿಯ ಅಣ್ಣಂದಿರ ಹೆಸರು ರಾಮಭದ್ರ ಮತ್ತು ರಘುನಾಥ. ಅವರು ತಮ್ಮ ಬಾಲ್ಯದಲ್ಲಿ ದೇವಗ್ರಾಮದಲ್ಲಿ ವಾಸಿಸಿದರು.
ಸಂಸ್ಕೃತ ವ್ಯಾಕರಣದಲ್ಲಿ ಅಧ್ಯಯನ ಮಾಡಿದ ಅನಂತರ ಅವರು ಸೈಯದಾಬಾದ್ ಗ್ರಾಮ (ಮರಸಿದಾಬಾದ್ ಜಿಲ್ಲೆ) ದಲ್ಲಿ ಹೋಗಿ ತಮ್ಮ ಗುರು ಶ್ರೀ ರಾಧಾ-ರಮಣ ಚಕ್ರವರ್ತಿಗಳಿಂದ ಭಕ್ತಿ ಶಾಸ್ತ್ರಗಳನ್ನು ಕಲಿತರು. ಶ್ರೀರಾಧಾರಮಣ ಚಕ್ರವರ್ತಿಯವರು ಶ್ರೀ ಗಂಗಾನಾರಾಯಣ ಚಕ್ರವರ್ತಿ (ಠಾಕುರ ನರೋತ್ತಮರ ಶಿಷ್ಯರಲ್ಲಿ ಒಬ್ಬರು) ಯವರ ಶಿಷ್ಯ.
ಶ್ರೀ ವಿಶ್ವನಾಥ ಚಕ್ರವರ್ತಿಯವರು ಅನಂತರ ಈ ಶಿಷ್ಯ ಸಂಪ್ರದಾಯವನ್ನು ವರ್ಣಿಸುತ್ತಾ ಶ್ರೀ ಗುರುದೇವಾಷ್ಟಿಕಾ, ಶ್ರೀ ಪರಮ-ಗುರುದೇವಾಷ್ಟಿಕಾ, ಶ್ರೀ ಪ್ರತಪರ-ಗುರುದೇವಾಷ್ಟಿಕಾ ಮತ್ತು ಶ್ರೀ ಪರಮ-ಪರಾತ್ ಗುರುದೇವಾಷ್ಟಿಕಾ ವರ್ಣಿಸುವ ಸಂಸ್ಕೃತ ಪ್ರಾರ್ಥನೆಗಳನ್ನು ರಚಿಸಿದರು. ಈ ಎಲ್ಲ ಸ್ತೋತ್ರಗಳನ್ನು ಅವರ ಶ್ರೀ ಸ್ಥವಾಮೃತ ಲಹರಿ ಎಂಬ ಪುಸ್ತಕದಲ್ಲಿ ಅವರ ಇತರ ರಚನೆಗಳೊಂದಿಗೆ ಕಾಣಬಹುದು.
ಶ್ರೀ ವ್ರಜ ಮಂಡಲದಲ್ಲಿ ಅವರ ನಿವಾಸ
ತಮ್ಮ ಆಧ್ಯಾತ್ಮಿಕ ಗುರುಗಳ ಕೃಪೆಯಿಂದ ಶ್ರೀ ವಿಶ್ವನಾಥ ಚಕ್ರವರ್ತಿಯವರು ವ್ರಜಧಾಮದ ಹಲವಾರು ಸ್ಥಳಗಳಲ್ಲಿ ವಾಸಿಸಿ, ಹಲವಾರು ಆಧ್ಯಾತ್ಮಿಕ ಗ್ರಂಥಗಳನ್ನು ರಚಿಸಿದರು. ಅವರ ಬಹುತೇಕ ಪುಸ್ತಕಗಳು ಈಗ ಸಿಗುವುದು ಬಹಳ ಕಷ್ಟ. ಆದರೆ ಕೆಲವು ಬಹಳ ಹೆಸರುವಾಸಿಯಾಗಿದ್ದು, ಗೌಡೀಯ ವೈಷ್ಣವರ ಶ್ರೇಷ್ಠ ಪುರಸ್ಕೃತ ಐಶ್ವರ್ಯವೆಂದು ಪರಿಗಣಿಸಲಾಗಿದೆ.
ಕೆಲವೊಮ್ಮೆ ಶ್ರೀಲ ಚಕ್ರವರ್ತಿ ಠಾಕುರರು ಶ್ರೀ ಗೋವರ್ಧನದಲ್ಲಿ ಕೆಲವೊಮ್ಮೆ ಶ್ರೀರಾಧಾ ಕುಂಡದ ತೀರದಲ್ಲಿ, ಕೆಲವೊಮ್ಮೆ ಶ್ರೀಯವತ್‌ದಲ್ಲಿ ಕೆಲವೊಮ್ಮೆ ಶ್ರೀ ಬೃಂದಾವನದ ಗೋಕುಲಾನಂದ ದೇವಾಲಯದೊಳಗೆ ವಾಸಿಸಿದರು. ಅವರ ಈ ಓಡಾಟವು ಅವರ ಪುಸ್ತಕದ ಕೊನೆಯ ಹೇಳಿಕೆಗಳ ಮೂಲಕ ತಿಳಿಯುತ್ತದೆ.
ಹುಟ್ಟಿದ ದಿನ
ಚಕ್ರವರ್ತಿ ಠಾಕುರರ ಜೀವಿತ ಕಾಲವನ್ನು ನಾವು ಅವರ 1607ಶಕದ (ಕ್ರಿ.ಶ. 1685) ಫಾಲ್ಗುಣ ತಿಂಗಳ ಪೌರ್ಣಿಮೆಯ ದಿನದಂದು ತಮ್ಮ ಶ್ರೀಕೃಷ್ಣ ಭಾವನಾಮೃತವನ್ನು ಪೂರ್ಣಗೊಳಿಸಿದ್ದನ್ನು ಉಲ್ಲೇಖಿಸಿದ್ದನ್ನು ಕಾಣುತ್ತೇವೆ. ಈ ದಿನವು ಶ್ರೀ ಚೈತನ್ಯ ಮಹಾಪ್ರಭುಗಳು ಆವಿರ್ಭಾವ ಹೊಂದಿದ ಫೆಬ್ರವರಿ-ಮಾರ್ಚ್‌ನ ಪುಣ್ಯದಿನವಾಗಿದೆ.
ಇದರೊಂದಿಗೆ, ತಮ್ಮ ಶ್ರೀಮದ್ ಭಾಗವತದ ಕುರಿತಾದ ವ್ಯಾಖ್ಯೆಯಾದ ಸಾರಾರ್ಥ ದರ್ಶಿನಿಯಲ್ಲಿ ಅವರು 1626 ಶಕದ ಮಾಘ ತಿಂಗಳಲ್ಲಿ (ಕ್ರಿ.ಶ 1704) ಇದನ್ನು ಬರೆದರೆಂದು ಹೇಳಿದ್ದಾರೆ. ಹೀಗಾಗಿ ಅವರ ಜನ್ಮ ಕಾಲವನ್ನು ಸುಮಾರು 1560 ಶಕ (ಕ್ರಿ.ಶ. 1638) ಮತ್ತು ನಿಧನದ ಕಾಲ 1630 ಶಕ (ಕ್ರಿ.ಶ. 1708) ಎಂದು ಹೇಳಬಹುದು. ಇದರಿಂದ ಅವರು ಎಪ್ಪತ್ತು ವರ್ಷಗಳ ಕಾಲ ಜೀವಿಸಿದ್ದರೆಂದು ಈ ಮೂಲಕ ಹೇಳಬಹುದು.
ಅವರ ಶಿಷ್ಯ ಸಂಪ್ರದಾಯ

ಶ್ರೀ ಗಂಗಾ-ನಾರಾಯಣ ಚಕ್ರವರ್ತಿಯವರು ಶ್ರೀಲ ನರೋತ್ತಮ ಠಾಕುರ ಮಹಾಶಯರ ಶಿಷ್ಯರು ಮತ್ತು ಬಲುಚರ ಗಂಬಿಲ (ನರೋತ್ತಮರ ತಿರೋಭಾವದ ಸ್ಥಳ)ದ ನಿವಾಸಿಗಳು. ಪ್ರಭುಗಳ ಆಕಾಂಕ್ಷೆಯ ಫಲವಾಗಿ ಅವರಿಗೆ ಪುತ್ರರಾಗಲಿಲ್ಲ ಆದರೆ ವಿಷ್ಣುಪ್ರಿಯ ಎಂಬ ಪುತ್ರಿಯಿದ್ದಳು. ಶ್ರೀಲ ಠಾಕುರ ಮಹಾಶಯರೂ ಸಹ ಶ್ರೀರಾಮಕೃಷ್ಣ ಭಟ್ಟಾಚಾರ್ಯ (ಒಬ್ಬವರೇಂದ್ರ ಶ್ರೇಣಿಯ ಬ್ರಾಹ್ಮಣ) ಎಂಬ ಶಿಷ್ಯನನ್ನು ಹೊಂದಿದ್ದರು.
ಭಟ್ಟಾಚಾರ್ಯರ ಕೊನೆ ಮಗನ ಹೆಸರು ಶ್ರೀಕೃಷ್ಣ ಚರಣ ಅವನನ್ನು ಗಂಗಾ ನಾರಾಯಣರು ಸ್ವಂತ ಮಗನಾಗಿ ಸ್ವೀಕರಿಸಿದರು. ಈ ಕೃಷ್ಣ ಚರಣರೇ ಮುಂದೇ ಶ್ರೀಲ ಚಕ್ರವರ್ತಿ ಠಾಕುರರ ಪರಮ ಗುರು. ವಿಶ್ವನಾಥರ ಭಾಗವತದ ವ್ಯಾಖ್ಯೆಯಾದ ಸಾರಾರ್ಥ ದರ್ಶಿನಿಯ ಆರಂಭದ ಪ್ರಸಿದ್ಧ ರಸ ಪಂಚಾಧ್ಯಾಯಿ (ಪ್ರಭು ಕೃಷ್ಣನ ರಾಸಲೀಲ ನೃತ್ಯವನ್ನು ವಿವರಿಸುವ ಐದು ಅಧ್ಯಾಯಗಳು)ಯಲ್ಲಿ ಈ ಶ್ಲೋಕವಿದೆ.
ಶ್ರೀರಾಮ ಕೃಷ್ಣ ಗಂಗಾ ಚರಣ ನತ್ವಾ ಗುರೂನ್ ಉರು ಪ್ರೇಮ್ನಃ |
ಶ್ರೀಲ ನರೋತ್ತಮ ನಾಥ ಶ್ರೀ ಗೌರಾಂಗ ಪ್ರಭುಂ ನೌಮಿ ||
”ಶಿಷ್ಯ ಸಂಪ್ರದಾಯದ ಶ್ರೀರಾಧಾರಮಣ ಚಕ್ರವರ್ತಿ, ಶ್ರೀಕೃಷ್ಣ ಚರಣ ಚಕ್ರವರ್ತಿ, ಶ್ರೀಗಂಗಾ ನಾರಾಯಣ ಚಕ್ರವರ್ತಿ, ಶ್ರೀ ನರೋತ್ತಮ ಠಾಕುರ ಮತ್ತು ಶ್ರೀಲೋಕನಾಥ ಗೋಸ್ವಾಮಿ ನನ್ನ ಎಲ್ಲ ಗುರುಗಳ ಪಾದಗಳಡಿಯಲ್ಲಿ ಅತ್ಯಂತ ಶ್ರೇಷ್ಠ ದೈವೀಭಕ್ತಿಯಲ್ಲಿ ಮುಳುಗಿ ನಾನು ನನ್ನ ಪ್ರಭು ಶ್ರೀ ಗೌರಾಂಗ ಮಹಾಪ್ರಭುಗಳಿಗೆ ನನ್ನ ಗೌರವಪೂರ್ಣ ನಮನಗಳನ್ನು ಸಲ್ಲಿಸುತ್ತೇನೆ.”
ಈ ಶ್ಲೋಕದಿಂದ ಶ್ರೀ ರಾಧಾರಮಣರನ್ನು ‘ಶ್ರೀರಾಮ’ ಎಂದೂ, ಶ್ರೀಕೃಷ್ಣ ಚರಣರನ್ನು ‘ಕೃಷ್ಣ’ ಎಂದು ಸಂಕ್ಷಿಪ್ತವಾಗಿ ಹೇಳಲಾಗಿದೆಯೆಂದು ಸ್ಪಷ್ಟವಾಗಿದೆ. ‘ನಾಥʼ ಎಂದರೆ ಶ್ರೀಲೋಕನಾಥ ಗೋಸ್ವಾಮಿಗಳೆಂದರ್ಥ.
ರೂಪ ಕವಿರಾಜರ ತಪ್ಪು ತೀರ್ಮಾನಗಳ ನಿರಾಕರಣೆ ಶ್ರೀನಿವಾಸ ಆಚಾರ್ಯರ ಖ್ಯಾತ ಪುತ್ರಿಯಾದ ಶ್ರೀಮತಿ ಹೇಮಲತಾ ಠಾಕುರಾಣಿಯು ಶ್ರೀ ರೂಪ ಕವಿರಾಜರೆಂಬ ಒಬ್ಬ ಅಸೂಯೆ ಪಡುವ ಶಿಷ್ಯನನ್ನು ವೈಷ್ಣವ ಸಮಾಜದಿಂದ ತೆಗೆದು ಹಾಕಿದರು. ಈ ರೂಪ ಕವಿರಾಜರು ಗೌಡಿಯ ವೈಷ್ಣ ಸಂಪ್ರದಾಯದ ಉಪ ಶಾಖೆಯಾದ ಅತಿಬದಿಗೆ ಸೇರಿದವರೆಂದು ಹೇಳಲಾಗಿದೆ.
ಅವರು ತಮ್ಮದೇ ಆದ ತತ್ವವನ್ನು ಮುಂದಿಟ್ಟುಕೊಂಡು ಕೇವಲ ಸಂನ್ಯಾಸ ಸ್ವೀಕರಿಸಿದ ವ್ಯಕ್ತಿ ಮಾತ್ರ ಆಚಾರ್ಯನಾಗಬಹುದೆಂದು ಗೌಡಿಯ ಸಂಪ್ರದಾಯಕ್ಕೆ ಒಂದು ವ್ಯತಿರಿಕ್ತವಾಗಿ ತಪ್ಪನ್ನು ಸೃಷ್ಟಿಸಿ ಪ್ರಚಾರ ಮಾಡಿದರು. ಗೃಹಸ್ಥನು ಗುರುವಾಗಲು ಸಾಧ್ಯವಿಲ್ಲ ಎಂದು ಆತ ಹೇಳಿದರು. ವಿಧಿಮಾರ್ಗ ಅಥವಾ ಭಕ್ತಿ ಪಥ ನಿಯಮಗಳು ಮತ್ತು ಆಚರಣೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿ ಅವರು ರಾಗ ಮಾರ್ಗದ ತತ್ವ ಮಾರ್ಗವನ್ನು ಪ್ರಚಾರ ಮಾಡಲು ಪ್ರಯತ್ನಿಸಿದರು.
ಈ ಮಾರ್ಗವು ಸಂಪೂರ್ಣವಾಗಿ ವ್ಯವಸ್ಥಿತವಾಗಿರದ ಅಶಿಸ್ತಿನ ಮಾರ್ಗವಾಗಿದೆ. ತದನಂತರ ಅವರ ಸ್ಮರಣೆಯು ಶ್ರವಣ ಮತ್ತು ಕೀರ್ತನೆ (ಕೇಳುವುದು ಮತ್ತು ಸ್ತುತಿಸುವುದು) ಗಳಿಲ್ಲದೆಯೇ ಸಾಧ್ಯವೆಂದು ಪ್ರಚಾರ ಮಾಡಿದರು. ಹೀಗಾಗಿ ಈ ರೂಪ ಕವಿರಾಜರು ಗೋಸ್ವಾಮಿಯವರು ತೋರಿಸಿರುವ ಪಥಕ್ಕೆ ವಿರುದ್ಧವಾದ ಪಥವನ್ನು ಪ್ರಚಾರ ಮಾಡಿದರು.
ಆದ್ದರಿಂದ ಶ್ರೀಲ ಚಕ್ರವರ್ತಿ ಠಾಕುರರು ಈ ಎಲ್ಲ ತಪ್ಪು ತೀರ್ಮಾನಗಳನ್ನು ತಮ್ಮ ಸಾರಾರ್ಥ ದರ್ಶನಿ ವ್ಯಾಖ್ಯೆಯಲ್ಲಿ (ಶ್ರೀಮದ್ ಭಾಗವತದ 3ನೇ) ಅಲ್ಲಗಳೆದಿದ್ದಾರೆ. ನಿಜವಾಗಿ, ಈ ನಿರಾಕರಣೆಯು ಶ್ರೀಲ ಜೀವಗೋಸ್ವಾಮಿಯವರ ಭಕ್ತಿ ಸಂದರ್ಭದಲ್ಲಿ ಹೇಳುವ ಮುಖ್ಯವಾದ ಸತ್ಯಗಳಾಗಿವೆ.
ಜಾತಿ ಗೋಸ್ವಾಮಿಗಳನ್ನು ನಿರಾಕರಿಸುವುದು
ಶ್ರೀರೂಪ ಕವಿರಾಜ, ಶ್ರೀನಿತ್ಯಾನಂದ ಪ್ರಭುಗಳ ಮಗ ವೀರಭದ್ರರ ವಂಶಜರು ಹಾಗೂ ಶ್ರೀ ಅದ್ವೈತ ಆಚಾರ್ಯರ ತಿರಸ್ಕೃತ ಮಕ್ಕಳ ವಂಶದವರು ತಮ್ಮ ಶಿಷ್ಯರಿಗೆ ‘ಗೋಸ್ವಾಮಿ’ ಎಂದು ಬಿರುದನ್ನು ನೀಡಿದರು. ಅವರು ಗೃಹಸ್ಥರಾಗಿದ್ದರೂ ಅವರಿಗೆ ಈ ಹೆಸರನ್ನು ನೀಡಿದರು. ಈ ತಪ್ಪು ಅಭ್ಯಾಸವನ್ನು ಖಂಡಿಸಿ, ಶ್ರೀಲ ಚಕ್ರವರ್ತಿ ಠಾಕುರರ ಗ್ರಂಥಗಳನ್ನು ಉಲ್ಲೇಖಿಸುತ್ತಾ ಒಬ್ಬ ಆಚಾರ್ಯರ ಯೋಗ್ಯ ಮಕ್ಕಳಿಗೆ ಇಂತಹ ‘ಗೋಸ್ವಾಮಿ’ ಹೆಸರನ್ನು ನೀಡುವುದು ಸರಿಯಲ್ಲವೆಂದು ಹೇಳಲೇ ಆಗದು.
ಆದರೆ ಅಯೋಗ್ಯ ಕುಟುಂಬಗಳಿಗೆ ಅವರು ವಿಶಿಷ್ಟವಾಗಿ ತಮ್ಮ ಐಶ್ವರ್ಯ ಮತ್ತು ಅನುಯಾಯಿಗಳನ್ನು ಹೆಚ್ಚಿಸುವ ದುರಾಸೆಯ ಉದ್ದೇಶದಿಂದ ಒಬ್ಬ ಆಚಾರ್ಯರ ವಂಶದವರಾದರೂ ಗೋಸ್ವಾಮಿ ಎಂದು ಅವರ ಹೆಸರಿನ ಕೊನೆಯಲ್ಲಿ ಇಡುವುದು ತುಂಬ ಅಸೂಕ್ತವಾದದ್ದು ಈ ಕಾರಣದಿಂದಾಗಿಯೇ, ಒಬ್ಬ ಆಚಾರ್ಯರ ಕಾರ್ಯಗಳನ್ನು ಮಾಡುತ್ತಿದ್ದರೂ ‘ಗೋಸ್ವಾಮಿ’ ಎಂದು ಎಂದಿಗೂ ಬಳಸುವುದಿಲ್ಲ. ಶ್ರೀಲ ಚಕ್ರವರ್ತಿ ಗೋಸ್ವಾಮಿಗಳು ಸರಿಯಾದ ವರ್ತನೆಯಿಲ್ಲದ ಇಂತಹ ಮೂರ್ಖರಾದ ವ್ಯಕ್ತಿಗಳು ಎಷ್ಟು ಅಜ್ಞಾನಿಗಳೆಂದರೆ ಅವರನ್ನು ನೋಡುವುದು ಯೋಗ್ಯವಲ್ಲ.
ಜಯಪುರದಲ್ಲಿ ಗೌಡೀಯ ಸಂಪ್ರದಾಯದ ವಿಜಯ
ಶ್ರೀಲ ಚಕ್ರವರ್ತಿ ಠಾಕುರರ ಕಾಲದಲ್ಲಿ ಆಚಾರ್ಯರ ಮಕ್ಕಳು ತಮ್ಮ ಹೆಸರಿನ ಪಕ್ಕ ‘ಗೋಸ್ವಾಮಿ’ ಎಂದು ಸಹಿ ಮಾಡಿ ತಮ್ಮ ಮೂರ್ಖತನವನ್ನು ವ್ಯಕ್ತಪಡಿಸುತ್ತಿದ್ದರು. ಗ್ರಂಥಗಳ ಕುರಿತು ತಿರಸ್ಕಾರ ಹೊಂದಿದ್ದು ಪ್ರಭುವಿನ ಕುರಿತು ಮಾತ್ಸರ್ಯ ಭಾವವನ್ನು ಹೊಂದಿದ್ದ ಅವರು ತಮ್ಮ ವಂಶ ಪರಂಪರೆಯ ಹೆಸರನ್ನು ಹೇಳಲು ಅಭಿಮಾನ ಪಡುತ್ತಿದ್ದರು.
ಆ ಕಾಲದಲ್ಲಿ ಶ್ರೀ ಗೋವಿಂದದೇವ ದೇವಾಲಯದಲ್ಲಿ (ಜಯಪುರದಾಚೆಯ ಗಲ್ತಾ ಗ್ರಾಮ) ಶ್ರೀರಾಮಾನುಜ ಸಂಪ್ರದಾಯದ ಆಚಾರ್ಯರು ಗೌಡೀಯ ಸಂಪ್ರದಾಯದವರ ವಿರುದ್ಧ ಒಂದು ಸವಾಲೆಸೆದರು. ಈ ಪರಿಣಾಮವಾಗಿ ಜಯಪುರದ ರಾಜನು ಶ್ರೀ ಬೃಂದಾವನದ ಅತ್ಯಂತ ಪ್ರಮುಖ ಗೌಡೀಯ ವೈಷ್ಣವರನ್ನು ಆಹ್ವಾನಿಸಿದರು.
ಅವರನ್ನು ಶ್ರೀಲ ರೂಪಗೋಸ್ವಾಮಿಗಳ ಅನುಯಾಯಿಗಳೆಂದು ತಿಳಿದು ಅವರನ್ನು ಶ್ರೀರಾಮಾನುಜರ ಅನುಯಾಯಿಗಳೊಂದಿಗೆ ಒಂದು ಮಹಾ ಸಭೆಗೆ ಕರೆದರು. ಇದು ಶ್ರೀಲ ಚಕ್ರವರ್ತಿ ಠಾಕುರರಿಗೆ ಸುಮಾರು 68 ವಯಸ್ಸಾಗಿದ್ದಾಗ ಅಂದರೆ 1628 ಶಕೆ (ಕ್ರಿ.ಶ. 1706)ಯಲ್ಲಿ ಜರುಗಿತು.
ಅವರು ತಮ್ಮ ಅಗ್ರಮಾನ್ಯ ಶಿಷ್ಯರಾದ ಗೌಡೀಯ ವೈಷ್ಣವ ವೇದಾಂತಾಚಾರ್ಯ ಮಹಾಮಹೋಪಾಧ್ಯಾಯ ಪಂಡಿತ್-ಕುಲ-ಮುಕುಟ ಶ್ರೀಪಾದ ಬಲದೇವ ವಿದ್ಯಾಭೂಷಣರೊಂದಿಗೆ ಈ ಕುರಿತು ಚರ್ಚಿಸಿದರು. ಇದಾದನಂತರ ಶ್ರೀ ವಿದ್ಯಾಭೂಷಣರು ತಮ್ಮ ವಿದ್ಯಾರ್ಥಿ (ಶ್ರೀ ಚಕ್ರವರ್ತಿ ಠಾಕುರರ ಶಿಷ್ಯ) ಶ್ರೀ ಕೃಷ್ಣದೇವ ಸಾರ್ವಭೌಮರೊಂದಿಗೆ ಜಯಪುರದ ಮಹಾಸಭೆಗೆ ಸೇರಲು ವೃಂದಾವನದಿಂದ ಹೊರಟರು.
ಜಾತಿಗೋಸ್ವಾಮಿಗಳು ಶ್ರೀಮಧ್ವ ಸಂಪ್ರದಾಯದೊಂದಿಗೆ ತಮ್ಮ ನಿಷ್ಠೆಯನ್ನು ಸಂಪೂರ್ಣವಾಗಿ ಮರೆತಿದ್ದರು. ಶಿಷ್ಯ ಸಂಪ್ರದಾಯದ ನೈಜ ವಿಷಯಗಳನ್ನು ಕುರಿತು ಅಜ್ಞಾನಿಗಳಾಗಿದ್ದು, ವೈಷ್ಣವ ವೇದಾಂತಕ್ಕೆ ಅಗೌರವ ಸೂಚಿಸಿದ ಅವರು ಎಷ್ಟು ಅಧಃಪತನಕ್ಕೆ ಒಳಗಾಗಿದ್ದರೆಂದು ಗೌಡೀಯ ಸಂಪ್ರದಾಯದ ತತ್ತ್ವಶಾಸ್ತ್ರದ ಪ್ರಕಾರ ವೇದಾಂತ ಸೂತ್ರದ ಪ್ರತ್ಯೇಕ ವ್ಯಾಖ್ಯೆಯನ್ನು ಶ್ರೀ ಬಲದೇವ ವಿದ್ಯಾಭೂಷಣರು ಬರೆಯಬೇಕಾಯಿತು.
ಅವರುಗಳ ತಪ್ಪು ತೀರ್ಮಾನಗಳನ್ನು ನಿರಾಕರಿಸಲು ಇದನ್ನೇ ಬರೆಯಬೇಕಾಯಿತು. ಶ್ರೀಲ ಚಕ್ರವರ್ತಿ ಠಾಕುರರು ಸವಾಲನ್ನು ಸ್ವೀಕರಿಸಿ ಈ ಕಾರ್ಯಕ್ಕೆ ತಮ್ಮ ಸಂಪೂರ್ಣ ಬೆಂಬಲ ಹಾಗೂ ಒಪ್ಪಿಗೆಯನ್ನು ನೀಡಿದರು. ಇದೇ ಕಾಲಕ್ಕೆ ಇದು ಗೌಡೀಯ ವೈಷ್ಣವ ಪರಂಪರೆಯ ಮುಕ್ತ ಪ್ರಚಾರಕ್ಕೆ ಅನುವು ಮಾಡಿಕೊಟ್ಟಿತು.

ಇದು ಶ್ರೀ ಚಕ್ರವರ್ತಿ ಠಾಕುರರ ವೈಷ್ಣವ ಧರ್ಮ ಬೋಧನೆಯ ಎರಡನೆಯ ಅತ್ಯುತ್ತಮ ನಿದರ್ಶನವಾಗಿದೆ. ವಿಶಿಷ್ಟವಾಗಿ, ಇದು ಅಪರಿಶುದ್ಧ ಬ್ರಾಹ್ಮಣ ಕುಟಂಬಗಳಿಂದ ಜನಿಸಿದ ವೈಷ್ಣವ ಆಚಾರ್ಯ ಸುಧಾರಣೆಗಾಗಿ ಅವರ ಪ್ರಯತ್ನದ ಅಸಾಮಾನ್ಯ ಉದಾಹರಣೆಯಾಗಿದೆ.
ಶ್ರೀಲ ವಿಶ್ವನಾಥ ಚಕ್ರವರ್ತಿ ಠಾಕುರರ ಕೃತಿಗಳು
ಶ್ರೀಲ ವಿಶ್ವನಾಥ ಚಕ್ರವರ್ತಿ ಠಾಕುರರು ಹಲವಾರು ಪುಸ್ತಕಗಳನ್ನು ಬರೆದರು. ಇಲ್ಲಿಯವರೆಗೆ ಕಂಡು ಹಿಡಿದ ಪುಸ್ತಕಗಳ ಪಟ್ಟಿ ಇಲ್ಲಿದೆ.
1. ಶ್ರೀಕೃಷ್ಣ ಭಾವಾಮೃತ
(ಶ್ರೀಕೃಷ್ಣನ ದೈನಂದಿನ ಕ್ರೀಡೆಗಳ ಮೇಲಿನ ಸುಧಾ ಧ್ಯಾನಗಳು) ದೈವೀ ದಂಪತಿಗಳು ಮತ್ತು ಅವರ ಮಿತ್ರರ ಜೀವನದ ಒಂದು ದಿನದ ಎಂಟು ಅವಧಿಗಳನ್ನು ವರ್ಣಿಸುವ 20 ಆಧ್ಯಾಯಗಳ 1,347 ಸಂಸ್ಕೃತ ಶ್ಲೋಕಗಳು.
2. ಸಂಕಲ್ಪ ಕಲ್ಪ-ದ್ರುಮ
(ದೃಢ ನಿರ್ಧಾರದ ಆಶಾವೃಕ್ಷ) ಗೋಲೋಕ ಬೃಂದಾವನದಲ್ಲಿ ಒಂದು ದಿನದ ಎಂಟು ಅವಧಿಗಳಲ್ಲಿ ಶ್ರೀ ರಾಧಿಕೆಗೆ ಅರ್ಪಿಸಿರುವ ವಿಶಿಷ್ಟ ಸೇವೆಗಳ ಸ್ತೋತ್ರಗಳು, 104 ಸಂಸ್ಕೃತ ಶ್ಲೋಕಗಳು ಇದನ್ನು ಪ್ರತ್ಯೇಕ ಪುಸ್ತಕವಾಗಿ ಬಹಳ ಬಾರಿ ಪ್ರಕಟಿಸಲಾಗಿದೆ. ಈ ಕೃತಿಯಲ್ಲಿ ಸ್ಥಾವಾಮೃತ ಲಹರಿ ಎಂದು ಕರೆಯುವ ಸ್ತೋತ್ರಗಳ ಶ್ರೀ ವಿಶ್ವನಾಥರ ಸಂಗ್ರಹವು ಇಲ್ಲಿದೆ.
3. ಚಮತ್ಕಾರ ಚಂದ್ರಿಕ
1) ಪೆಟ್ಟಿಗೆಯಲ್ಲಿ ಭೇಟಿ 2) ಅಭಿಮನ್ಯುವಿನ ಮಾರುವೇಷದಲ್ಲಿ ಭೇಟಿ 3) ವೈದ್ಯಳಂತೆ ಮಾರುವೇಷದಲ್ಲಿ ಭೇಟಿ 4) ಗಾಯಕಿಯ ವೇಷದಲ್ಲಿ ಭೇಟಿ ಹಲವಾರು ವೇಷಗಳಲ್ಲಿ ಶ್ರೀಕೃಷ್ಣನ ತುಂಟ ಕೃತ್ಯಗಳನ್ನು ವರ್ಣಿಸುವ ನಾಲ್ಕು ಅಧ್ಯಾಯಗಳ 226 ಸಂಸ್ಕೃತ ಶ್ಲೋಕಗಳ ಚಿಕ್ಕ ಕಥೆಗಳು.
4. ಪ್ರೇಮ ಸಮಾತ
ದೇವತೆಯ ವೇಷದಲ್ಲಿ ಕೃಷ್ಣನೆ ರಾಧೆಯ ಸಮ್ಮುಖದಲ್ಲಿ ಬರುವುದು ಮತ್ತು ರಾಧಿಕೆ ಪ್ರಭುವಿನ ಕುರಿತಾದ ಅವಳ ನಿಸ್ವಾರ್ಥ ಪ್ರೇಮದ ಆಂತರಿಕ ಭಾವದ ಗುಪ್ತ ಮನಸ್ಸನ್ನು ಬಹಿರಂಗಗೊಳಿಸುವ 141 ಸಂಸ್ಕೃತ ಶ್ಲೋಕಗಳ ಕಥೆ.
5. ವ್ರಜ-ರೀತಿ-ಚಿಂತಾಮಣಿ
ವ್ರಜದ ಪುಣ್ಯ ಅನಂತ ಕ್ಷೇತ್ರಗಳ ನಗರಗಳು, ದೇವಾಲಯಗಳು, ತೋಪುಗಳು, ಸರೋವರಗಳು, ಪರ್ವತಗಳು, ಪ್ರಾಣಿಗಳು, ಪುಷ್ಪಗಳನ್ನು ವರ್ಣಿಸುವ 234 ಸಂಸ್ಕೃತ ಶ್ಲೋಕಗಳ 3 ಅಧ್ಯಾಯಗಳ ಗ್ರಂಥ.
6. ಗೌರಾಂಗ-ಲೀಲಾಮೃತ
ಶ್ರೀ ಮಹಾಪ್ರಭುಗಳ ಒಂದು ದಿನದ ಎಂಟು ಅವಧಿಗಳ ದೈನಂದಿನ ಲೀಲೆಗಳನ್ನು 11 ಸಂಸ್ಕೃತ ಶ್ಲೋಕಗಳಲ್ಲಿ ವರ್ಣಿಸಿರುವುದು ಶ್ರೀ ವಿಶ್ವನಾಥರ ನೇರ ಶಿಷ್ಯರಾದ ಕವಿಕೃಷ್ಣದಾಸರಿಂದ ಪ್ರತಿ ಶ್ಲೋಕದ ಲೀಲೆಗಳ ವರ್ಣನೆಯನ್ನು ಬಂಗಾಳಿ ಶ್ಲೋಕಗಳಲ್ಲಿ ವಿಸ್ತಾರವಾಗಿ ಬರೆಯಲಾಗಿದೆ.
7. ಚೈತನ್ಯ ರಸಾಯನ
ಇದು ಎಂದೂ ಸಂಪೂರ್ಣವಾಗದ ಕೃತಿ. ವಿಶ್ವನಾಥರ ಶಿಷ್ಯ ಜಗನ್ನಾಥ ವಿಪ್ರರ ಮಗ ಶ್ರೀ ನರಹರಿ ಚಕ್ರವರ್ತಿಯವರಿಂದ ಶ್ರೀ ನರೋತ್ತಮ ವಿಲಾಸದ 13ನೇ ಅಧ್ಯಾಯದಲ್ಲಿ ಉಲ್ಲೇಖಿಸಿರುವ ಕಥೆ.
8. ರಾಗ – ವರ್ತ್ಮ ಚಂದ್ರಿಕಾ
ನಿರಂತರ ಭಕ್ತಿ ಸೇವೆಯ ಪಥವನ್ನು ಪಾಲಿಸುವವರ ಸೂಕ್ತ ವರ್ತನೆಗಳು ಮತ್ತು ಭಾವನೆಗಳ ಕುರಿತು ವಿಸ್ತೃತವಾಗಿ ಬರೆಯಲಾದ ಗದ್ಯ ಮತ್ತು ಶ್ಲೋಕಗಳ 22 ಸಂಸ್ಕೃತ ಪರಿಚ್ಛೇದ ಮತ್ತು ಎರಡು ಅಧ್ಯಾಯಗಳ ಗ್ರಂಥ.
9. ಮಾಧುರ್ಯ – ಕಾದಂಬಿನಿ
ಭಕ್ತಿ ಪಥದಲ್ಲಿರುವಾಗ ವ್ಯಕ್ತಿ ಏರುವ ಹಲವಾರು ಪ್ರಗತಿಯ ಹಂತಗಳನ್ನು ವೈಜ್ಞಾನಿಕವಾಗಿ ಉಲ್ಲೇಖಿಸಿರುವ 8 “ಅಮೃತ ವರ್ಷ” (ಅಧ್ಯಾಯ)ಗಳ ಸಂಸ್ಕೃತ ಗದ್ಯ.
10. ಐಶ್ವರ್ಯ ಕಾದಂಬಿನಿ
ತಮ್ಮ ಮಾಧುರ್ಯ ಕಾದಂಬಿನಿಯಲ್ಲಿ 2ನೆಯ ಅಧ್ಯಾಯದಲ್ಲಿ ವಿಶ್ವನಾಥರು ಉಲ್ಲೇಖಿಸಿರುವ ಕೃತ್ಯ ಇದೇ ಹೆಸರಿನ ಶ್ರೀ ಬಲದೇವ ವಿದ್ಯಾಭೂಷಣರ ಕೃತಿಗಿಂತ ಭಿನ್ನವಾಗಿದೆ. ವಿಶ್ವನಾಥರ ಪುಸ್ತಕವು ದ್ವೈತಾದ್ವೈತವಾದ ತತ್ತ್ವಶಾಸ್ತ್ರವನ್ನು ಚರ್ಚಿಸುತ್ತದೆ. ಆದರೆ ಈ ಕೃತಿಯ ಪ್ರತಿಯು ಸಿಕ್ಕಿಲ್ಲ.
11. ಉಜ್ವಲ-ನೀಲಾಂಬರಿ- ಕಿರಣ
ಶ್ರೀಲ ರೂಪಗೋಸ್ವಾಮಿಯವರ 1,453 ಶ್ಲೋಕಗಳ ಕೃತಿಯ ಸಂಕ್ಷಿಪ್ತ ಸಾರವಾಗಿ ರಚಿಸಲ್ಪಟ್ಟ 16 ಸಂಸ್ಕೃತ ಗದ್ಯ. ಇದು ದೈವೀ ದಂಪತಿಗಳ ಸಂಬಂಧವು ಇತರರೊಂದಿಗೆ ಹಾಗೂ ತಮ್ಮ ಸಖಿಯರೊಂದಿಗೆ ಹೇಗಿದೆಯೆಂದು ಮನಸ್ಸನ್ನು ಪರಿಶೀಲಿಸುವಂತಹದ್ದು.
12. ಭಕ್ತಿರಸಾಮೃತ ಸಿಂಧು-ಬಿಂದು
ಭಕ್ತಿ ಸೇವೆಯ ಪ್ರಕ್ರಿಯೆಯ ಸಾರವಿರುವ ಶ್ರೀಲ ರೂಪ ಗೋಸ್ವಾಮಿಯವರ ಭಕ್ತಿ ರಸಾಮೃತ ಸಿಂಧುವಿನ ಸಾರಾಂಶವಾಗಿ ರಚಿತವಾದ ಸಂಸ್ಕೃತದ 27 ಲೇಖನಗಳು.
13. ಭಾಗವತಾಮೃತ ಕಣ
ಕೃಷ್ಣನ ಹಲವಾರು ಅವತಾರಗಳು ಮತ್ತು ಸ್ವಾಂಶಗಳನ್ನು ವರ್ಣಿಸುವ ಶ್ರೀರೂಪರವರ ಪುಸ್ತಕದಲ್ಲಿ ಮಂಡಿಸಿರುವ ಮಾಹಿತಿಯನ್ನು ಸಂಗ್ರಹ ಮಾಡಿರುವ 15 ಸಂಸ್ಕೃತ ಲೇಖನಗಳು.
14. ಗೌರ-ಗಣ-ಸ್ವರೂಪ ತತ್ತ್ವ ಚಂದ್ರಿಕೆ
ಗೌರ-ಘನೋದ್ದೇಶ ದೀಪಿಕಾ ಎಂದು ಕರೆಯಲ್ಪಡುವ ಶ್ರೀ ಕವಿ ಕರ್ಣಾಪುರದ ಹಿಂದಿನ ಕೃತಿಯನ್ನು ಅನುಸರಿಸುವ ಒಂದು ಗ್ರಂಥ. ಇದು ಗೌಡಿಯ ಸಂಪ್ರದಾಯದ ಹಲವಾರು ವಂಶಜರ ವ್ರಜ ಲೀಲೆ ಗುರುತನ್ನು ವ್ಯಕ್ತಪಡಿಸುವುದು. ಆದರೆ ಕವಿ ಕರ್ಣಾಪುರರ ಕಾಲದ ನಂತರ ಸಂಪ್ರದಾಯದಲ್ಲಿ ಆವಿರ್ಭಾವ ಹೊಂದಿದ ಹಲವಾರು ಮಹಾನುಭಾವರನ್ನು ಇದು ಒಳಗೊಂಡಿದೆ.
15. ರೂಪ ಚಿಂತಾಮಣಿ
ಪ್ರಭು ಚೈತನ್ಯರು ಹಾಗೂ ಶ್ರೀ ನಿತ್ಯಾನಂದ ಮತ್ತು ಶ್ರೀ ಆದ್ವೈತರ ಹಸ್ತ ಮತ್ತು ಪಾದಗಳಲ್ಲಿ ಕಾಣಿಸಿದ ಪವಿತ್ರ ಚಿಹ್ನೆಗಳ ನಿಖರ ಸ್ಥಳವನ್ನು ವರ್ಣಿಸುವ ಸಂಸ್ಕೃತ ಮಂತ್ರಗಳು. ವಿಶ್ವನಾಥರು ರೂಪ ಚಿಂತಾಮಣಿಯೆಂಬ ಇನ್ನೊಂದು ಕೃತಿಯನ್ನು ರಚಿಸಿದರು. ಇಲ್ಲಿ ಶ್ರೀ ಶ್ರೀ ರಾಧಾಕೃಷ್ಣನ ಮುಡಿಯಿಂದ ಅಡಿಯವರೆಗಿನ ಸೌಂದರ್ಯ ಹಾಗೂ ಅವರ ಪದ್ಮಪಾದಗಳ ಹಿಮ್ಮಡಿಗಳ ಗುರುತುಗಳನ್ನು ವರ್ಣಿಸುವ ರೂಪ ಚಿಂತಾಮಣಿಯೆಂದೂ ಕರೆಯುವ ಇನ್ನೊಂದು ಕೃತಿಯನ್ನು ವಿಶ್ವನಾಥರು ರಚಿಸಿದರು. ಈ ಕೃತಿಯು ಅವರ ಸ್ತವಾಮೃತ ಲಹರಿಯ ಸಂಗ್ರಹದಲ್ಲಿದೆ.
16. ಕ್ಷನದ – ಗೀತ – ಚಿಂತಾಮಣಿ
ಇದು ಬಂಗಾಳಿ, ಸಂಸ್ಕೃತ ಮತ್ತು ವ್ರಜಭೋಲಿ ಭಾಷೆಗಳಲ್ಲಿ ಗೌಡೀಯ ವೈಷ್ಣವರು ಬರೆದ ಭಕ್ತಿ ಗೀತೆಗಳ ಮೊದಲ ಸಂಕಲನವಾಗಿದೆ.
ವಿಶ್ವನಾಥರು 309 ಹಾಡುಗಳುಳ್ಳ 45 ಲೇಖಕರ ಬರಹಗಳ ಸಂಗ್ರಹ ಮಾಡಿದ್ದಾರೆ. ಇದರಲ್ಲಿ ಹರಿವಲ್ಲಭ ಎಂದು ಅವರು ಸಹಿ ಮಾಡಿರುವ ಅವರ ಕಾವ್ಯನಾಮದ ಹೆಸರಿನಲ್ಲಿ 51 ಹಾಡುಗಳೂ ಸೇರಿವೆ. ಈ ಹಾಡುಗಳನ್ನು ತಿಂಗಳ ಪ್ರತಿರಾತ್ರಿ ಹಾಡಬೇಕಾದ ಹಾಡುಗಳ ಗುಂಪುಗಳಾಗಿ ವಿಂಗಡಿಸಲಾಗಿದೆ. ಹೀಗಾಗಿ ಇದರಲ್ಲಿ 30 ವಿಭಾಗಗಳಿವೆ. ಹುಣ್ಣಿಮೆಯ ಪಾಕ್ಷಿಕದಲ್ಲಿ 15 ಮತ್ತು ಅಮವಾಸ್ಯೆಯ ಪಾಕ್ಷಿಕದಲ್ಲಿ 15.
17. ಮಂತ್ರಾರ್ಥ ದೀಪಿಕಾ
ಕಾಮ ಬೀಜ ಮತ್ತು ಕಾಮ ಗಾಯತ್ರಿ ಮಂತ್ರಗಳ ಪ್ರತಿ ಅಕ್ಷರದ ದೀರ್ಘ ವಿವರಣೆಯನ್ನು ನೀಡುವ (ಗದ್ಯ ಹಾಗೂ ಶ್ಲೋಕಗಳ) 18 ಸಂಸ್ಕೃತ ಲೇಖನಗಳು.
ಇಲ್ಲಿ ಮಂತ್ರಗಳ ಅಕ್ಷರಗಳ ಬಗ್ಗೆ ವಿಶ್ವನಾಥರಿಗೆ ಸಂಶಯವಿತ್ತೆಂಬ ಹಾಗೂ ಅದನ್ನು ಹೇಗೆ ಶ್ರೀರಾಧಿಕೆಯೇ ಅವರ ಸ್ವಪ್ನದಲ್ಲಿ ಬಂದು ಸಮಸ್ಯೆಯನ್ನು ಪರಿಹರಿಸಿದಳೆಂದೂ ವರ್ಣನೆಯಿದೆ.
18. ಸ್ತವಾಮೃತ ಲಹರಿ
ಇದು 28 ಸಂಸ್ಕೃತ ಸ್ತೋತ್ರಗಳು, ಅಕ್ಷರಗಳು, ಧ್ಯಾನಗಳು ಮತ್ತು ಸ್ತುತಿಗಳ ಒಂದು ಸಂಗ್ರಹ.
ವ್ಯಾಖ್ಯೆಗಳು:
- ಸಾರಾರ್ಥ ದರ್ಶಿನಿ – ಶ್ರೀಮದ್ ಭಾಗವತವನ್ನು ಕುರಿತು
- ಸಾರಾರ್ಥ ದರ್ಶಿನಿ – ಭಗವದ್ಗೀತೆಯನ್ನು ಕುರಿತು
- ಭಕ್ತಿ – ಸಾರ ಪ್ರದರ್ಶಿನಿ – ಶ್ರೀರೂಪರ ಭಕ್ತಿ ರಸಾಮೃತ ಸಿಂಧುವನ್ನುಕುರಿತು
- ಆನಂದ ಚಂದ್ರಿಕ – ಶ್ರೀರೂಪರ ಉಜ್ವಲವನ್ನು ಕುರಿತು
- ಶ್ರೀ ರೂಪರ ಲಲಿತ – ಮಾಧವ – ನಾಟಕ
- ಶ್ರೀ ರೂಪರ ವಿದಗ್ಧ ಮಾಧವ – ನಾಟಕ
- ಮಹತಿ ಶ್ರೀರೂಪರ ದಾನ ಕೇಳಿ ಕೌಮುದಿ ಕುರಿತು
- ಶ್ರೀ ರೂಪರ ಹಂಸದೂತವನ್ನು ಕುರಿತು
- ಸುಭೇದಿನಿ – ಕವಿಕರ್ಣಾಪುರದ ಅಲಂಕಾರ ಕೌಸ್ತುಭವನ್ನು ಕುರಿತು
- ಸುಖ ವರ್ತಿನಿ ರವಿಕರ್ಣಾಪುರದ ಆನಂದ – ಬೃಂದಾವನ ಚಂಪೂ
- ಕೃಷ್ಣದಾಸ ಕವಿರಾಜರ ಶ್ರೀಚೈತನ್ಯ ಚರಿತಾಮೃತವನ್ನು ಕುರಿತು (ಅಪೂರ್ಣವೆಂದು ಹೇಳಲಾಗಿದೆ)
- ನರೋತ್ತಮ ದಾಸ ಠಾಕುರರ ಪ್ರೇಮ ಭಕ್ತಿ ಚಂದ್ರಿಕಾ ಕುರಿತು
- ಶ್ರೀ ಬ್ರಹ್ಮ ಸಂಹಿತೆಯನ್ನು ಕುರಿತು
- ಭಕ್ತ – ಹರ್ಷಿಣಿ – ಗೋಪಾಲ ತಾಪನಿ – ಉಪನಿಷತ್ ಕುರಿತು






Leave a Reply