ರಚನೆ : ಶ್ರೀಲ ಸಾರ್ವಭೌಮ ಭಟ್ಟಾಚಾರ್ಯ
ವಿವಿಧ ಮೂಲಗಳಿಂದ ಸಂಗ್ರಹಾನುವಾದ: ಸುರೇಶ್ ಪಿ. ಸುವರ್ಣ, ಶಿರ್ವ, ವರ್ಲಿ, ಮುಂಬಯಿ
ನವ ಗೌರವಂ ನವಪುಷ್ಪ-ಶರಮ್
ನವ ಭಾವ – ಧರಮ್ ನವಲಾಸ್ಯ-ಪರಮ್
ನವ ಹಾಸ್ಯ – ಶರಂ ನವಹೇಮ – ವರಮ್
ಪ್ರಣಮಾಮಿ ಶಚೀಸುತ – ಗೌರವರಮ್ ||1||

ನವ ಪ್ರೇಮ- ಯುತಂ ನವನೀತ- ಶುಚಮ್
ನವ ವೇಷ – ಕೃತಂ ನವಪ್ರೇಮ – ರಸಮ್
ನವಧಾ ವಿಲಾಸತ್ ಶುಭಪ್ರೇಮ- ಮಯಮ್
ಪ್ರಣಮಾಮಿ ಶಚೀಸುತ – ಗೌರವರಮ್ ||2||
ಹರಿಭಕ್ತಿ ಪರಂ ಹರಿನಾಮ ಧರಮ್
ಕರ- ಜಾಪ್ಯ- ಕರಂ ಹರಿನಾಮ- ಪರಮ್ |
ನಯನೇ ಸತತಂ ಪ್ರಣಯಾಶ್ರು – ಧರಮ್
ಪ್ರಣಮಾಮಿ ಶಚೀಸುತ – ಗೌರವರಮ್ ||3||
ಸತತಂ ಜನತಾ – ಭವ – ತಾಪ – ಹರಮ್
ಪರಮಾರ್ಥ – ಪರಾಯಣ – ಲೋಕ ಗತಿಮ್ |
ನವ-ಲೇಹ- ಕರಂ ಜಗತ್ – ತಾಪ ಹರಮ್
ಪ್ರಣಮಾಮಿ ಶಚೀಸುತ – ಗೌರವರಮ್ ||4||
ನಿಜ- ಭಕ್ತಿ-ಕರಂ ಪ್ರಿಯ ಚಾರುತರಮ್
ನಟ- ನರ್ತನ- ನಾಗರ- ರಾಜ ಕುಲಮ್ |
ಕುಲ ಕಾಮಿನಿ – ಮಾನಸ – ಲಾಸ್ಯ – ಕರಮ್
ಪ್ರಣಮಾಮಿ ಶಚೀಸುತ – ಗೌರವರಮ್ ||5||
ಕರತಾಲ-ವಲಂಕಲ- ಕಂಠ- ರವಮ್
ಮೃದು-ವಾದ್ಯ-ಸುವೀಣೆಕಯಾ ಮಧುರಮ್ |
ನಿಜ-ಭಕ್ತಿ-ಗುಣಾವೃತ-ನಾಟ್ಯ-ಕರಮ್
ಪ್ರಣಮಾಮಿ ಶಚೀಸುತ – ಗೌರವರಮ್ ||6||
ಯುಗಧರ್ಮ- ಯುತಂ ಪುನರ್ನ೦ದ ಸುತಮ್
ಧರಣಿ – ಸುಚಿತ್ರಂ ಭವ – ಭಾವೋಚಿತಮ್ |
ತನು – ಧ್ಯಾನ – ಚಿತಂ ನಿಜ – ವಾಸ – ಯುತಮ್
ಪ್ರಣಮಾಮಿ ಶಚೀಸುತ – ಗೌರವರಮ್ ||7||
ಅರುಣಂ ನಯನಂ ಚರಣಂ ವಸನಮ್
ವದನೇಸ್ಖಲಿತಂ ಸ್ವಕ್ – ನಾಮ – ಧರಮ್
ಕುರುತೇ ಸು- ರಸಂ ಜಗತಃ ಜೀವನಮ್
ಪ್ರಣಮಾಮಿ ಶಚೀಸುತ – ಗೌರವರಮ್ ||8||
ಭಾವಾರ್ಥ :
1. ಅವರ ವರ್ಣ ಕುಂಕುಮ ಮಿಶ್ರಿತ ಈಗ ತಾನೆ ಕಡೆದ ನವನೀತದಂತಿದೆ. ಅವರು ಮೊಗ್ಗೂಡೆದು ಅರಳುತ್ತಿರುವ ಹೂವಿನ ಬಾಣ ಹೊಡೆಯುವ ಕಂದರ್ಪರಾಗಿದ್ದಾರೆ. ಅವರು ನಿತ್ಯ ನವೀನ ಭಾವ ಧಾರಣೆ ಮಾಡುತ್ತಾರೆ. ನಿರಂತರ ಅದ್ಭುತ, ಅಲೌಕಿಕ ನೃತ್ಯ ಮಾಡಲು ಅವರಿಗೆ ಆಸಕ್ತಿ. ನಿತ್ಯ ಹೊಸ ಹೊಸ ವಿನೋದದ ಮುಖಾಂತರ ಅವರು ಎಲ್ಲರನ್ನೂ ಆನಂದದಿಂದ ನಗಿಸುತ್ತಾರೆ. ಅವರ ತೇಜಸ್ವಿ ಕಾಂತಿಯು ಕರಗಿದ ಬಂಗಾರದಂತಿದೆ. ಅಂತಹ ಶಚೀಸುತ ಗೌರವರ್ಣದ ಶ್ರೀ ಗೌರಾಂಗ ಮಹಾ ಪ್ರಭುವಿನ ಚರಣಕ್ಕೆ ನಾನು ವಂದಿಸುತ್ತೇನೆ.
2. ನಿತ್ಯ ನೂತನ ಭಗವತ್ಪ್ರೇಮದಿಂದ ಅವರು ನಿರಂತರ ಯುಕ್ತವಾಗಿರುತ್ತಾರೆ. ಅವರ ತೇಜಸ್ವಿ ಕಾಂತಿ ನವನವೀನ ಬೆಣ್ಣೆಯಂತಿದೆ. ಅವರು ನಿತ್ಯ ನವೀನ ಪದ್ಧತಿಯ ವೇಷಭೂಷಣ ಮಾಡುತ್ತಾರೆ. ಕೃಷ್ಣ ಪ್ರೇಮದ ನಿತ್ಯ ಹೊಸ ಹೊಸ ರಸದ ಆಸ್ವಾದನೆಯನ್ನು ಅವರು ಮಾಡುತ್ತಾರೆ. ನವ ವಿಧ ಭಕ್ತಿಯಿಂದ ಅವರು ಬಗೆ ಬಗೆಯ ಒಂಬತ್ತು ಪ್ರಕಾರಗಳಲ್ಲಿ ವಿಲಾಸಿತರಾಗಿ ಇರುತ್ತಾರೆ. ಶುಭ ಪ್ರೇಮದ ಸ್ವಭಾವದಲ್ಲಿ ಅವರು ನಿರಂತರ ಪ್ರಭಾವಿತರಾಗಿರುತ್ತಾರೆ. ಅಂತಹ ಶಚೀಸುತ ಗೌರವರ್ಣದ ಶ್ರೀ ಗೌರಾಂಗ ಮಹಾಪ್ರಭುವಿನ ಚರಣಕ್ಕೆ ನಾನು ವಂದಿಸುತ್ತೇನೆ.
3. ಶ್ರೀ ಹರಿಯ ಭಕ್ತಿಯಲ್ಲಿ ಅವರು ತಲ್ಲೀನರಾಗಿರುತ್ತಾರೆ. ಶ್ರೀಹರಿಯ ಪವಿತ್ರ ನಾಮ ಅವರು ತಮ್ಮ ತುಟಿಗಳಲ್ಲಿ ಧಾರಣೆ ಮಾಡಿದ್ದಾರೆ. ಜಪ ಮಾಡುತ್ತಾ ಅವರು ಬೆರಳುಗಳಲ್ಲಿ ಸಂಖ್ಯಾಪೂರ್ವಕ ನಾಮ ಜಪಿಸುತ್ತಾರೆ. ಶ್ರೀ ಹರಿಯ ನಾಮದಲ್ಲಿ ಅವರು ತೀವ್ರ ಆಸಕ್ತರಾಗಿದ್ದಾರೆ. ಅವರ ನೇತ್ರಗಳಲ್ಲಿ ಸತತ ಪ್ರಣಯಾಶ್ರುವಿನ ಧಾರೆಯು ಹರಿಯುತ್ತಿರುತ್ತದೆ. ಅಂತಹ ಶಚೀಸುತ ಗೌರವರ್ಣದ ಶ್ರೀ ಗೌರಾಂಗ ಮಹಾಪ್ರಭುವಿನ ಚರಣಕ್ಕೆ ನಾನು ವಂದಿಸುತ್ತೇನೆ.
4. ಭೌತಿಕ ಅಸ್ತಿತ್ವದಲ್ಲಿ ಜೀವಿಸುತ್ತಿರುವ ಎಲ್ಲರ ದುಃಖವನ್ನು ಅವರು ಹರಣ (ನಾಶ) ಮಾಡುತ್ತಾರೆ. ಪಾರಮಾರ್ಥಕ್ಕಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಜನರಿಗೆ ಅವರೇ ಅಂತಿಮ ಧ್ಯೇಯವಾಗಿದ್ದಾರೆ. ಜೇನುನೊಣ ಹೇಗೆ ಮಧುವಿಗಾಗಿ ಆತುರವಾಗಿರುತ್ತದೆಯೋ ಹಾಗೆ ಅವರು ಕೃಷ್ಣಪ್ರೇಮದ ಮಧುವಿಗಾಗಿ ಆತುರರಾಗಲು ಎಲ್ಲರನ್ನೂ ಹುರಿದುಂಬಿಸುತ್ತಿದ್ದಾರೆ.

5. ಅವರು ಸರ್ವರನ್ನೂ ನಿಜ ಭಕ್ತಿಗಾಗಿ ಉತ್ತೇಜಿಸುತ್ತಿದ್ದಾರೆ. ಅವಳ ಪ್ರಿಯ ಸೇವಕರಿಗೆ ಅವರು ಅತಿಶಯ ಆಕರ್ಷಣೆಯಾಗಿದ್ದಾರೆ. ನಾಟ್ಯಮಯ ನೃತ್ಯದಿಂದ ಅವರು ನಾಗರಾಜನ ಗುಣ ಪ್ರದರ್ಶನ ಮಾಡುತ್ತಾರೆ. ಅವರನ್ನು ನೋಡಿದ ಊರಿನ ಎಲ್ಲಾ ಸುಂದರ ಯುವತಿಯರ ಮನಸ್ಸು ನೃತ್ಯ ಮಾಡಲಾರಂಭಿಸುತ್ತದೆ. ಅಂತಹ ಶಚೀಸುತ ಗೌರವರ್ಣದ ಶ್ರೀ ಗೌರಾಂಗ ಮಹಾಪ್ರಭುವಿನ ಚರಣಕ್ಕೆ ನಾನು ವಂದಿಸುತ್ತೇನೆ.
6. ಸುಮಧುರ ಸ್ವರದಿಂದ ಗಾಯನ ಮಾಡುತ್ತಾ ಅವರು ಇಂಪಾಗಿ ಕರತಾಲ ನುಡಿಸುತ್ತಾರೆ ಮತ್ತು ಆ ವೇಳೆ ಮೃದುವಾಗಿ ವೀಣೆ ನುಡಿಸಲಾಗುತ್ತದೆ. ನಿಜಭಕ್ತಿಗುಣದಿಂದ ಆವೃತವಾಗಿರುವ ನಾಟ್ಯಮಯ ನೃತ್ಯ ಮಾಡುವ ಸಲುವಾಗಿ ಅವರು ಎಲ್ಲರನ್ನೂ ಪ್ರೋತ್ಸಾಹಿಸುತ್ತಾರೆ. ಅಂತಹ ಶಚೀಸುತ ಗೌರವರ್ಣದ ಶ್ರೀ ಗೌರಾಂಗ ಮಹಾಪ್ರಭುವಿನ ಚರಣಕ್ಕೆ ನಾನು ವಂದಿಸುತ್ತೇನೆ.
7. ಕಲಿಯುಗದ ಯುಗಧರ್ಮವಾಗಿರುವ ಹರಿನಾಮ ಸಂಕೀರ್ತನ ಆಂದೋಲನವನ್ನು ಅವರು ಸ್ವತಃ ಜೊತೆಗೆ ತಂದವರಾಗಿದ್ದಾರೆ. ನಂದ ಮಹಾರಾಜರ ಸುಪುತ್ರ ಶ್ರೀಕೃಷ್ಣನ ಪುನಃ ಅವತಾರವಾಗಿದೆ. ಅವರು ಈ ಧರಣಿಯಲ್ಲಿ ಅತಿಶಯ ತೇಜಸ್ವಿಯಂತೆ ಅಲಂಕಾರವಾಗಿದ್ದಾರೆ.
ಅವರು ಅಂಗೀಕೃತ ಮಾಡಿರುವ ಪ್ರಚಾರದ ಭಾವನೆ ಜನ್ಮ ಮೃತ್ಯುವಿನ ಚಕ್ರಕ್ಕೆ ತುಂಬಾ ಸೂಕ್ತ ಔಷಧಿ ಆಗಿದೆ. ತನ್ನದೆ ಶ್ರೀ ಕೃಷ್ಣನ ರೂಪದಲ್ಲಿ ಅವರ ಚೇತನ ನಿರಂತರ ಧ್ಯಾನಸ್ಥವಾಗಿರುತ್ತದೆ. ಅವರ ಸ್ವಧಾಮ ಅವರು ಅವರೊಂದಿಗೆ ತಂದವರಾಗಿದ್ದಾರೆ. ಅಂತಹ ತಚೀಸುತ ಗೌರವರ್ಣದ ಶ್ರೀ ಗೌರಾಂಗ ಮಹಾಪ್ರಭುವಿನ ಚರಣಕ್ಕೆ ನಾನು ವಂದಿಸುತ್ತೇನೆ.
8. ಅವರ ನೇತ್ರ, ಚರಣ ಮತ್ತು ವಸ್ತ್ರವು ಅರುಣೋದಯದ ಸೂರ್ಯನ ಸುಂದರ ವರ್ಣಮಯ ದೃಶ್ಯವೇ ನಾಚುವಂತಿದೆ. ತನ್ನದೇ ನಾಮ ನುಡಿಯುವಾಗ ಅವರ ಶಬ್ದ ಸ್ಖಲಿತವಾಗುತ್ತದೆ. ಸಂಪೂರ್ಣ ವಿಶ್ವದ ಜೀವಿಗಳಲ್ಲಿ ಅವರು ಮಧುರರಸ ಜಾಗ್ರತೆ ಮಾಡುತ್ತಾರೆ. ಅಂತಹ ಶಚೀಸುತ ಗೌರವರ್ಣದ ಶ್ರೀ ಗೌರಾಂಗ ಮಹಾಪ್ರಭುವಿನ ಚರಣಕ್ಕೆ ನಾನು ವಂದಿಸುತ್ತೇನೆ.
ಶ್ರೀ ಶಚೀಸುತಾಷ್ಟಕಮ್ ಕೀ ಜಯ್






Leave a Reply