ಪ್ರಭುಪಾದ  ಉವಾಚ

(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು)

  

`ನೀವು ಆಸೆಯೇ ಇಲ್ಲದವರಾಗಿ’, ವಾಸನಾ ಶೂನ್ಯಂ ಎಂದು ಮಾಯಾವಾದಿ ತತ್ತ್ವಜ್ಞಾನಿಗಳು ಹೇಳುತ್ತಾರೆ. ಅದು ಸಾಧ್ಯವಿಲ್ಲ. ನೀವು ಆಸೆರಹಿತರಾಗಿ ಇರುವುದು ಸಾಧ್ಯವಿಲ್ಲ. ಏಕೆಂದರೆ ನೀವು ಜೀವಿಗಳು. ನಿಮ್ಮ ಆಸೆಯು ಮುಗಿದುಹೋದರೆ ನೀವೂ ಮುಗಿದಂತೆಯೇ. ನೀವು ಹೇಗೆ ಬದುಕುವಿರಿ? ಆದುದರಿಂದ  ಅಪೇಕ್ಷೆ ಇರಬೇಕು. ಆದರೆ ನೀವು ನಿಮ್ಮ ಆಸೆಯನ್ನು ಶುದ್ಧಮಾಡಿಕೊಳ್ಳಬೇಕು. ಅಷ್ಟೆ. ಅದು ಕೃಷ್ಣ ಪ್ರಜ್ಞೆ.

* * *

ನೀವು ಅರ್ಹರಾಗಿದ್ದರೆ, ನೀವು ಬ್ರಹ್ಮನಾಗಬಹುದು. ನಿಮ್ಮನ್ನು ಬ್ರಹ್ಮನ ಸ್ಥಾನಕ್ಕೆ ನೇಮಕಮಾಡಬಹುದು. ನಿಮ್ಮನ್ನು ಶಿವನ ಸ್ಥಾನಕ್ಕೆ ನೇಮಿಸಬಹುದು. ಆದರೆ ವಿಷ್ಣುವಿನ ಸ್ಥಾನಕ್ಕೆ ನಿಮ್ಮನ್ನು ನೇಮಿಸಲಾಗದು.

* * *

ಐಹಿಕ ಲೋಕದಲ್ಲಿನ ಈ ಬದ್ಧ ಬದುಕು ನಿಮಗಲ್ಲ ಎನ್ನುವುದನ್ನು ಬದ್ಧಾತ್ಮಗಳಿಗೆ ನೆನಪು ಮಾಡಿಕೊಡಲೆಂದೇ ಲೌಕಿಕ ಪ್ರಕೃತಿಯು ಸಂಕಟ ಸ್ಥಿತಿಯನ್ನು ಹೇರಿದೆ. ನೀವು ನೆಮ್ಮದಿಯಿಂದ ಬದುಕಬಹುದಾದ ಮತ್ತೊಂದು ಸ್ಥಳವಿದೆ. ಸೆರೆಮನೆಯಲ್ಲಿ ಯಾವಾಗಲೂ ಕಷ್ಟಗಳನ್ನು ಹೇರಲಾಗುವುದು. ಅಲ್ಲಿ ಸೌಲಭ್ಯದ ಜೀವನ ನೀಡಿಬಿಟ್ಟರೆ ಅಲ್ಲಿಂದ ಹೊರಬರಲು ಯಾರೂ ಇಷ್ಟಪಡುವುದಿಲ್ಲ. ಆದುದರಿಂದ ದುಃಖದ ಲೌಕಿಕ ಹೊರೆಯ ಈ ಸ್ಥಳವು ನಮಗೆ ಸೂಕ್ತವಾಗಿಲ್ಲ ಎನ್ನುವುದು ನೆನಪಾಗುತ್ತದೆ. ಇದು ನಮ್ಮ ಸ್ಥಳವಲ್ಲ. ನಮ್ಮ ನೆಲೆಯು ಭಗವದ್ಧಾಮಕ್ಕೆ ಹಿಂದಿರುಗುವುದಾಗಿದೆ.

* * *

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi