– ವಿ.ಸಿ.ಅನಂತಪದ್ಮನಾಭ ಶೆಟ್ಟಿ
ತ್ರೇತಾಯುಗದಲ್ಲಿ ಯಜ್ಞವು ಹೋಮದ ಮೂಲಕ ಆಚರಿಸಲ್ಪಡುತ್ತಿತ್ತು. ಸುಭಿಕ್ಷವಾಗಿತ್ತು. ಶಾಸ್ತ್ರ, ಭಾಗವತ, ಪುರಾಣ ಗ್ರಂಥಗಳಲ್ಲಿ “ಕಲಿಯುಗದಲ್ಲಿ ಭಗವಂತನ ಪವಿತ್ರ ನಾಮಜಪವೇ ಯಜ್ಞ ಎಂದು ಹೇಳುತ್ತಿವೆ. ಅಂತೆಯೇ ಅತ್ಯಂತ ಶುಭದಾಯಕ, ತಾರಕ ನಾಮ, “ರಾಮ” ನಾಮ, “ಕೃಷ್ಣ” ನಾಮ.
ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ |
ಹರೇರಾಮ ಹರೇರಾಮ ರಾಮರಾಮ ಹರೇಹರೇ ||

ಈ ನಾಮ ಜಪಯಜ್ಞವು ದೇಶದ ಮೂಲೆ ಮೂಲೆಯಲ್ಲಿ ಮನೆ ಮನೆಯಲ್ಲಿ, 108 ಕೋಟಿ ಜನತೆಯು, ಒಂದು ನಿರ್ದಿಷ್ಟ ಸಮಯದಲ್ಲಿ ಪ್ರಾತಃ, ಹಾಗೂ ಸಂಜೆ, 108 ಬಾರಿ ಜಪಿಸಿದರೆ, ಯಜ್ಞ, ಜಪಯಜ್ಞ ಇದಾಗುತ್ತದೆ. ಆಗ ನೋಡಬೇಕು ಅದರ ಸೊಬಗು. ಈ ರೀತಿಯ ಒಂದು ಆಂದೋಲನ, ನಡೆಸಿದರೆ ಎಷ್ಟು ಸುಂದರವಾಗಿರುತ್ತದೆ.
ಗ್ಲೋಬಲ್ ವಾರ್ಮ್ ನ ದಿನಗಳ ಕೌಂಟ್‌ಡೌನ್ ಶುರುವಾಗಿದೆ. ಅದನ್ನು ತಡೆಯಲು ಪತ್ರಿಕೆಗಳಲ್ಲಿ ಹಸಿರು ಕ್ರಾಂತಿಯನ್ನು ಸೂಚಿಸಿದ್ದಾರೆ.
“ಮನೆಗೊಂದು ಮರ, ಹಳ್ಳಿಗೊಂದು ವನ” ತಯಾರು ಮಾಡಬೇಕಾಗಿದೆ. ಹೀಗೆ ಮಾಡುವುದರಿಂದ ಭೂಮಾತೆ ತಂಪಾಗಿ, ಆಯುಷ್ಯವಂತಳಾಗಿ ನಮ್ಮನ್ನು ಸಲಹುವಳು.
ಅದೇ ಸಮಯದಲ್ಲಿ ಭಯೋತ್ಪಾದಕತೆಯೂ ಕಡಮೆಯಾಗಿ ಶಾಂತಿ, ಪ್ರೀತಿ, ಭಕ್ತಿಯ ಕಡೆ ಸಾಗುತ್ತದೆ. ಅದಕ್ಕೆ ಇಸ್ಕಾನ್ ಆಂದೋಲನ ಸಾಕಷ್ಟು ಶ್ರಮಿಸುತ್ತಿದೆ.
ಈ ಆಂದೋಲನವನ್ನು ಟಿ.ವಿ.ಗಳಲ್ಲಿ ಎಲ್ಲ ಸಣ್ಣ ಪುಟ್ಟ, ದೊಡ್ಡದೇಶದ ಎಲ್ಲ ಭಾಷೆಗಳ ಪತ್ರಿಕೆಗಳಲ್ಲಿ ಪ್ರಚಾರ ಮಾಡಿ ಪ್ರಯತ್ನಿಸಿದರೆ, ಹೇಗೆ?
ನಮಸ್ಕಾರಗಳು.






Leave a Reply