ಆಕರ : ಜಯಾದ್ವೈತ ದಾಸರ ಟಿಪ್ಪಣಿಗಳು: ವೃಂದಾವನದಲ್ಲಿ ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮಾಡಿದ ಬ್ಯಾಂಕ್ ಉದ್ಘಾಟನಾ ಭಾಷಣ.
ಒಮ್ಮೆ ಒಬ್ಬ ವ್ಯಕ್ತಿ ಬ್ಯಾಂಕ್‌ಗೆ ಹೋದ. “ಹಣ-ಹಣವನ್ನು ಸೆಳೆಯುತ್ತದೆ” ಎಂದು ಯಾರೋ ಹೇಳುತ್ತಿದ್ದುದನ್ನು ಆತ ಕೇಳಿದ್ದ. ಅದನ್ನು ಪರೀಕ್ಷಿಸಲೆಂದೇ ಆತ ಅಲ್ಲಿಗೆ ಹೋದದ್ದು.
ಆ ಮನುಷ್ಯ ಸೀದಾ ಹಣ ಎಣಿಸುತ್ತಿದ್ದ ಗುಮಾಸ್ತನ ಬಳಿ ಹೋಗಿ ನಿಂತ, ಅಲ್ಲಿ ಅವನ ಮೇಜಿನ ಮೇಲೆ ಇದ್ದ ಹಣದ ಕಟ್ಟಿನ ಮೇಲೆ ತನ್ನ ಹಣವನ್ನು ಇಟ್ಟು ಕಾಯುತ್ತನಿಂತ.

ಆತ ಅಲ್ಲಿ ಹಾಗೆ ಅಚಲವಾಗಿ ನಿಂತಿದ್ದನ್ನು ನೋಡಿದ ಗುಮಾಸ್ತ “ನೀವಿಲ್ಲಿ ಏನು ಮಾಡುತ್ತಿದ್ದೀರಿ?” ಎಂದು ಕೇಳಿದ. ಅದಕ್ಕೆ ಆ ವ್ಯಕ್ತಿ, ಹಣ – ಹಣವನ್ನು ಸೆಳೆಯುತ್ತದೆಯೋ ಎಂದು ನೋಡುತ್ತಿದ್ದೇನೆ. ಈಗ ನಾನು ನನ್ನದನ್ನು ಆ ಕಟ್ಟಿನ ಮೇಲೆ ಇಟ್ಟಿದ್ದೇನೆ, ಇಡಿಯ ಹಣದ ಕಟ್ಟು ನನ್ನೆಡೆಗೆ ಬರುವುದನ್ನು ಕಾಯುತ್ತಿದ್ದೇನೆ” ಎಂದ.
ಆಗ ಗುಮಾಸ್ತ ನಗುತ್ತಾ, “ಸರಿ, ಖಂಡಿತವಾಗಿಯೂ ಹಣ-ಹಣವನ್ನು ಸೆಳೆಯುತ್ತದೆ. ಇದೀಗ ನಿಮ್ಮ ಹಣವನ್ನು ನನ್ನ ಹಣ ಸೆಳೆದುಬಿಟ್ಟಿದೆ” ಎಂದ!






Leave a Reply