ವಸಂತ ಪಂಚಮಿ

ವಸಂತಮಾಸದ ಐದನೆಯ ದಿನದಂದು ಆಚರಿಸುವ ಉತ್ಸವವೇ ವಸಂತ ಪಂಚಮಿ. ವ್ರಜಭೂಮಿಯಲ್ಲಿ ವಸಂತಾಗಮನವನ್ನು ಸ್ವಾಗತಿಸಿ ಸಂಭ್ರಮಿಸುತ್ತಿದ್ದ ಸ್ಮರಣೆಯಲ್ಲಿ ಈ ಉತ್ಸವವನ್ನು ಆಚರಿಸಲಾಗುತ್ತದೆ.

ವಸಂತ ಋತು, ನಿಸರ್ಗವನ್ನು ರಮಣೀಯವಾಗಿ ಕಂಗೊಳಿಸುವಂತೆ ಮಾಡುತ್ತದೆ. ಚಿಗುರು ಹೊತ್ತು ನಳನಳಿಸುವ ತರುಲತೆಗಳು, ಹೂವು, ಹೂತು, ಕಾಯಾಗಿ ಹಣ್ಣು ಮಾಗುತ್ತಿರುವ ವೃಕ್ಷ ಸಂಪತ್ತು, ಬಗೆಬಗೆಯ ಸುಗಂಧ ಹೊತ್ತು ನಿಂತ ಪರಿಸರ… ಇವೆಲ್ಲವೂ ಶ್ರೀ ಕೃಷ್ಣನನ್ನು ಮರುಳುಗೊಳಿಸುತ್ತಿದ್ದವು.

ಈ ಎಲ್ಲ ಸೃಷ್ಟಿಯ ಒಡೆಯನೂ, ಕರ್ತೃವೂ, ಪರಮ ಭೋಕ್ತೃವೂ ಅವನೇ ಆಗಿದ್ದರೂ ಲೀಲೆಗಾಗಿ ಶ್ರೀಕೃಷ್ಣನು ಅದರ ಸವಿಯನ್ನು ಅನುಭವಿಸುತ್ತ, ಮೆಚ್ಚುಗೆ ಸೂಸುತ್ತ ವ್ರಜವಾಸಿಗಳ ಹೃದಯದಲ್ಲಿ ಆನಂದ ತರಂಗಗಳನ್ನೆಬ್ಬಿಸುತ್ತಿದ್ದನು. ಕೃಷ್ಣನ ಈ ಲೀಲೆಯನ್ನು ಅವಿಸ್ಮರಣೀಯವಾಗಿರಿಸುವುದೇ ವಸಂತ ಪಂಚಮಿ ಆಚರಣೆಯ ಹಿಂದಿನ ಉದ್ದೇಶ.

ವಸಂತ ಪಂಚಮಿಯಂದು ಸರಸ್ವತಿ ಪೂಜೆಯನ್ನು ಮಾಡುವುದೊಂದು ವಿಶೇಷ. ಉತ್ತರ ಭಾರತದಲ್ಲಿ ಈ ಉತ್ಸವದ ಆಚರಣೆ ಹೆಚ್ಚು ಪ್ರಚಲಿತದಲ್ಲಿದೆ. ಈ ದಿನದಂದು ಭಕ್ತರು ಹಳದಿ ವಸ್ತ್ರಧರಿಸಿ ಸರಸ್ವತಿ ಪೂಜೆ ಮಾಡಿ, ಸಿಹಿ ಹಂಚಿ ತಿನ್ನುವುದು ಪದ್ಧತಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi