– ಆಕರ : ತಮಾಲಕೃಷ್ಣದಾಸರ ದಿನಚರಿ
ಒಮ್ಮೆ ಪ್ರಭುಪಾದರು, ಭೌತಿಕ ಸುಖಗಳಲ್ಲೇ ಆನಂದವನ್ನು ಅರಸುತ್ತ, ನಿಜವಾದ ಆನಂದದ ಅನುಭೂತಿಯನ್ನು ಪಡೆಯದೇ ಹೋಗುವ ಮನುಷ್ಯ ಸಹಜ ವರ್ತನೆ ಕುರಿತು ಹೇಳುತ್ತಿದ್ದರು. ಅದನ್ನು ಮನದಟ್ಟು ಮಾಡಿಸಲು ಹೇಳಿದ ಕಥೆ ಇದು –
ಒಬ್ಬ ವ್ಯಕ್ತಿ ತನ್ನ ಸ್ನೇಹಿತನಿಗೆ ಕಬ್ಬಿನ ರುಚಿ ಹೇಗಿರುತ್ತದೆಂದು ಹೇಳುತ್ತಾ “ನೀನು ಅದನ್ನು ಕಚ್ಚಿ ಜಗಿದರೆ, ಅದು ಸಿಹಿಯಾಗಿಯೂ ಮಧುರವಾಗಿಯೂ ಇರುತ್ತದೆ” ಎಂದ.

ಆ ಸ್ನೇಹಿತನಿಗೆ ಕಬ್ಬು ಹೇಗಿರುತ್ತದೆಂದೇ ತಿಳಿದಿರಲಿಲ್ಲ. ಆ ಬಗ್ಗೆ ಕೇಳಿದಾಗ, “ಬೊಂಬಿನ ಹಾಗೆ ಇರುತ್ತದೆಯಷ್ಟೆ’ ಎಂದು ಆ ವ್ಯಕ್ತಿ ಉತ್ತರಿಸಿದ. ಅದನ್ನು ಕೇಳಿದ ಸ್ನೇಹಿತ, ಬೊಂಬಿನ ಹಾಗೆ ಕಾಣುವ ಸಿಕ್ಕ – ಸಿಕ್ಕದ್ದನ್ನೆಲ್ಲ ರುಚಿ ನೋಡಲಾರಂಭಿಸಿದ. ಆದರೆ ಅವನಿಗೆಂದೂ ಕಬ್ಬಿನ ರುಚಿ ನೋಡಲಾಗಲೇ ಇಲ್ಲ!
ಒಮ್ಮೆ ಪ್ರಭುಪಾದರು ಭೌತಿಕ ಸುಖಗಳಲ್ಲೇ ಆನಂದವನ್ನು ಅರಸುತ್ತಾ, ನಿಜವಾದ ಆನಂದದ ಅನುಭೂತಿಯನ್ನು ಪಡೆಯದೇ ಹೋಗುವಾಗ ಮನುಷ್ಯ ಸಹಜ ವರ್ತನೆ ಕುರಿತು ಹೇಳುತ್ತಿದ್ದರು. ಅದನ್ನು ಮನದಟ್ಟು ಮಾಡಿಸಲು ಹೇಳಿದ ಕಥೆ ಇದು.
ನೀತಿ : ಕ್ಷುಲ್ಲಕ ವಿಷಯಗಳಲ್ಲಿನ ಆಸಕ್ತಿಯಿಂದ ನೈಜ ಸುಖವನ್ನು ಕಳೆದುಕೊಳ್ಳುತ್ತೇವೆ.






Leave a Reply