ಚಟ್ನಿಗಳು

ಶ್ರೀ ಕೃಷ್ಣ ಪಾಕಶಾಲೆ

– ಶ್ರೀಮತಿ ಎಂ.ಅಹಲ್ಯ

ತೊಗರಿಬೇಳೆ ಚಟ್ನಿ

ಬೇಕಾಗುವ ಪದಾರ್ಥಗಳು :

ತೂಗರಿಬೇಳೆ – 1/4 ಕೆ.ಜಿ.

ಒಣಕೊಬ್ಬರಿ ತುರಿ – 1 ಕಪ್

ಒಣಮೆಣಸಿನಕಾಯಿ ಬ್ಯಾಡಗಿ – 5

ಗುಂಟೂರು – 5

ಉಪ್ಪು – ರುಚಿಗೆ ತಕ್ಕಷ್ಟು

ಹಸಿಶುಂಠಿ – 1 ಚೂರು

ಇಂಗು – ಸ್ವಲ್ಪ

ಬೆಲ್ಲ – 1 ಚಿಟಿಕೆ

ಕರಿಬೇವು – 1 ಕಪ್

ಹುಣಸೇಹಣ್ಣು – ಗೋಲಿ ಗಾತ್ರದಷ್ಟು

ಮಾಡುವ ವಿಧಾನ: ಎಲ್ಲ ಪದಾರ್ಥಗಳನ್ನು ಬೇರೆ ಬೇರೆಯಾಗಿ ಹುರಿದು ಅನಂತರ ರುಬ್ಬಿ ಇಂಗು ಸಾಸಿವೆಯನ್ನು ಒಗ್ಗರಣೆ ಮಾಡಿ ಬೆರೆಸಬೇಕು.

ಟೊಮೆಟೊ ಚಟ್ನಿ

ಬೇಕಾಗುವ ಪದಾರ್ಥಗಳು :

ಟೊಮೆಟೊ – 4

ಹಸಿರುಮೆಣಸಿನಕಾಯಿ – 8

ಒಣ ಮೆಣಸಿನಕಾಯಿ -2

ಉಪ್ಪು – ರುಚಿಗೆ ತಕ್ಕಷ್ಟು

ಬೆಲ್ಲ – ಸ್ವಲ್ಪ

ತೆಂಗಿನಕಾಯಿ ತುರಿ – 1 ಕಪ್

ಕೊತ್ತಂಬರಿ ಸೊಪ್ಪು – ಸ್ವಲ್ಪ

ಹಸಿಶುಂಠಿ – ಸ್ವಲ್ಪ

ಹುರಿಗಡಲೆ – 3 ಚಮಚ

ಮಾಡುವ ವಿಧಾನ: ಟೊಮೆಟೊ ಸಣ್ಣಗೆ ಹೆಚ್ಚಿ ಹುರಿಯಬೇಕು ಮತ್ತು ಹುರಿಗಡಲೆಯನ್ನು ಹುರಿದು ಮಿಕ್ಕ ಸಾಮಾನುಗಳನ್ನೆಲ್ಲಾ ಬೆರೆಸಿ ರುಬ್ಬಿದ ಅನಂತರ ಸಾಸಿವೆ ಮತ್ತು ಇಂಗನ್ನು ಒಗ್ಗರಣೆ ಮಾಡಿ ಅದಕ್ಕೆ ಸೇರಿಸಬೇಕು.

ಎಳ್ಳಿನ ಚಟ್ನಿ

ಬೇಕಾಗುವ ಪದಾರ್ಥಗಳು :

ಹುರಿದ ಬಿಳಿ ಎಳ್ಳು – 100 ಗ್ರಾಂ

ಕೆಂಪು ಮೆಣಸಿನಕಾಯಿ – 6

ಚಟ್ಟಿಗಳು

ಹುಣಸೇಹಣ್ಣು – ಗೋಲಿ ಗಾತ್ರದಷ್ಟು

ಉಪ್ಪು – ರುಚಿಗೆ ತಕ್ಕಷ್ಟು

ಕರಿಬೇವು – 1 ಎಸಳು

ಸಾಸಿವೆ – 1/4 ಚಮಚ

ಎಣ್ಣೆ – 1 ಚಮಚ

ಮಾಡುವ ವಿಧಾನ: ಹುಣಸೇಹಣ್ಣನ್ನು ನೆನೆಸಿ ಎಣ್ಣೆಯಲ್ಲಿ ಸಾಸಿವೆ, ಕರಿಬೇವು ಸಿಡಿದ ಅನಂತರ ಹುಣಸೇ ರಸವನ್ನು ಹಾಕಿ ಕುದಿದ ಅನಂತರ ಎಳ್ಳನ್ನು ಪುಡಿಮಾಡಿ ಮತ್ತು ಮೆಣಸಿನಕಾಯಿಯನ್ನು ಪುಡಿಮಾಡಿಕೊಂಡು ಕುದಿಯುವ ರಸಕ್ಕೆ ಉಪ್ಪು ಮತ್ತು ಪುಡಿಗಳನ್ನು ಹಾಕಿ ಸ್ವಲ್ಪ ಹೊತ್ತು ಕೈಯಾಡಿಸುತ್ತಾ ಇರಬೇಕು. ಇದಕ್ಕೆ 1 ಲೋಟ ನೀರು ಸೇರಿಸಿ ಕುದಿಸಬೇಕು.

ದೊಡ್ಡ ಪತ್ರೆ ಎಲೆ ಚಟ್ನಿ

ಬೇಕಾಗುವ ಪದಾರ್ಥಗಳು :

ದೊಡ್ಡ ಪತ್ರೆ ಎಲೆ – 15

ಹುರಿಗಡಲೆ – 2 ಟೀ ಚಮಚ

ಜೀರಿಗೆ -1/4 ಚಮಚ

ಮೆಣಸು – 6 ಕಾಳು

ಉಪ್ಪು – ರುಚಿಗೆ ತಕ್ಕಷ್ಟು

ಹಸಿರು ಮೆಣಸಿನಕಾಯಿ – 5

ತೆಂಗಿನ ತುರಿ – 1/2 ಚಿಪ್ಪು

ಮಾಡುವ ವಿಧಾನ: ದೊಡ್ಡ ಪತ್ರೆ ಎಲೆ, ಮೆಣಸು, ಜೀರಿಗೆ ಮತ್ತು ಮೆಣಸಿನ ಕಾಯಿಯನ್ನು ಹುರಿದು ಅದರ ಜೊತೆಗೆ ಕಾಯಿತುರಿ ಹುರಿಗಡಲೆಯನ್ನು ಸೇರಿಸಿ ಬಿಸಿ ಮಾಡಿ ರುಬ್ಬಿದ ಅನಂತರ ಸಾಸಿವೆಯನ್ನು ಒಗ್ಗರಣೆ ಮಾಡಿ ಮೊಸರಿನಲ್ಲಿ ಕಲೆಸಬೇಕು.

ಸೀಮೆ ಬದನೆಕಾಯಿ ಚಟ್ನಿ

ಬೇಕಾಗುವ ಪದಾರ್ಥಗಳು:

ಸೀಮೆ ಬದನೆಕಾಯಿ – 1

ಒಣಮೆಣಸಿನಕಾಯಿ – 4

ಉಪ್ಪು – ರುಚಿಗೆ ತಕ್ಕಷ್ಟು

ತೆಂಗಿನ ತುರಿ – ಸ್ವಲ್ಪ

ಹುರಿಗಡಲೆ – 1 ಚಮಚ

ಮಾಡುವ ವಿಧಾನ: ಸೀಮೆ ಬದನೆಕಾಯಿಯನ್ನು ಬೇಯಿಸಿದ ಅನಂತರ ಮೇಲೆ ತಿಳಿಸಿರುವ ಸಾಮಾನುಗಳನ್ನು ಸೇರಿಸಿ ರುಬ್ಬಬೇಕು. ಎಣ್ಣೆಯಲ್ಲಿ ಸಾಸಿವೆ ಕರಿಬೇವಿನ ಸೊಪ್ಪನ್ನು ಕರಿದು ರುಬ್ಬಿರುವುದನ್ನು ಹಾಕಿ ಬಾಡಿಸುತ್ತಾ ಸ್ವಲ್ಪ ಸಮಯದ ಅನಂತರ ಬೇರೆ ಪಾತ್ರೆಗೆ ತೆಗೆಯಬೇಕು. ಇದೇ ತರಹ ಸಿಪ್ಪೆಯಲ್ಲೂ ಸಹ ಮಾಡಬಹುದು.

ಪಾಲಕ್ ಸೊಪ್ಪಿನ ಚಟ್ನಿ

ಬೇಕಾಗುವ ಪದಾರ್ಥಗಳು:

ಪಾಲಕ್ ಸೊಪ್ಪು- 1 ಕಂತೆ

ಹಸಿರು ಮೆಣಸಿನಕಾಯಿ – 3

ಉಪ್ಪು – ರುಚಿಗೆ ತಕ್ಕಷ್ಟು

ನಿಂಬೆ ಹಣ್ಣು – 1/2 ಹೋಳು

ಮಾಡುವ ವಿಧಾನ: ಮೆಣಸಿನಕಾಯಿ ಮತ್ತು ಸೊಪ್ಪನ್ನು ಎಣ್ಣೆಯಲ್ಲಿ ಬಾಡಿಸಿಕೊಂಡು ಉಪ್ಪು ಸೇರಿಸಿ ರುಬ್ಬಿ ನಿಂಬೆ ಹಣ್ಣಿನ ರಸವನ್ನು ಹಿಂಡಬೇಕು.

ಪುದಿನ ಸೊಪ್ಪಿನ ಚಟ್ನಿ

ಬೇಕಾಗುವ ಪದಾರ್ಥಗಳು:

ಪುದಿನ ಸೊಪ್ಪು – 1 ಕಟ್ಟು

ಕೆಂಪು ಮೆಣಸಿನಕಾಯಿ – 3

ಒಣಕೊಬ್ಬರಿ -1 ಬಟ್ಟಲು

ಉಪ್ಪು – ರುಚಿಗೆ ತಕ್ಕಷ್ಟು

ಹುಣಸೇ ಹಣ್ಣು – ಸ್ವಲ್ಪ

ಬೆಲ್ಲ – ಸ್ವಲ್ಪ

ಮಾಡುವ ವಿಧಾನ: ಉಪ್ಪು ಮತ್ತು ಬೆಲ್ಲ ಬಿಟ್ಟು ಮಿಕ್ಕ ಸಾಮಾನುಗಳನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದು ಎಲ್ಲವನ್ನೂ ಸೇರಿಸಿ ರುಬ್ಬಬೇಕು. ಸಾಸಿವೆಯನ್ನು ಒಗ್ಗರಣೆ ಮಾಡಬೇಕು. ಎಲ್ಲ ತರಹದ ಚಟ್ನಿಗಳನ್ನು ಶ್ರೀ ರಾಧಾಕೃಷ್ಣನಿಗೆ ಅರ್ಪಿಸಿದ ಅನ೦ತರ ಮನೆಯಲ್ಲಿ ಎಲ್ಲರೂ ಸೇವಿಸಬಹುದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi