ರಾಧಾರಾಣಿಯ ದಿವ್ಯನಾಮಗಳು

ಆಧಾರ: ನಾರದ ಪಂಚರಾತ್ರ 5ನೇ ಅಧ್ಯಾಯ

ಶ್ರೀಲ ಭಕ್ತಿವಿನೋದ ಠಾಕುರರ ಅನುವಾದ

ಪಾರ್ವತಿದೇವಿಯ ಕೋರಿಕೆಯ ಮೇರೆಗೆ ಪರಮ ವೈಷ್ಣವನಾದ ಶಿವನು ರಾಧಾ ಸಹಸ್ರನಾಮಗಳನ್ನು ಬೋಧಿಸುತ್ತಾನೆ. ಈ ಸನ್ನಿವೇಶವು ನಾರದ ಪಂಚರಾತ್ರದಲ್ಲಿ 5ನೇ ಅಧ್ಯಾಯದಲ್ಲಿ ಚಿತ್ರಿತವಾಗಿದೆ. ರಾಧಾರಾಣಿಯ ಸುಂದರ, ದಿವ್ಯ, ಮೋಹಕವಾದ ಸಾವಿರ ಹೆಸರುಗಳಲ್ಲಿ ಕೆಲವನ್ನಷ್ಟೆ ಆಯ್ದು ಅರ್ಥ ಸಹಿತವಾಗಿ ಇಲ್ಲಿ ನೀಡುತ್ತಿದ್ದೇವೆ.

ರಾಧಾ: ಶ್ರೇಷ್ಠ ಆರಾಧಕಿ

ಕೃಷ್ಣವಲ್ಲಭಾ: ಕೃಷ್ಣನಿಗೆ ಪ್ರಿಯಳಾದವಳು

ವೃಂದಾನವೇಶ್ವರೀ: ವೃಂದಾವನದ ಅರಸಿ

ಯಶಸ್ವಿನೀ: ಪ್ರಖ್ಯಾತಳಾದವಳು

ಗೋಪಿಕಾ: ಗೋಪಾಲಕ ಕನ್ಯೆ

ತ್ರೈಲೋಕ್ಯ ಸುಂದರೀ: ಮೂರು ಲೋಕಗಳಲ್ಲಿ ಅತ್ಯಂತ ಸುಂದರಿಯಾಗಿರುವವಳು

ವಿಷ್ಣುಪ್ರಿಯಾ: ವಿಷ್ಣುವಿಗೆ ಪ್ರಿಯಳಾದವಳು

ಗತಿಪ್ರದಾ: ಜಯವನ್ನು ಗಳಿಸಿಕೊಡುವವಳು

ಗೀತಗಮ್ಯಾ: ಪವಿತ್ರನಾಮ ಪಠಣದಿಂದ ಪಡೆಯಬಹುದಾದವಳು

ಜಯಪ್ರದಾ: ಜಯವನ್ನು ಗಳಿಸಿಕೊಡುವವಳು

ವೃಷಭಾನು ಸುತಾ: ವೃಷಭಾನುವಿನ ಮಗಳು

ಶಿವಾ: ಮಂಗಳಕರಳು

ಗಣಾಧ್ಯಕ್ಷಾ: ಗೋಪೀಗಣದ ಪ್ರಮುಖಳು

ಅಶೋಕಾ: ಶೋಕವಿಲ್ಲದವಳು

ವಿದುತ್ತಮಾ: ತತ್ತ್ವಜ್ಞಾನಿಗಳಲ್ಲಿ ಅತ್ಯುತ್ತಮಳು

ವೇದಾತೀತಾ: ವೇದಗಳಿಗೂ ನಿಲುಕದವಳು

ಅಭೀಷ್ಟದಾ: ಬಯಕೆಗಳನ್ನು ಈಡೇರಿಸುವವಳು

ವೇದಗರ್ಭಾ: ವೇದಗಳ ತಾಯಿ

ನಂದಪ್ರಿಯಾ: ನಂದ ಮಹರಾಜನಿಗೆ ಪ್ರೀತಿಪಾತ್ರಳು

ಶುಭಾಂಗೀ: ಮಂಗಳಕರ ಶರೀರವುಳ್ಳವಳು

ಅಪರಾಜಿತಾ: ಸೋಲಿಲ್ಲದವಳು

ಶೈಲವಾಸಿನೀ: ಗಿರಿಯ ಮೇಲೆ ನೆಲೆಸಿರುವವಳು

ಹೇಮಸುಂದರೀ: ಚಿನ್ನದ ಬಣ್ಣದ ಕಾಂತಿಯ ರೂಪ ಉಳ್ಳವಳು

ಕಿಶೋರಿ: ಚಿರ ಯುವತಿ

ಪಯಸ್ವಿನಿ: ಉಲ್ಲಾಸ ಮೈದುಂಬಿದವಳು

ವಿಮಲಾ: ಪರಿಶುದ್ಧಳು

ನಿರಾಲಂಬಾ: ಮುಕ್ತಳು

ನಿರಾಲೋಕಾ: ಬದ್ಧಾತ್ಮಗಳ ದೃಷ್ಟಿಗೆ ಗೋಚರಿಸದವಳು

ರಸಿಕಾ: ಪಾರಮಾರ್ಥಿಕ ರಸಗಳನ್ನು ಆನಂದಿಸುವವಳು

ನಿತ್ಯಾಂಗೀ: ಶಾಶ್ವತ ಸ್ವರೂಪಳು

ಸ್ವಯಮ್‌ಪ್ರಭಾ: ಕಾಂತಿಯಾದ ಕೂಡಿ ಹೊಳೆಯುತ್ತಿರುವವಳು

ಭಕ್ತಿಪ್ರಿಯಾ: ಶ್ರೀಕೃಷ್ಣನ ಭಕ್ತಿಯನ್ನು ಆಸ್ವಾದಿಸುವವಳು

ನಿರಾಮಯಾ: ರೋಗಗಳಿಂದ ಮುಕ್ತಳು

ಈಶ್ವರೀ: ಪರಮ ನಿಯಂತ್ರಕಿ

ಶುಭಂಕರೀ: ಮಂಗಳವನ್ನು ಹರಸುವವಳು

ಪರಾತ್ಪರಾ: ಮಹತ್ತಿಗಿಂತ ಮಹತ್ವದವಳು

ವೈಷ್ಣವಿ: ವಿಷ್ಣುವಿನ ಸಂಗಾತಿ

ಅಪೂರ್ವಾ: ಅಪರೂಪದವಳು

ವೃಂದಾವನ ವಿಲಾಸಿನೀ: ವೃಂದಾವನದಲ್ಲಿ ಆನಂದಿಸುವವಳು

ಜನನೀ: ತಾಯಿ, ಲೋಕಮಾತೆ

ರಾಸೇಶ್ವರೀ: ರಾಸ ನೃತ್ಯದ ಕೇಂದ್ರಬಿಂದು, ಒಡತಿ

ಪದ್ಮಹಸ್ತಾ: ಕಮಲದಂತಹ ಕೈಗಳುಳ್ಳವಳು

ಕಾಂಚನಾಭಾ: ಬಂಗಾರದಂತೆ ಹೊಳೆಯುವವಳು

ಚಿತ್ರರೂಪಿಣೀ: ಅದ್ಭುತ ರೂಪವುಳ್ಳವಳು

ನಿರುಕುಲಾ: ಖಿನ್ನತೆಯಿಂದ ಮುಕ್ತಳು

ವೇಣುರತಿ: ಕೊಳಲಿನ ನಾದಕ್ಕೆ ಸುಖಿಸುವವಳು

ಸೌಮ್ಯಾ: ಮೃದು ಸ್ವಭಾವದವಳು

ಗೀರ್ವಾಣಾ ವಂದ್ಯಾ: ದೇವಗಣಗಳಿಂದ ನಮಿಸಲ್ಪಡುವವಳು

ಕಾಂತಾರವಾಸಿನೀ: ಅಡವಿಯಲ್ಲಿ ವಾಸಿಸುವವಳು

ಅನುತ್ತರಾ: ಮೀರಿಸಲಾಗದವಳು

ಚಿತ್ರಮಾಲಿನೀ: ಅದ್ಭುತ ಹೂಗಳ ಮಾಲೆ ಧರಿಸಿರುವವಳು

ಲಜ್ಜಾ: ಮಾನವಂತ ಕನ್ಯೆ

ಕೃಷ್ಣಕಾಂತಾ: ಕೃಷ್ಣನಿಗೆ ಅತ್ಯಂತ ಪ್ರಿಯಳಾದವಳು

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi